ಮಕ್ಕಳ ಸಂಗಾತಿ
ಶಾರದಜೈರಾಂ.ಬಿ
ಪೂಜಿಸಿದರೆ ದೇವರು
ಲಾಲಿಸಿದರೆ ಮಕ್ಕಳು


ಇಂದು ಮಕ್ಕಳ ದಿನಾಚರಣೆ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನುಮದಿನದ ಪ್ರಯುಕ್ತ ಇಂದು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ.ಮಕ್ಕಳು ಪ್ರೀತಿಯಿಂದ ನೆಹರೂ ಅವರನ್ನು *ಚಾಚಾ* ಎನ್ನುತ್ತಿದ್ದರು, ಅವರಿಗೂ ಮಕ್ಕಳೆಂದರೆ ಬಲು ಪ್ರೀತಿ ಅವರು ಮಕ್ಕಳಿಗೆ ಹೇಳುತ್ತಿದ್ದೀರಿ ದ್ದು *ನಾಳೆ ನಿಮ್ಮದು* ಎಂದು ಏಕೆಂದರೆ ಭವ್ಯ ಭವಿಷ್ಯತ್ತಿನ ಪ್ರಜೆಗಳು ನೀವು ಎನ್ನುತ್ತಿದ್ದರು.
*Letters from a Father to His Daughter* ಎಂಬ ಪುಸ್ತಕದ ಕನ್ನಡ ಅನುವಾದ *ಮಗಳಿಗೆ ಅಪ್ಪ ಬರೆದ ಪತ್ರಗಳು* ಎಂಬ ಪುಸ್ತಕ ಕಪಟರಾಳ ಕೃಷ್ಣರಾಯರು ಅನುವಾದಿಸಿದ್ದಾರೆ,ಇದು ಮಗಳು ಇಂದಿರೆಗೆ ಬರೆದ ಪತ್ರಗಳ ಸಾರಾಂಶವದು.
ಮಕ್ಕಳ ದಿನಾಚರಣೆ ನೆಹರುರವರ ಬಗ್ಗೆ ಪ್ರಸ್ತಾಪಿಸುತ್ತಾ ಹೇಳುವೆ ಏಕೆಂದರೆ ನೆಹರು ಅವರ ಬಗ್ಗೆ ದ್ವೇಷ ಭಾವನೆ ಬಿತ್ತುವ ಕೆಲಸಗಳಾಗುತ್ತಿವೆ, ವ್ಯಕ್ತಿ, ವ್ಯಕ್ತಿತ್ವ ಅವರಿಂದ ದೇಶಕ್ಕೆ ಸಂದ ಕೊಡುಗೆಗಳ ಸ್ಮರಣೆ ನಮ್ಮ ಕರ್ತವ್ಯ ಹಾಗೇಯೇ ಕೆಡುಕುಗಳ ನಿಂದಿಸುವಂತೆ ಒಳಿತನ್ನು ಅಭಿನಂದಿಸುವ ಸಹಿಷ್ಣುತೆ ಹೃದಯ ನಮ್ಮದಾಗಬೇಕು, ನಾವು ಪೂರ್ವಾಗ್ರಹ ಪೀಡಿತರಾಗದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು.
ನಾವು ಎಲ್ಲರನ್ನು ಪ್ರೀತಿಸೋಣ, ಗೌರವಿಸೋಣ ಸಿಗುವ ಅಲ್ಪ ಬದುಕಿಗೆ ದ್ವೇಷಿಸಲು ಸಮಯವಾದರೂ ಎಲ್ಲಿ ಇದನ್ನು ಎಳೆಯ ಮನಸ್ಸುಗಳಿಗೆ ಅರಿವಾಗಿಸಬೇಕು ಒಳಿತಿನ ಬಗ್ಗೆ ಹೇಳುವುದರೊಟ್ಟಿಗೆ ಕೆಡುಕಿನ ಬಗ್ಗೆ ಎಚ್ಚರಿಸಬೇಕು.
ಇಂದಿರಾಗಾಂಧಿ ಹತ್ತು ವರ್ಷದ ಹುಡುಗಿಯಾಗಿದ್ದಾಗ ತನ್ನ ಬೇಸಿಗೆ ರಜೆಯನ್ನು ಮಸೂರಿಯಲ್ಲಿ ಕಳೆಯುತ್ತಿದ್ದ ವೇಳೆ,ಆಕೆಯ ತಂದೆ ನೆಹರೂ ಅಲಹಾಬಾದಿನಲ್ಲಿ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭ ನೆಹರೂ ಇಂದಿರೆಗೆ ಭೂಮಿಯ ಹುಟ್ಟು, ನಾಗರೀಕತೆ,ಸಮಾಜಗಳ ಬೆಳವಣಿಗೆ ಇಡೀ ಜಗತ್ತನ್ನು ಪೂರ್ಣ ದೃಷ್ಟಿಯಿಂದ ನೋಡಲು ಇಲ್ಲಿನ ಜನರನ್ನು ಸಹೋದರರಂತೆ ಕಾಣಲು ನಿನಗೆ ಸಹಾಯವಾಗುತ್ತದೆ ಎಂಬ ನಂಬಿಕೆಯಲ್ಲಿ ಪತ್ರಗಳ ಬರೆದಿದ್ದೇನೆ ಎಂದು ಬರೆಯುತ್ತಾರೆ.
ಏಕೆಂದರೆ ಮಕ್ಕಳಿಗೆ ನಮ್ಮ ಹುಟ್ಟು ತಿಳಿಯಬೇಕು ಅಂಬೇಡ್ಕರ್ ನುಡಿಯಂತೆ *ಇತಿಹಾಸ ತಿಳಿದವರು ಇತಿಹಾಸ ಸೃಷ್ಟಿಸುತ್ತಾರೆ* ಭೂಮಿಯ ರಚನೆ, ವಿಕೋಪಗಳು, ನಾಗರೀಕತೆ,ಆಧುನಿಕರಣ ಎಲ್ಲಾ ತಿಳಿಸಬೇಕು ಇಂದಿನ ಮಕ್ಕಳೇ ಮುಂದಿನ ಗಣ್ಯರು ಅವರ ಮನಸ್ಸು,ದೇಹ ಎರಡನ್ನು ಸದೃಢಗೊಳಿಸಬೇಕು ಫಲಭರಿತ ಮರದ ಸೊಬಗಂತೆ ಮಾನವೀಯತೆ ಮತ್ತು ಬುದ್ದಿವಂತಿಕೆಯಿಂದ ಕಂಗೊಳಿಸಬೇಕು ಮಕ್ಕಳು.ಆಗಂತ ಮಕ್ಕಳನ್ನು ಕೂಡಿ ಹಾಕಿ ಕಲಿಸುವುದಲ್ಲ ರವೀಂದ್ರ ನಾಥ್ ಟ್ಯಾಗೋರ್ ಅವರು ಶಾಂತಿನಿಕೇತನ ಪ್ರಕೃತಿಯ ಮಡಿಲಲ್ಲಿ ಭೋದಿಸುವ ಶಾಲೆ ಆರಂಭಿಸಿದರು ಏಕೆಂದರೆ ಮಕ್ಕಳು ಹರುಷದಿಂದ ಕಲಿಯುವಂತಾಗಬೇಕು ಸೊರಗಬಾರದು ಹೊರೆಯಾಗದೇ ಕಲಿಸುವ ಭೋದನಾ ಕ್ರಮಗಳ ನಾವು ಅಳವಡಿಸಿಕೊಳ್ಳಬೇಕು.ಮಕ್ಕಳಿಗೆ ಕಥೆಗಳೆಂದರೆ ಇಷ್ಟ ಕಥೆಯಿಂದ ನೀತಿ ಬೋಧಿಸಬೇಕು ಹೇಳುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುವವರು ಹಾಗಾಗಿ ನಮ್ಮ ವರ್ತನೆಯೂ ಹೇಳುವಂತಿರಬೇಕು.
ಶಿಕ್ಷಣ ಎಂಬುದು ಶಿಕ್ಷೆ ಆಗದಿರಲಿ,*ಪೂಜಿಸಿದರೆ ದೇವರು,ಲಾಲಿಸಿದರೆ ಮಕ್ಕಳಂತೆ* ಎಂಬ ಮಾತಿದೆ ಮಕ್ಕಳ ಮನಸ್ಸು ಹಸಿ ಜೇಡಿಮಣ್ಣಿನಂತೆ ಬೇಕಾದ ಆಕಾರಕ್ಕೆ ರೂಪಿಸಬಹುದು ಹಾಗಾಗಿ ಗುರುತರ ಹೊಣೆ ನಮ್ಮದಾಗಿರುತ್ತದೆ.
ಡಾ.ಎಪಿಜೆ.ಅಬ್ದುಲ್ ಕಲಾಂ ಹೇಳುವರು ಒಂದು ಮಗುವಿನ ಭವಿಷ್ಯದ ಮೂರು ಆಧಾರಸ್ತಂಭ ಗಳೆಂದರೆ *ಪೋಷಕರು, ಶಿಕ್ಷಕರು,ಸಮಾಜ* ಎಂದು ಇದು ಸತ್ಯವಾದ ಮಾತಲ್ಲವೇ ಕಲಿಸೋಣ Pressure ಅಲ್ಲ pleasure ಆಗಿ ಕಲಿತು ಬೆಳೆಯಲಿ ಎಳೆಯ ಮನಸುಗಳು.
ಮಕ್ಕಳಿಗೆ ನಾವು ಎಂತಹ ವಿದ್ಯೆ ನೀಡಬೇಕು ಅವರ ಬದುಕನ್ನು ಆತ್ಮವಿಶ್ವಾಸದಿಂದ ಕಟ್ಟಿಕೊಳ್ಳುವಂತ ಎಂಥದ್ದೆ ಸಮಯದಲ್ಲೂ ಕುಗ್ಗದೆ ಆತ್ಮಸ್ಥೈರ್ಯದಿಂದ ಎದುರಿಸಿ ಗೆಲ್ಲುವ ಮನೋಬಲ ವೃದ್ಧಿಸುವಂತಿರಬೇಕು.
ಕೊನೆಯದಾಗಿ ಸಿನಿಮಾದ ಗೀತೆಯ ಸಾಲುಗಳು
ಗುಡಿಯಲ್ಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಮಕ್ಕಳಿಗೂ ದೇವರಿಗೂ ಭೇದವಿಲ್ಲ
ಇಬ್ಬರ ಮನದಲ್ಲೂ ಕಪಟವಿಲ್ಲ
ಮಕ್ಕಳ ಭಾಗ್ಯ ಸಿನಿಮಾದ ಈ ಗೀತೆ ರಚಿಸಿದ ಗೀತಪ್ರಿಯರಿಗೆ ಅಭಿನಂದಿಸುತ ಎಂದೆಂದಿಗೂ ಸಲ್ಲುವ ಗೀತೆ ಬರೆದ ಆ ಹೃದಯವಂತಿಕೆಗೆ ನಮನಗಳು.
ಶಾರದಜೈರಾಂ.ಬಿ



