ಸುವಿಧಾ ಹಡಿನಬಾಳ ಅವರ ಕವಿತೆ-ಓದಿನ ಸುಖ

ಮಕ್ಕಳ ಕೈಗೆ ಹೊಸ ಚಾಕಲೇಟ್
ಸಿಕ್ಕಿದೊಡನೆ ರ್ಯಾಪರ್ ಬಿಡಿಸಿ
ಪರಿಮಳ ಗ್ರಹಿಸಿ ಬಾಯಿಗಿಟ್ಟು‌
ಮೆಲ್ಲನೆ ಚಪ್ಪರಿಸುವ ಮಕ್ಕಳ ತೆರದಿ

ಬಟ್ಟೆ ಅಂಗಡಿಯಿಂದ ಇಷ್ಟವಾದ
ಸೀರೆ ಖರೀದಿಸಿ  ತಂದೊಡನೆ
ಬಾಕ್ಸ್ ತೆಗೆದು ಗಳಿಗೆ ಮುರಿದು
ಹೆಗಲಿಗಿಟ್ಟು ನಲಿವ ಹೆಂಗಳೆಯರ ತೆರದಿ



ಹೊಸ ಪುಸ್ತಕ  ಕೈಗೆ ಸಿಕ್ಕೊಡನೆ
ಪುಟ ತಿರುಗಿಸಿ ಪರಿಮಳ ಆಘ್ರಾಣಿಸಿ
ಕೈಯಲ್ಲಿ ಹಿಡಿದು  ಕಣ್ಣು ಹುಗಿದು
ಓದುವ  ಆ  ಸುಖ ಪರಮ ಸುಖ!

ಕಥೆಗೆ ಪಾತ್ರವಾಗಿ ಕವನಕ್ಕೆ ಭಾವವಾಗಿ
ಇಳೆಗೆ ಮಳೆಯಾಗಿ  ದೇಹಕ್ಕೆ
ಪ್ರಾಣವಾಗಿ ಪುಸ್ತಕದೊಳು ಒಂದಾಗಿ
ಕಳೆವ ಆ ಆ ಗಳಿಗೆ ಅಮೃತ ಗಳಿಗೆ!

ಬಲ್ಲವನೆ ಬಲ್ಲ ಬೆಲ್ಲದ ರುಚಿಯ
ಪುಸ್ತಕ ಕೈಗೆತ್ತಿಕೊಂಡೊಡನೆ ಕಣ್ಣು ತೂಕಡಿಸುವ ಓದು ವಿಮುಖರಿಗೇನು
ಗೊತ್ತು ಓದಿನ ಆ ಆ ಪರಮಸುಖ?

—————————

suvidha

Leave a Reply

Back To Top