ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಕನಸು
ಹೋಗಲಿ ಬಿಡಿ ಕನಸುಗಳು
ಹೊಸ ಕನಸು ಕಾಣೋಣ
ಹಳೆಯ ಕನಸುಗಳ್ಯಾವವೂ
ನಮಗಾಗಿ ಎಟುಕಲಿಲ್ಲಾ
ಕನಸಿನ ಸಾಕಾರತೆಯೊಂದೇ ಸಾಧನೆಯಲ್ಲಾ
ಕಾಣಲೇಬೇಕೆಂಬ ಒತ್ತಾಯವೂ ಇಲ್ಲಾ
ಹಾರಿದರೂ ಕನಸಿನಾಕಾಶದೊಳಗೆ
ಹಿರಿದಾದ ಕೈಯೆಂದೂ ಗಗನ ಮುಟ್ಟಿಲ್ಲಾ
ಮನಸಿನ ಭಾವ ಕನಸಿನ ಲೋಕದೊಳಗೆ
ಕಳ್ಳೆಮಳ್ಳೆ ಆಡಿದರೆ
ಹೃದಯಕ್ಕೆನೋ ಹಿತವೆಂದು
ಮರೀಚಿಕೆಯ ಲೋಕ ನೆಚ್ಚುತ್ತೇವೆ
ಕನಸಿನ ನೈಜತೆ ಅರಿತಾದಮೇಲೆ
ಎಟುಕದ ನೋವನ್ನೂ ಸಹಿಸುತ್ತೆ
ಹಗಲು ಕನಸೋ ರಾತ್ರಿಯದೊ
ಕಾಣುವ ವ್ಯಕ್ತಿಯಲ್ಲಿ ಕುಳಿತಿದೆ
ವಾಸ್ತವೀಕತೆ ಹಾದಿಯಲ್ಲಿ ಕನಸು
ಬಂದು ಹೋಗುವ ವಾಹನದಂತೆ
ಸಾಲು ಸಾಲಾಗಿ ಸಾಗುತ್ತಿದ್ದರೂ
ಕಾಣುವವನರಸಿ ನಿಲ್ಲುತ್ತವೆ
ಸೆಳೆಯುತ್ತಲೇ ಇದೆ ಮಾಯಾಲೋಕ
ದೊರಕುವ ಭರವಸೆಯಲ್ಲಿ ಮುಳುಗಿಸಿ
ಅಸಹಾಯಕತೆಯಲ್ಲಿ ನಿಲ್ಲಿಸಿ
ಇದ್ದ ದಾರಿ ದೂರಾಗಿಸುತ್ತೆ
ಕನಸಿಗೆ ಗುರಿ ಒಂದೆ
ಕಾಣುವವನ ಬೆನ್ಹತ್ತುವುದು
ಗೊತ್ತೇ ಅದಕೆ ಶ್ರಮವಿಲ್ಲದೆ ಫಲವಿಲ್ಲೆಂದು
ಯೋಚಿಸಿ ನೋಡಿ ಸಫಲತೆ ಕನಸನ್ನು
ಬಿಟ್ಟುಬಿಡಿ ಕನಸಿನ ಕನಸನ್ನು
——————————————–
ಪ್ರಮೋದ ಜೋಶಿ
ಕನಸಿನ ಬೆನ್ನು ಹತ್ತದೇ ಶ್ರಮದ ಸಫಲತೆ ಯತ್ತ ಸಾಗುವ ಸಂದೇಶದ ಸುಂದರ ಕವನ ಪ್ರಮೋದ್ ಸರ್ ಅಭಿನಂದನೆಗಳು