ಕಾವ್ಯ ಸಂಗಾತಿ
ಜಯಶ್ರೀ. ಭ.ಭಂಡಾರಿ ಬಾದಾಮಿ
“ನೀನೇಕೆ ಹೀಗಾದೆ”


ನೀನೇಕೆ ಹೀಗಾದೆ ಹೇ ಹೃದಯ ಮಿಡಿತವೇ
ನಮ್ಮಿಬ್ಬರ ಬಾಳದಾರಿ ಕವಲಾಯಿತಲ್ಲವೇ
ಹೀಗೇ ಬದುಕಬೇಕೆಂಬ ಛಲ ಮರತೆಯಲ್ಲ.
ನಾನೀಗ ಒಂಟಿಯಾಗಿ ಸಾಗುವದು ತರವೇ.
ನೀನಿಲ್ಲದೆ ನಾನು ಬದುಕಲಾರೆ ಗೆಳೆಯನೇ.
ನಿನಗೆ ಅರ್ಥ ಮಾಡಿಸಲು ನೀನೆನು ಎಳೆಯನೇ.
ಜೋಡಿ ಜೀವ ಅಗಲಿದರೇನು ಚಂದ ತಿಳಿದುಕೋ.
ಮನದ ಭಾವನೆ ಬತ್ತದಿರಲಿ ನೀ ಗೆಳೆಯ ಹಳೆಯನೇ.
ಮನದ ಮಾತು ಬಲ್ಲವನೇ ನೀನೆ ದೂರಾದೆಯಲ್ಲ
ದೂರದಿ ನೀ ಸಾಗಿದರೂ ಮನಸ್ಸು ಮರೆಯದಲ್ಲ.
ಮರೆತು ಮೋಸ ಮಾಡದಿರು ಕೆಟ್ಟ ಗಳಿಗೆಯಲಿ ಗೆಳೆಯಾ
ಮತ್ತೆ ಮತ್ತೆ ನೆನಪಿಸಿಕೋ ಕಳೆದ ಸಂಭ್ರಮಗಳನ್ನೆಲ್ಲ ನಲ್ಲ
ಹೂಗಳ ರಾಶಿ ಹಾಸಿ ಕೈ ಹಿಡಿದು ನಡೆಸಿದೆ ಅಂದು
ನೋವುಗಳ ನೀಗಿಸಿ ನಗಿಸಿ ಹತ್ತಿರ ಹತ್ತಿರವಾದೆ ಬಂಧು
ಇಂದೇನಾಯ್ತೋ ಅರಿಯದೆ ಅರಸುತಿಹೆ ನಿನ್ನನೇ ಸಖನೇ.
ಒಲಿದ ಜೀವಗಳು ದೂರಾಗದಿರಲೆಂದು ಪ್ರಾರ್ಥಿಸುತಿಹೆ ಇಂದು.
ಜಯಶ್ರೀ. ಭ.ಭಂಡಾರಿ ಬಾದಾಮಿ.



