ಡಾ.ಡೋ.ನಾ.ವೆಂಕಟೇಶ ಕವಿತೆ-ಲವ್ ಆಲ್ ಲವ್

ಸಕಲರಿಗು ಸಮ  ಬಾಲ್ ಉ
ಸರ್ವರಿಗು ಸಮ ಸರ್ವ್ ಉ
ಸಮಸ್ತರಿಗು ಸಮ ಪ್ರೀತಿ
ಅವನಾಡಿಸುವ ಆಟ
ಈ ಟೆನ್ನಿಸ್ ಆಟದ ನೋಟ

ಅವನೇ ರೆಫರೀ ಅವನೇ ಅಂಪೈರ್
ವೀಕ್ಷಕರು ನಾವು ಬರೆ ಲೈನ್ ಮನ್ ಗಳು!
ಅವನಿಗೆ ವರದಿ ಒಪ್ಪಿಸುವವರು
ಅವನಿರಿಸಿದ ಕಾವಲುಗಾರರು
ನಮ್ಮ ಮಾಸ್ತರನವ
ನಮ್ಮ ನಿಯಾಮಕ!

ಅತ್ತಿಂದಿತ್ತ ಚೆಂಡು ಚಿಮ್ಮಿದಾಗ
ದಾರಿ ತಪ್ಪಿದಾಗ  
ಎರಡೆರಡು ಬಾರಿ ಸರ್ವ್ ಮಾಡಲು
ಅನುವಾದಾಗ
ನಿಯತಿಯ ಹೊರ ಬಂದಾಗ ಅವನಿಗೆ ವರದಿ ನೀಡುವ ನಾವು
ಬರೇ ಅವನ ಕಣ್ಗಾವಲುಗಳು

ಎಚ್ಚರವಿರು ಬಂಧು
ಜೀವನವಿಡೀ ಹಾರ್ಡ್ ಕೋರ್ಟ್ನಲ್ಲಿ
ನಲಿದಾಡಿ ಒಮ್ಮೆಗೇ
ಕೃತಕ ಕೋರ್ಟಿನಲ್ಲಿ ಹಾರಾಡ ಬೇಡ

ಬೇಕಿಲ್ಲಿ ಒಮ್ಮೆಗೇ ಬ್ರೇಕ್ ಹಾಕುವ
ಚಾಕ ಚಕ್ಯತೆ ,ಬೀಳದೇ ಕೆಳಗೆ ನಿನ್ನ
ಕಾಲು ಕೈ ಭಧ್ರವಾಗಿರಿಸಿ ಕೊಳ್ಳುವ
ಅನುಭಾವ್ಯತೆ

ಮತ್ತೆ ಎದುರಾಳಿ ಚೆಂಡನ್ನ ಬೀಸಿ ಒಗೆದಾಗ ನಿನಗೆ
ತಿರುಗಿ  ನೆಟ್ ನ ಮೆಲೇ ಹೊಸೆಯುವ ನಿನ್ನದೇ ಅಸ್ಮಿತೆ

ಆಗಾಗ ಚೆಂಡನ್ನ ಹಾಕು ಗ್ಯಾಪ್ ನಲ್ಲಿ
ಮತ್ತೆ ಬಾರಿಸು ಬಲವಾಗೇ
ಎದುರಾಳಿಗೆ ಅನಿರೀಕ್ಷಿತವಾಗೇ!

ಬೌಂಡರಿಯ ಬಾಂದನ್ನ ಮೀರಿದರೂ
ಬಂದ ಸರ್ವೀಸುಗಳಲ್ಲಿ  ಪ್ರೀತಿಗಳಿಸಿ
ನಿನ್ನ  ಲೆಕ್ಕಕ್ಕೆ ಸಿಕ್ಕ ಗೇಮ್ ಗಳ ನಿನ್ನದಾಗಿಸಿ ಆಟ ನಿನ್ನದೇ ಆಗಿಸಿಕೋ-

ಈಗ ಧಾರೆಯೆರೆ  ಸಿಕ್ಕ ಆ ಚಿನ್ನದ ಕಪ್
ಅವನಿಗೇ-
ನಿನ್ನೆದುರು ನಿಂತವನಿಗೇ!

ಮತ್ತೆ ಮತ್ತೆ ಹೇಳುತ್ತ
ಲವ್ ಆಲ್ ಲವ್!!

6 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಲವ್ ಆಲ್ ಲವ್

  1. ಅಲ್ಲ ವೆಂಕಟೇಶ್, ನೀವು ಟೆನ್ನಿಸ್ ಆಟಗಾರರು ಎಂಬುದು ನನಗೆ ಸುದ್ದಿ. ಅದಿರಲಿ, ಟೆನ್ನಿಸ್ ಆಟವನ್ನು ಬದುಕಿನ ಟೆಂಟೊಳಗೆ ಆಡಿಸಿ ಎಂಥ ಪದ್ಯ ಕಟ್ಟಿದ್ದೀರಿ!
    “ಈಗ ಧಾರೆಯೆರೆ ಸಿಕ್ಕ ಆ ಚಿನ್ನದ ಕಪ್
    ಅವನೀಗೇ
    ನಿನ್ನೆದಿರು ನಿಂತವನಿಗೇ”
    ಇದೆಂಥ ಹೃದಯವೈಶಾಲ್ಯ! ಗ್ರೇಟ್ ಥಿಂಕಿಂಗ್.
    ಅಭಿನಂದನೆ ನಿಮಗೆ.

  2. ಮೂರ್ತಿ, ನೀವು ಅಂದು ಕೊಂಡಂತೆಯೇ ನಾನೇನೂ ಟೆನಿಸ್ ಆಟಗಾರ ಅಲ್ಲ.
    ಯಾರದೋ ದಾಕ್ಷಿಣ್ಯಕ್ಕೆ ಈ ಟೆನ್ನಿಸ್ ಆಟ ಹೊಗಳುವುದಕ್ಕೆ ಹೋಗಿ ಕಡೆಗೆ ನನ್ನ ಬುದ್ಧಿ ತೋರಿಸೇ ಬಿಟ್ಟೆ!( ನನ್ನ ದೃಷ್ಟೀಲೀ ಇದೊಂದು ಬೂರ್ಜ್ವಾಗಳ ಕೊಡುಗೆ)

    ಅದೇನೇ ಇರಲಿ, ನಿಮ್ಮಿಂದ ಹೊಗಳಿಸಿ ಕೊಳ್ಳೋದಕ್ಕೆ ಖುಶಿಯಾಗುತ್ತೆ.

  3. ಸುಂದರ ಕವಿತೆ ವೆಂಕಣ್ಣ. ನೀವು ಯಾವಾಗಲೂ ಆಶ್ಚರ್ಯವನ್ನು ತರುತ್ತೀರಿ. ನಿಮ್ಮ ಟೆನಿಸ್ ಆಟಗಳ ಜ್ಞಾನವನ್ನು ಕಾವ್ಯಾತ್ಮಕ ಸ್ವರೂಪದಲ್ಲಿ ಗಮನಿಸಲು ಸಂತೋಷವಾಗಿದೆ.

  4. ಮಂಜಣ್ಣ ಧನ್ಯವಾದಗಳು. ನಿಮ್ಮ ರಿಪ್ಲೈ ನೋಡಿದಾಗಲೆಲ್ಲ ನನಗೊಂದು ಥರಾ ಧನ್ಯತಾ ಭಾವ.ಅಂದ ಹಾಗೆ ನಿಮ್ಮ ಉತ್ತರಗಳೂ ಕಾವ್ಯಮಯವಾಗೇ ಇರತ್ತೆ

    Thank you ಮಂಜುನಾಥ್!

Leave a Reply

Back To Top