ಕಾವ್ಯ ಸಂಗಾತಿ
ಬಾಗೇಪಲ್ಲ
ಗಜಲ್*(ತರಹಿ ಪ್ರಕಾರ)
(ಮಾನ್ಯ ಜಿ.ಪಿ. ರಾಜರತ್ನo ಅವರ ಕವನದ ಎರಡು ಸಾಲು ಹಿಡಿದು)


ಹೆಂಡ ಹೆಂಡ್ತಿ ಕನ್ನಡ ಪದಗೊಳ್ ಅಂದ್ರೇ ರತ್ನಂಗ ಪ್ರಾಣ
ಬುಂಡೇನೆತ್ತಿ ಕುಡುದುಬುಟ್ಟಾಂದ್ರೇ ತಗೋ ಪದಗಳ್ ಬಾಣ
ಮಾನ್ಯ ಹಿರಿಕವಿ ರೃಜರತ್ನಂ ಅವರ ಕವನದ ಸಾಲುಗಳಿವು
ಆಡಗಿರುವ ಕನ್ನಡ ಅಭಿಮಾನವನರಿತು ಆಗು ನೀ ಜಾಣ
ದ್ರಾವಿಡ ಭಾಷೆಗಳೆಲ್ಲಾ ಪ್ರಚೀನ ವಾದುದು ಕನ್ನಡ ಕೇಳ್
ಕರ್ನಾಟಕವದುವೇ ಆ ತಾಯಿ ನೆಲಸಿಹ ಸುಂದರ ತಾಣ
ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯವದು ಬಹು ಮಧುರ ತಮ
ಕಾವ್ಯ ಓದಿ ಬರೆದವನು ಜಗದಲಿ ಉತ್ತಮೋತ್ತಮನು ತಾ ಕಾಣ
ಕಾವ್ಯವರಿದವನ ಬಾಳದು ಬಾಳಲ್ಲ ಆದು ಅಪೂರ್ಣ
ಕವಿತೆಯನರಿಯದ ಜೀವನ ಎತ್ತುಗಳು ಕಟ್ಟದ ಗಾಣ
ಕವಿತಾ ಮಾತೆ ಒಲಿದೊಡೆ ಜೀವನದ ಹಾದಿ ಸುಗಮ
ಆ ದೇವಿಯ ಒಲುಮೆ ಪಡೆಯಲು ತೊಡು ಇಂದೇ ಪಣ
ಕೃಷ್ಣಾ! ನೀ ಬೋಧಿಸಿದ ಗೀತೆಯದು ಬಲು ಕಾವ್ಯ ಮಯ
ಆದರೂ ಹೊಡೆದಾಡುವರು ದ್ವೈತ -ಅದ್ವೈತ ವೆಂಬ ಬಣ.
ಬಾಗೇಪಲ್ಲಿ



