ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ
ಕಾನನವಿಲ್ಲದೆ ಮಳೆ ಮೋಡಗಳ ಆಕರ್ಷಣೆಯಿಲ್ಲ
ವರ್ಷಧಾರೆಯ ಕಾಣದೆ ಅಂತರ್ಜಲ ಇಂಗುತಿಹುದಲ್ಲ
ಆಸೀಫಾ ಅವರ ಹೊಸ ಗಜಲ್
ಎದೆಯ ವೀಣೆ ಮೀಟಿ ಭಾವದಲೆಗಳಲಿ ಎನ್ನ ತೇಲಿಸಿದ
ನೆನಪಿನಂಗಳದ ಬೆಳದಿಂಗಳಲ್ಲರಳಿದ ಹೂವಿನ್ನೂ ಬಾಡಿಲ್ಲ
ಆಸೀಫಾ
ಕವಿತಾ ವಿರೂಪಾಕ್ಷ ಕವಿತೆ-ಒಂದಿರುಳು ತೋಟದಲಿ….
ಚಂದದ ಸುಮವ ನೋಡಲು
ಇಡೀ ಹೂವು ಸಂಕುಲವೆ ಬರಲು
ತುಂಬಿತು ತೋಟದ ಬಯಲು….
ಅಮು ಭಾವಜೀವಿ ಮುಸ್ಟೂರು ಅವರ ಗಜಲ್
ಸಾಲಗಾರನ ಮುಂದೆ ಸಂಕಟ ಹೇಳಿಕೊಂಡರೇನು ಪ್ರಯೋಜನ
ಬಡಪಾಯಿ ಬದುಕನ್ನು ಸಾಲದ ಶೂಲದ ಸಾವಿಗೆ ಅಡ ಇಡಲಾಗಿದೆ
ಅಮು ಭಾವಜೀವಿ ಮುಸ್ಟೂರು
ಅಶ್ವಿಜ ಶ್ರೀಧರ್ ಕವಿತೆ-ಬಾಳ ಗೀತೆ
ಹೆಜ್ಜೆಯದು ನಿಂತ ಭಂಗಿಯಲಿ ಹೆಮ್ಮೆ ಕಾಣುತಿದೆ
ಲಜ್ಜೆಯಾಗುವಂತಾಗಿದೆ ಹನಿಗೂ ಇದ ನೋಡುತಲಿ
ಕಾವ್ಯ ಸಂಗಾತಿ
ಅಶ್ವಿಜ ಶ್ರೀಧರ್
ಬಾಳ ಗೀತೆ
ಪೂರ್ಣಿಮಾ ಸುರೇಶ್ ಅವರ ಕವಿತೆ-‘ದೇವರನ್ನು ಮುಟ್ಟಲಾಗದು’
ದೇವ ಅನುಮತಿಸು
ವಿಗ್ರಹ ಅಲ್ಲೇ ಅವರಿಗಿರಲಿ
ಗರುಡ ಹೊರಗೆ ಹಾರುತ್ತಿದೆ
ಗಮನವೆನ್ನದು ಅದರ ಮೇಲಿರಲಿ
ಕಾವ್ಯ ಸಂಗಾತಿ
ಪೂರ್ಣಿಮಾ ಸುರೇಶ್
‘ದೇವರನ್ನು ಮುಟ್ಟಲಾಗದು’
ಸುವಿಧಾ ಹಡಿನಬಾಳ ಅವರ ಕವಿತೆ-ಓದಿನ ಸುಖ
ಹೊಸ ಪುಸ್ತಕ ಕೈಗೆ ಸಿಕ್ಕೊಡನೆ
ಪುಟ ತಿರುಗಿಸಿ ಪರಿಮಳ ಆಘ್ರಾಣಿಸಿ
ಕೈಯಲ್ಲಿ ಹಿಡಿದು ಕಣ್ಣು ಹುಗಿದು
ಓದುವ ಆ ಸುಖ ಪರಮ ಸುಖ!
ಡಾ.ಡೋ.ನಾ.ವೆಂಕಟೇಶ ಕವಿತೆ-ಲವ್ ಆಲ್ ಲವ್
ಅವನೇ ರೆಫರೀ ಅವನೇ ಅಂಪೈರ್
ವೀಕ್ಷಕರು ನಾವು ಬರೆ ಲೈನ್ ಮನ್ ಗಳು!
ಅವನಿಗೆ ವರದಿ ಒಪ್ಪಿಸುವವರು
ಪ್ರಮೋದ ಜೋಶಿ ಕವಿತೆ-ಕನಸು
ಹಾರಿದರೂ ಕನಸಿನಾಕಾಶದೊಳಗೆ
ಹಿರಿದಾದ ಕೈಯೆಂದೂ ಗಗನ ಮುಟ್ಟಿಲ್ಲಾ
ಡಾ ಮೀನಾಕ್ಷಿ ಪಾಟೀಲರ ಕವಿತೆ-ಬಣ್ಣದ ಪಂಜರ
ಸಹನೆ ಕರುಣೆ ತಾಳ್ಮೆ
ಸುಶೀಲ ಮಮತೆ ಸನ್ನಡತೆ
ವಿಶೇಷಣಗಳ ಸಿಂಗಾರ
ಚಿನ್ನದ ಬಲೆಗೊಂದು ಚಿತ್ತಾರ ಮೂಡಿಸಿ
ಬಣ್ಣದ ಪಂಜರದಲ್ಲಿ ಬಂಧಿಸಿದರು
ಸುಳ್ಳನ್ನೇ ಸತ್ಯವೆಂದು ನಂಬಿಸಿ
ಶೀಲದ ಪರಿಕಲ್ಪನೆಯಲಿ
ಉದಾತ್ತ ಗುಣಗಳ ಆರೋಪಿಸಿ
ಪರಮೋಚ್ಚ ಬದುಕು ಇದೆಂದು
ಬುರುಡೆ ಬಿಟ್ಟವರು
ಉಸಿರು ಗಟ್ಟುವ ಸಂಯೋಗದಿ
ಮೌನವೇ ಒಪ್ಪಿಗೆ
ಎಂದು ಭ್ರಮಿಸಿ
ಭಾವನೆಗಳ ಮೇಲೆ ಸವಾರಿ ಮಾಡಿ
ಮಖಾಡ ತೊಡಿಸಿದವರು
ಗಟ್ಟಿಮನಸ್ಸಿನ ದಿಟ್ಟ ನಿರ್ಧಾರವ
ಸಡಿಲಗೊಳಿಸಲು ಬಗೆ ಬಗೆಯ ತಂತ್ರ
ಆಸೆ ಆಮಿಷದ ಮೆರವಣಿಗೆ
ಒಣ ಸಿದ್ದಾಂತಗಳ ಮನಸ್ಸಿಗೆ ಲೇಪಿಸಿ
ಮಸುಕಾಗಿಸುವರು
ಹಣೆಗೆ ತಿಲಕವಿಟ್ಟವರನ್ನು
ಚಿತೆಗೇರಿಸುವ ಹೃದಯಹೀನರು
ಯುದ್ಧಗೆದ್ದವನಿಗೆ
ಸೋಲುಂಡವನ
ಮಡದಿಯ ಮೇಲೆ ಮೋಹ
ಸಾಕಿನ್ನು ದುರಾಚಾರ ದುರಾಕ್ರಮಣ
ನಿರಾಕರಿಸಬೇಕಿದೆ ಬಿರುದು ಬಾವಲಿಗಳ
ಧಿಕ್ಕರಿಸಬೇಕಿದೆ
ವಂದಿ ಮಾಗಧರ
ಬಹುಪರಾಕುಗಳ
ನಿಲ್ಲಬೇಕಿದೆ ಅಪಚಾರ
ಎಷ್ಟಂತ ಅವಿತುಕೊಂಡಿರುವುದು
ಗೋಡೆಗಳ ಮಧ್ಯೆ
ಇಣುಕಿಣುಕಿ ದಿನ ದೂಡುವುದು
ಕತ್ತಲೆಯ ಕೂಪದಲಿ
ನಲುಗಿ ಹೋಗಿರುವರು ಕಣ್ಣಳತೆಯಲಿ
ಮಥುರ ಇರೋಮ ಶರ್ಮಿಳ
ಭನವಾರಿ ಮತ್ಯಾರೋ …..
ಅಳಿಸಬೇಕಿದೆ ನೋವುಂಡವರ ಕಥೆಗಳ
ಬರೆಯಬೇಕಿದೆ ಗೌರವ ಆದರಗಳ ಹೊಸ ಪರ್ವವನ್ನ
ಆದರಿಸಬೇಕು ಅಸ್ತಿತ್ವ ನೆಲೆಯೂರಲು
ನೆರವಾದ ಊರುಗೋಲನ್ನ
ಕಣ್ಣೊರೆಸುವ ಕೈಗಳನ್ನ
ಸಾಂತ್ವಾನ ನುಡಿದ ಮಾತುಗಳನ್ನು
ಗಾಯ ಸವರಿದ ಬೆರಳುಗಳನ್ನು
ದಟ್ಟ ಕಾಡುಗಳ ಮಧ್ಯೆ
ಕಿರಣ ಸೋಂಕಿಸಲು ಸೆಣಸಾಡುವ
ಸೂರ್ಯನಂತೆ
ಭರವಸೆಯ ಬೆಳಕೊಂದು
ಮೂಡಿತು ಮುಂದೆ…,..
ಡಾ ಮೀನಾಕ್ಷಿ ಪಾಟೀಲ