ಗಜಲ್ ಜುಗಲ್ ಬಂದಿ
ತರಹೀ ಗಜಲ್ : ನಯನ. ಜಿ. ಎಸ್ ಅವರ ಊಲಾ ಮಿಸ್ರಾ”
ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ
ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ದೋಷಗಳನ್ನು ನಾವಿಲ್ಲಿ
ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ
ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ
ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ
ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ
ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ
ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ
ಹುಚ್ಚು ಮನಸ್ಸಿನ ಹೊಯ್ದಾಟದಲ್ಲಿ ‘ವಿಜಯ’ವನ್ನು ವರ್ಜಿಸುತ್ತಿದ್ದೇನೆ.
ವಿಜಯಪ್ರಕಾಶ್. ಕೆ
ಉಷಾಜ್ಯೋತಿ ಮಾನ್ವಿ ಮುಕ್ತಕಗಳು
ಕಾವ್ಯಸಂಗಾತಿ
ಮುಕ್ತಕಗಳು
ಉಷಾಜ್ಯೋತಿ ಮಾನ್ವಿ
ಪ್ರಭಾವತಿ ಎಸ್ ದೇಸಾಯಿಯವರ ಗಜಲ್
ಕಾವ್ಯ ಸಂಗಾತಿ
ಗಜಲ್
ಪ್ರಭಾವತಿ ಎಸ್ ದೇಸಾಯಿ
ಶಾಲಿನಿ ಕೆಮ್ಮಣ್ಣು ಕವಿತೆ-ಏಕಾಂಗಿ ಸಂಸಾರಿ
ಕಾವ್ಯ ಸಂಗಾತಿ
ಏಕಾಂಗಿ ಸಂಸಾರಿ
ಶಾಲಿನಿ ಕೆಮ್ಮಣ್ಣು
ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ
ಕಾವ್ಯ ಸಂಗಾತಿ ಗುರುವೆಂಬ ಬೆಳಕಿಗೆ ವಿಷ್ಣು ಆರ್. ನಾಯ್ಕ ಬಾ.. ದೇವ…ಗುರುದೇವಹೇ ದೇವ…ಪ್ರಭು ದೇವನೀ ದೇವ ಕನಿಕರಿಸು, ನೀ ಬೇಗ ಬಾವಿದ್ಯೆ ಸಿರಿ ವರವನ್ನು ಕೊಡು ಬೇಗ ಬಾ ಆದರ್ಶದುಸಿರಾಗಿ, ಮುನ್ನಡೆವ ಪಥವಾಗಿಗೈದ ಕಾರ್ಯದ ಕನಸ ನನಸಾಗಿ ಬಾ..ಮೈದಳೆದು ಗುರುವೇ ನೀ ವರವಾಗಿ ಬಾ.. ಮಕ್ಕಳೆನ್ನುವ ಬಳ್ಳಿ ಹೂ, ಮೊಗ್ಗು, ಹಣ್ಣುಗಳುಅಕ್ಕರ ರೂಪದಿ ತೊನೆವ ಶಕುತಿ ಕೊಡು ಬಾ..ನಕ್ಕ ಮೊಗ್ಗಿಗೆ ಜೀವ ನೀ ತುಂಬು ಬಾ… ವಿದ್ಯೆಯೆಂಬ ಶುಭ್ರ ವಾರಿಧಿಯ ಮಧ್ಯದೊಳುಮದದ ಮತ ಮೌಢ್ಯವನೆಲ್ಲ ನೀ ನೀಗು […]
ಶಾಂತಲಾ ಮಧು-ಉಸಿರು ಉಸಿರಲಿ
ಕಾವ್ಯ ಸಂಗಾತಿ
ಉಸಿರು ಉಸಿರಲಿ
ಶಾಂತಲಾ ಮಧು
ಗಜಲ್, ಎ. ಹೇಮಗಂಗಾ
ಕಾವ್ಯ ಸಂಗಾತಿ
ಗಜಲ್
ಎ. ಹೇಮಗಂಗಾ
ಅವರು ಮರೆಯಾಗುವ ಮುನ್ನ ದೇವರಾಜ್ ಹುಣಸಿಕಟ್ಟಿ ಕವಿತೆ
ಕಾವ್ಯ ಸಂಗಾತಿ
ಅವರು ಮರೆಯಾಗುವ ಮುನ್ನ
ದೇವರಾಜ್ ಹುಣಸಿಕಟ್ಟಿ
ಗುರುವೆಂಬ ಬದುಕು
ಶಿಕ್ಷಕ ದಿನಾಚರಣೆ ವಿಶೇಷ
ಗುರುವೆಂಬ ಬದುಕು
ಎಚ್ ನಾಗರತ್ನ
ಗುರು ಡಾ ದಾನಮ್ಮ ಝಳಕಿ ಕವಿತೆ
ಶಿಕ್ಷಕ ದಿನಾಚರಣೆ ವಿಶೇಷ ಗುರು ಡಾ ದಾನಮ್ಮ ಝಳಕಿ ಕಂದನ ಕಲಿಕೆಗೆತಾಯಿಯೇ ಗುರು ವಿದ್ಯಾರ್ಥಿಯ ಕಲಿಕೆಗೆಶಿಕ್ಷಕನೇ ಗುರು ಕಾರ್ಮಿಕನ ಕಲಿಕೆಗೆಕೌಶಲ್ಯವೇ ಗುರು ರೈತನ ಕಲಿಕೆಗೆನಿಸರ್ಗವೇ ಗುರು ಸೈನಿಕನ ಕಲಿಕೆಗೆತರಬೇತಿಯೇ ಗುರು ವಿಜ್ಞಾನಿಯ ಕಲಿಕೆಗೆತಂತ್ರಜ್ಞಾನವೇ ಗುರು ಆತ್ಮದ ಜ್ಞಾನಕ್ಕೆಅರಿವೇ ಗುರು ಅಂತರಂಗ ಬಹಿರಂಗಕ್ಕೆಶರಣರ ಅನುಭಾವವೇ ಗುರು ಗುರು ಜಂಗಮ ದಾಸೋಹಕ್ಕೆಬಸವಣ್ಣನೇ ಗುರು