ಗುರುವೆಂಬ ಬದುಕು

ಶಿಕ್ಷಕ ದಿನಾಚರಣೆ ವಿಶೇಷ

ಗುರುವೆಂಬ ಬದುಕು

ಎಚ್ ನಾಗರತ್ನ

ಅಜ್ಞಾನವ ತೊಳೆದು
ಸುಜ್ಞಾನದ ಬೆಳಕ
ತೋರುತ
ಮದವನಳಿದಾತ

ಅಕ್ಕರೆಯಲಿ ಮುದ್ದಿಸಿ, ವಿದ್ಯವ ನೀಡುತ
ನಮ್ಮಯ ಬಾಳನು ಬೆಳಗಿದಾತ

ದಿನ- ದಿನದ
ಸುಸಂಸ್ಕ್ರೃತಿಯ
ಕಲಿಸುತ
ನಿತ್ಯವೂ
ಶಾಂತಿ ಮಂತ್ರವ ಹೇಳಿದಾತ

ನಗು ಮೊಗದಲಿ
ನಗೆಯ ಬೀರಿ
ನಮ್ಮಯ ಬದುಕಿಗೆ
ದಾರಿಯ ತೋರಿದಾತ

ಸಮರಸ ಬಿತ್ತಿ
ಪ್ರೀತಿಯ ಬೆಳೆಸಿ
ಭವ್ಯ ಭವಿಷ್ಯವನ್ನು ರೂಪಿಸಿದಾತ

ಭೋಧನೆ ಮೂಲಕ
ಸಾಧನೆ ಹಾದಿಗೆ
ಸಾಕ್ಷಿಯಾದ
ರೂಪದ ಶಿಕ್ಷಕನೆ
ನಮಗೆಂದಿಗೂ….
ದೇವರ ಸಮಾನವಾದಾತ

ನಡೆ ನುಡಿ ತೀಡಿ
ಸರಳತೆ ಸನ್ನಡತೆ
ಸಂಸ್ಕಾರ ಕಲಿಸುತ
ಹರಸಿದ
ತಸ್ಮಯ ಗುರುವೇ
ನಮ್ಮಯ ಬಾಳಿಗೆ ಭಾವಗೀತೆಯಾದಾತ


2 thoughts on “ಗುರುವೆಂಬ ಬದುಕು

Leave a Reply

Back To Top