ಕಾವ್ಯ ಸಂಗಾತಿ
ಶಾರದಜೈರಾಂ.ಬಿ
“ಪುರುಷನಿಗೆ…”


ಕಾಯಕದಿ ನಿರತನಾಗಿಯೂ
ಕುಟುಂಬದ ರಕ್ಷಣೆಗೆ ಬದ್ದ ಭರತನಂತೆ
ನೋವನ್ನು ನುಂಗಿ ನಗೆ ಬೀರುವ
ವಿಷಕಂಠನಂತೆ
ಕಷ್ಟಗಳಿಗೆ ಈಡಾಗದಿರಲಿ ಎಂದು
ಕೆಲವೊಮ್ಮೆ ರೇಖೆ ಎಳೆವ ಲಕ್ಷ್ಮಣನಂತೆ
ಎದೆಯಲ್ಲಿ ಅಳುಕಿದ್ದರು ತೋರದೆ
ಭರವಸೆಯ ಭೀಷ್ಮನಂತೆ
ಕೆಲಸವನ್ನು ಆಗುವವರೆಗೂ
ಬಿಡದ ಭಗೀರಥನಂತೆ
ಗೋಪಿಕೆಯರ ರಕ್ಷಿಸಿದ ಆಪತ್ಭಾಂದವ ಶ್ಯಾಮನಂತೆ
ಸೀತೆಗಾಗಿ ಪರಿತಪಿಸಿ ಕಾಡಿಗಟ್ಟಿ
ಹೃದಯದಿ ಧ್ಯಾನಿಸುತ್ತಾ ಕಳೆದ
ಶ್ರೀರಾಮನಂತೆ
ಪುರಾಣದ ಪುರುಷರ ಪ್ರತಿಬಿಂಬದ ಪುರಾವೆಗಳಿವೆ
ಪ್ರತಿರೂಪವಾಗಿರುವ
ಪುರುಷರಿಗೆಲ್ಲ ನಿಮ್ಮ ದಿನಕೆ
ನಲುಮೆಯ ನನ್ನಿಗಳು…!!
ಶಾರದಜೈರಾಂ.ಬಿ



