ಹೀಗೊಂದು ಕವಿತೆ
ನಾಗರಾಜ್ ಹರಪನಹಳ್ಳಿ

-1-
ಎರಡು ಬಾಗಿಲು ಮುಚ್ಚಿದವು
ಇಷ್ಟೇ ತೆರೆದ ಕಿಟಕಿಗಳು
ಅಲ್ಲಿ ಶಬ್ದಗಳು
ಮೊಳೆಯಲಿಲ್ಲ
-2-
ಬಾಗಿಲಿಲ್ಲದ ಊರಲ್ಲಿ
ಬೀಗಗಳು ಕಳೆದು ಹೋಗಿವೆ
ಶಬ್ದಗಳ ಕಳಕೊಂಡವರು
ದಿಕ್ಕು ದಿಶೆಯಿಲ್ಲದೇ
ನಡೆಯುತ್ತಿದ್ದಾರೆ
ಎಂದೂ ಸಿಗದ ಕೊನೆಗೆ
-3-
ಕಾಲಿಲ್ಲದವರನ್ನು
ಕೈಯಿಲ್ಲದವರು ಕುಣಿಸಿದರು
ಅನಾಥ ಬೀದಿಗಳಲ್ಲಿ
ಮೆದುಳಿಲ್ಲದವರನ್ನು
ಕಣ್ಣಿಲ್ಲದವರು ಕೂಗಾಡಿಸಿದರು
ಹೃದಯ ಕಳೆದುಕೊಂಡ
ದೊರೆಯ ಮಹಲಿನ ಮುಂದೆ
-4-
ಮುಗಿಲ
ದುಃಖ
ಭೂಮಿಯ
ಬಾಯಾರಿಕೆ
ಮುಗಿಯುವಂತಹದ್ದಲ್ಲ
-5-
ಯಾಕೋ ಮನಸ್ಸು ಖಾಲಿ ಖಾಲಿಯಾಗಿದೆ
ಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ
ಹರಿವ ನದಿಗೂ ಕಳೆಯಿಲ್ಲ
ಸಮುದ್ರ ಸೇರಿಯೂ ಸಂಭ್ರಮಿಸದ ಆಕೆಯಂತೆ
ಮನದಲ್ಲಿ ಎದ್ದ ಭಾವಗಳ ಅಲೆ ಸದ್ದು ಅವಳ ತಟ್ಟಿದೆ
**
-6-
ಹಿಡಿಯಷ್ಟು ಬದುಕಿನಲ್ಲಿ ಕಡಲಿನ ಪ್ರೀತಿಯ ಅರಿಯಲಾಗಲಿಲ್ಲ
ದಿನವೂ ಸೂರ್ಯ ಬೆಳಗಿದರೂ ಮನುಷ್ಯ ಮನದ ಕತ್ತಲು ಅಳಿಸಲಿಲ್ಲ
ಚ
ಚನ್ನಾಗಿದೆ
ಅಧ್ಬುತ, ಮನೋಜ್ಞವಾಗಿ ಮನದಂಗಳದಲಿ ನಿಂತಿರುವಂತೆ ಮೂಡಿಬಂದಿದೆ..,…..ಮಾತಿಲ್ಲ..