ಕಾವ್ಯ ಸಂಗಾತಿ
ಉಸಿರು ಉಸಿರಲಿ
ಶಾಂತಲಾ ಮಧು
ಉಸಿರು ಉಸಿರಲಿ
ಬೆರೆತು ಉಸಿರಾಗಿರುವ
ಕ್ಷಣ ನಾನರಿಯೆ
ಅರಿಯೆ ಆ ಉಸಿರ ದುಗುಡ
ದುಗುಡದಾಚೆಯ ಕರೆಯ
ಕರೆಯ ದನಿಯದು
ನೆಲ ಜಲ
ಗಿಡ ಮರ ಬಳ್ಳಿ
ಪ್ರಾಣಿ ಪಕ್ಷಿ
ನಗು ಅಳು
ಈ ಗುಂಟು ಈ ಗಿಲ್ಲ
ಈಗಿಲ್ಲ ಎನದಲ್ಲ
ಉಸಿರು ನಿಟ್ಟುಸಿರದುವೆ
ಆಳ ಕಿಳಿಯಿತು
ಆಳಕಿಳಿಯಿತು ಮೌನ
ಮೌನ ಮುಗುಳು
ನಗೆಯನು ನಕ್ಕು
ಸಾಗರದಾಚೆಯ
ತುದಿಯ ತುದಿಯಳೆಯ
ಸೂರ್ಯಕಿರಣದ
ಎಳೆಯ ಹೊಳಪು
ಮೌನದ ನಗೆಗೆ
ಮರುನಕ್ಕು
ಉಸಿರ ಅರಿವಿಗೆ
ಅಚ್ಚರಿಯದಿರು
ಎನುತ ನಿನ್ನ
ಪ್ರೀತಿಯ ಉಸಿರು
ತಟ್ಟಿ ಮುಟ್ಟು
ಮೈ ಬಟ್ಟೆ
ಬದಲಿಸುವ ಮುನ್ನ
ಉಸಿರು ಉಸಿರಲಿ
ಬೆರೆತು ಉಸಿರಾಗಿರುವನ್ನ
ಶಾಂತಲಾ ಮಧು