ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಅನುವಾದ ಸಂಗಾತಿ

ಕಡಲೊಳಗೆ ಕಡಲಾಮೆಗಳು ಇಂಗ್ಲೀಷ್ ಮೂಲ:Melvin B Tolson ಕನ್ನಡಕ್ಕೆ: ವಿ.ಗಣೇಶ್ ವಿಚಿತ್ರ ಆದರೂ ಸತ್ಯವಿದು ಕೇಳಿ     ಕಡಲಿನಲಿರುವ ಕಡಲಾಮೆಗಳ ಕಥೆ     ಕಡಲಾದರೇನು ಒಡಲಾದರೇನು?     ಕುಣಿದು ಕುಪ್ಪಳಿಸುವುದಕೆ ಚಿಂತೆ     ಒಮ್ಮೊಮ್ಮೆ ಅನ್ನ ಆಹಾರಗಳಿಲ್ಲದೆ     ಶಾರ್ಕಗಳು ಕಡಲಲ್ಲಿ ಒದ್ದಾಡುವುವು     ಬೇಟೆಯನು ಹುಡುಕುತ್ತ ಬರುವ     ಶಾರ್ಕ್‍ಗಳಿಗೆ ಸಿಗುವುದೀಆಮೆಗಳು     ಉದರವನು ತಣಿಳಿಸಲು ಆಕ್ರಮಿಸಿ     ನುಂಗುವುವು ಇಡಿ ಕಡಲಾಮೆಗಳನು     ಬೆಣ್ಣೆಯಂತಹ  ದೇಹದೊಳಗಿಳಿಯುತ್ತ     ಜಾರುವುದು ಆಮೆಯು ಉದರದೊಳಗೆ     ಒಳಸೇರಿದೊಡೆ […]

Read More
ಕಾವ್ಯಯಾನ

ಕಾವ್ಯಯಾನ

ಪ್ರೀತಿ ಬಡತನ ವಾಣಿ ಭಂಡಾರಿ ಅವ್ವನ ಸದ್ದಿರದ ಖಾಲಿ ಅಡಿಗೆ ಮನೆಯು,ಬಣಬಣ ಎನುತಲಿ ಮನವನು ಹಿಂಡಿದೆ.ಒಡಲೊಪ್ಪತ್ತಿಗೆ ಕೂಳು ತರಲು ಆಚೆಮನೆ,ಕಂಡ್ಲಿಲಿ ನಿಂತ ಅವ್ವನ ಬಂಗಿ ಕಾಣದಾಗಿದೆ. ಒಲೆಯೊಳು ಉರಿವ ಬೆಂಕಿಗೆ ಬೇಸರವು,ಚೆರ್ಗೆಯೊಳು ಕಾದಾರಿದ ಎಸರ್ನೀರಿತ್ತು.ತಣ್ಣಗಾಗಿ ಮತ್ತೊತ್ತುರಿಯಲು ಮನಸಿಲ್ಲದೆ, ಹೊಗೆಯುಗುಳುತಲಿ ನೋವಲಿ ಮಲಗಿತು. ಹಸಿ ಸೌದೆಯೊಳು ಉಗುಳೊ ಹೊಗೆಯಂತೆ,ಮನವು ಜಡ್ಡುಗಟ್ಟಿದಂತಹ ಮಸಿಯರಬೆ.ಇಲ್ಲಣವಿರದ ಖಾಲಿಪಾತ್ರೆ ಹೊರಳಿ ಮಲಗಿ,ಗಿಲಾವಿರದ ಗೋಡೆ ಕಥೆ ಹೇಳಿ ಮನದಲಿ ಹಬೆ. ತೊಳೆದ ಪಾತ್ರೆಯೊಳು ಪಾವಕ್ಕಿಯಿರದೆ,ಮನೆಮನದ ಮೂಲೆಯಲ್ಲಿ ರಶ್ಮಿ ಚೆಲ್ಲಿದೆ.ಬಡತನಕಿರುವ ಸಾವು ಪ್ರೀತಿಗಿರದಿಲ್ಲಿ ಎನುತ,ನೆಮ್ಮದಿ ತಾಣವೆ ಅಮ್ಮನಡಿಗೆ […]

Read More
ಕಾವ್ಯಯಾನ

ಕಾವ್ಯಯಾನ

ಬಂಗಾರದ ನೆನಪಿನ ಬೆಳ್ಳಿ ಗೆಜ್ಜೆ’ ವಸುಂಧರಾ ಕದಲೂರು ಮೊನ್ನೆ ಬಯಸೀ ಬಯಸೀಆಭರಣದಂಗಡಿಯಲಿ ಬಂಗಾರಬಣ್ಣದ ಗೆಜ್ಜೆ ಕೊಂಡೆ. ಬೆಳ್ಳಿ ಪಾದತುಳಿದು ಬಂದ ಹಾದಿ ನೆನಪುರಿಂಗಣಿಸಿ ಅನಾವರಣವಾಯಿತು ಹಣೆ ಕೆನ್ನೆ ಕೈಗಳ ಮೇಲೆ ಕಾಸಗಲಕಪ್ಪನು ದೃಷ್ಟಿ ಸೋಕದಂತೆ ಹಾಕಿಮುದ್ದು ಮಾಡಿ, ಪುಟ್ಟ ಕಾಲಿಗೆ ಹಗೂರಕಾಲ್ಮುರಿ ಕಿರುಗೆಜ್ಜೆಯನು ತೊಟ್ಟಿಲಲಿಟ್ಟುತೂಗಿದ ಸಂಭ್ರಮದ ನೆನಪಾಯಿತು.. ಗೋಡೆ ಹಿಡಿದು ತಟ್ಟಾಡಿಕೊಂಡುಹೆಜ್ಜೆಗೊಮ್ಮೆ ಝಲ್ಲೆನುವ ಪುಟ್ಚಪಾದಊರಿ ಬರುವ ಸದ್ದನು ಮುಂದುಮಾಡಿದಗೆಜ್ಜೆಯ ಸಮಾಚಾರ ನಾಕಾರು ಬೀದಿತಟ್ಟಿ ಕೇಕೆ ಹಾಕಿದ ನೆನಪಾಯಿತು.. ಅದೇನು ಗಮ್ಮತ್ತು ! ಗತ್ತು!ಮತ್ತು,ಸದ್ದು ಮಾಡದ ಗೆಜ್ಜೆ ತೊಟ್ಟಿದ್ದರೆದಾರಿ […]

Read More
ಕಾವ್ಯಯಾನ

ಕಾವ್ಯಯಾನ

ಹೀಗೊಂದು ಕವಿತೆ ನಾಗರಾಜ್ ಹರಪನಹಳ್ಳಿ -1-ಎರಡು ಬಾಗಿಲು ಮುಚ್ಚಿದವುಇಷ್ಟೇ ತೆರೆದ ಕಿಟಕಿಗಳುಅಲ್ಲಿ ಶಬ್ದಗಳುಮೊಳೆಯಲಿಲ್ಲ -2-ಬಾಗಿಲಿಲ್ಲದ ಊರಲ್ಲಿಬೀಗಗಳು ಕಳೆದು ಹೋಗಿವೆಶಬ್ದಗಳ ಕಳಕೊಂಡವರುದಿಕ್ಕು ದಿಶೆಯಿಲ್ಲದೇನಡೆಯುತ್ತಿದ್ದಾರೆಎಂದೂ ಸಿಗದ ಕೊನೆಗೆ -3-ಕಾಲಿಲ್ಲದವರನ್ನುಕೈಯಿಲ್ಲದವರು ಕುಣಿಸಿದರುಅನಾಥ ಬೀದಿಗಳಲ್ಲಿಮೆದುಳಿಲ್ಲದವರನ್ನುಕಣ್ಣಿಲ್ಲದವರು ಕೂಗಾಡಿಸಿದರುಹೃದಯ ಕಳೆದುಕೊಂಡದೊರೆಯ ಮಹಲಿನ ಮುಂದೆ -4-ಮುಗಿಲದುಃಖಭೂಮಿಯಬಾಯಾರಿಕೆಮುಗಿಯುವಂತಹದ್ದಲ್ಲ ಯಾಕೋ ಮನಸ್ಸು ಖಾಲಿ ಖಾಲಿಯಾಗಿದೆಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ ಹರಿವ ನದಿಗೂ ಕಳೆಯಿಲ್ಲಸಮುದ್ರ ಸೇರಿಯೂ ಸಂಭ್ರಮಿಸದ ಆಕೆಯಂತೆಮನದಲ್ಲಿ ಎದ್ದ ಭಾವಗಳ ಅಲೆ ಸದ್ದು ಅವಳ ತಟ್ಟಿದೆ**-6-ಹಿಡಿಯಷ್ಟು ಬದುಕಿನಲ್ಲಿ ಕಡಲಿನ ಪ್ರೀತಿಯ ಅರಿಯಲಾಗಲಿಲ್ಲ ದಿನವೂ ಸೂರ್ಯ ಬೆಳಗಿದರೂ ಮನುಷ್ಯ ಮನದ […]

Read More
ಕಾವ್ಯಯಾನ

ಕಾವ್ಯಯಾನ

ಅಪ್ಪ ಬಿದಲೋಟಿ ರಂಗನಾಥ್ ವಾತ್ಸಲ್ಯದ ಕೆನೆಕಟ್ಟಿಅಪ್ಪನ ಕರಳು ಅರಳಿಕಿರುಬೆರಳಿಡಿದು ನಡೆದ ಸ್ಪರ್ಶದ ಸುಖಮೀಸೆ ಬಲಿತರೂ ಕಾಡುವ ನೆನಪು ಊರ ಜಾತ್ರೆಯಲಿಕನ್ನಡಕದೊಳಗಿನ ಕಣ್ಣು ಬರೆದ ಕವನಮೌನದ ಮೆದು ಭಾಷೆಯಲಿಹೃದಯ ತಟ್ಟಿ ಅವ್ವನ ನಿರರ್ಗಳ ಉಸಿರು ದುಡ್ಡಿಲ್ಲದ ಅಪ್ಪನ ಜೇಬಿನಲಿನೋವಿನ ಜೇಡರ ಬಲೆ ಕಟ್ಟಿದರೂಬಿಡಿಸುತ್ತಾನೆ ಎಳೆ ಎಳೆಯಾಗಿಕಾಲದ ನೆರಳ ಮೇಲೆ ಕುಳಿತು ಅಪ್ಪನ ಹೇಗಲ ಮೇಲೆಎರಡೂ ಕಾಲುಗಳು ಇಳಿಬಿಟ್ಟುಜಗದ ಬೆಳಕನು ಕಣ್ಣುಗಳಲ್ಲಿ ತುಂಬಿಕೊಂಡುನಡೆಯುವಾಗಿನ ದಾರಿಯ ಬದಿಯಲಿಗರಿಕೆ ಚಿಗುರುವ ಪರಿಗೆಸೂರ್ಯನಿಗೂ ಹೊಟ್ಟೆಕಿಚ್ಚು ಗುಡಿಸಲ ಕವೆಗೆ ನೇತಾಕಿದ್ದತಮಟೆಯ ಸದ್ದಿನಲಿಕತ್ತಲೆಯ ಬೆನ್ನು ಮುರಿವ ಗತ್ತುಬೀಡಿ […]

Read More
ಕಾವ್ಯಯಾನ

ಕಾವ್ಯಯಾನ

ನನ್ನಪ್ಪ ಎ ಎಸ್. ಮಕಾನದಾರ ಜೀವನದುದ್ದಕ್ಕೂ ತನ್ನ ಗುಡಸಲಿನಚಿಮಣಿಗೆ ಎಣ್ಣಿ ಹಾಕದೆ ಹಲವು ಮೆರವಣಿಗೆ ಗಳಲ್ಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲುಕೈಯಲ್ಲಿ ಪ್ರಜ್ವಲಿಸುವ ಹಿಲಾಲುಮೆರವಣಿಗೆ ಅಡ್ಡ ಪಲ್ಲಕ್ಕಿಶವ ಸಂಸ್ಕಾರಕ್ಕೂ ಹೆಗಲು ಕೊಟ್ಟ ನನ್ನಪ್ಪ ಕಣ್ಣಲ್ಲಿ ಸೂರ್ಯ ತುಂಬಿ ಕೊಂಡುಎದೆಯ ಮೇಲೆ ಬುದ್ಧನನ್ನುಮಲಗಿಸಿ ಜೋಗುಳ ಹಾಡುವವ ನನ್ನಪ್ಪಲೆಕ್ಕವಿರದ ನಕ್ಷತ್ರಗಳು ತನ್ನ ಜೋಪಡಿಯಲ್ಲಿ ಇಣುಕಿದರೂಬಡತನವೆಂಬ ಬೇತಾಳನ ಗೆಳೆತನ ಬಿಡದ ನನ್ನಪ್ಪ ಮೆರವಣಿಗೆಯಲಿ ಹಿಲಾಲು ಹಿಡಿದುಹಿಡಿಕಾಳು ತಂದಾನುಜೋಪಡಿಯಿಂದ ಪಣತಿ ಬೆಳಗಿಸಿಯಾನು ಅಂದುಕೊಂಡು ಶಬರಿವೃತ ಹಿಡಿದಿದ್ದಳು ನನ್ನವ್ವ ಮೆರವಣಿಗೆಯಲಿ ತೂರುವಚುರುಮರಿ […]

Read More
ಕಾವ್ಯಯಾನ

ಕಾವ್ಯಯಾನ

ಒಲವೂ ಯುದ್ಧದ ಹಾಗೆ ನಂದಿನಿ ವಿಶ್ವನಾಥ ಹೆದ್ದುರ್ಗ ಒಲವೂ ಯುದ್ಧದ ಹಾಗೆಸಿದ್ದ ಸಿದ್ಧಾಂತವಿಲ್ಲ ಮೀರದೆ ಮೀಸಲುಚಹರೆ ಪಹರೆ ಅರಿತುನಿಖರ‌ ನಿಕಷದ ನಿಮಿತ್ತಕೊಡಬೇಕು ನಿರ್ವಾತ ಮೊಳೆಯುವ ಬೆಳೆಯುವಅರಳುವ ಹೊರಳುವಉರುಳುವ ಮರಳುವಆಕಾಶದ ಅವಕಾಶ. ತೆಗೆದ ಕದವೇ ಹದ.ಹೋಗಗೊಡಬೇಕು..ನಂಬುಗೆಗೆ ಕಳೆದ ಛಾವಿಯಗೊಡವೆ ಮರೆಯಬೇಕು ಸರಳರೇಖೆ ಹೃದಯವಾಗಲುಕಾಯಬೇಕು,ಬೇಯಬೇಕುಗಾಯಗಳ ಮಾಯಿಸಬೇಕು.ಅರಳಿದರೆ ಬಿಳಿ..ಮಳೆಬಿಲ್ಲು ಸಿದ್ದ ಸಿದ್ದಾಂತವಿಲ್ಲಗೆದ್ದರದು ಗೆಲುವಲ್ಲ ಒಡೆದ ಹೃದಯ ಛಿದ್ರ ಬದುಕು.ಹೊಲೆದು ಮಡಿಸಿಟ್ಟ ಕನಸುಕಾಲ ನುಂಗಿ ಕಣ್ಮರೆಯಾದ ಬಣ್ಣಯುದ್ಧ ಮುಗಿದ ಊರು ************8 __

Read More
ಕಾವ್ಯಯಾನ

ಕಾವ್ಯಯಾನ

ಅಂತಃಸಾಕ್ಷಿ ವೀಣಾ ರಮೇಶ್ ನನ್ನ ಪ್ರತಿಹೆಜ್ಜೆಯಲ್ಲೂ ನೀಹೆಜ್ಜೆ ಹಾಕು ಎಂದು ನಾನುಕೇಳುವುದಿಲ್ಲ ನನ್ನ ಪ್ರತಿಮಾತಿಗೂಕಿವಿಯಾಗಿರು ಎಂದುನಾನು ಹೇಳುವುದಿಲ್ಲ ನನ್ನ ನುಡಿಗೆ ದನಿಯಾಗಿರುನನ್ನ ಉಸಿರಿಗೆಎದೆಯ ಬಡಿತದ ಸದ್ದಾಗಿರು ಎಂದು ಕೇಳುವುದಿಲ್ಲ ತಂಪಾಗಿ,ನನ್ನ ಬೆನ್ನ ಹಿಂದೆನೆರಳಾಗಿ, ಕಾವಲಾಗಿರುಎಂದು ನಾನು ಕೇಳುವುದಿಲ್ಲ ನನ್ನ ಆತ್ಮಸಾಂಗತ್ಯಕ್ಕೆನಿನ್ನ ಅಂತರಾತ್ಮನೀಡುವ ಸಂವೇದನೆಗೆಸುಪ್ತಮನಸ್ಸಾಗಿರೂ ಎಂದೂಬೇಡುವುದಿಲ್ಲ ಆದರೆ ನಾನು,ನೀನು,ನಾವಿಬ್ಬರೂಒಂದೇ ಅನ್ನುವ ಅಂತಃಸಾಕ್ಷಿನಿನ್ನ ಅಂತರಂಗ ಹೇಳಿದರೆಸಾಕು,ನಾನೇನೂ ಕೇಳುವುದಿಲ್ಲ ***********

Read More
ಕಾವ್ಯಯಾನ

ಕಾವ್ಯಯಾನ

ವೈದ್ಯರ ಚುಟುಕುಗಳು ಡಾ ಅರುಣಾ ಯಡಿಯಾಳ್ 1. ಅದೇನು ವೈದ್ಯರ ಫೀಸು ಈ ಪಾಟಿ ದುಬಾರಿ!ಹಣ ಮಾಡುತ್ತಾರೆ ರೋಗಿಯ ರಕ್ತ ಹೀರಿ ಹೀರಿ!”“ ಅಲ್ರೀ,ನಮ್ಮ ಜೀವನುದ್ದಕ್ಕೂ ಇರುವುದು ಬವಣೆಯೇ!ರಕ್ತ ಹೀರಿ ಬದುಕ ಸಾಗಿಸಲು ನಾವೇನು ತಿಗಣೆಯೇ??!?” 2. ಡಾಕ್ಟರನ ಕಾರು ಡಾಕ್ಟರಿನಂತೆಯೇ ಇದ್ದರೆ ಒಳ್ಳೇದು!ಆರಕ್ಕೆ ಏರಬಾರದು;ಮೂರಕ್ಕೆ ಇಳೀಬಾರದು!ಭಾರೀ ಶೋಕಿಯಾದರೆ ಕಾಯುತ್ತದೆ ಜನರ ಕಣ್ಣು..ತೀರಾ ಕಳಪೆಯಾದರೆ ತಿನ್ನಬೇಕಾದೀತು ತಿರಸ್ಕಾರದ ಹಣ್ಣು 3. ಐಷಾರಾಮಿ ಕಾರು ,ಜೀವನ ಬೇಕೇ??ಹಾಗಾದರೆ ವೈದ್ಯರೊಂದಾಗದಿರಿ ಜೋಕೆ!!ಈ ವೃತ್ತಿಯಲ್ಲೂ ಗಳಿಸಬಹುದು ಹೇರಳ ಹಣ…ಎದುರಿಸಬೇಕಾದೀತು ಸಮಾಜದ ಉರಿಗಣ್ಣು;ಗೊಣಗೊಣ!! […]

Read More
ಕಾವ್ಯಯಾನ

ಕಾವ್ಯಯಾನ

ಜೋಗಿಗಳು ನಟರಾಜು ಎಸ್. ಎಂ. ಪಿತೃಪಕ್ಷದಿ ತಾತನ ಎಡೆಗೆಂದುಬಾಳೆ ಎಲೆಯ ಮೇಲೆ ಇಟ್ಟಿದ್ದಮುದ್ದೆ ಗೊಜ್ಜು ಅನ್ನ ಪಾಯಸದಪಕ್ಕ ಬಿಳಿ ಪಂಚೆ ಬಣ್ಣದ ಚೌಕಹುಳಿ ಹುಳಿಯಾದ ಬಿಳಿಯ ಯೆಂಡ ಬಾಡುಗ್ಲಾಸಿನ ಮೇಲೆ ಹಚ್ಚಿಟ್ಟ ಬೀಡಿ ಸಿಗರೇಟುತಟ್ಟೆಯಲಿ ದ್ರಾಕ್ಷಿ ಬಾಳೆಯ ಜೊತೆಒಂದೆರಡು ಕಿತ್ತಳೆ ಸೇಬುಇವೆಲ್ಲದರ ಮಧ್ಯೆ ಅವಿತು ಕುಳಿತಿರುವಅರಿಸಿನ ಕುಂಕುಮ ವಿಭೂತಿ ಬಳಿದಕಂಚಿನ ದೇವರ ಜೊತೆ ಪುಟ್ಟ ತ್ರಿಶೂಲಗೋಡೆಯ ಹಲಗೆಯ ಮೇಲೆಜೋಡಿಸಿಟ್ಟ ಚಾಮುಂಡಿ ಶಿವ ಪಾರ್ವತಿಡೊಳ್ಳು ಹೊಟ್ಟೆ ಗಣೇಶನ ಚಿತ್ರಪಟಎಲ್ಲವೂ ಅಲಂಕೃತ ಕಟ್ಟಿದ ಕಾಕಡಕನಕಾಂಬರ ಚೆಂಡೂವುಗಳಿಂದ ನಾಟಿ ಹೆಂಚಿನ ಒಳಗೆ […]

Read More