ನನ್ನ ಗುರುಕುಲ

ಕಾವ್ಯಯಾನ

ನನ್ನ ಗುರುಕುಲ

ನೇತ್ರಾ ಪ್ರಕಾಶ್ ಹಲಗೇರಿ

ಹುಡಿ ಮಣ್ಣಿನ ಹಾದಿ ಗೊರ್ಪಿಕಲ್ಲು, ಮುಳ್ಳಿನ ಮಿಶ್ರಣ,
ಮಳೆರಾಯ ಧರೆಗಿಳಿದರೆ
ಕೆಸರು ಮುದ್ದೆ ರಾಡಿ ರಾಡಿ
ಸುತ್ತ ಗದ್ದೆಯ….ನೋಟ
ಕಿರು – ಕಾಲುವೆಗಳ ಜುಳು – ಜುಳು

ಪಾಟಿ ಚೀಲ ಹೊತ್ತು
ಓಡಿದ್ದೇ ಓಡಿದ್ದು
ಯಾವುದರ ಪರಿವೆ ಇಲ್ಲದೆ
ರಕ್ತ ಮಡುಗಟ್ಟಿದ ಬರೀ ಪಾದದಲ್ಲಿ
ಎಲ್ಲಾ ಮೇಷ್ಟ್ರುಗಳ ಸ್ಪೆಷಲ್ ಕ್ಲಾಸಿಗೆ ಉಸಿರುಗಟ್ಟಿ
ಕನಸಿನ ಕಣ್ಣಿನಲ್ಲಿ…

ಸೂರ್ಯಚಂದ್ರರ ಕೋಟಿ ಜೀವ ಜಂತುಗಳು ಆಶ್ರಯ ತಾಣ
ಮಧ್ಯೆ ನಮ್ಮೆಲ್ಲರ ಗುರುಕುಲ
ಬೋಧಿ ವೃಕ್ಷ – ಕಲ್ಪವೃಕ್ಷದ ಬದುಕಿನ ಅಡಿಪಾಯವೇ ಸರಿ ನಮ್ಮೀ ಗೋಪುರದ ಶಿಖರ….

ತಿದ್ದಿ-ತೀಡಿ ಜುಲಪಿ ಏಟಿಗೆ ಬಾಗಿ ಬೆಂಡಾಗಿ ಕಲಿತದ್ದೆ ಕಲಿತದ್ದು ಇಂದು ನಮ್ಮೆಲ್ಲರ ರೂಪಕ ಪ್ರತಿಮೆಗಳ ಪ್ರತಿಭೆಗಳ ಆಗಿದ್ದೇವೆ…..

ಮಧ್ಯಾಹ್ನದ ವೇಳೆ ಡಬ್ಬಿಯ ರೊಟ್ಟಿ ಪಲ್ಯ ಅನ್ನ ಮೊಸರು ಉಪಹಾರ ವಂಗೆಮರ ದಡಿಯ ಸವಿಯಲು
ಕ್ಷಣಗಳ ಎಣಿಕೆ ಹಸಿವಿನ ತಡವರಿಕೆ

ವಾಲಿಬಾಲ್ ಕೊಕ್ಕೋ ಬ್ಯಾಡ್ಮಿಂಟನ್ ಹೊಡೆದಾಟ ಒಡನಾಟ ನಮ್ಮೆಲ್ಲರ ನೆಚ್ಚಿನ ಕೈತೋಟದ ಸ್ವಚ್ಛತೆ ಆಗಾಗ

ಎರಡು ದಶಕಗಳು ಕಳೆದರೂ ನಾವೆಲ್ಲರೂ ಬೆಳೆದರು ನಮ್ಮೆಲ್ಲರ ಆಪ್ತತೆ ಸ್ನೇಹ ಸ್ಪಂದನ ಈ ಬಂಧನ ಉಳಿದಿದೆ ಮುಗಿಯದ
ಬೆಸುಗೆಯ ಕೊಂಡಿ

ಭಾವನೆಗಳ ಬಂಧವಾಗಿ ಬೆಸೆದಿದೆ
ಈ ಗುರುಕುಲ ಸಾಧನೆಯ ಮೆಟ್ಟಿಲುಗಳನ್ನು ಮುಟ್ಟಿಸಿದ
ಜ್ಞಾನ ಮಂದಿರ ಈ ಗುರುಕುಲ


2 thoughts on “ನನ್ನ ಗುರುಕುಲ

Leave a Reply

Back To Top