ಗುರು ಡಾ ದಾನಮ್ಮ ಝಳಕಿ ಕವಿತೆ

ಶಿಕ್ಷಕ ದಿನಾಚರಣೆ ವಿಶೇಷ

ಗುರು

ಡಾ ದಾನಮ್ಮ ಝಳಕಿ

ಶಿಕ್ಷಕ ದಿನಾಚರಣೆ ವಿಶೇಷ

ಗುರು

ಡಾ ದಾನಮ್ಮ ಝಳಕಿ

ಕಂದನ‌ ಕಲಿಕೆಗೆ
ತಾಯಿಯೇ ಗುರು

ವಿದ್ಯಾರ್ಥಿಯ ಕಲಿಕೆಗೆ
ಶಿಕ್ಷಕನೇ ಗುರು

ಕಾರ್ಮಿಕನ‌ ಕಲಿಕೆಗೆ
ಕೌಶಲ್ಯವೇ ಗುರು

ರೈತನ‌ ಕಲಿಕೆಗೆ
ನಿಸರ್ಗವೇ ಗುರು

ಸೈನಿಕನ ಕಲಿಕೆಗೆ
ತರಬೇತಿಯೇ ಗುರು

ವಿಜ್ಞಾನಿಯ ಕಲಿಕೆಗೆ
ತಂತ್ರಜ್ಞಾನವೇ ಗುರು

ಆತ್ಮದ ಜ್ಞಾನಕ್ಕೆ
ಅರಿವೇ ಗುರು

ಅಂತರಂಗ ಬಹಿರಂಗಕ್ಕೆ
ಶರಣರ ಅನುಭಾವವೇ ಗುರು

ಗುರು ಜಂಗಮ ದಾಸೋಹಕ್ಕೆ
ಬಸವಣ್ಣನೇ ಗುರು


Leave a Reply

Back To Top