ಕಾವ್ಯಯಾನ
ಕನ್ನಡಿಯ ಅಮಾಯಕತೆ
ಅಶೋಕ ಹೊಸಮನಿ
ಹೀರಬೇಕಿತ್ತು ಈ ಮೊಗವನ್ನಾದರೂ
ನಗುವ ಪರದೆಯ ಚೂರಿಯನ್ನಾದರೂ
ಕಲಿಸಬೇಕಿತ್ತು ಮುಖಗಳ ಹೂಳಲು
ಈ ನೇತ್ರಗಳಿಗಾದರೂ
ಒಡೆಯಬೇಕಿತ್ತು ಈ ಮಡಿಕೆಯ
ದಾರಿಗಳಿಗಾದರೂ
ಆಲಿಸಬೇಕಿತ್ತು ಗಾಯಗಳ
ಅಣುಕು ಗೋಷ್ಠಿಗಳಾದರೂ
ಸಾಕಿತ್ತು ಚಂದಿರನ ನಗು
ಹೃದಯದ ಕಿರು ಬೆರಳಿಗಾದರೂ
ನೀನಾಗಬೇಕಿತ್ತು
ಹಸ್ತಗನ್ನಡಿಯ ನಕ್ಷತ್ರವಾದರೂ
ನುಡಿಬೇಕಿತ್ತು ಕನ್ನಡಿಯ ಅಮಾಯಕತೆಯನ್ನ ನೆತ್ತರಾದರೂ