ಶಾಯರಿ
ಶಾಯರಿ ಭಾರತಿ ರವೀಂದ್ರ ಕಾಡಿಗೆ ಕಣ್ಣುಗಳನ್ನಮುದ್ದಿಸಲಿ ಹ್ಯಾಗೆ ಹೇಳು, ನನ್ನೊಡತಿಕರಿ ಮೋಡ ಕೋಪಿಸಿಕೊಂಡುಸುರದಾವ ಪ್ರವಾಹ ಬಂದಾಂಗ. ಬಂದರ ಬರಲೇಳುಸಾವಿರ ಸಂಕಟಗಳಸುರಿ ಮಳಿನಿನ್ನ ಪಿರೂತಿ ಸಾಥ್ಇರುವಾಗ ನಂಗ್ಯಾಕೆ ಭೀತಿ ******************************************
ನೀವು ಎದೆಗೆ ಗುಂಡು ಹೊಡೆದರೆ.
ಕವಿತೆ ನೀವು ಎದೆಗೆ ಗುಂಡು ಹೊಡೆದರೆ ಅಲ್ಲಾಗಿರಿರಾಜ್ ಕನಕಗಿರಿ ನೀವು ಜಲ ಫಿರಂಗಿಸಿಡಿಸಬಹುದು ನಮ್ಮ ಮೈ ಮೇಲೆ.ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ.ಏಕೆಂದರೆ ನೀರು ನಮ್ಮ ವೈರಿಯಲ್ಲ. ನೀವು ಲಾಠಿ ಬೂಟುಗಳಿಂದದಾಳಿ ಮಾಡಬಹುದು ನಮ್ಮ ಮೈ ಮೇಲೆ.ನಾವು ನಮ್ಮ ಅನ್ನ ಉಂಡ ಮಕ್ಕಳ ಸಲಿಗೆ,ಪ್ರೀತಿಯೆಂದು ಭಾವಿಸುತ್ತೇವೆ.ಏಕೆಂದರೆ ಮಕ್ಕಳು ನಮ್ಮ ವೈರಿಗಳಲ್ಲ. ನೀವು ಅಶ್ರುವಾಯು ಸಿಡಿಸಿಕಣ್ಣು ಕತ್ತಲು ಮಾಡಬಹುದು ನಮ್ಮ ಕನಸುಗಳ ಮೇಲೆ.ನಾವು ಮಂಜುಕವಿದ ವಾತಾವರಣವೆಂದು ಭಾವಿಸುತ್ತೇವೆ.ಏಕೆಂದರೆ ಪ್ರಕೃತಿ ಎಂದೂ ನಮ್ಮ ವೈರಿಯಲ್ಲ. ಆದರೆ….. ಆದರೆನೀವು ದಲ್ಲಾಳಿಗಳ ಮಾತು […]
ಮೌನದಲಿ ಕವಿತೆಯಾದವಳು
ಕವಿತೆ ಮೌನದಲಿ ಕವಿತೆಯಾದವಳು ವಿದ್ಯಾಶ್ರೀ ಅಡೂರ್ ಕವಿತೆಯಾದಳು ಆಕೆ ತಿಳಿದವರು ತಿಳಿದ ತರಹುಡುಕ ಹೋಗಲು ಬಗೆಯ ಬೇಗೆ ಬೆಂಬತ್ತಿತುಟಿತುದಿಯ ಕಿರುನಗೆಯ ಅರಿತವನ ಮನದ ಸ್ಥರಜಿಗಿವ ಜಿಂಕೆಯಂತೆ ಕವನವನ್ನು ಬಿತ್ತಿ ಹಣೆ ಮೇಲೆ ಆಕೆಯ ಗೆರೆಗಳನು ಕಂಡಾತಬರೆದಿಹನು ಪುಟಪುಟದ ಸಾಲುಗಳ ಹೆಚ್ಚಿತನ್ನನ್ನೇ ಬಣ್ಣಿಪನು, ಬಂದಿಹೆನು ತಾನೆಂದುಆಕೆಯ ಮನದೊಳಗೆ ದೀಪವನು ಹಚ್ಚಿ ಕಣ್ಣಂಚ ಹನಿಗಳನು ಮುತ್ತಂತೆ ಪೋಣಿಸುತರಂಗುಬಳಿದು ಅದಕೆ ಕಟ್ಟಿಹನು ಬೆಲೆಯಹಾದಿಬೀದಿಯ ಜನರು ಕೊಳ್ಳುವ ಸರಕಾಯ್ತುಅಳಿಸದೇ ಹೋಯ್ತವಳ ಕಣ್ಣೀರ ಸೆಲೆಯ ಮಾತಿನ ಪೇಟೆಯಲಿ ಬೆಲೆಯಿಲ್ಲ ಮೌನಕ್ಕೆಕುಗ್ಗಿಹಳು ಸಾಗರದ ಬಿಂದುವಾಗಿಮಾತಿರದ ಮೌನದಲಿ […]
ಹಾಯ್ಕುಗಳು
ಹಾಯ್ಕುಗಳು ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗಹಗಹಿಸಿದೆನರನರವು ನಿತ್ರಾಣವೈಧ್ಯನ ಬಾಣ ಹಾಳಾದ ಗೋರಿಕೂಗಿ ಕರೆದಿದೆ ಕವಿಯಕಾವ್ಯ ಗೀಚಲು. ಗೋರಿಯ ಮೇಲೆಕೊನೆಯ ದಿನ-ಹಚ್ಚಿದಕಣ್ಣೀರ ದೀಪ. ಹಸಿದ ಹೊಟ್ಟೆಅವ್ವ-ಕಾವಿನ ಜೀವತುಂಬಿದೊಲವು. ನಿದ್ರೆಯಲೆದ್ದುರುದ್ರ ಲೀಲೆ ಕುಣಿತಕಾಂಚಣ ರಾಣಿ ಗಾಳಿಯ ಗುಟ್ಟುಬದುಕಿನಡಿ ಹೇಡಿಜೊಳ್ಳಿನ ಸುಳ್ಳು ಹೊನ್ನ ಬಳ್ಳಿಹೊತ್ತ ಹಾದಿಯ ಬುತ್ತಿಕನ್ನಡ ಪದ. ಒಂದೇ ‘ಎನಲು’ಗುಡಿ ಚರ್ಚು ಮಸೀದಿನಲಿವು ನಾಡು. ಎಳೆ ಹಸುಳೆತೊದಲು ನುಡಿದವುಮಾಗೀ-ಚಳಿಗೆ ಶಿಶಿರ ಋತುಭೂದೇವಿ-ಹೆಡಿಗೆಹುಗ್ಗಿ ಹೋಳಿಗೆ. ಮುಗುದೆ ‘ಒಲ್ಲೆ’ಮೂಕ ಮಾತಿನ ಎದಿಗೆನಲ್ಲನುರಿಗಾವು ಎಲೆಲೆ-ಬಾಳುಹಿತ ಮಿತಕೆ ಸೋಲುನೆಲೆ-ನೆರಳು ಕಾಗೆ ಗೂಗೆ ಬಾವ್ಲಿಬೇತಾಳ-ತಾಳಮೇಳರಾಜಕೀಯ. ಒಡಲೊಳಗಿದೆಕೊಳೆತನಾರು ಬೆಳೆಕಲ್ಮಶ […]
ಕುಸುಮಾಂಜಲಿ
ಕವಿತೆ ಕುಸುಮಾಂಜಲಿ ಅಭಿಜ್ಞಾ ಪಿ ಎಮ್ ಗೌಡ ಕುಸುಮವು ನಗುತಿರೆನಸುಕಿನ ವೇಳೆಯುಮುಸುಕನು ತೆರೆಯುತ ನಲಿಯುತಿದೆಕಸವರ ವರ್ಣದಿಜಸದಲಿ ಬೀಗುತರಸಮಯ ಸೃಷ್ಟಿಸಿ ಜೀಕುತಿದೆ|| ಕುಹಕವ ಕೇಳದೆಕಹಿಯನು ಮರೆಯುತಮಹಿಯಲಿ ಹಾಸವ ಚೆಲ್ಲುತಿದೆಸಹನೆಯ ದಳವದುಸಹಿಸುತ ಬಿಸಿಲನುಬಹಳಾಕರ್ಷಣೆ ಗಳಿಸುತಿದೆ|| ಶುದ್ಧತೆ ಭಾವವುಬದ್ದತೆಯಿಂದಲೆಸಿದ್ಧತೆ ಹೊಂದುತ ಪಸರಿಸಿದೆಮುದ್ದಿನ ಹೂವಿದುಮದ್ದಲು ಮುಂದಿದೆಸದ್ದನು ಮಾಡದೆ ನಗುತಲಿದೆ|| ಭ್ರಾಂತಿಯ ತೊಲಗಿಸಿಶಾಂತಿಯ ಹರಡುವಕಾಂತಿಯು ದೇವರ ಮುಡಿಯಲ್ಲಿಕಾಂತನು ಕೊಟ್ಟಿಹಕಾಂತೆಗೆ ಸುಮವನುಕಾಂತಿಯು ಗುಂದದೆ ಹೊಳೆಯುತಿದೆ|| ನೋಡುವ ಕಣ್ಣಿಗೆಮಾಡಿದೆ ಮೋಡಿಯಕಾಡುತ ನಿತ್ಯವು ಕಚಗುಳಿಯಬೇಡುವ ಮನಸಿಗೆಕೇಡನು ಬಯಸದೆಬಾಡುವ ನಿರ್ಮಲ ಕುಸುಮವಿದು|| **********************************************
ಹೈಕುಗಳು
ಹೈಕುಗಳು ಕೆ.ಸುನಂದಾ. ಬಾನಲ್ಲಿ ನಕ್ಕಶಶಿ ; ಕಂಡು ತಂಪಾಯ್ತುನೊಂದ ಮನಕ್ಕೆ* ತಳಮಳವತಾಳೆನಾ ; ಕೇಳು ಸಖಿಯಾರಿ ಸುಂದರಿ* ಅಡವಿಯಲ್ಲಿಬಿರಿದ ಮಲ್ಲೆ ಕಾಯ್ವೆನೀ ಯಾರಿಗಿಲ್ಲಿ* ವೃಕ್ಷಗಳಲ್ಲಿಸಾಕ್ಷಾತ್ ದೇವನಿಹನುಎಲ್ಲರ ಭಾಗ್ಯ * ಕಾಣೋ ಕಣ್ಣಿಗೆಸಂಭ್ರಮ ; ಈ ನಿಸರ್ಗಬೇಕು ಜೀವಿಗೆ* ಸೃಷ್ಟಿಯೇ ದೈವತಿಳಿದಂತೆ ಇರುವನಮ್ಮಂತೆ ಅವ* ಪ್ರೀತಿಯ ಗೂಡುಅನುಭವಿಸಿ ಹಾಡುಎನಿಲ್ಲ ನೋಡು ************************************
ಜೀವನ
ಕವಿತೆ ಜೀವನ ಭಾರತಿ ರವೀಂದ್ರ ನೋವು ನಲಿವುಗಳನೆರಳು ಬೆಳಕಿನ ಜೋಕಾಲಿ ಈ ಜೀವನ. ಹುಣ್ಣಿಮೆಯ ಕಂಡುಉಕ್ಕಿ ಬರುವ ಸಾಗರ ದಷ್ಟೇ ಅಗಾಧ ಈ ಜೀವನ. ಸುರಿಯೋ ಸೋನೆಗೆಹೆಜ್ಜೆ ಹಾಕೋ ನವಿಲಿನಕಾಲ್ಗೆಜ್ಜೆಯ ದನಿಯ ಹಾಗೆಸದ್ದೇ ಇಲ್ಲದ ಹೆಜ್ಜೆಯಸಂಗೀತ ದಂತೆ ಈ ಜೀವನ. ಬಡತನದ ಬೇಗೆ ಇರಲಿಸಿರಿತನದ ಸೊಬಗಿರಲಿಪ್ರೀತಿಯ ಹೊನಲಾಗಲಿಈ ಜೀವನ. ಸಂತೃಪ್ತಿಯ ಮನಕೆಸಿರಿತನದ ಸೋಗು ಇರದು ಒಲವೇ ನಲಿವುಈ ಜೀವನ **********************************
ಗಜಲ್
ಗಜಲ್ ಶಾಲಿನಿ ಆರ್. ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ// ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/ರಾಗದೊಲವ ಎಲರು ಹಾದಿಗುಂಟ ತೂಗುತಿದೆ ನಾ ನಿನ್ನ ನೆನೆವಾಗ//. ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ// ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು ಕರಗುತಿದೆ/ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, […]
ಕಾವ್ಯಯಾನ
ಮತ್ತೆ ನೆನಪಾಗುತ್ತಿದೆ ಚಂದ್ರು ಪಿ ಹಾಸನ್ ಮತ್ತೆ ನೆನಪಾಗುತ್ತಿದೆ, ನನ್ನ ಬಾಲ್ಯದೊಳುಕಳೆದ ದಿನಗಳು ಸುಂದರ ಆ ಮಧುರ ಕ್ಷಣಗಳುಕೆದಕಿದೆನು ನಾ ಇಂದು ಒಂದೊಂದು ಮನದೊಳುಚಿತ್ರಿಸಲೊರಟೆ ಸಾಲುಗಳಲ್ಲಿ ಆಕ್ಷಣಗಳ ಮುದದೊಳು ಮತ್ತೆ ನೆನಪಾಗುತ್ತಿದೆ, ನಾಲ್ಕೆಜ್ಜೆಯ ಮುಗ್ದ ಸಾಲುಅಮ್ಮನ ತೋಳು ಅದು ಸಂತಸದ ಸಾಲುರಾಜ ಸಿಂಹಾಸನ ನನ್ನ ತಾಯಿಯ ಮಡಿಲುಕುಣಿದು ಕುಪ್ಪಳಿಸಿದೆ ಪಡೆದೆ ಕೈತುತ್ತು ಅಲ್ಲಿ ನೆನಪಾಗುತ್ತಿದೆ ವಿದ್ಯಾರ್ಜನೆಯ ಆರಂಭಪ್ರಾಥಮಿಕ ಶಾಲೆಯ ಗಂಟೆ ಸದ್ದುಕೇಳಿದೊಡನೆ ಅಡ್ಡಗದ್ದೆ ಬಯಲಲ್ಲಿಓಡುತ್ತಿದ್ದೆವು ಗುಂಪಾಗಿ ಎದ್ದು-ಬಿದ್ದು ಮತ್ತೆ ನೆನಪಾಗುತ್ತಿದೆ, ಶಾಲೆಯ ಸಂಜೆಗಳುಅಣ್ಣನ ತೋಳು ಪ್ರತಿಸಂಜೆ ನಾ […]
ಗಜಲ್
ಗಜಲ್ ಸಿದ್ಧರಾಮ ಹೊನ್ಕಲ್ ನಾ ನಿನ್ನ ಎಷ್ಟು ಪ್ರೇಮಿಸುತ್ತಿರುವೆನೆಂದು ನನಗೆ ಸರಿ ಗೊತ್ತಿಲ್ಲನೀ ಇಲ್ಲದೇ ನಾ ಬದುಕಿರಲಾರೆನೆಂದಿಗೂ ಅನ್ನೋದು ಸುಳ್ಳಲ್ಲ ನಿನ್ನನ್ನು ಬೇರೆಯವರು ಒಲಿಸಿಯಾರೆಂದು ಸದಾ ಭಯವಿದೆ ಈ ಹೃದಯಕೆಬಹು ಕಷ್ಟದಿ ಮತ್ತೆ ಮತ್ತೆ ಸಮಾಧಾನಿಸುವೆ ಹಾಗೇನು ಆಗಲಿಕ್ಕಿಲ್ಲ ಏನೇನು ಕಾಳಜಿ ಮಾಡಿ ಸಂಭಾಳಿಸಿಕೊಳ್ಳುವೆ ಅಂತ ನಿನಗೇನು ಗೊತ್ತುಈ ಮನಸ್ಸು ತಕರಾರಿಲ್ಲದೆ ಒಳಗೆ ನೊಯ್ಯುತ್ತಿದೆ ನಿನಗೆ ಅರಿವಿಲ್ಲ ಬೇಡವೆ ಮುಗಿಸು ಈ ಕಣ್ಣುಮುಚ್ಚಾಲೆಯಾಟ ಕಳೆಯಲಿ ಮಧು ಬಟ್ಟಲಲ್ಲಿಎಷ್ಟು ಸಲ ಮನದ ಮಾತು ಹೇಳಿದರೂ ನಿನ್ನ ಮನದ ಹಾಡೇ […]