ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರ
” ನನ್ನ ಬಾಲ್ಯ”


ಬಾಲ್ಯದ ಆಟ
ಸುಂದರ ಸುದಿನದ ನೋಟ
ಮರೆಯಲಾಗದ ಮೋಜಿನಾಟ
ಆ ಬಾಲ್ಯಕ್ಕೆ ಯಾರಿಹರು ಸರಿಸಾಟಿ!?,
ಮಣ್ಣಿನಲಿ ಆಟೋಟ
ನೀರಿನಲಿ ಮುಳುಗಿ ಈಜಾಟ
ಚಕ್ರ ಉರುಳಿಸಿ ಓಡುತ ಬಿದ್ದಾಟ
ಆ ಬಾಲ್ಯಕೆ ಯಾರಿಹರು ಸರಿಸಾಟಿ!?,
ಹಿರಿಯರ ಅನುಸರಿಸುತ
ಪ್ರಕೃತಿಯ ಮಡಿಲಲಿ ಬೆರೆತು ನಲಿದ
ಗೆಳೆತನದ ಸಹಪಾಠಿ ಜೊತೆ ಅಕ್ಷರ ಕಲಿತ
ಆ ಬಾಲ್ಯಕೆಂದೂ ಯಾರಿಹರು ಸರಿಸಾಟಿ!?.
————
ಹಮೀದ್ ಹಸನ್ ಮಾಡೂರ.



