ಹಾಯ್ಕುಗಳು
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ
ಗಹಗಹಿಸಿದೆ
ನರನರವು ನಿತ್ರಾಣ
ವೈಧ್ಯನ ಬಾಣ
ಹಾಳಾದ ಗೋರಿ
ಕೂಗಿ ಕರೆದಿದೆ ಕವಿಯ
ಕಾವ್ಯ ಗೀಚಲು.
ಗೋರಿಯ ಮೇಲೆ
ಕೊನೆಯ ದಿನ-ಹಚ್ಚಿದ
ಕಣ್ಣೀರ ದೀಪ.
ಹಸಿದ ಹೊಟ್ಟೆ
ಅವ್ವ-ಕಾವಿನ ಜೀವ
ತುಂಬಿದೊಲವು.
ನಿದ್ರೆಯಲೆದ್ದು
ರುದ್ರ ಲೀಲೆ ಕುಣಿತ
ಕಾಂಚಣ ರಾಣಿ
ಗಾಳಿಯ ಗುಟ್ಟು
ಬದುಕಿನಡಿ ಹೇಡಿ
ಜೊಳ್ಳಿನ ಸುಳ್ಳು
ಹೊನ್ನ ಬಳ್ಳಿ
ಹೊತ್ತ ಹಾದಿಯ ಬುತ್ತಿ
ಕನ್ನಡ ಪದ.
ಒಂದೇ ‘ಎನಲು’
ಗುಡಿ ಚರ್ಚು ಮಸೀದಿ
ನಲಿವು ನಾಡು.
ಎಳೆ ಹಸುಳೆ
ತೊದಲು ನುಡಿದವು
ಮಾಗೀ-ಚಳಿಗೆ
ಶಿಶಿರ ಋತು
ಭೂದೇವಿ-ಹೆಡಿಗೆ
ಹುಗ್ಗಿ ಹೋಳಿಗೆ.
ಮುಗುದೆ ‘ಒಲ್ಲೆ’
ಮೂಕ ಮಾತಿನ ಎದಿಗೆ
ನಲ್ಲನುರಿಗಾವು
ಎಲೆಲೆ-ಬಾಳು
ಹಿತ ಮಿತಕೆ ಸೋಲು
ನೆಲೆ-ನೆರಳು
ಕಾಗೆ ಗೂಗೆ ಬಾವ್ಲಿ
ಬೇತಾಳ-ತಾಳಮೇಳ
ರಾಜಕೀಯ.
ಒಡಲೊಳಗಿದೆ
ಕೊಳೆತನಾರು ಬೆಳೆ
ಕಲ್ಮಶ ದೊರೆ
ಒಳ-ಹೊರಗೆ
ಕುರುಡು ಕುಂಟೆ ಬಿಲ್ಲೆ
ಮೀರಿದ ಎಲ್ಲೆ.
ಕಾವಿಯ ಚಿತ್ತ
ಕಾಯ್ದ ಹಂಚಿನ ಮೇಲೆ
ತತ್ವದ ಮಾತು.
ಮನದ ಮಾಯೆ
ಹಿಡಿಯೆ ಕಣ್ಣು ಕತ್ತಲು
ಉಲಿ-ಬದುಕು
ಎಲೆಲೆ-ಕೀಟ
ಜಗದ ತಲೆಕೆದರಿ
ನಗದಿರಿಣುಕಿ
ನವ-ತುಡುಗ
ಎದೆಗೆ ಮುತ್ತಿಟ್ಟ
ಬಾನಿಗೇರುತ
ತೂತಾದ ಕೊಡ
ದಾರಿಗೆ ನೀರ ಬಿತ್ತಿದ
ಚಿತ್ತದ-ಗತ್ತು.
ಬಣ್ಣದ ಬೆಕ್ಕು
ತುತ್ತನದು ನೆಕ್ಕಿತು
ಬಹು ವಿಲಾಸಿ.
ನಾನೇ-ದುರುಳ
ಯಾರು-ಯಾರನು ದೂರಲಿ
ಪಾತಕೀ ಲೋಕ.
ಜಿದ್ದಿನ ಪೀಳಿಗೆ
ಬಕ್ಷಣಕೆ ಬಾಯ್ದೆರೆದ
ರಣ ಹದ್ದುಗಳು.
****************************************************************
ಗೋರಿಯಿಂದ ಜಿದ್ದಿನ ಪಿಳಿಗೆಗೆ…ಕೊನೆಗೆ ಸಿಗುವುದು ಕಣ್ಣೀರು.. ಭಾವ ಛಿದ್ರ ನೆನಹುಗಳು ವಾಸ್ತವತೆಯನ್ನು ಬಿಚ್ಚಿಟ್ಟಿವೆ…..ಚೆನ್ನಾಗಿದೆ ಸರ್…
ಹಾಯ್ಕುಗಳು ಚೆನ್ನಾಗಿವೆ….