Category: ಕಾವ್ಯಯಾನ

ಕಾವ್ಯಯಾನ

ಎದೆಯ ತಿದಿ

ಯುಗಗಳೆಷ್ಟೊ ಸರಿದಿದೆ
ಅನಂಗರಂಗವು‌ ನಿತ್ಯ ನಿರಂತರ
ಶಿವಕಣ್ಣುರಿಗೆ ಭಸ್ಮವಾದರೂ ರತಿ ಇದ್ದಾಳೆ ಬದುಕಿಸಲು.

ಕನ್ನಡಿಯ ಅಮಾಯಕತೆ

ಕಾವ್ಯಯಾನ ಕನ್ನಡಿಯ ಅಮಾಯಕತೆ ಅಶೋಕ ಹೊಸಮನಿ ಹೀರಬೇಕಿತ್ತು ಈ ಮೊಗವನ್ನಾದರೂನಗುವ ಪರದೆಯ ಚೂರಿಯನ್ನಾದರೂ ಕಲಿಸಬೇಕಿತ್ತು ಮುಖಗಳ ಹೂಳಲುಈ ನೇತ್ರಗಳಿಗಾದರೂ ಒಡೆಯಬೇಕಿತ್ತು ಈ ಮಡಿಕೆಯದಾರಿಗಳಿಗಾದರೂ ಆಲಿಸಬೇಕಿತ್ತು ಗಾಯಗಳಅಣುಕು ಗೋಷ್ಠಿಗಳಾದರೂ ಸಾಕಿತ್ತು ಚಂದಿರನ ನಗುಹೃದಯದ ಕಿರು ಬೆರಳಿಗಾದರೂ ನೀನಾಗಬೇಕಿತ್ತುಹಸ್ತಗನ್ನಡಿಯ ನಕ್ಷತ್ರವಾದರೂ ನುಡಿಬೇಕಿತ್ತು ಕನ್ನಡಿಯ ಅಮಾಯಕತೆಯನ್ನ ನೆತ್ತರಾದರೂ

ಅವನಷ್ಟೇ

ಸೂರ್ಯನ ಕಿರಣಗಳು ಸೋಕಿದಾಗ ಕೆಂಪಾದ ನಿನ್ನ ಮೊಗವನ್ನು ನೋಡಲು ಏನೋ ಒಂದು ಹರುಷ..ಚೆಲುವೆಲ್ಲವು ಇಲ್ಲೆ ಬಂದು ಕುಳಿತಿತ್ತು…

ಬಿ.ಶ್ರೀನಿವಾಸ್ ಹೊಸ ಕವಿತೆ

ಹಳ್ಳಕ್ಕೆ ಬಿದ್ದ ಬಸ್ಸಿನ
ಡ್ರೈವರಿನ ಹೆಸರಿನ ಆಧಾರದ ಮೇಲೆ ದೋಷಾರೋಪದ
ಟಿ ಆರ್ ಪಿ ಸಿದ್ಧವಾಗುತ್ತದೆ

ನಿರ್ಮಲಾ ಶೆಟ್ಟರ ಹೊಸ ಕವಿತೆ

ಇನ್ನಾದರೂ
ಮುಖಕ್ಕೆ ಮುಖಕೊಟ್ಟು
ಕಣ್ಣಲ್ಲಿ ಕಣ್ಣು ನೆಟ್ಟು ಮಾತಾಡುತ್ತಲಿರಿ
ಹಗಲ ಬೆಳಕಿನಂತೆ

ನನ್ನ ಗುರುಕುಲ

ಕಾವ್ಯಯಾನ ನನ್ನ ಗುರುಕುಲ ನೇತ್ರಾ ಪ್ರಕಾಶ್ ಹಲಗೇರಿ ಹುಡಿ ಮಣ್ಣಿನ ಹಾದಿ ಗೊರ್ಪಿಕಲ್ಲು, ಮುಳ್ಳಿನ ಮಿಶ್ರಣ,ಮಳೆರಾಯ ಧರೆಗಿಳಿದರೆಕೆಸರು ಮುದ್ದೆ ರಾಡಿ ರಾಡಿಸುತ್ತ ಗದ್ದೆಯ….ನೋಟಕಿರು – ಕಾಲುವೆಗಳ ಜುಳು – ಜುಳು ಪಾಟಿ ಚೀಲ ಹೊತ್ತುಓಡಿದ್ದೇ ಓಡಿದ್ದುಯಾವುದರ ಪರಿವೆ ಇಲ್ಲದೆರಕ್ತ ಮಡುಗಟ್ಟಿದ ಬರೀ ಪಾದದಲ್ಲಿಎಲ್ಲಾ ಮೇಷ್ಟ್ರುಗಳ ಸ್ಪೆಷಲ್ ಕ್ಲಾಸಿಗೆ ಉಸಿರುಗಟ್ಟಿಕನಸಿನ ಕಣ್ಣಿನಲ್ಲಿ… ಸೂರ್ಯಚಂದ್ರರ ಕೋಟಿ ಜೀವ ಜಂತುಗಳು ಆಶ್ರಯ ತಾಣಮಧ್ಯೆ ನಮ್ಮೆಲ್ಲರ ಗುರುಕುಲಬೋಧಿ ವೃಕ್ಷ – ಕಲ್ಪವೃಕ್ಷದ ಬದುಕಿನ ಅಡಿಪಾಯವೇ ಸರಿ ನಮ್ಮೀ ಗೋಪುರದ ಶಿಖರ…. ತಿದ್ದಿ-ತೀಡಿ ಜುಲಪಿ […]

ಈ ಸಂಜೆ

ಕಾವ್ಯಯಾನ ಈ ಸಂಜೆ ಅಕ್ಷತಾ ಜಗದೀಶ ಜೊತೆಯಾಗಿ ಮೂಡಿಸಿದೆವುನಮ್ಮ ‌ಹೆಸರು‌ ಮರಳಿನ ಮೇಲೆ..ಕಡಲ ಅಲೆಗಳ ಸ್ಪರ್ಶಿಸುತಜೊತೆಯಾಗಿ ನಡೆದೆವುಆ ಸುಂದರ ‌ಸಂಜೆಯಲಿ.. ರವಿ ಆಗಸದಿಂದ ಜಾರಿದರುಸಮಯವೇಕೆ ಇಷ್ಟು ಬೇಗ‌ಓಡುತ್ತಿದೆ ಎಂದುಮುನಿಸಿಕೊಂಡೆವು…..ನಿನ್ನೊಡನೆ ಪಿಸುಗುಡುವಾಗಅಲೆಗಳ ಬೋರ್ಗರೆತವೇಕೇಳಲಿಲ್ಲ ನನಗಂದು…. ಇಂದೆಕೊ ಮತ್ತೆ ಏಕಾಂತನಮ್ಮ ಹೆಸರನ್ನೇಕೊಕಡಲ ಅಲೆಗಳು ಬಂದುನುಂಗುತ್ತಿವೆ ಇಂದು… ಆಗಸದ ಸೂರ್ಯ ಅದೇಕೊನಿಧಾನಗತಿಯಲಿ ಚಲಿಸುತಿಹನೋ..ಕಡಲೇಕೊ ಬೋರ್ಗರೆದುನನ್ನ ನೋಡಿ ಆರ್ಭಟಿಸುತಿದೆಎನ್ನುವಂತೆ ಭಾಸ.. ಮರೆಯಾದೆ ಏಕೆ‌ ನನ್ನ ರಜನಿಅಗಾದ ಕಡಲಿಗೆ ಸೆರುತ್ತಿದೆನೀ ಉಳಿಸಿಹೋದ ಕಂಬನಿ…ಈ ಸಂಜೆ‌ ನೀ ಜೊತೆಗಿಲ್ಲಆದರೂ….ಕಡಲ ಅಲೆಗಳಿಗೆ ಸ್ಪರ್ಶಿಸುವುದನಾ ಮರೆತಿಲ್ಲ….‌‌

ರೆಕ್ಕೆಗಳ ಹರವಿದಷ್ಟು ಕಂಬನಿ

ಕಾವ್ಯಯಾನ ರೆಕ್ಕೆಗಳ ಹರವಿದಷ್ಟು ಕಂಬನಿ ಅಶೋಕ ಹೊಸಮನಿ ದೃಷ್ಟಿ ದೃಷ್ಟಿಯನೆದುರಿಸುವುದು ಸುಲಭದ ಮಾತಲ್ಲ ಸಖಾಎರಡೇ ಎರಡು ಹೆಜ್ಜೆಗಳ ಪ್ರೇಮಆತ್ಮಗಳ ಅನಂತ ಬಿಕ್ಕು ದೇವರು ದೇವರನೆದುರಿಸುವುದು ಸುಲಭದ ಮಾತಲ್ಲ ಸಖಾತೀರಿ ಹೋದವು ಅದೆಷ್ಟೋ ನದಿಗಳುಕಣ್ಮರೆಯಾದರು ಕಡು ತೀರದಷ್ಟು ಸೂರ್ಯ,ಚಂದ್ರರು ಮುಸ್ಸಂಜೆ ಮುಸ್ಸಂಜೆಯನೆದುರಿಸುವುದು ಸುಲಭದ ಮಾತಲ್ಲ ಸಖಾಸುಟ್ಟ ನೆತ್ತರಿನಲಿಬೆಂದ ಕನಸುಗಳ ಮೇಳವು ಖಡ್ಗ ಖಡ್ಗವನೆದುರಿಸುವುದು ಸುಲಭದ ಮಾತಲ್ಲ ಸಖಾಎತ್ತರಕ್ಕೇರಿಸುವಾಗಲೂ ಪ್ರೀತಿಉಕ್ಕೀತು ಶಾಂತಿಯ ಬಾವುಟವು ಸಖಾರೆಕ್ಕೆಗಳ ಹರವಿದಷ್ಟು ಕಂಬನಿತಾಕಿದಷ್ಟು ಒಡನಾಡಿ ನೋಟಗಳುಹಾದಿಗೊಂದಿಷ್ಟು ಕೋರಿಕೆಯೂ

Back To Top