ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕುಸುಮಾಂಜಲಿ

ಅಭಿಜ್ಞಾ ಪಿ ಎಮ್ ಗೌಡ

Dove, Freedom, Bird, Nature, Animal

ಕುಸುಮವು ನಗುತಿರೆ
ನಸುಕಿನ ವೇಳೆಯು
ಮುಸುಕನು ತೆರೆಯುತ ನಲಿಯುತಿದೆ
ಕಸವರ ವರ್ಣದಿ
ಜಸದಲಿ ಬೀಗುತ
ರಸಮಯ ಸೃಷ್ಟಿಸಿ ಜೀಕುತಿದೆ||

ಕುಹಕವ ಕೇಳದೆ
ಕಹಿಯನು ಮರೆಯುತ
ಮಹಿಯಲಿ ಹಾಸವ ಚೆಲ್ಲುತಿದೆ
ಸಹನೆಯ ದಳವದು
ಸಹಿಸುತ ಬಿಸಿಲನು
ಬಹಳಾಕರ್ಷಣೆ ಗಳಿಸುತಿದೆ||

ಶುದ್ಧತೆ ಭಾವವು
ಬದ್ದತೆಯಿಂದಲೆ
ಸಿದ್ಧತೆ ಹೊಂದುತ ಪಸರಿಸಿದೆ
ಮುದ್ದಿನ ಹೂವಿದು
ಮದ್ದಲು ಮುಂದಿದೆ
ಸದ್ದನು ಮಾಡದೆ ನಗುತಲಿದೆ||

ಭ್ರಾಂತಿಯ ತೊಲಗಿಸಿ
ಶಾಂತಿಯ ಹರಡುವ
ಕಾಂತಿಯು ದೇವರ ಮುಡಿಯಲ್ಲಿ
ಕಾಂತನು ಕೊಟ್ಟಿಹ
ಕಾಂತೆಗೆ ಸುಮವನು
ಕಾಂತಿಯು ಗುಂದದೆ ಹೊಳೆಯುತಿದೆ||

ನೋಡುವ ಕಣ್ಣಿಗೆ
ಮಾಡಿದೆ ಮೋಡಿಯ
ಕಾಡುತ ನಿತ್ಯವು ಕಚಗುಳಿಯ
ಬೇಡುವ ಮನಸಿಗೆ
ಕೇಡನು ಬಯಸದೆ
ಬಾಡುವ ನಿರ್ಮಲ ಕುಸುಮವಿದು||

**********************************************

About The Author

1 thought on “ಕುಸುಮಾಂಜಲಿ”

Leave a Reply

You cannot copy content of this page

Scroll to Top