Category: ಕಾವ್ಯಯಾನ

ಕಾವ್ಯಯಾನ

ಗಝಲ್

ವಿಶ್ವಾಸಕ್ಕೆ ಮಾನದಂಡ ಏನೆಂದು ಯಾರಿಗಾದರೂ ಗೊತ್ತೆ
ನಿಶ್ವಾಸದೆ ಕಹಿಯೆಲ್ಲ ಹೊರಸೂಸಿ ಕರಗುತಿದೆ ಹೃದಯ

ಆ ರಕ್ಕಸ ರಾತ್ರಿಗಳು.

ಇತ್ತೀಚೆಗೆ ಛತ್ತೀಸಘಡದ ಬುಡಕಟ್ಟಿನ ಜಶ್ಪುರ್ ಎಂಬಲ್ಲಿ ಸರಕಾರ ನಡೆಸುವ ಕಿವುಡು-ಮೂಕ ವಸತಿಯಲ್ಲಿ ಜರುಗಿದ ಘೋರ ಘಟನೆಯ ನೋವಿಂದ ಈ ಪದ್ಯ.

ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-18

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ […]

ಆಮೆಯೂ ಮೊಲವೂ

ಕಥನಕಾವ್ಯ ಆಮೆಯೂ ಮೊಲವೂ ಬೆಂಶ್ರೀ ರವೀಂದ್ರ ಭಾಗ ಒಂದು ಸ್ಪರ್ಧೆಗೆ ಆಮೆಯೂ ಮೊಲವುಟ್ರ್ಯಾಕಿನ ಗೆರೆಯಲಿ‌ ನಿಂತಿಹವುಓಟದ ರೇಸಿಗೆ ಅಣಿಯಾಗಿಹವು ಇದೆಂತಹ ಆಟ ತಮಾಷೆ ಜೂಟಾಟಮಜವಿದೆ ನೋಟ ಆಮೆ ಮೊಲದೋಟಕಾಡಿನ ಪ್ರಾಣಿಗಳಿಗೆ ಮೋಜಿನ ಮಾಟ ಕಿವಿಯನು ನಿಗುರಿಸಿ ಕಣ್ಣನು ಪಿಳುಕಿಸಿಸಮ ಎನಗಾರೆಂದು ಬೀಗಿಹ ಭೂಪಬೆಳ್ಳನೆ ಬೆಳುಪಿನ ಮೊಲ ಮಹರಾಯ ಕಾಲನು ಜಾಡಿಸಿ ಕತ್ತನು ಆಡಿಸಿಸುತ್ತಲೂ ನೋಡಿ ದೇವಗೆ ಪ್ರಾರ್ಥಿಸಿಓಟಕೆ ಸಿದ್ದವಾದನು ಆಮೆರಾಯ ಕತ್ತನು‌ ಕೊಂಕಿಸಿ ಕಾಲನು ಜಾಡಿಸಿಕಣ್ಣನು ಕೀಲಿಸಿ ಟ್ರ್ಯಾಕನು ವೀಕ್ಷಿಸಿಅಂಪೈರ್ ಸೀಟಿಯು ಜಿರಾಫೆರಾಯ ಮಿಂಚಿನ ವೇಗದಿ ಓಡಿತು […]

ಹೃದಿಹೃದಯಲು ಒಲವುದಿಸಿ

ಬೈಸಾಕಿಯು ಬೇಸರಿಸಿ,
ಚಿಗಿ ಚೈತ್ರದ ಪಡಿಯರಸಿ
ಮಗುವಂತೆ ಮುನಿಸೊಡೆಸಿ,
ಮೋತ್ಕರಿಸಿದೆ ಮಿಗಿಮಿಗಿಸಿ…

ಮರೆಯದ ನೆನಪು

ಕಾವ್ಯಯಾನ ಮರೆಯದ ನೆನಪು ಶೃತಿ ಮೇಲುಸೀಮೆ ಬೆಳಕು ಗಾಳಿ ಇಲ್ಲದಿದ್ರು,ಮನಿತುಂಬಾ ನಮ್ದೆ ಹವಾ,ಸದ್ದು ಗದ್ದಲ,ಯಾವಾಗ್ಲೂ ಆಟೋಟ,ಬೀದಿಯೆಲ್ಲಾ ರಂಪಾಟ ಚಪ್ಪರದ ಮನಿಯಾದ್ರೂ,ಅರಮನಿಗಿಂತ ಕಮ್ಮಿರ್ಲಿಲ್ಲಮನೆಗೂ,ಮನಸಿಗೂ ತೂತು ಬಿದ್ದು ಸೋರುತಿರ್ಲಿಲ್ಲ ನಿಷ್ಕಲ್ಮಶ ಸಣ್ಮನಸು,ಏನು ಅರಿಯದ ವಯಸುದೊಡ್ಡೋರಂದ್ರೆ ಭಯ,ಚಿಕ್ಕೋರಂದ್ರೆ ತಂಟೆ ತಕರಾರು ಹೊತ್ತೊತ್ತು ಊಟಕ್ಕೂ ,ಗಂಜಿಯ ಘಮಲುಸಾಲಾಗಿ ಕೂತ್ರೆ,ಸಾಲಿನ ಕೊನೆಯೊರಿಗೆ ಸಾಲುತ್ತಿರ್ಲಿಲ್ಲ ಕಿತ್ತು ತಿನ್ನೋ ಬಡತನಿದ್ರೂ,ಕತ್ತೆತ್ತಿ ನಡಿಯೋ ಶಕ್ತಿಕತ್ತಿಯಂತೆ ಇರಿಯೋ ತೊಂದ್ರೆತಾಪತ್ರೆ,ಕಿತ್ತೆಸೆಯಲು ದಾರಿ ನೀಡಿದ ಅಕ್ಷರದ ದ್ಯಾವರು ಬದುಕಿಗೆ ಒಂದರ್ಥ ಸಿಕ್ಕಿದ್ದೇ ಆ ಬಾಲ್ಯದ ದಿವಸದಲ್ಲಿತಂದಿ ಗದರಿಕೆ ಧ್ವನಿಲೇ ಕಾಳಜಿತ್ತು,ಅವ್ವನ ಪ್ರೀತಿಲೇ ನಗು […]

ಅರಿತು ಮರೆತು

ಕಾವ್ಯಯಾನ ಅರಿತು ಮರೆತು ಲಕ್ಷ್ಮೀ ಮಾನಸ ನೆರಳ ಬೆಳಕಿನಕದನದಲ್ಲಿ,ಪ್ರತಿಬಿಂಬ ಅರಿಯದದರ್ಪಣವನ್ನು,ನೆರಳು ಎಂದೋ ತೊರೆದರೂ, ಬೆಳಕ ಗೈರುಹಾಜರಿಯಲ್ಲಿ,ಮೋಡ ಕವಿದಬಣ್ಣದ ಬಿಂಬವುಮರುಭೂಮಿಯಲ್ಲಿ ನೀರನ್ನರಸಿಹಾಕುವ ಹೆಜ್ಜೆಗಳುಎದೆಗೂಡಲ್ಲಿ ಪಿಸುಗುಟ್ಟುತ್ತಲಿವೆ..ಕಣ್ರೆಪ್ಪೆಯ ಶಬ್ಬಕ್ಕೆಎದುರುನಿಲ್ಲಲಾಗದೆ….. ಭಾವನೆಯ ಬಳ್ಳಿಯಲ್ಲಿಮುದುಡದ ಕುಸುಮಾಗಳಿಗೆಕಪ್ಪು ವರ್ಣವ ಪೂಸಿದರೂ, ಅರಿತು ಮರೆತು,ಗೀಚಿದ ಗೆರೆಯ ದಾಟಿ,ಕಾರ್ಮೋಡದ ಮಡಿಲಲ್ಲಿನಸುಖ ನಿದ್ರೆಯ ತೊರೆದು, ಬಯಸುತಲಿವೆಮಾತನರಿಯದ ಮೌನವಗೀತೆಯಾಗಿ ಬದಲಿಸಿ,ವಸಂತ ಕೋಗಿಲೆಯೊಡಗೂಡಿಮರೆತ ಹಾಡನ್ನುಮರಳಿ ಹಾಡಲು,ಅರಿತ ರಾಗದಲ್ಲಿಚಿರನಿದ್ರೆಗೆ ಜಾರಲು… ******

ಗಜಲ್

ಗಜಲ್ ಡಾ.ಯ.ಮಾ.ಯಾಕೊಳ್ಳಿ ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವಗಾಳಿಗೆ ತೂರಿವೆತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆಯಯಾ ನಿನ್ನ ಲಾಲಿಹಾಡು […]

ಗಝಲ್

ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ

Back To Top