ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಪ್ರೀತಿ ಅಳತೆಗೆ ಸಿಗುವುದೇ
ಪ್ರೀತಿ ಸಾಗರದಷ್ಟು
ಪ್ರೀತಿ ಬೆಟ್ಟದಷ್ಟು
ಪ್ರೀತಿ ಮುಗಿಲೆತ್ತರ
ಎನ್ನುವವರಿಗೆ ಹಿಡಿ
ಪ್ರೀತಿಯ ಬೆಲೆ ಗೊತ್ತೇ.

ನಿಜ
ಪ್ರೀತಿ ಎಂದಿಗೂ ಬತ್ತದ
ಜೀವಜಲ
ಎಂದಿಗೂ ಒಣಗದ
ಅಂತರ್ಜಲ
ಕಾಸಿಲ್ಲದೆ ಗಳಿಸಬಹುದಾದ
ನೀಡಿದಷ್ಟು ಅಕ್ಷಯವಾಗುವ
ಸೋಜಿಗದ ಈ ಪ್ರೀತಿ.
ಜಲ ಒಮ್ಮೆ ಬತ್ತಿದರೆ
ಹನಿ ಹನಿಗೂ
ಪರಿತಪಿಸಿ
ಬಳಲಿ ಬಾಯಾರಿ
ಯುದ್ಧದಲಿ ಮಡಿದವರೆಷ್ಟೋ ಜನ

ಮುಚ್ಚಿದ ಕೋಟೆಗಳ
ಬಾಗಿಲು ಒಡೆದು
ಬಯಲಲಿ ಒಮ್ಮೆ
ಚಾಚಿ ನೋಡಿ ಪ್ರೀತಿ,
ಸ್ನೇಹ, ಮಮತೆಯ
ನಿರ್ಮಲ ಹಸ್ತಗಳ

ಅಬಾಲವೃದ್ಧರೆಲ್ಲ
ಅಕ್ಕ, ತಂಗಿ, ಅಣ್ಣ
ತಮ್ಮ, ಎಲ್ಲ ಬಂಧು, ಮಿತ್ರರು
ಮೊಗೆಮೊಗೆದು ಕೊಟ್ಟಾರು
ಸಾಗರದಷ್ಟು ಪ್ರೀತಿ
ಮಳೆ ಸುರಿಸಿ,
ಹೊಳೆಯನೇ ಹರಿಸಿಯಾರು!
ಆದರೆ ನೆನಪಿರಲಿ
ಮೊದಲು ನೀವು
“ಹಿಡಿ ಪ್ರೀತಿ” ತೋರಿದರೆ ಮಾತ್ರ.


About The Author

1 thought on “ಶಶಿಕಲಾ ಚಂದ್ರಶೇಖರ ಅವರ ಕವಿತೆ “ಹಿಡಿಯಷ್ಟು ಪ್ರೀತಿ””

Leave a Reply

You cannot copy content of this page

Scroll to Top