ಸಂಕ್ರಾಂತಿ ಕಾವ್ಯ ಸುಗ್ಗಿ
ಸಂಕ್ರಾಂತಿ
ಕೆ.ಟಿ.ಜಯಶ್ರೀ
ಮುಂಬಾಗಿಲ ತಳಿರ ಸ್ವಾಗತ
ಪಂಚಭೂತ ತತ್ವದರಿವನು
ಹರವುವ ಹೊಸ ಮಡಕೆಯಲಿ
ಘಮಘಮಿಸುತಿದೆ ಪೊಂಗಲ್
ಎಳ್ಳು ಬೆಲ್ಲ ಮೆಲುನುಡಿದಿವೆ
ಜರತಾರಿ ತೊಟ್ಟ ಕುವರಿಯರ
ಮೆರವಣಿಗೆ ಸಾಗಿದೆ ಸಂಜೆಯಲಿ
ಪಥ ಬದಲಿಸಿ ಸಾಗುವಾಗ
ಸೂರ್ಯ ಸಂಭ್ರಮದಿ
ನಗೆ ಚೆಲ್ಲಿತಾ ರಂಗಿನ ರಂಗವಲ್ಲಿ
ಉಷೆ ಸ್ಪರ್ಶಕೆಪುಳಕ
ಮೈಮನದಲಿ
ಎಳ್ಳು ಬೆಲ್ಲ ಹಂಚುವ ಸಡಗರಕೆ
ಲಲನೆಯರ ಲಾಲಿತ್ಯದ ಮೆರಗು
ರಾಸುಗಳ ಕಿಚ್ಚಿನ ಓಟ
ಎಳೆಯರ ಗಾಳಿಪಟದಾಟ
ಮುಗುದೆಯರ ಕೋಲ್ಮಿಂಚಿನೋಟ
ಹರುಷ ಉಕ್ಕಿದೆ ಸುಗ್ಗಿಕಣಿತದಿ
ಸಂಕುಚಿತ ಮನದ ತಮ ಕರಗಿ
ಸಾಗಲಿ ಸೂರ್ಯ ಅಶಾಂತಿಯ ಪಥದಿಂದ ಶಾಂತಿ ಸಾಮರಸ್ಯದ ಸಂಕ್ರಮಣ ಕಾಲದತ್ತ