ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು

ಗ್ರಂಥಾಲಯ ಸಂಗಾತಿ ಗೊರೂರು ಅನಂತರಾಜು “ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗ್ರಂಥಾಲಯ ಪರಿಕಲ್ಪನೆ ರಾಜಕೇಂದ್ರಿತವಾಗಿತ್ತು ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್: ಡಾ. ಕುಶಾಲ್ ಬರಗೂರು ಗ್ರಂಥಾಲಯದ ಚಾರಿತ್ರಿಕ ಪರಿಕಲ್ಪನೆ ನಗರ ಕೇಂದ್ರಿತವಾದದ್ದು, ರಾಜ ಪ್ರಣೀತವಾದದ್ದಾಗಿತ್ತು. ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಕನ್ನಡ ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ತಿಳಿಸಿದರು. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ, ಹಾಸನ ಜಿಲ್ಲೆ  ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಡಾ.ಬಿ.ಡಿ.ಕುಮಾರ್, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬಾಗೇಶಪುರ ಗುಡ್ಡದಮನೆ ಇಲ್ಲಿ ಏರ್ಪಡಿಸಿ ಪ್ರಾಸ್ತವಿಕವಾಗಿ ಅವರು ಮಾತನಾಡುತ್ತಿದ್ದರು.  ನಗರದಲ್ಲಿ ಇದ್ದದ್ದನ್ನು ತಮ್ಮ ಮನೆಯಲ್ಲೆ ಗ್ರಂಥಾಲಯ ಮಾಡಿ, ಮನೆಯನ್ನೆ ಜ್ಞಾನಕೇಂದ್ರ ಮಾಡಿ, ರಾಜಗೃಹ ಎಂದು ಹೆಸರಿಟ್ಟ ಪ್ರಥಮ ಜ್ಞಾನಿ. ಆ ದಾರಿಯ ಹಾದಿ ಹಿಡಿದವರು ಡಾ. ಬಿ.ಡಿ.ಕುಮಾರ್  ತಮ್ಮ ಮನೆಯನ್ನು ಹಳ್ಳಿಗಾಡಿನಲ್ಲಿ ಮಾಡಿ ಅದನ್ನು ಸಾಹಿತ್ಯ ಚರ್ಚಾ ಕ್ಷೇತ್ರವನ್ನಾಗಿ ಮಾಡಿರುವರು. ಕ್ಷೇತ್ರಕಾರ್ಯ ಸಂಶೋಧಕರಾಗಿ ನಾನಾ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಸಂಗ್ರಹಿಸಿಟ್ಟಿದ್ದಾರೆ.  ಇದು ಕನ್ನಡ ಸಾಹಿತ್ಯ ಸಂಶೋಧಕರಿಗೆ ಆಧಾರ ಮಾಹಿತಿ ಕೇಂದ್ರವಾಗಿದೆ. ಅಂದು ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಪಾದಿಸಿದಂತೆ, ಹಲಸಂಗಿ ಗೆಳೆಯರು, ಜೀ.ಶಂ.ಪ, ಕ್ಯಾತನಹಳ್ಳಿ ರಾಮಣ್ಣ, ಪಿ.ಕೆ.ರಾಜಶೇಖರ್ ಮುಂತಾದವರು  ಜಾನಪದ ಕ್ಷೇತ್ರ ಕಾರ್ಯ ಮಾಡಿದಂತೆ   ಕುಮಾರ್ ತಮ್ಮ ಮನೆಯನ್ನು ಮಾಹಿತಿ ಕಣಜ ಮಾಡಿದ್ದಾರೆ. ಇದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮಾದರಿ  ಪ್ರೇರಣಿಯೂ ಹೌದು.  ಇಲ್ಲಿ 18,000 ಪುಸ್ತಕ, ಪತ್ರಿಕೆ, ಸಂಚಿಕೆ, ಹಸ್ತಪ್ರತಿ ಇನ್ನಿತರೆ ಸಾಹಿತ್ಯ ಗ್ರಂಥಗಳಿವೆ ಎನ್ನುತ್ತಾರೆ.  ಇಂತಹ ಶೋಧನಾ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ಮಾನಸ ಮತ್ತು ಅವರ ಜೊತೆಗೂಡಿ  ಪ್ರಾಧಿಕಾರ ಸದಸ್ಯರು   ಮಾಡುತ್ತಿರುವರು.  ಈ ಕಾರ್ಯಕ್ರಮ ಈಗ  ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ, ಪಾಶ್ಚಿಮಾತ್ಯ ರಾಷ್ಟ್ರಗಳ ಗಮನವನ್ನು  ಸೆಳೆದಿದೆ ಎಂದರು.ಡಾ.ಬಿ.ಡಿ.ಕುಮಾರ್ ಅವರು ಸಂಗ್ರಹಿಸಿ ಕಾಪಾಡಿಟ್ಟಿರುವ ತಾಳೆಗರಿ ಗ್ರಂಥ ರಾಮಾಯಣ ಕಟ್ಟುಗಳ ಕಟ್ಟು ಬಿಚ್ಚಿ  ಉದ್ಘಾಟನಾ ಭಾಷಣ  ಮಾಡಿದ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ತಾವು ಕನ್ನಡ ಪುಸ್ತಕ ಪ್ರಾಧಿಕಾರದ 10ನೇ ಅಧ್ಯಕ್ಷರು. ಮೊದಲನೇ ಅಧ್ಯಕ್ಷರು   ಎಲ್.ಎನ್. ಶೇಷಗಿರಿರಾವ್ ಅವರು.  ಅಂದಿನಿಂದ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಪುಸ್ತಕ ಪ್ರಕಾಶಕರು, ಮುದ್ರಕರನ್ನುಪ್ರೋತ್ಸಾಹಿಸಲು ಪುಸ್ತಕ ಸೊಗಸು ಪ್ರಶಸ್ತಿ, ನಗದು ಬಹುಮಾನ ಯೋಜನೆ ಇದೆ.  ಪುಸ್ತಕ ಓದುಗರನ್ನು ಗುರುತಿಸಿ ಪ್ರೋತ್ಸಾಹಿಸಲು ವಲಯವಾರು    ನಾಲ್ಕು ಪ್ರಶಸ್ತಿಗಳನ್ನು 25000 ನಗದು ಬಹುಮಾನ ನೀಡಲಾಗುವುದು ಎಂದರು.  ಡಾ. ಬಿ ಡಿ. ಕುಮಾರ್ ಅವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಪುಸ್ತಕದ ಸಂಪಾದಕರು ಹಾಗೂ ಕನ್ನಡ ಪ್ರಾಧ್ಯಾಪಕರು ಡಾ. ಹರೀಶ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಸೀಕೆರೆ ಕೃತಿ ಪರಿಚಯಿಸಿ ಮಾತನಾಡಿ ಕುಮಾರ್  ಅವರು ಅರಸೀಕೆರೆಯಲ್ಲಿ ಬಹು ಧೀರ್ಘಕಾಲ  ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ, ಕಲಾವಿದರಾಗಿ ದೆಹಲಿಯಲ್ಲಿ ಜನಪದ ಕಾರ್ಯಕ್ರಮ ನೀಡಿ ಬಂದಿದ್ದಾರೆ. ಪ್ರಗತಿಪರ  ಕೃಷಿಕರಾಗಿ ಹಳ್ಳಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ,  ಇವರ ಜೀವನಶೈಲಿ ಇಂದಿನ ಸಮಾಜಕ್ಕೆ ಮಾದರಿ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಅನಂತರಾಜು     ಬಾರೆ ನೆಲದಲ್ಲಿ ಗುಡ್ಡದ ಮನೆ  ಮಾಡಿ, ಉತ್ತು ಭಿತ್ತಿ ಹಸನಾದ, ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿರುವ ಪ್ರಗತಿಶೀಲ ಕುಮಾರ್ ಅವರ ತೋಟದ ಮನೆ, ಪ್ರಾಚೀನ ತಾಳೆಗರಿ, ಹಳೆಯ ಬೆಲೆ ಬಾಳುವ ಮೌಲ್ಯಯುತ ಪುಸ್ತಕಗಳ ಸಂಗ್ರಹ ಸಂರಕ್ಷಣೆ ನೋಡುತ್ತಿದ್ದರೆ ಬಂಗಾರದ ಮನುಷ್ಯ ಚಿತ್ರ ನನಗೆ ನೆನಪಾಗುತ್ತದೆ. ಈ ಗ್ರಂಥಾಲಯವನ್ನು ಸಂರಕ್ಷಿಸುವುದು ಅಗತ್ಯವಾಗಿದೆ.  ಇದು ಕನ್ನಡ ಸಂಶೋಧಕ ವಿದ್ಯಾರ್ಥಿಗಳಿಗೆ,  ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಬೇಕಿದೆ. ಈ ದಿಶೆಯಲ್ಲಿ, ಸಂಘ ಸಂಸ್ಥೆಗಳು ಅವರಿಗೆ ಸಹಕರಿಸಿ ನೆರವಾಗಬೇಕಿದೆ ಎಂದರು.  ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಡಾ. ಬರಾಳು ಶಿವರಾಮ ಚನ್ನರಾಯಪಟ್ಟಣ,  ಸುಂದರೇಶ್ ಡಿ ಉಡುವಾರೆ, ರೈತ ಹೋರಾಟಗಾರರು ಮನೋಹರ್ ಪಾಟೀಲ್, ತಿಪಟೂರು, ಕವಿ ಎನ್.ಎಲ್. ಚನ್ನೇಗೌಡ, ಕೊಬ್ಬರಿ ಕೆತ್ತನೆ  ಕಲಾವಿದರು ಅರಸೀಕೆರೆ ಹರೀಶ್ ಕುಮಾರ್, ಹರ್ಷ ಇದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ  ಕುಮಾರ್  ದಂಪತಿಗಳನ್ನು  ಶಾಲು ಓದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಡಾ.ಬಿ.ಡಿ..ಕುಮಾರ್ ಜನಪದ ಗೀತೆ ಹಾಡಿ ಪ್ರಾರ್ಥಿಸಿದರು. ಗೊರೂರು ಅನಂತರಾಜು

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು Read Post »

ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಕಣ್ಣೆದುರಿನ ಸತ್ಯ” ಕೇಳಿ…!ಇದು ಕಥೆಯಲ್ಲ…ಕಲ್ಪನೆಯೂ ಅಲ್ಲ…ನಮ್ಮ ಕಣ್ಣೆದುರೇ ಪ್ರತಿದಿನ ನಡೆಯುವಕಟು ಸತ್ಯ! ರಸ್ತೆಯ ಬದಿಯಲ್ಲಿಹಸಿವಿನಿಂದ ಅಳುವ ಮಗುವನ್ನುನೋಡಿದ ಕಣ್ಣುಗಳೇ…ಮೊಬೈಲ್ ಪರದೆಯ ಮೇಲೆನಗುವಿನ ಚಿಹ್ನೆಗಳನ್ನು ಹುಡುಕುತ್ತಿವೆ! ಒಂದು ಕಡೆಅನ್ನ ಕಸದ ಬುಟ್ಟಿಗೆ ಬೀಳುತ್ತಿದೆ…ಮತ್ತೊಂದು ಕಡೆಒಂದು ತುತ್ತಿಗಾಗಿಪ್ರಾಣವೇ ಒಣಗುತ್ತಿದೆ! ಹೆಣ್ಣಿನ ಕಣ್ಣೀರಿಗೆಬೆಲೆ ಕಟ್ಟುವ ಸಮಾಜ…ಅವಳ ಕನಸುಗಳಿಗೆ ಮಾತ್ರಬೆಲೆಯೇ ಇಲ್ಲ!ನ್ಯಾಯದ ಮಾತು ದೊಡ್ಡದು…ನ್ಯಾಯದ ನಡೆ ಮಾತ್ರಇನ್ನೂ ಕುಂಟುತ್ತಲೇ ಇದೆ! ಮರವನ್ನು ಕಡಿಯುವ ಕೊಡಲಿಯೇಬಿಸಿಲಿಗೆ ನೆರಳು ಹುಡುಕುತ್ತಿದೆ.ಪ್ರಕೃತಿಯನ್ನು ಗಾಯಗೊಳಿಸಿದ ಮನುಷ್ಯ,ಪ್ರಳಯ ಬಂದಾಗಆಕಾಶವನ್ನೇ ಪ್ರಶ್ನಿಸುತ್ತಿದ್ದಾನೆ! ಧರ್ಮದ ಹೆಸರಿನಲ್ಲಿಗೋಡೆಗಳನ್ನು ಕಟ್ಟಿದ್ದೇವೆ…ಮಾನವೀಯತೆಯ ಹೆಸರಿನಲ್ಲಿಒಂದು ಸೇತುವೆಯನ್ನಾದರೂ ಕಟ್ಟಿದ್ದೇವೆಯೇ? ಕಣ್ಣೆದುರಿನ ಸತ್ಯವನ್ನುಮುಚ್ಚಲು ಸಾಧ್ಯವಿಲ್ಲ!ಮೌನದಿಂದಬದಲಾವಣೆ ಬರಲಾರದು! ಎದ್ದೇಳಿ!ಪ್ರಶ್ನಿಸಿ!ಅನ್ಯಾಯದ ಮುಂದೆತಲೆಬಾಗಬೇಡಿ! ಒಂದು ಧ್ವನಿಸಾವಿರ ಧ್ವನಿಗಳಿಗೆ ದಾರಿ.ಒಂದು ಹೆಜ್ಜೆಹೊಸ ಸಮಾಜದ ಆರಂಭ. ನೆನಪಿರಲಿ…ಸತ್ಯಕ್ಕೆ ಕಣ್ಣುಗಳಿಲ್ಲ,ಆದರೆಅದನ್ನು ನೋಡುವ ಕಣ್ಣುಗಳುನಮ್ಮಲ್ಲಿರಬೇಕು! ಕಣ್ಣೆದುರಿನ ಸತ್ಯವನ್ನುಕಂಡು ಮೌನವಾಗಬೇಡಿ…ಕಂಡು ಬದಲಾಗಿ…ಕಂಡು ಬದಲಾಯಿಸಿ…ಏಕೆಂದರೆ,ನಾಳೆಯ ಇತಿಹಾಸನಮ್ಮ ಇಂದಿನ ಧೈರ್ಯದಿಂದಲೇ ಬರೆಯಲ್ಪಡುತ್ತದೆ! ಎನ್.ಜಯಚಂದ್ರನ್. ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ” Read Post »

ಕಾವ್ಯಯಾನ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಕಾವ್ಯ ಸಂಗಾತಿ “ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ ಬಿಕರಿಯಾದ ಪ್ರೀತಿ ಅಂದ್ರೆ ಗೊತ್ತೇನು!ಇದ್ದದ್ದೆಲ್ಲವನ್ನೂ ಕೊಟ್ಟುಒಂದು ನಗುವಿಗೆ ಕಾಯೋದುಅದು ಬರದಾಗ ಎದೆ ಖಾಲಿ ಆಗೋದು. ನಿನಗೊ ಪ್ರತಿ ಮಾತಿಗೂ ಅರ್ಥಕಂಡುಕೊಳ್ಳುವ ತವಕಅವರೊ ಪ್ರತಿ ಮಾತಿಗೂ ಬೆಲೆ ಕಟ್ಟಿದ್ರುನೀನು ಕಣ್ಣೀರಲ್ಲಿ ಹೆಸರು ಬರೆದೆಅವರು ಅದನ್ನ ಮಳೆಗೆ ಕೊಟ್ಟು ಹೋದ್ರು. ಒಲವಿನ ಪ್ರೀತಿ ಕೇಳಿದ್ದೇನು?ಸಿಗೋದು ಸುಳ್ಳಿನ ವ್ಯಾಪಾರ ಆಯ್ತು.ನಾನಿಲ್ಲವಾ ಎಂದಿದ್ದ ಕೈ,ಬಿಟ್ಟು ಹೋಗೋವಾಗ “ನಿನ್ನ ತಪ್ಪು”ಅಂದಿತ್ತು ಅದರಲ್ಲಿ ಅಚ್ಚರಿ ಏನಿಲ್ಲ. ಆದ್ರೂ ನಿನಗೆ ಗೊತ್ತಾ?ಬಿಕರಿಯಾದ ಪ್ರೀತಿ ನಿನ್ನನ್ನು ಚಿಕ್ಕದಾಗಿಸಲ್ಲಅದು ನಿನ್ನ ದೊಡ್ಡತನಕ್ಕೆ ಸಾಕ್ಷಿಯಾಕಂದ್ರೆ ಪ್ರೀತಿಸೋಕೆ ಧೈರ್ಯಬೇಕಲ್ಲವೆ ಮೋಸ ಮಾಡೋಕೆ ಅಲ್ಲ. ಅದಕೇಕೆ ಅಳುವೆ ಅಳುವುದಾದರೆಮನಸಾರೆ ಎದೆ ಹಗುರಾಗುವವರೆಗೆ ಅಳುಆಮೇಲೆ ಆ ಕಣ್ಣೀರನ್ನೇ ಶಕ್ತಿಮಾಡ್ಕೊಂಡು ಬಿಡು ಅದರಲ್ಲೆನಗೋದನ್ನ ಕಲಿತುಬಿಡು. ಬಿಕರಿಯಾದ ಪ್ರೀತಿಗೇಕೆ ಅಳುವೆನಿನ್ನನ್ನು ನಿಜವಾಗಿ ಪ್ರೀತಿಸೋಒಲವಿಗಾಗಿ ಕಾಯೋದಾ?ಕಾಯುವುದಾದರೆ ಇನ್ನೆಷ್ಟು ದಿನ.!?ಬರಬಹುದೆಂಬ ಊಹೆಯ ಬಿಟ್ಟು ಬಿಡು. ಊಹಿಸಿರೊದೆಲ್ಲವೂ ಇಲ್ಲಿ ನೈಜವಾಗಿನಡೆಯುವುದಿಲ್ಲ ಊಹೆಯೊಳುಬದುಕುತ್ತಿದ್ದರೆ ಅದು ಬದುಕಲ್ಲಬದುಕಿನ್ನು ಬಿಕರಿಯಾಗುವುದಕ್ಕಿಂತಮೊದಲೆ ನಿನ್ನ ನೀನು ಪ್ರೀತಿಸುವುದನ್ನಕಲಿತುಬಿಡು. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

ಇತರೆ

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ  “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ  ಗೃಹಿಣಿ…. ಅಯ್ಯೋ ಈ ಮನೆ ಕೆಲಸ ಮುಗಿಯೋದೇ ಇಲ್ಲ ಇದರ ಮೇಲೆ ಮಕ್ಕಳು ಗಂಡ ಹೇಳಿದ್ದನ್ನೆಲ್ಲ ಮಾಡಿ ಹಾಕಬೇಕು. ಅತ್ತೆ ಮಾವನ ಕಾಳಜಿ ಮಾಡಬೇಕು. ನನ್ನ ಬದುಕು ಪೂರ್ತಿ ಗಂಡ ಮನೆ ಮಕ್ಕಳು ಅಂತ ಅವರ ಸುತ್ತಲೇ ಸುತ್ತುತ್ತದೆ ಅಂತ ಅನಿಸುತ್ತದೆ ನನಗೋಸ್ಕರ ಒಂದಷ್ಟು ಟೈಮ್ ಮಾಡ್ಕೋಬೇಕು  ನಾನು ಕೂಡ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನೋ ಆಸೆ ನನಗೂ ಇದೆ ಆದರೆ ಏನು ಮಾಡೋದು ? ಯಾವುದೂ ಆಗ್ತಾ ಇಲ್ಲ…. ಪಕ್ಕದ ಮನೆಯ ಲೀಲಾ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಾಳೆ ದೊಡ್ಡ ಸಂಬಳ ಬರದೇ ಇರಬಹುದು, ನಿಜ ಆದರೆ ಆಕೆ ಪ್ರತಿದಿನ ಸಮಯಕ್ಕೆ ಸರಿಯಾಗಿ ತಯಾರಾಗಿ ಶಾಲೆಗೆ ಹೋಗುವಾಗ ಆಕೆಯ ಮುಖದಲ್ಲಿರುವ ಸಂತಸ ಹೆಮ್ಮೆ ನೋಡಿದರೆ ನನಗೆ ಖುಷಿಯಾಗುತ್ತೆ. ಕೆಲಸ ಜೊತೆ ಕೆಲಸ ಆಯ್ತು ಶಾಲೆಯಲ್ಲಿ ನಡೆಯೋ ಎಲ್ಲಾ ಆಕ್ಟಿವಿಟೀಸ್ ಗಳಲ್ಲಿ ಅವರು ಪಾರ್ಟಿಸಿಪೇಟ್ ಮಾಡ್ತಾರೆ ಜನರ ಜೊತೆ ಸಂಪರ್ಕ ಇರುತ್ತೆ. ಮಕ್ಕಳ ಜೊತೆ ನಕ್ಕು ನಲೀತಾರೆ ಜೊತೆಗೆ ಒಂದಷ್ಟು ಪಾಕೆಟ್ ಮನಿ ರೀತಿಯಲ್ಲಿ ಹಣ ಕೂಡ ಸಂಪಾದಿಸುತ್ತಾರೆ.ತಾವು ಖರೀದಿಸಿದ ಬಟ್ಟೆಗಳನ್ನ, ಒಡವೆಗಳನ್ನ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋತಾರೆ. ಶಾಲೆಯಲ್ಲಿ ಮಕ್ಕಳೊಟ್ಟಿಗೆ, ನಂತರ ಸಹೋದ್ಯೋಗಿಗಳೊಂದಿಗೆ ವಿವಿಧ ಬಗೆಯ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ತಾರೆ ಪ್ರವಾಸ ಹೋಗ್ತಾರೆ, ಬದುಕನ್ನ ಪರಿಪೂರ್ಣವಾಗಿ ಎಂಜಾಯ್ ಮಾಡ್ತಾರೆ….  ಒಟ್ಟಿನಲ್ಲಿ ನೆಮ್ಮದಿಯ ಬದುಕು ಅವರದು.ಲೀಲಾ ಟೀಚರ್…. ಅಯ್ಯೋ ನಮ್ಮನೆಯವರು ಚೆನ್ನಾಗಿ ದುಡಿತಾ ಇದ್ರೆ, ನಾನ್ ಯಾಕ್ರೀ ಈ ಚಾಕರಿಗೆ ಬರ್ತಾ ಇದ್ದೆ. ಮನೆಯಲ್ಲಿ ಒಂದು ಇದ್ದರೆ ಒಂದು ಇರಲ್ಲ… ಆರ್ಥಿಕವಾಗಿ ಅನುಕೂಲ ಇದ್ರೆ ಎಲ್ಲವೂ ಚೆನ್ನ. ಅದಕ್ಕೆ ಅದೆಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ಈ ಕೆಲಸಕ್ಕೆ ಸೇರಿಕೊಂಡಿದೀನಿ. ತಕ್ಕಮಟ್ಟಿಗೆ ಸಂಬಳಾನು ಸಿಗುತ್ತೆ ಅನ್ನಿ.ಆದರೆ ಏನು ಮಾಡೋದು….ಕೆಲಸಕ್ಕೆ ಹೋಗೋ ಅವಸರದಲ್ಲಿ ಗಡಿಬಿಡಿಯಿಂದ ಮನೆಯ ಎಲ್ಲಾ ಕೆಲಸ ಮುಗಿಸಿ ಸ್ನಾನ ಮಾಡಿ ತಿಂಡಿ ತಿಂದು ಶಾಲೆಗೆ ಓಡಿ ಹೋಗುವಷ್ಟರಲ್ಲಿ ಅಬ್ಬಾ! ಸಾಕು ಈ ಧಾವಂತದ ಬದುಕು ಅನ್ಸುತ್ತೆ. ಇನ್ನು ಇಡೀ ದಿನ ಎಲ್ಲಾ ಶಾಲೆಯಲ್ಲಿ ಕಳೆದು ಹೋಗುತ್ತೆ. ಖಾಸಗಿ ಶಾಲೆ ಆಗಿರೋದ್ರಿಂದ ಎಲ್ಲರ ಮರ್ಜಿ ಕಾಯಬೇಕು. ಆಡಳಿತ ಮಂಡಳಿಯವರ ಕಣ್ಣಿಗೆ ಕಿಸುರಾಾಗಬಾರದು. ಪ್ರಿನ್ಸಿಪಾಲ್ ಹೇಳಿದ ರೀತಿಯಲ್ಲಿ ಕ್ಲಾಸ್ಗಳನ್ನ ತಗೋಬೇಕು. ಚೋಟುದ್ದ ಮಕ್ಕಳ ಧಿಮಾಕು ತುಸು ಹೆಚ್ಚೇ ಇರುತ್ತೆ ಅವರನ್ನು ಸರಿದಾರಿಗೆ ತರೋದಕ್ಕೆ ನಮ್ಮೆಲ್ಲಾ ಶ್ರಮವನ್ನ ಹಾಕಬೇಕು. ಇನ್ನು ಅವರ ಪಾಲಕರ ಮಾತನ್ನು ಕೂಡ ಕೇಳಬೇಕು… ಅವರು ಹೇಳ್ತಾರೆ ತಮ್ಮ ಮಕ್ಕಳು ಮನೆಯಲ್ಲಿ ಮಾತ್ರ ಗಲಾಟೆ ಮಾಡುತ್ತಾರೆ ಅವರನ್ನು ಹಿಡಿಯೋಕಾಗಲ್ಲ ಅಂತ. ಆದ್ರೆ ಶಾಲೆಯಲ್ಲಿ ಅವರಂತಹ ಒಳ್ಳೆಯವರೇ ಇಲ್ಲ ಅನ್ನೋ ರೀತಿ ಅವರ ವರ್ತನೆ ಇರುತ್ತದೆ.ಇನ್ನು ಈ ಮಕ್ಕಳು ತಮ್ಮ ಹೆತ್ತವರ ಮುಂದೆ ತುಂಬಾ ಮುಗ್ಧರು ಅನ್ನೋ ರೀತಿ ವರ್ತಿಸ್ತಾರೆ ಆದರೆ ಅವರದು ಪ್ರಳಯಾಂತಕ ಬುದ್ಧಿ.ಮನೆಯಿಂದ ಹೊರಗೆ ನಾಲ್ಕು ಜನರ ಮಧ್ಯದಲ್ಲಿ ಓಡಾಡೋದ್ರಿಂದ ಸಮಾಜದಲ್ಲಿ ಒಂದಷ್ಟು ಗೌರವ, ನಮ್ಮ ಮಕ್ಕಳ ಶಿಕ್ಷಕರು ಎಂಬ ಪ್ರೀತಿ,ವಿಶ್ವಾಸ ಇರುತ್ತದೆ. ಆದರೆ ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ಎಂಬುದು ಕನಸಿನ ಮಾತು. ಇದಕ್ಕಿಂತ ಸರ್ಕಾರಿ ಶಾಲೆ, ಟೀಚರ್ ಆದ್ರೆ ಒಳ್ಳೆ ಸಂಬಳನೂ ಬರುತ್ತೆ ಯಾವುದೇ ಅಭದ್ರತೆ ಕಾಡೋದಿಲ್ಲ… ಏನು ಮಾಡೋದು ಎಲ್ಲಾನು ಪಡ್ಕೊಂಡು ಬಂದಿರಬೇಕಲ್ವೇ ?ಸರ್ಕಾರಿ ಶಾಲೆ ಶಿಕ್ಷಕಿ….. ಹೌದು ರೀ ಹೇಳೋದಕ್ಕೆ ಸರ್ಕಾರಿ ನೌಕರಿ, ಸರ್ಕಾರಿ ಸಂಬಳ ಎಲ್ಲವೂ ಚೆನ್ನಾಗಿ ಕಾಣಿಸುತ್ತೆ. ಆದರೆ ಸರ್ಕಾರಿ ಕೆಲಸ ಒಂದು ರೀತಿ ಕತ್ತೆ ಚಾಕರಿ ಇದ್ದಹಾಗೆ ಅನ್ನೋದು ಜನರಿಗೆ ಗೊತ್ತಾಗಲ್ಲ. ಏನು ಕೆಲಸ ಮಾಡ್ತೀರಿ ? ಅಂತ ಕೇಳಿದ ಜನ ನಮ್ಮ ಉತ್ತರ ಕೇಳಿ ಗೌರ್ಮೆಂಟ್ ಸ್ಕೂಲ್ ಟೀಚರ್ರಾ, ಬಿಡಿ ಕೆಲಸ ಮಾಡಿದ್ರೂ ಸಂಬಳ ಬರುತ್ತೆ, ಮಾಡದೆ ಇದ್ರೂ ಬರುತ್ತೆ ಎಂದು ಮೂಗು ಮುರಿದಾಗ ಅದೆಷ್ಟು ನೋವಾಗುತ್ತೆ ಗೊತ್ತಾ ? ನಾವು ಶಾಲೆಗಳಲ್ಲಿ ಓದಿಸುವ ಮಕ್ಕಳು ಸಂಪೂರ್ಣ ಶಿಕ್ಷಿತರಲ್ಲದವರ ಮಕ್ಕಳು. ಮಕ್ಕಳಿಗೆ ಶಾಲೆಯಲ್ಲಿ ಪಾಠ ಹೇಳಿಕೊಡುವುದರ ಜೊತೆಗೆ ಮನೆಯಲ್ಲಿ ಮನೆ ಪಾಠವನ್ನು ನಾವು ಕೊಡುತ್ತೇವೆ, ನಿಜ….ಆದರೆ ಅದನ್ನು ಮಾಡಿಸೋರು ಯಾರು ? ಯಾಕೆಂದರೆ ಪಾಲಕರಿಗೆ ಅಯ್ಯೋ! ಅದೆಲ್ಲ ನಮಗೆ ಗೊತ್ತಾಗೋದಿಲ್ಲ ಅಂತ ಕೈ ಒದರೋದು ಮಾತ್ರ ಗೊತ್ತು. ಮಕ್ಕಳಿಗೆ ಒಂಚೂರು ಕಟ್ಟುನಿಟ್ಟು  ಮಾಡಿದಾಗ  ಓಡೋಡಿ ಬಂದು ನಾವೇ ನಮ್ಮ ಮಕ್ಕಳಿಗೆ ಏನೂ ಹೇಳೊಲ್ಲ, ಒಂದೇಟು ಹೊಡೆಯಲ್ಲ… ಅದು ಹೇಗೆ ರೀ ನೀವು ನಮ್ಮ ಮಕ್ಕಳಿಗೆ ಬಯ್ಯೋದು ಅಂತ ನಮ್ಮನ್ನ  ದಬಾಯಿಸ್ತಾರೆ.ತೆಗೆದುಕೊಟ್ಟುಬಿಡಿ ನಮ್ಮ ಮಕ್ಕಳ ಟಿ ಸಿ ನ ಅಂತ ಗುರುಗುಟ್ಟತಾರೆ.ಇನ್ನು ನಮ್ಮ ಸರ್ಕಾರಗಳು ಜನಗಣತಿಯಿಂದ ಹಿಡಿದು ದನಗಣತಿಯವರೆಗೆ ಎಲ್ಲ ಕೆಲಸಕ್ಕೂ ನಮ್ಮನ್ನೇ ಬಳಸಿಕೊಳ್ಳುತ್ತಾರೆ. ರಜಾ ದಿನಗಳಲ್ಲಂತೂ ಸರಿ… ಶಾಲೆ ಇದ್ದಾಗಲೂ ಈ ಕಾರ್ಯ ಮಾಡೋದು ಅಂದ್ರೆ ಮಕ್ಕಳ ಸಿಲಬಸ್ ಹೇಗೆ ಪೂರ್ಣಗೊಳಿಸಬೇಕು ಹೇಳಿ ?ಇದರ ಮೇಲೆ ಬಿಸಿಊಟದ ವ್ಯವಸ್ಥೆ ನಮ್ಮ ನಮ್ಮ ತರಗತಿಯಲ್ಲಿ ಆ ದಿನ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ ಹೇಳಬೇಕು, ಹುಡುಗರು ಎಷ್ಟು ಹುಡುಗಿಯರು ಎಷ್ಟು ಯಾರು ಮೊಟ್ಟೆ ತಿಂತಾರೆ ? ಯಾರು ಬಾಳೆಹಣ್ಣು ತಿಂತಾರೆ ಎಂದೆಲ್ಲ ಲೆಕ್ಕ ಕೊಡಬೇಕು. ಅವರಿಗೆ ಮಾಡುವ ಅಡುಗೆ ಪೌಷ್ಟಿಕವಾಗಿದೆಯೇ? ತರಕಾರಿಗಳನ್ನು ಹಾಕಿ ಮಾಡಿದ್ದಾರೆಯೇ? ಹಾಲು ಚೆನ್ನಾಗಿ ಕಾಯಿಸಿದ್ದಾರೆಯೇ ಅನ್ನೋದನ್ನ ನೋಡ್ಕೋಬೇಕು. ಯಾರಿಗೆ ಬೇಕಪ್ಪ ಈ ಸರ್ಕಾರಿ ಶಿಕ್ಷಕರ ಕೆಲಸ. ಚೆನ್ನಾಗಿ ಓದಿ ಇಂಜಿನಿಯರಿಂಗ್ ಮಾಡಿದ್ರೆ ಎಸಿ ರೂಮಲ್ಲಿ ಕುತ್ಕೊಂಡು ಲ್ಯಾಪ್ಟಾಪ್ ಅಲ್ಲಿ ಕುಟ್ತಾ ಜುಮ್ ಅಂತ ನೌಕರಿ ಮಾಡ್ಕೊಂಡು ವೀಕೆಂಡ್ ಗಳಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ, ಪಿಕ್ನಿಕ್ ಅಂತ ಹೋಗಬಹುದಿತ್ತು…. ಎಲ್ಲಾನು ಪಡ್ಕೊಂಡು ಬರೋಕೆ ಹಣೆಲಿ ಬರ್ದಿರ್ಬೇಕಲ್ಲ.ಸಾಫ್ಟ್ ವೇರ್ ಇಂಜಿನಿಯರ್…. ನಿಜ ನಮ್ಮ ಬದುಕು ನೋಡಲು ಅತ್ಯಂತ ಆಕರ್ಷಕ. ಎಸಿ ರೂಮುಗಳಲ್ಲಿ ಬೋರ್ಡ್ ಮೀಟಿಂಗ್ ಗಳಲ್ಲಿ, ಆಕರ್ಷಕವಾದ ವಾತಾವರಣದಲ್ಲಿ ಠಾಕು ಠೀಕಾದ ಬಟ್ಟೆ ಧರಿಸಿ ಅದಕ್ಕೆ ತಕ್ಕಂತೆ ಶೂ ಇಲ್ಲವೇ ಚಪ್ಪಲಿ ಹಾಕಿಕೊಂಡು ಆತ್ಮವಿಶ್ವಾಸದಿಂದ ಎದೆ ಉಬ್ಬಿಸಿ ನಡೆಯುತ್ತಾ ಇದ್ದರೆ ಎಲ್ಲರೂ ನಮ್ಮನ್ನೇ ನೋಡಿ ಬೆಕ್ಕಸ ಬರಗಾಗುವಂತಹ ಬದುಕು ನಮ್ಮದು. ಆದರೆ ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಒಂದೇ ಸಮನೆ ಲ್ಯಾಪ್ಟಾಪ್ ನೋಡಿ ಕೆಲಸ ಮಾಡುವ ನಮಗೆ ವಿಪರೀತ ದೈಹಿಕ ತೊಂದರೆಗಳು ಕಾಡುತ್ತವೆ. ಎಲ್ಲರಿಗೂ ನಲವತ್ತಕ್ಕೆ ಕನ್ನಡಕ ಬಂದರೆ ನಮಗೆ ನೌಕರಿ ಸೇರಿದ ಕೆಲವೇ ತಿಂಗಳುಗಳಲ್ಲಿ ಕಣ್ಣಿಗೆ ಕನ್ನಡಕ ಕಡ್ಡಾಯ. ಸದಾ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳು ಡ್ರೈ ಆಗುವ, ಕುತ್ತಿಗೆ ಬೆನ್ನುಗಳಲ್ಲಿ ವಿಪರೀತ ನೋವು ಸಹಜ. ನಮ್ಮ ಒಡನಾಟ ಹೈ ಲೆವೆಲ್ ಕಾರ್ಪೊರೇಟ್ ಜನರೊಂದಿಗೆ ಇರುವುದರಿಂದ ಅಲ್ಲಿಯ ಊಟ ತಿಂಡಿಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಕಾರಣ ದೇಹದಲ್ಲಿ ಅನವಶ್ಯಕ ಬೊಜ್ಜು ಸೇರಿಕೊಳ್ಳುತ್ತದೆ. ಪರಿಣಾಮವಾಗಿ 60ರ ನನ್ನ ಅಮ್ಮ ಇನ್ನೂ ಚಿರ ಯುವತಿಯಂತೆ ಓಡಾಡಿಕೊಂಡಿದ್ದರೆ ಅವರ ಮುಂದೆ ನಾನು ಸದಾ ಬಂದಿಲ್ಲೊಂದು ನೋವುಗಳನ್ನು ಹೇಳಿಕೊಂಡು ತಿರುಗುತ್ತೇನೆ. ಪ್ರಾರಂಭದ ಒಂದೆರಡು ವರ್ಷ ಜನ ಎಲ್ಲ ನೋಡೋ ಹಾಗೆ ಒಳ್ಳೆ ಕೆಲಸ, ಫ್ರೆಂಡ್ಸು, ವೀಕೆಂಡ್ ಮೋಜು ಮಜಾ ಅಂತ ಕಾಲ ಕಳೆಯಿತು…. ನಂತರ ಅಪ್ಪ-ಅಮ್ಮನ ವರಾತ ಶುರುವಾಗಿ ನನ್ನದೇ ಸಾಫ್ಟ ವೇರ್ ಫೀಲ್ಡಿನ ಯುವಕನೊಂದಿಗೆ ನನ್ನ ಮದುವೆಯೂ ಆಯಿತು. ಯವ್ವನದ ಹಸಿ ಬಿಸಿ ಆಸೆ ಆಕಾಂಕ್ಷೆಗಳ, ಕನಸುಗಳ ಹಂಚಿಕೆಯೂ ಆಗಿ, ಮದುವೆಯ ಹನಿಮೂನ್ ಅವಧಿ ಮುಗಿದು ಕೆಲಸಕ್ಕೆ ಮತ್ತೆ ಜಾಯಿನ್ ಆದದ್ದೇ ಬಂತು. ನಾವು ಪರಸ್ಪರ ಜೊತೆಯಾಗಿ ಇರಲು ಮಾತನಾಡಲು ಕೂಡ ವೀಕೆಂಡ್ಗಳಿಗಾಗಿ ಕಾಯಬೇಕು. ಇನ್ನು ವಿಪರೀತ ಒತ್ತಡದ ಕೆಲಸದ ನಂತರ ಬರುವ ವೀಕೆಂಡ್ ಗಳಲ್ಲಿ ಮನೆಯ ರಾಶಿ ಕೆಲಸಗಳು ಕಾಯುತ್ತಿರುತ್ತವೆ… ಅದೆಲ್ಲವನ್ನು ಹೇಗೋ ಮ್ಯಾನೇಜ್ ಮಾಡಿ ಉಸ್ತಪ್ಪ ಅಂತ ಸೋಫಾದಲ್ಲಿ ಕುಳಿತುಕೊಂಡರೆ ಅರಿವಿಲ್ಲದೆ ನಿದ್ರೆ ಆವರಿಸಿಕೊಳ್ಳುತ್ತದೆ. ನಾವಿಬ್ಬರೂ ಬದುಕಿನ ಪಯಣದಲ್ಲಿ ಕಂಪನಿಯಲ್ಲಿ ನೀಡುವ ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಲು ಒಂದೇ ಸಮನೆ ಓಡುತ್ತಿದ್ದೇವೆ… ನನಗೆ ಕೊಂಚ ಬಿಡುವ ದೊರೆತಾಗ ನನ್ನವನಿಗೆ ವಿಪರೀತ ಕೆಲಸದ ಒತ್ತಡ, ಮಾತಾಡಿದರೆ ಸಿಡಾರ್ ಎಂದು ಸಿಡುಕಬಹುದು ಎಂಬ ಅಳುಕು… ಕಾರಣ ಕೆಲಸದ ಒತ್ತಡ, ಭದ್ರತೆ ಅವನಂತೆ ನನಗೂ ಇದೆ ಅಲ್ಲವೇ ? ಇದರ ಮಧ್ಯದಲ್ಲಿ ಮಗುವಾದರೆ ಅದರೊಂದಿಗೆ ಎಂಜಾಯ್ ಮಾಡಲು ಕೂಡ ಆಗದೇ ಇರುವಷ್ಟು ಮುಂದಿನ ಬದುಕಿನ ಕುರಿತ ಕಾಳಜಿ. ಐದಾರು ತಿಂಗಳ ಮೆಟರ್ನಿಟಿ ಲೀವ್ ದೊರೆಯುತ್ತದೆ ನಿಜ… ಆದರೆ ನಾಗಾಲೋಟದಲ್ಲಿ ಬದಲಾಗುತ್ತಿರುವ ಐ ಟಿ ಕ್ಷೇತ್ರದ ಅಭಿವೃದ್ಧಿ ಪಥಕ್ಕೆ ನಾನು ಸರಿ ಹೊಂದದೆ ಎಲ್ಲಿ ಹಿಂದೆ ಉಳಿದುಬಿಡುವೆನೋ ಎಂಬ ಆತಂಕ, ಭಯ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಒಂದು ವೇಳೆ ಹಾಗಾದಾಗ ನನಗೆ ನನ್ನ ಯೋಗ್ಯತೆಗೆ ತಕ್ಕ ಕೆಲಸ ದೊರೆಯದೆ ಹಿಂದುಳಿದು ಬಿಟ್ಟರೆ? ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಎಂಬ ಆತಂಕ…. ಇದರ ಜೊತೆಗೆ ಸಹಜವಾಗಿಯೇ ನನ್ನಮ್ಮ, ಅತ್ತೆಯಂತೆ ನಾನು ಕುಟುಂಬಕ್ಕೆ ನನ್ನ ಸಮಯವನ್ನು ನೀಡುತ್ತಿಲ್ಲ, ಮಕ್ಕಳಿಗೆ ನೀಡಬೇಕಾದ ಅಗತ್ಯ ಕಾಳಜಿಯನ್ನು ವಹಿಸಲಾಗುತ್ತಿಲ್ಲ ಎಂಬ ಭಾವ ನನ್ನನ್ನು ಸದಾ ಹಿಂಡಿ ಹಿಪ್ಪೆ ಮಾಡುತ್ತದೆ. ಅತ್ತ ಕೌಟುಂಬಿಕವಾಗಿ ಎಲ್ಲರನ್ನೂ ಮೆಚ್ಚಿಸಲಾಗದೆ, ಔದ್ಯೋಗಿಕವಾಗಿಯೂ ಎಲ್ಲವನ್ನು ನಿರ್ವಹಿಸಲಾಗದೆ ಎಲ್ಲಿಯೂ ಸಲ್ಲದವರಾಗಿ ಬಿಡುತ್ತೇವೆ ಎಂಬ ಭಯ. ಹೋಗಲಿ ಬಿಡು…, ಇಬ್ಬರಲ್ಲಿ ಒಬ್ಬರು ದುಡಿಯುತ್ತೇವಲ್ಲ ನೌಕರಿ ಬಿಟ್ಟರೆ ಆಯ್ತು ಅಂದುಕೊಳ್ಳಲು ಕಂತಿನಲ್ಲಿ ಖರೀದಿಸಿದ ಕಾರು, ಮನೆಗಳ ಸಾಲಗಳು… ಇನ್ನೂ ನಮ್ಮ ಬಾಕಿ ಇದೆ ಎಂದು ತಟ್ಟಿ ನಮ್ಮನ್ನು ಎಚ್ಚರಿಸುತ್ತವೆ. ಇದೆಲ್ಲಾ ನೋಡಿದರೆ ಹಳ್ಳಿಯಲ್ಲಿ ಆರಾಮಾಗಿ ಇರುವ ನನ್ನಮ್ಮನ ಹಾಗೆ ಬದುಕನ್ನು ಅದು ಇರುವಂತೆ ಸಾಗಿಸಿಕೊಂಡು ಹೋಗುವುದರಲ್ಲಿ ಅದೆಷ್ಟು ಸುಖವಿದೆ ಅಂತ ಅನ್ಸುತ್ತೆ… ಏನು ಮಾಡೋದು ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ. ಪರಿಸ್ಥಿತಿ ಬಂದ ಹಾಗೆ ನಮ್ಮನ್ನು ನಾವು ಹೊಂದಿಸಿಕೊಂಡು ಹೋಗಬೇಕು ಇಲ್ಲದೆ ಹೋದರೆ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ. ಹಳ್ಳಿಯಲ್ಲಿರುವ ಅಮ್ಮ…. ಅಯ್ಯೋ ನಮ್ಮದು ಒಂದು ಬದುಕೇ?  ನಾನು ಅಂತ ಇಷ್ಟು ದಿನ ಹೊಂದಿಕೊಂಡು ಹೋದೆ. ನಮ್ಮ ಹಳ್ಳಿಯ ಮನೆಗಳು ಕತ್ತಲ ಗೂಡುಗಳು ಕಣ್ಣು ಮುಚ್ಚಾಲೆ ಆಡೋ ಕರೆಂಟು, ಬಾವಿಯ ನೀರು ಸೇದಿ ಬಳಸಬೇಕು ಇಲ್ಲವೇ ಹಳ್ಳಕ್ಕೆ ಹೋಗಬೇಕು… ಇನ್ನು ಮನೆ ಮನೆಗೆ ನೀರಿನ ವ್ಯವಸ್ಥೆ ನಮ್ಮ ಹಳ್ಳಿಗೆ  ಬಂದಿಲ್ಲ. ಹೊಲದಲ್ಲಿ ಸಾಕಷ್ಟು ಕಟ್ಟಿಗೆ ಇರುತ್ತೆ ಅದನ್ನೇ ಬಳಸುವ ಅಂತ ಯಜಮಾನ್ರು ಹೇಳ್ತಾರೆ ಅದು ನಿಜಾನೆ ಹೌದು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ, ಅದರ ಹೊಗೆ ಕುಡಿದು ಅಸ್ತಮಾ, ಕೆಮ್ಮು ದಮ್ಮು ಎಂದು ಒದ್ದಾಡೋದು ನನ್ನ ಹಣೆಯಲ್ಲಿ ಬರೆದಿದೆ. ಈಗೀಗ ಎಲ್ಲದಕ್ಕೂ ಗ್ಯಾಸ್ ಒಲೆಯನ್ನೇ ಬಳಸ್ತೀನಿ… ನಾನಾದ್ರೂ ಎಷ್ಟು ಅಂತ ಮಾಡ್ಲಿ.ಈ ಹಿಂದೆ ಮನೆಯಲ್ಲಿ ದನ ಕರು ಅಂತ ಸಾಕಷ್ಟು ಹಾಲು ಹಯಿನಿನ ಸಮೃದ್ಧಿ ಇತ್ತು ನಿಜ… ಆದರೆ ಈಗ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಈ ಮುಂಚಿನಂತೆ ಆಳುಗಳು ಸಿಗೋದಿಲ್ಲ, ಅವರು ಕೇಳೋವಷ್ಟು ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳೋದಕ್ಕೆ ನಮಗೆ ಆಗೋದಿಲ್ಲ. ಅದಕ್ಕೆ ನಾವು ತಿನ್ನುವುದಾದರೂ ಎಷ್ಟು ಎಂದು

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ ಸಾವಿಲ್ಲದ ಶರಣರು ಲಿಂಗತತ್ವ ನಿಷ್ಠ. ಹಡಪದ ಅಪ್ಪಣ್ಣ ಸಂಗಮೇಶ್ವರ ಅಪ್ಪಣ್ಣ ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಕಾಲ – ಹನ್ನೆರಡನೆಯ ಶತಮಾನ ಬಸವ ಸಮಕಾಲೀನ ಶರಣಒಟ್ಟು ವಚನಗಳು – 102 +250=352ಅಂಕಿತ: ಬಸವಪ್ರಿಯ ಕೂಡಲ ಚೆನ್ನಸಂಗಮದೇವ ,/ ಬಸವ ಪ್ರಿಯ ಚೆನ್ನಬಸವಣ್ಣ ಊರು- ಕೂಡಲ ಸಂಗಮ ,ಮುಸುಬಿನಾಳ ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನಕಾರರು ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿ. ಇವರು ಬಸವಣ್ಣನವರ ಬಲಗೈ ಬಂಟರೆಂದು ಪ್ರಸಿದ್ಧರು. ‘ಅನುಭವ ಮಂಟಪದಲ್ಲಿ’ ಪ್ರಮುಖ ಪಾತ್ರ ವಹಿಸಿದ್ದರು. ಇವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರ ಪತ್ನಿ ಲಿಂಗಮ್ಮನವರು ಕೂಡ ವಚನಗಾರ್ತಿಯಾಗಿದ್ದರು        ಅಪ್ಪಣ್ಣನ  ಹೆಸರಿನ ಹಿಂದೆ ಸೇರಿದ ‘ಸಂಗಮೇಶ್ವರ’ (ಕೂಡಲಸಂಗಮ) ಈತನ ಸ್ಥಳವಾಗಿರಬೇಕು. ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ಬೋಧೆ ಕಾಯಕ ದಾಸೋಹದ ಮಹತ್ವ ಮುಂತಾದ ಅನೇಕ ವಿಷಯಗಳ ಮೇಲೆ ಭಿನ್ನ ಚಿಂತನೆ ನಡೆಸಿದವರು.   ಎಲ್ಲವೂ ತಾತ್ವಿಕವಾಗಿವೆ. ಅನ್ಯಮತ ಖಂಡನೆ, ಶಿವಪಾರಮ್ಯ ಸ್ಥಾಪನೆಗೆ ವಿಶೇಷ ಸ್ಥಾನ ಸಂದಿದೆ. ಶರಣಸ್ತುತಿ, ಶೂನ್ಯಸಿಂಹಾಸನ, ಅನುಭವ ಮಂಟಪಗಳ ಉಲ್ಲೇಖ, ಪ್ರಭುದೇವರು ಕಲ್ಯಾಣಕ್ಕೆ ಬಂದ ಪ್ರಸಂಗ ಮತ್ತು ಆರೋಗಣೆ ನಡೆಸಿದ ಸಂದರ್ಭಗಳನ್ನು ಪ್ರಸ್ತಾಪಿಸುವುದು ಮಹತ್ವದ ಅಂಶಗಳೆನಿಸಿವೆ. ತುಂಬ ದೀರ್ಘವಾಗಿದ್ದು ಗದ್ಯಲಕ್ಷಣವನ್ನು ಹೊಂದಿದ ರಚನೆಗಳ ಜೊತೆಗೆ ಮುಕ್ತಕ ರೂಪದ ವಚನಗಳೂ ಸಮಾವೇಶಗೊಂಡಿವೆ.   ಲಿಂಗತತ್ವ  ಸಂಗಮೇಶ್ವರ ಅಪ್ಪಣ್ಣನಿಗೆ ಅಪಾರವಾಗಿದೆ. ತರ್ಕ ಶಕ್ತಿ ಅಗಾಧವಾಗಿದೆ. ಲಿಂಗಾಯತ ತತ್ತ್ವ ಪ್ರತಿಪಾದನೆ ವಿಶೇಷವಾಗಿ ಕಂಡು ಬರುತ್ತದೆ. ಶಿವಪಾರಮ್ಯ, ಅನ್ಯಮತ ಖಂಡನೆ, ಬ್ರಾಹ್ಮಣರ ಕರ್ಮಠತನದ ಖಂಡನೆ, ಅಷ್ಟಾವರಣ, ಪಂಚಾಚಾರಗಳ ವಿವರಣೆ ಇವನ ವಚನಗಳಲ್ಲಿ ಬಂದಿದೆ. ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ   ಇತ್ತೀಚಿನ ನನ್ನ ಅಧ್ಯಯನ ಮತ್ತು ಸಂಶೋಧನೆಯಿಂದ ನಾನು ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಎಂದು ಖಚಿತ ಪಡಿಸಲು ಇಚ್ಛಿಸುತ್ತೇನೆ . ಇದಕ್ಕೆ ಕೆಲ ಪುರಾವೆಗಳನ್ನೂ ಇಲ್ಲಿ ನೀಡುತ್ತಿದ್ದೇನೆ. 1 ವಚನಾಂಕಿತ –  ಬಸವಪ್ರಿಯ ಕೂಡಲ ಚೆನ್ನಸಂಗಮದೇವ -ಈ ವಚನಾಂಕಿತ ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣನವರ ವಚನಾಂಕಿತವಾಗಿದ್ದು ಇಬ್ಬರೂ ಒಬ್ಬರೇ ಎನ್ನುವ ನಿರ್ಧಾರ ಬಲವಾಗುತ್ತದೆ. 2 ಇಬ್ಬರ ವಚನಗಳಲ್ಲಿ -ಲಿಂಗ ತತ್ವ ಷಟಸ್ಥಲ, ಸಿದ್ಧಾಂತ ಅಪಾರವಾಗಿ ಕಂಡು ಬರುತ್ತದೆ. ವಚನ ರಚನಾ ಕೌಶಲ್ಯ,ಭಾವ,ಚಿಂತನೆಗಳು ಒಂದೇ ರೀತಿಯಾಗಿ ಕಂಡು ಬರುತ್ತವೆ.3 ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪಣನವರ ವಚನಗಳಲ್ಲಿ ತಮ್ಮ ಬಸವಣ್ಣನವರ ಸಂಬಂಧವು ಎದ್ದು ಕಾಣುತ್ತದೆ,ಹೀಗಾಗಿ ಇಬ್ಬರೂ ಬೇರೆ ಬೇರೆ ಅಲ್ಲ ಒಬ್ಬರೇ ಎಂದು ನಿರ್ಧರಿಸಬಹುದು. 3 ಹಡಪದ ಅಪ್ಪಣ್ಣ ಬಾಗೇವಾಡಿಯ ಹತ್ತಿರದ ಮುಸುಬಿನಾಳ ಗ್ರಾಮದವನು, ಅವನ ಹೆಂಡತಿ ಲಿಂಗಮ್ಮ ಅದೇ ಊರಿನ ಹೂಗಾರ ನಾಗಪ್ಪನ ಮಗಳು ಎಂದು ಇತ್ತೀಚಿನ ಅಧ್ಯಯನ ಮತ್ತು ಸಂಶೋಧನೆಯಿಂದ ತಿಳಿದು ಬರುತ್ತದೆ. ಬಾಲಕ ಬಸವಣ್ಣ ಬಾಗೇವಾಡಿ ಅಗ್ರಹಾರದ ವಿರುದ್ಧ ಬಂಡೆದ್ದು ಮನೆ ಬಿಟ್ಟು ಹೋಗುವಾಗ ಅಕ್ಕ ಅಕ್ಕನಾಗಮ್ಮ  ಪತಿ ಶಿವಸ್ವಾಮಿ ಜೊತೆಗೆ ಹಿರಿಯ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅವರ ಜೊತೆಗೆ ಕೂಡಲ ಸಂಗಮಕ್ಕೆ ಹೋಗಿರಬಹುದು , ಹನ್ನೆರಡು ವರುಷ ಕೂಡಲ ಸಂಗಮ್ಮದಲ್ಲಿ ಇದ್ದು ತನ್ನ ಕಾಯಕ ಮಾಡುತ್ತಾ ಬಸವಣ್ಣನವರ ಅಧ್ಯಯನಕ್ಕೆ ಸಹಾಯ ಮಾಡುತ್ತ ಮುಂದೆ ಮಂಗಳವೆಡೆಗೆ ಹೋಗಿ ಬಸವಣ್ಣನವರ ನೆರಳಂತೆ ನಿಂತದ್ದು ಸ್ಪಷ್ಟವಾಗಿ ಕಂಡು ಬರುತ್ತದೆ. 4 ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲಸಂಗಮವಾಗಿದ್ದು  ಬಾಗೇವಾಡಿ ಅಗ್ರಹಾರ ತೊರೆದ ಬಸವಣ್ಣನಿಗೆ ಆಶ್ರಯಕ್ಕೆ ಬಂದಿದ್ದು ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲ ಸಂಗಮ, ಸಹೋದರ ಮಾವ ಬಲದೇವನು ಸಹಾಯ ಮಾಡಿದ್ದೂ ಗಮನಾರ್ಹ, ಇದನ್ನು ಜಾನಪದ ಕವಿಗಳು ಹೇಳುತ್ತಾರೆ. 5 ಬಹಳ ವರ್ಷಗಳವರೆಗೆ ಹಡಪದ ಅಪ್ಪಣ್ಣ ಕೂಡಲ ಸಂಗಮದಲ್ಲಿ ಇದ್ದ ಕಾರಣ ಅವನನ್ನು ಕಲ್ಯಾಣದ ಶರಣರು  ಆರಂಭದಲ್ಲಿ ಸಂಗಮೇಶ್ವರ ಅಪ್ಪಣ್ಣ ಎಂದು ಕರೆದಿರಬಹುದು, ಮುಂದೆ  ಅಪ್ಪಣ್ಣ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರ ಆಪ್ತ  ಕಾರ್ಯದರ್ಶಿಯಾಗಿ ನೇಮಕ ಗೊಂಡ ಮೇಲೆ ಆಡಳಿತದ ಆಸ್ಥಾನದ ಕಡತಗಳನ್ನು,ಕಚೇರಿ ಪತ್ರಗಳನ್ನು,ಮಂತ್ರಿಯ ಆದೇಶಗಳನ್ನು ಇಡಲು ಅಡಪ ( ಕಟ್ಟಿಗೆಯ ಡಬ್ಬಿ) ತನ್ನೊಂದಿಗೆ ಇಡುತ್ತಿದ್ದನು.    ಕಲ್ಯಾಣಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಬಲು ದೊಡ್ಡದು, ಬಸವಣ್ಣನವರ ಯೋಜನೆ ಚಿಂತನಾಕ್ರಮದಲ್ಲಿ ಪಾಲ್ಗೊಂಡ ವೈಚಾರಿಕ ಶರಣ, ಬಸವಣ್ಣನವರ ಆಸೆಯಂತೆ ಹಡಪದ ಅಪ್ಪಣ್ಣನವರು ನೀಲಾಂಬಿಕೆಯನ್ನು ಕೂಡಲ ಸಂಗಮಕ್ಕೆ ಕರೆ ತರಲು ಹೇಳಿದಾಗ, ಅವರ ಆದೇಶದಂತೆ ಅಪ್ಪಣ್ಣನವರು ನೀಲಮ್ಮನನ್ನು ಕರೆದುಕೊಂಡು ಬರುವಾಗ ತಂಗಡಗಿಗೆ ಬಂದಾಗ ಬಸವಣ್ಣನವರ ಸಾವಿನ ಸುದ್ಧಿ ಕೇಳಿ ಬರುತ್ತದೆ, ಆಗ ನೀಲಮ್ಮ ಮತ್ತು ಅಪ್ಪಣ್ಣನವರು ಅಲ್ಲಿಯೇ ಐಕ್ಯವಾಗಿದ್ದು ನದಿಯ ದಡದಲ್ಲಿ ಇಬ್ಬರ ಸಮಾಧಿಯ ಕುರುಹು ಸ್ಮಾರಕಗಳು ಕಂಡು ಬರುತ್ತವೆ.             ಸಂಗಮೇಶ ಅಪ್ಪಣ್ಣನವರ ಕೆಲ  ವಚನಗಳಅಂಗ ಲಿಂಗವೆಂದರಿದಾತಂಗೆ, ಅಂಗದಲೆ ಐಕ್ಯ.ಕಂಗಳು ಲಿಂಗವೆಂದರಿದಾತಂಗೆ, ಕಂಗಳಲೆ ಐಕ್ಯ.ಕರವೆ ಲಿಂಗವೆಂದರಿದಾತಂಗೆ, ಕರದಲೆ ಐಕ್ಯ.ಈ ತ್ರಿವಿಧದ ನೆಲೆಯ, ಶ್ರುತಿ ಸ್ಮೃತಿಗಳರಿಯವು.ಎಮ್ಮ ಬಸವಪ್ರಿಯ ಕೂಡಲಚನ್ನಸಂಗಮದೇವನಲ್ಲಿಈ ಇರವ ಶರಣರೆ ಬಲ್ಲರು./1 ಅಂಗದ ಕಳೆ ಲಿಂಗದಲ್ಲಿ ಲೀಯವಾಗದು.ಲಿಂಗದ ಕಳೆ ಅಂಗದಲ್ಲಿ ಲೀಯವಾಗದು.ಮಾತಿನಮಾಲೆಯ ಬೊಮ್ಮವೇತರದೊ ?ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು.ಪ್ರಾಣ ಜಂಗಮವಾದಡೆ ಅರಿದಿರಬೇಕು.ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ.ಹಿರಿಯರು ಬಂದಡೆ ಇದಿರೆದ್ದು ಬಾರದವರ ಮನೆಗೆ ಅಡಿಯ ಇಡೆವೆಂದು,ಬಸವಪ್ರಿಯ ಕೂಡಲಚನ್ನಸಂಗನ ಶರಣರು ಕಾಡಿಹರು ಕಾಣಾ,ಸಂಗನಬಸವಣ್ಣಾ./2 ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು.ಸಂದ ಪುರಾತನರ ನೆನೆಯುತ್ತಿರಬೇಕು.ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು.ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ./4 ಅಗ್ಗದ ಹರಿಬ್ರಹ್ಮರ ಮರೆದೊಮ್ಮೆ ಹರಂಗೆ ಸಮವೆಂದಡೆ,ಅವನು ಚಾಂಡಾಲನು. ಅವನ ಮುಖವ ನೋಡಲಾಗದು.ಅದೆಂತೆಂದಡೆ: ಯೋ ಮಹಾದೇವಮನ್ಯೇನ ಹೀನದೇವೇನ ದುರ್ಮತಿಃ |ಸಕೃತ್ಸಾಧಾರಣಂ ಬ್ರೂಯಾದಂತ್ಯಜಾನಾಂತ್ಯಜೋಂತಜಃ ||ಇಂತೆಂದುದಾಗಿ, ನಿಮಗೆ ಕಿರುಕುಳದೈವಂಗಳ ಸಮವೆಂದುಬಗಳುವನ ಬಾಯಿ ಪಾಕುಳತಪ್ಪದು,ಬಸವಪ್ರಿಯ ಕೂಡಲಚನ್ನಸಂಗಮದೇವಾ./5 ಅಜಹರಿಸುರರೆಲ್ಲರು ಅಳಿದವರಲ್ಲದೆ, ಉಳಿದವರಿಲ್ಲ.ಶಿವನೆ ನಿತ್ಯನೆಂದು ಹೊಡೆವಡುತ್ತಿವೆ ವೇದ.ಉತೈನಂ ವಿಶ್ವಾಭೂತಾನಿ ಸದೃಷ್ಟೋ ಮೃಡಯಾತಿನಃ |ನಮೋಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಡುಷೇ ||ಎಂಬ ಶ್ರುತಿ, ಬಸವಪ್ರಿಯ ಕೂಡಲಚನ್ನಸಂಗಯ್ಯನೊರ್ವನೆನಿತ್ಯನೆಂದು ಹೊಗಳುತ್ತಲಿದೆ./7 ಅನಿಮಿಷನಾದ ನಿಬ್ಬೆರಗಿನ ಲಿಂಗೈಕ್ಯನು, ಭಾವ ನಿರ್ಭಾವವನೆಯ್ದಿ,ಜ್ಞಾನವೆ ಪರಮಾಶ್ರಯವಾಗಿಪ್ಪ ಲಿಂಗೈಕ್ಯನು,ಮಹವನೊಳಕೊಂಡ ಮಹಿಮ ಲಿಂಗೈಕ್ಯನು,ಬಸವಪ್ರಿಯ ಕೂಡಲ ಚನ್ನಸಂಗಯ್ಯಾ ನಿಮ್ಮ ಶರಣ ಪ್ರಭುದೇವರು./9 ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು,ಮನೆಮನೆದಪ್ಪದೆ ತಿರುಗುವೆನು.ಅವರ ಇಚ್ಛಿಗೆ ಅನುಮಾನವಿಡಿದು ನುಡಿವೆನು.ಅವರ ಮನಧರ್ಮವನರಿಯದೆ ನುಡಿದೆನಾದಡೆ,ಅನೇಕ ಪರಿಯಲ್ಲಿ ಭಂಗಬಡುವೆನು.ದಿಟದ ಭಕುತನಂತೆ,ಪುರಾತರ ವಚನಂಗಳ ಉದರ ನಿಮಿತ್ತವಾಗಿ ಬಳಸುವೆನು.[ಕಡು] ಪಾಪಿಗಿನ್ನೇನು ಹದನಯ್ಯ,ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ ?/10 ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ ಬೆಲ್ಲವ ಕಂಡು, ಎಲ್ಲರೂ ಮೆಲಬಂದರು.ಬೆಲ್ಲಗಳಿದ್ದಡೆ ನಿಲಲೀಸದೆ ಎನ್ನ ಕಾಡುತ್ತಿದಾರೆಯೆಂದು,ಆ ಬೆಲ್ಲವನಲ್ಲಿಯೆ ನುಂಗಿದಡೆ, ಹಲ್ಲು ಮುರಿದವು.ಮೆಲಬಂದವರೆಲ್ಲ ಅಲ್ಲಿಯೆ ಬಯಲಾದರು.ನಾ ನಿಮ್ಮಲ್ಲಿ ಕೂಡಿ ಸುಖಿಯಾದೆನಯ್ಯಾ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ./11 ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ.ಮರ ಬೆಂದು ನಿಂದುರಿಯಿತ್ತು , ಮಣ್ಣು ಜರಿದು ಬಿದ್ದಿತ್ತು.ಉರಿ ಹೊಗೆ ನಂದಿತ್ತು , ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು.ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು .ಇದ ಕಂಡು, ನಾ ಬೆರಗಾಗಿ ನೋಡುತ್ತಿದ್ದೆನಯ್ಯಾ,ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ./12 ಅಲ್ಲಿಂದತ್ತ ಪಶ್ಚಿಮಚಕ್ರಕ್ಕೆ ಏಕದಳ ಪದ್ಮ,ಹವಣಿಸಬಾರದ ತೇಜ, ಏಕಾಕ್ಷರ,ಕುರುಹಿಡಬಾರದ ನಾದ, ಅಪ್ರದರ್ಶನ ವರ್ಣ,ನಿಭರ್ಿನ್ನ ಶಕ್ತಿ, ಸರ್ವಾತ್ಮನೆಂಬ ಜಂಗಮವೆ ಅಧಿದೇವತೆ.ಪರಿಪೂರ್ಣ ಜಂಗಮಲಿಂಗ, ಅಕ್ಷರಾಕ್ಷ[ರ]ತೀತ, ನಿಶ್ಶಬವಾಗಿಪ್ಪುದು.ಇಂತಪ್ಪ ಲಿಂಗಾಂಗವೆ ತಾನಾಗಿ, ಅವಿರಳ ಜಂಗಮಭಕ್ತಿಯ ಮಾಡಬಲ್ಲಾತನೆ,ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿಸಂಗನಬಸವಣ್ಣನಯ್ಯಾ, ಪ್ರಭುವೆ./16 ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು,ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು,ಎನ್ನರಿವು ನಿಮ್ಮ ಘನದೊಳಗೆ ಸವೆದು, ನಿಶ್ಚಲ ನಿಜೈಕ್ಯವಾಗಿ,ಬಸವಪ್ರಿಯ ಕೂಡಲಚೆನ್ನಸಂಗಯ್ಯಾ,ನೀ ನಾನೆಂಬುದೇನಾಯಿತ್ತೆಂದರಿಯೆನು./24 ಹಡಪದ ಅಪ್ಪಣ್ಣನವರ ಕೆಲ ವಚನಗಳು ಅಂಗ ಲಿಂಗವಾಯಿತ್ತೆಂಬಿರಿ, ಲಿಂಗ ಅಂಗವಾಯಿತ್ತೆಂಬಿರಿ.ಅಂಗ ಲಿಂಗ ಸಂಬಂಧ ಎಲ್ಲರಿಗೆ ಎಂತಾಯಿತ್ತು ಹೇಳಿರಣ್ಣಾ.ಅಂಗ ಲಿಂಗ ಸಂಬಂಧವಾದರೆ, ಗುರುವಿನಲ್ಲಿ ಗುಡ್ಡನಾಗಿರಬೇಕು,ಲಿಂಗದಲ್ಲಿ ನಿಷ್ಠನಾಗಿರಬೇಕು, ಜಂಗಮದಲ್ಲಿ ಅವಧಾನಿಯಾಗಿರಬೇಕು.ಇವ ಮೂರರಲ್ಲಿ ದೂರಾಗಿಪ್ಪರ ಎನಗೊಮ್ಮೆ ತೋರದಿರಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ ಕರವನರಿದಂಗೆ ಕಮಲದ ಹಂಗೇಕೊ?ಇರವನರಿದಂಗೆ ಪರದ ಹಂಗೇಕೊ ?ಪರವನರಿದಂಗೆ ಇರವದ ಹಂಗೇಕೊ?ಇಹ ಪರವೆಂಬ ಉಭಯವಳಿದ ಶರಣಂಗೆಮರ್ತ್ಯದ ನರರ ಹಂಗೇಕೊ ಹೇಳಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ? ಮನವನರಿದಂಗೆ ಮತದ ಹಂಗೇಕೊ ?ನಿತ್ಯವನರಿದಂಗೆ ತೀರ್ಥದ ಹಂಗೇಕೊ ?ಪರಮಾರ್ಥವನರಿದಂಗೆ ಪ್ರಸಾದದ ಹಂಗೇಕೊ ?ಜ್ಯೋತಿಯನರಿದಂಗೆ ಕತ್ತಲೆಯ ಹಂಗೇಕೊ?ಲೋಕವನರಿದಂಗೆ ವ್ಯಾಕುಲದ ಹಂಗೇಕೊ?ಈ ತೆರನನರಿದಂಗೆ ಮುಂದಾವ ಭೀತಿಯುಂಟು ಹೇಳಾ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?  ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪನವರ ವಚನಗಳಲ್ಲಿ ಸಾಮ್ಯತೆಯಿದೆ . ಬಹುತೇಕ ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ತಾತ್ವಿಕ ಚಿಂತೆಗಳಲ್ಲಿ ಸಾಮ್ಯತೆ ಎದ್ದು ಕಾಣುತ್ತದೆ.  ಹೀಗಾಗಿ ಇವರಿಬ್ಬರೂ ಒಬ್ಬರೇ ಎನ್ನುವ ತೀರ್ಮಾನಕ್ಕೆ ಬರಲಾಗುವುದು.   ಹಡಪದ ಅಪ್ಪಣ್ಣ ಕ್ಷೌರಿಕ ವೃತ್ತಿಯವನೇ  ? ಹೀಗಾಗಿ ಅಡಪ  ಜನಬಳಕೆಯಲ್ಲಿ ಹಡಪ ಆಗಿದೆ ಅಡಪವನ್ನು ಇಟ್ಟುಕೊಂಡವ  ಅಡಪದವ ಅಥವಾ ಹಡಪದ  ಎಂದು ಬಂದಿದೆ.ಕಲ್ಯಾಣದ  ಚಾಲುಕ್ಯರ ಕಳಚೂರ್ಯರ ರಾಜ್ಯದ ವಿಸ್ತಾರ ಎಷ್ಟಿತ್ತಂದರೆ ಛಪ್ಪನ್ನೈವತ್ತಾರು ರಾಜ್ಯಗಳಿದ್ದವು ಎಂದು ಬಸವಣ್ಣನವರ ವಚನವೊಂದರಲ್ಲಿ ಕಾಣಬಹುದು. ಮಹಾರಾಷ್ಟ್ರದ ಮಂಗಳವೆಡೆ, ಉದ್ಗೀರ, ಲಾತೂರ, ಸೋಲಾಪುರ,  ತುಳಜಾಪುರ,  ಪಂಡರಾಪುರ ಜತ್ತ ಅಕ್ಕಲಕೋಟ ಮುಂತಾದ ಪ್ರದೇಶಗಳ  ಭೂ ಪ್ರದೇಶವು ಆಂಧ್ರ ವೆಂಗಿಪಳು ಕರ್ನಾಟಕ ಮುಂತಾದ ಪ್ರದೇಶಗಳನ್ನು  ಮುಂತಾದ ಕಡೆಗಳಲ್ಲಿ ಚಾಲುಕ್ಯ ರಾಜ್ಯರ ಆಡಳಿತದ ಶಿಲ್ಪ ಕಲೆ ಶಾಸನಗಳು ಮತ್ತು ಗುಡಿ ಗೋಪುರಗಳ ಶೈಲಿ ಚಾಲುಕ್ಯರದ್ದಾಗಿತ್ತು.       ಬಿಜ್ಜಳನೂ ಕ್ಷೌರಿಕ ಕುಲದ ಶೈವನೆಂದು ಕೆಲ ಸಂಶೋಧಕರು ತಮ್ಮ ಅಭಿಮತ ವ್ಯಕ್ತ ಪಡಿಸಿದ್ದಾರೆ. ಹಡಪದ ಅಪ್ಪಣ್ಣ ಅವನ ಹೆಂಡತಿ ಮುಸುಬಿನಾಳ ಹೂಗಾರ ನಾಗಪ್ಪನ ಮಗಳು ಲಿಂಗಮ್ಮ ಎಂದು ತಿಳಿದು ಬರುತ್ತದೆ.    ಬಸವಣ್ಣ ಬಿಜ್ಜಳನ ಪ್ರಧಾನಿ ಅರ್ಥ ಸಚಿವ ದಂಡನಾಯಕನಾಗಿದ್ದನು ಇವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣ ಕಲ್ಯಾಣದಲ್ಲಿ ಕ್ಷೌರಿಕ ವೃತ್ತಿಯನ್ನು ಕೈಗೊಂಡಿದ್ದನು ಎಂದೆನ್ನುವುದು ನನ್ನ ದೃಷ್ಟಿಯಲ್ಲಿ ಸರಿ ಅನಿಸುವುದಿಲ್ಲ. ರಾಜ್ಯಾಡಳಿತ ದಾಖಲೆಗಳು ಕಾಗದ ಪಾತ್ರಗಳು ಬೇರೆ ಬೇರೆ ರಾಜರ ಸಾಮಂತರ ಒಲೆಗಳು ಮುಂತಾದ ಅನೇಕ ಮಹತ್ತರ ದಾಖಲೆಗಳನ್ನು ಸಂಗ್ರಹಿಸಿ ಇಡಲು ಕಟ್ಟಿಗೆಯಿಂದ ಮಾಡಿದೆ ಒಂದು ಡಬ್ಬಿ ಅದಕ್ಕೆ ಈಗಲೂ ಅಡಪ ಎಂದು ಉತ್ತರ ಕರ್ನಾಟಕದಲ್ಲಿ ಕರೆಯುತ್ತಾರೆ.  ಮಹಾ ಮನೆಯಲ್ಲಿ ಪ್ರಸಾದವಾದ ಮೇಲೆ  ತಾಂಬೂಲ ವಿತರಿಸುವ ರೇಚಣ್ಣನೂ ಅಡಪವನ್ನು ಹೊಂದಿದ್ದನ್ನು . ಅಡಪವನ್ನು ಹೊಂದಿದವ ಅಡಪದವ ಅಥವಾ ಹಡಪದ ಎಂಬ ತಪ್ಪು ಉಚ್ಚಾರಣೆಯಿಂದಾಗಿ ಹಡಪದ ಎಂದು ಹೆಸರು ಬಂತು.  ಕ್ಷೌರಿಕ ಕಾರ್ಯವನ್ನು ಮಾಡುವವರು ಈಗಲೂ ಕೂಡ ಹಳ್ಳಿಯಲ್ಲಿ ಅಡಪವನ್ನು ಇಟ್ಟುಕೊಂಡು ಮನೆ ಮನೆಗೆ ಹೋಗಿ ಕ್ಷೌರಿಕ ಸೇವೆ ಮಾಡುತ್ತಾರೆ. ಹಡಪದ ಅಪ್ಪಣ್ಣನವರು ಕ್ಷೌರಿಕ ಕುಲದಲ್ಲಿ ಹುಟ್ಟಿದರೂ ಸಹಿತ ಅವರು ಪ್ರಧಾನಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ಮಾಡಿದರು ಎಂದು ತಿಳಿದು ಬರುತ್ತದೆ.     ಚೆನ್ನಬಸವಣ್ಣನವರ ಮೇಲೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ  ಪ್ರಭಾವ  ಬಸವಣ್ಣನವರು ಬಾಗೇವಾಡಿ ಅಗ್ರಹಾರವನ್ನು ಬಿಟ್ಟು ಕೂಡಲ ಸಂಗಮಕ್ಕೆ ಹೋಗುವಾಗ ಅಕ್ಕನಾಗಮ್ಮ ಮತ್ತು ಅವಳ ಪತಿ ಶಿವಸ್ವಾಮಿಗಳ ಜೊತೆಗೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರೂ ಹೋಗಿದ್ದರು. ಹಡಪದ ಅಪ್ಪಣ್ಣ ಕೂದಲ ಸಂಗಮ್ಮದಲ್ಲಿ ಮಾದಲಾಂಬಿಕೆಯ ತವರು ಮನೆಯಲ್ಲಿ ಕೃಷಿ ಮಾಡುತ್ತಿರಬಹುದು ಅಥವಾ ಬಸವಣ್ಣನವರು ತಮ್ಮ ಶಿಕ್ಷಣವನ್ನು  12 ವರುಷ  ಕೂಡಲ ಸಂಗಮದಲ್ಲಿ ಮಾಡುತ್ತಿರುವಾಗ  ಕ್ಷೌರಿಕ ವೃತ್ತಿಯನ್ನು ಮಾಡುತ್ತಿರಬಹುದು. ಬಲದೇವರ ಆಮಂತ್ರಣದ ಮೇರೆಗೆ ಬಸವಣ್ಣ ಅಕ್ಕನಾಗಮ್ಮ ಬಾಲಕ ಚೆನ್ನಬಸವಣ್ಣ ಮತ್ತು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಮಂಗಳವೇಡೆಗೆ ಹೋದರು.          ಹಡಪದ  ಅಪ್ಪಣ್ಣ ಮತ್ತು ಲಿಂಗಮ್ಮ

Read Post »

ಇತರೆ, ಜೀವನ

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್  

ವಿಶೇಷ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್   “ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ” *”ವಿಧಿಯೇ ನಿನಷ್ಟು ಕ್ರೂರಿ, ಮುಂದೆ ಕನಸುಗಳನ್ನು ತೋರಿಸಿ ಹಿಂದೆ ಇರಿಯುವೆ ಚೂರಿ”* ಎಂಬ ಮಾತು ಕೇಳಿದಾಗ, ಅದು ಕೇವಲ ಒಂದು ಸಾಲು ಎಂದು ಅನಿಸುವುದಿಲ್ಲ. ಜೀವನದಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡವರ ಹೃದಯದ ಮೌನದ ಕಿರುಚಾಟದಂತೆ ಭಾಸವಾಗುತ್ತದೆ. ಆದರೆ ಜೀವನದ ಸತ್ಯ ಇನ್ನೂ ಆಳವಾಗಿದೆ. ವಿಧಿ ಕೆಲವೊಮ್ಮೆ ನಮ್ಮ ಕನಸುಗಳನ್ನು ಮುರಿಯಬಹುದು; ಆದರೆ ನಮ್ಮೊಳಗಿನ ಧೈರ್ಯವನ್ನು ಮುರಿಯಲು ಸಾಧ್ಯವಿಲ್ಲ. ಒಂದು ರೈತನನ್ನು ಕಲ್ಪಿಸಿಕೊಳ್ಳಿ. ಅವನು ಸಾಲ ಮಾಡಿ ಉತ್ತಮ ಬೀಜ ಖರೀದಿಸುತ್ತಾನೆ. ಹೊಲ ಉಳುಮೆ ಮಾಡುತ್ತಾನೆ. ಮಳೆಯ ನಿರೀಕ್ಷೆಯಲ್ಲಿ ಪ್ರತಿದಿನ ಆಕಾಶದತ್ತ ನೋಡುತ್ತಾನೆ. ಆದರೆ ಒಂದು ವರ್ಷ ಬರಗಾಲ ಬರುತ್ತದೆ. ಬೆಳೆ ಹಾಳಾಗುತ್ತದೆ. ಆ ದಿನ ಅವನ ಕನಸುಗಳೂ ಒಣಗಿದಂತೆ ಕಾಣುತ್ತದೆ. ಆದರೂ ಮುಂದಿನ ವರ್ಷ ಮತ್ತೆ ಅದೇ ಹೊಲಕ್ಕೆ ಬೀಜ ಬಿತ್ತುತ್ತಾನೆ. ಏಕೆ? ಏಕೆಂದರೆ ಆಶೆಯನ್ನು ಕಳೆದುಕೊಂಡ ರೈತ ಎಂದಿಗೂ ಬೆಳೆಯನ್ನು ಕಾಣಲಾರನು. ಇದೇ ಬದುಕಿನ ಮೊದಲ ಪಾಠ. ಒಬ್ಬ ವಿದ್ಯಾರ್ಥಿ ವರ್ಷಪೂರ್ತಿ ಶ್ರಮಿಸಿ ಪರೀಕ್ಷೆ ಬರೆಯುತ್ತಾನೆ. ಆದರೆ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲ. ಕೆಲವರು ಅಲ್ಲಿ ನಿಲ್ಲುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ತಪ್ಪುಗಳನ್ನು ಅರಿತು ಮತ್ತೊಮ್ಮೆ ಪ್ರಯತ್ನಿಸುತ್ತಾರೆ. ಎರಡನೇ ಪ್ರಯತ್ನದಲ್ಲೇ ಯಶಸ್ಸನ್ನು ಗಳಿಸುತ್ತಾರೆ. ಸೋಲೇ ಅವರ ಅಂತ್ಯವಾಗಿದ್ದರೆ, ಆ ಯಶಸ್ಸು ಹುಟ್ಟುತ್ತಿರಲಿಲ್ಲ. ಒಂದು ಮಣ್ಣಿನ ಕುಂಭವನ್ನು ನೋಡಿ. ಅದು ಸುಂದರವಾಗುವುದಕ್ಕೆ ಮೊದಲು ಕುಂಬಾರನ ಕೈಯಲ್ಲಿ ಅನೇಕ ಬಾರಿ ತಿರುಗುತ್ತದೆ. ನಂತರ ಬೆಂಕಿಯ ಉರಿಯನ್ನು ಸಹಿಸುತ್ತದೆ. ಆ ಕಷ್ಟದ ನಂತರವೇ ಅದು ಎಲ್ಲರ ಮನೆಗೆ ಅಲಂಕಾರವಾಗುತ್ತದೆ. ಕಷ್ಟವನ್ನು ಸಹಿಸದ ಮಣ್ಣು ಎಂದಿಗೂ ಕುಂಭವಾಗುವುದಿಲ್ಲ. ಒಂದು ಮರವನ್ನು ಕಡಿಯಬಹುದು. ಅದರ ಕೊಂಬೆಗಳು ಮುರಿಯಬಹುದು. ಎಲೆಗಳು ಉದುರಬಹುದು. ಆದರೆ ಬೇರು ಜೀವಂತವಾಗಿದ್ದರೆ ಮತ್ತೆ ಚಿಗುರುತ್ತದೆ. ಹಾಗೆಯೇ ಮನುಷ್ಯನ ಮನಸ್ಸಿನಲ್ಲಿರುವ ಭರವಸೆ ಜೀವಂತವಾಗಿದ್ದರೆ, ಜೀವನ ಮತ್ತೆ ಅರಳುತ್ತದೆ. ಇಂದಿನ ಸಮಾಜದಲ್ಲಿ ನಾವು ಒಂದು ಅಪಾಯಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಜನರು ಮೊಬೈಲ್‌ನಲ್ಲಿ ಸಾವಿರಾರು ಸ್ನೇಹಿತರನ್ನು ಹೊಂದಿದ್ದಾರೆ; ಆದರೆ ಮನಸ್ಸು ಬಿಚ್ಚಿ ಮಾತನಾಡಲು ಒಬ್ಬ ಸ್ನೇಹಿತನೂ ಇಲ್ಲ. ದೊಡ್ಡ ಮನೆಗಳಿವೆ; ಆದರೆ ಮನೆಯಲ್ಲಿ ಮಾತುಗಳಿಲ್ಲ. ಹಣವಿದೆ; ಆದರೆ ನೆಮ್ಮದಿ ಇಲ್ಲ. ಶಿಕ್ಷಣವಿದೆ; ಆದರೆ ಮಾನವೀಯತೆ ಕಡಿಮೆಯಾಗುತ್ತಿದೆ. ಒಮ್ಮೆ ಒಂದು ವೃದ್ಧ ದಂಪತಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ವೈದ್ಯರು ಔಷಧಿ ಕೊಟ್ಟರು. ಆದರೆ ಅವರನ್ನು ಹೆಚ್ಚು ಸಮಾಧಾನಪಡಿಸಿದ್ದು ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯ ಒಂದು ಮಾತು—”ಚಿಂತಿಸಬೇಡಿ, ಎಲ್ಲವೂ ಒಳ್ಳೆಯದಾಗುತ್ತದೆ.” ಆ ಮಾತು ಔಷಧಿಗಿಂತ ಹೆಚ್ಚು ಧೈರ್ಯ ನೀಡಿತು. ಇದರಿಂದ ತಿಳಿಯುವುದು, ಕೆಲವೊಮ್ಮೆ ಮಾತುಗಳೇ ಔಷಧಿಯಾಗುತ್ತವೆ. ನಾವು ಮಕ್ಕಳಿಗೆ ಉತ್ತಮ ಶಾಲೆ ಕೊಡುತ್ತೇವೆ. ಆದರೆ ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಹೃದಯವನ್ನು ಕಲಿಸುತ್ತೇವೆಯೇ? ಸ್ಪರ್ಧೆಯಲ್ಲಿ ಗೆಲ್ಲಲು ಹೇಳುತ್ತೇವೆ. ಆದರೆ ಸೋತವರನ್ನು ಎಬ್ಬಿಸಲು ಹೇಳುತ್ತೇವೆಯೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕ, ಶಿಕ್ಷಕ ಮತ್ತು ಸಮಾಜದ ಮುಂದೆ ನಿಲ್ಲಬೇಕು. ಒಂದು ದೀಪವನ್ನು ಗಮನಿಸಿ. ಅದು ತನ್ನನ್ನು ತಾನೇ ಸುಟ್ಟುಕೊಂಡು ಇತರರಿಗೆ ಬೆಳಕು ನೀಡುತ್ತದೆ. ಒಂದು ನದಿಯನ್ನು ನೋಡಿ. ಅದು ತನ್ನ ನೀರನ್ನು ತಾನೇ ಕುಡಿಯುವುದಿಲ್ಲ; ಬೇರೆಯವರ ದಾಹ ನೀಗಿಸುತ್ತದೆ. ಒಂದು ಮರ ತನ್ನ ಹಣ್ಣುಗಳನ್ನು ತಾನೇ ತಿನ್ನುವುದಿಲ್ಲ; ಇತರರಿಗೆ ನೀಡುತ್ತದೆ. ಪ್ರಕೃತಿಯ ಪ್ರತಿಯೊಂದು ಅಂಶವೂ ತ್ಯಾಗವನ್ನು ಕಲಿಸುತ್ತದೆ. ಮನುಷ್ಯ ಮಾತ್ರ ಸ್ವಾರ್ಥವನ್ನು ಕಲಿಯಬಾರದು. ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳು ಸುಖದಲ್ಲಿ ಬೆಳೆದವರಲ್ಲ. ಅನೇಕ ಕಷ್ಟಗಳನ್ನು ಎದುರಿಸಿ ಸಮಾಜಕ್ಕೆ ದಾರಿದೀಪರಾದವರು. ಆದ್ದರಿಂದ ಕಷ್ಟ ಬಂದಾಗ “ಏಕೆ ನನಗೆ?” ಎಂದು ಕೇಳುವುದಕ್ಕಿಂತ, “ಇದರಿಂದ ನಾನು ಏನು ಕಲಿಯಬಹುದು?” ಎಂದು ಕೇಳುವುದು ಬದುಕನ್ನು ಬದಲಾಯಿಸುತ್ತದೆ. *ಕೊನೆಯಲ್ಲಿ ಒಂದು ಸತ್ಯ—* ವಿಧಿ ನಿಮ್ಮ ದಾರಿಯನ್ನು ತಿರುಗಿಸಬಹುದು.ಸಮಯ ನಿಮ್ಮನ್ನು ಪರೀಕ್ಷಿಸಬಹುದು.ಜನರು ನಿಮ್ಮನ್ನು ಅರ್ಥಮಾಡಿಕೊಳ್ಳದೆ ಇರಬಹುದು. *ಆದರೆ ನಿಮ್ಮ ಧೈರ್ಯ, ನಿಮ್ಮ ಪ್ರಾಮಾಣಿಕತೆ ಮತ್ತು ನಿಮ್ಮ ಮಾನವೀಯತೆ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.* *ಮನುಷ್ಯನ ಜೀವನದ ನಿಜವಾದ ಯಶಸ್ಸು ಅವನು ಎಷ್ಟು ಸಂಪಾದಿಸಿದನೆಂಬುದಲ್ಲ; ಎಷ್ಟು ಹೃದಯಗಳಿಗೆ ಧೈರ್ಯ ತುಂಬಿದನೆಂಬುದರಲ್ಲಿ ಇದೆ.* ಕೆ.ಎಂ. ಕಾವ್ಯ ಪ್ರಸಾದ್    

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್   Read Post »

ಕಾವ್ಯಯಾನ

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ”

ಕಾವ್ಯಸಂಗಾತಿ ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” ಅಮಾಯಕರ ಜೀವ ಹಿಂಡುವ ಅಧಿಕಾರಕೊಡಲಿಲ್ಲ ಯಾರಿಗೂ ಪ್ರೀತಿಯ ಸಹಕಾರಮೆರೆದರು ತೋರಿಸಿ ಹಣದ ಅಹಂಕಾರಮರೆತರು ಸೊಕ್ಕಿನಲಿ ಪ್ರೇಮದ ಮಮಕಾರ ಕೊನೆಗಾಲದ ನೋವ ನೀ ಅನುಭವಿಸುವೆಹುಟ್ಟು ಸಂಭ್ರಮ ಸಾವು ನಿಗೂಢ ಅರಿವೆಸಾವಿನಲಿ ಕಾಯುವುದಿಲ್ಲ ನಿನ್ನ ಹಣವೇಒಂದು ದಿನ ಶವವಾಗಿ ಮಣ್ಣಲ್ಲಿ ಕೊಳೆಯುವೆ ಹೊತ್ತೋಯ್ಯುವುದಿಲ್ಲ ಮರಣದ ಕೊನೆಯಲ್ಲಿಬೆಳಕಾಗು ದೀನ ದಲಿತರ ಸೇವೆಯಲಿಕಾಯಕದಿ ಕೈಲಾಸ ನೋಡುವೆ ನೀನಿಲ್ಲಿದುರಹಂಕಾರದಿ ಮಣ್ಣು ಲೋಕದ ಬಯಲಲಿ ದುರಾಸೆಯ ಬದುಕಿನಲಿ ಮಾನವನ ಜೀವನಅತಿ ಆಸೆಯಲಿ ಮಾಡದಿರು ಮೋಸತನಕಾಣಬೇಕಿದೆ ನೂತನ ಜೀವನ ಪಾವನಲಂಚಾವತಾರದ ನೀಚ ರಕ್ಕಸರಿಗೆ ಈ ಕವನ ಡಾ.ಲತಾ ಎ. ಆರ್ ಬಾಳೆಹೊನ್ನೂರು

ಡಾ.ಲತಾ ಎ. ಆರ್ ಬಾಳೆಹೊನ್ನೂರು “ಲಂಚಾವತಾರ” Read Post »

ಪುಸ್ತಕ ಸಂಗಾತಿ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ

ಪುಸ್ತಕ ಸಂಗಾತಿ ಶೋಭಾ ನಾಗಭೂಷಣ ಎಂ.ಬಿ.ಸಂತೋಷ್‌ ಅವರ ಕೃತಿ, “ವಚನ ಸುಧೆ”ಗೊಂದು ಮುನ್ನುಡಿ,  ಪ್ರಥಮವಾಗಿ ತಮ್ಮ ನಲವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ತಮ್ಮ ಏಳನೇ ಆಧುನಿಕ ವಚನ ಸಂಕಲನವಾದ ‘ವಚನ ಸುಧೆ’ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವ  ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರಿಗೂ ಹಾಗೂ ಗುರುಮಾತೆಯಾದ ಶ್ರೀಮತಿ ರೇಖಾ ಸಂತೋಷ್ ಅವರಿಗೂ ವಿವಾಹ ವಾರ್ಷಿಕ ಮಹೋತ್ಸವಕ್ಕೆ ಶುಭಾಷಯಗಳನ್ನು ಕೋರುತ್ತೇನೆ.  ತಮ್ಮ ಈ ವಚನ ಸುಧೆ ಕೃತಿಗೆ ಮುನ್ನುಡಿ ಬರೆಯಬೇಕೆಂದು ಸೂಚಿಸಿ ಗುರುಗಳು ನನ್ನ ಸಾಹಿತ್ಯ ಕೃಷಿಗೆ ಆಶೀರ್ವದಿಸಿದ್ದಾರೆ. ಈ ವಚನ ಸುಧೆಗೆ ಮುನ್ನುಡಿಯನ್ನು ಬರೆಯುವುದು ನನಗೆ ಗರ್ವ ಮತ್ತು ಗೌರವ ಎರಡನ್ನೂ ಸಹ ತಂದುಕೊಟ್ಟಿದೆ. ನಾನು ಅವರಿಗೆ ಸದಾ ಕೃತಜ್ಞಳಾಗಿದ್ದೇನೆ.  ಮನುಜನ  ಜೀವನವು ಅನೇಕ ಅನುಭವಗಳ ಅಲೆಯಲ್ಲಿ ತೇಲುವ ಒಂದು ನಿರಂತರ ಪಯಣ.  ಈ ಪಯಣದಲ್ಲಿ ಕೆಲವೊಮ್ಮೆ ಸಂತೋಷದ ಹೊಳೆ ಹರಿದರೆ, ಮತ್ತೊಮ್ಮೆ ಸಂಕಟಗಳ ನೆರಳು ಆವರಿಸುತ್ತದೆ. ಇಂತಹ ಬದುಕಿನ ತಿರುವುಗಳಲ್ಲಿ ದಾರಿತೋರುವ ದೀಪವಾಗಿ, ಮನಸ್ಸಿನ ಮೌನಕ್ಕೆ ಮಾತಾಗುವ ಚಿಂತನೆಯಾಗಿ ಮೌಲ್ಯಗಳ ಮಣ್ಣಿನಲ್ಲಿ ಅರಳುವ ಜ್ಞಾನಪುಷ್ಪವಾಗಿ ನಮ್ಮೊಂದಿಗೆ ಸಾಗುವವು ವಚನಗಳು. ವಚನವೆಂದರೆ ಕೇವಲ ಪದಗಳ ಜೋಡಣೆಯಲ್ಲ; ಅದು ಬದುಕಿನ ಸತ್ಯಕ್ಕೆ ಸಾಕ್ಷಿಯಾದ ಅನುಭವದ ನಾದ, ಅಂತರಂಗದ ಅರಿವಿಗೆ ದಾರಿಯಾದ ಚಿಂತನೆಯ ಚಿಲುಮೆ.  ಕಾಲ ಬದಲಾಗುತ್ತಿದೆ. ಬದುಕಿನ ವೇಗ ಹೆಚ್ಚುತ್ತಿದೆ. ತಂತ್ರಜ್ಞಾನದ ಬೆಳಕಿನಲ್ಲಿ ಮನುಷ್ಯನು ಹೊರಜಗತ್ತನ್ನು ಗೆಲ್ಲುವ ಹಾದಿಯಲ್ಲಿ ಸಾಗುತ್ತಿದ್ದರೂ, ತನ್ನೊಳಗಿನ ಮನುಷ್ಯತ್ವವನ್ನು ಅರಸುವ ಪ್ರಯತ್ನ ಕೆಲವೊಮ್ಮೆ ಮಸುಕಾಗುತ್ತಿದೆ. ಸಂಬಂಧಗಳು ಯಾಂತ್ರಿಕವಾಗುತ್ತಿರುವ, ಮೌಲ್ಯಗಳು ಪ್ರಶ್ನಿಸಲ್ಪಡುತ್ತಿರುವ, ಆತ್ಮಸಂತೋಷವನ್ನು ಹುಡುಕಾಡುತ್ತಿರುವ ಸಂದರ್ಭದಲ್ಲಿ ವಚನಸಾಹಿತ್ಯದ ಪ್ರಸ್ತುತತೆ ಇನ್ನಷ್ಟು ಗಾಢವಾಗುತ್ತವೆ. ಏಕೆಂದರೆ ವಚನಗಳು ಕೇವಲ ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿ ಬೋಧಿಸಲ್ಪಟ್ಟವುಗಳಲ್ಲ, ಅವು ಸಮಾನತೆ, ಮಾನವೀಯತೆ, ಸತ್ಯನಿಷ್ಠೆ ಹಾಗೂ ಬದುಕಿನ ಶುದ್ಧತೆಗೆ ಕರೆ ನೀಡುವ ಆತ್ಮಧ್ವನಿಗಳಾಗಿವೆ.   ಪೂಜ್ಯ ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರ ಏಳನೇ ಆಧುನಿಕ ವಚನಸಂಕಲನವಾದ ಈ ವಚನ ಸುಧೆ ಕೃತಿಯು, ಅಮೃತಧಾರೆಯನ್ನು ಇಂದಿನ ಓದುಗರ ಮನಗಳಿಗೆ ತಲುಪಿಸುವ ವಿನಮ್ರ ಸಾಹಿತ್ಯರತ್ನವಾಗಿದೆ. ಈ ಕೃತಿಯಲ್ಲಿ ಅಡಕವಾಗಿರುವ ಪ್ರತಿಯೊಂದು ವಚನವೂ ಜೀವನದ ಯಾವುದೋ ಒಂದು ಮೌಲ್ಯವನ್ನು ಅನಾವರಣಗೊಳಿಸುವ ಕನ್ನಡಿಯಾಗಿದೆ. ಕೆಲವೊಮ್ಮೆ ಅವು ಪ್ರಶ್ನಿಸುತ್ತವೆ, ಕೆಲವೊಮ್ಮೆ ಎಚ್ಚರಿಸುತ್ತವೆ, ಕೆಲವೊಮ್ಮೆ ಕಿವಿಮಾತನ್ನು ಹೇಳುತ್ತಾ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಮಾತುಗಳಾಗುತ್ತವೆ. ಜೀವನದ ಗೊಂದಲಗಳ ನಡುವೆ ಅರ್ಥಪೂರ್ಣವಾದ ಬದುಕಿನ ದಿಕ್ಕನ್ನು ತೋರಿಸುವ ಶಕ್ತಿಯನ್ನು ವಚನಗಳು ಹೊಂದಿವೆ.    *ವಚನಸುಧೆ* – ‘ಸುಧೆ’ ಎಂದರೆ ಅಮೃತ. ಅಮೃತವು ನಿರ್ಜೀವದ ಸ್ಥಿತಿಗೆ ಜೀವಂತಿಕೆಯನ್ನು ನೀಡುವಂತಹದ್ದು. ಹಾಗೆಯೇ ಈ ವಚನ ಸುಧೆಯು ಮನಸ್ಸಿಗೆ ಅಮರತ್ವವನ್ನು ನೀಡುವಂತಹ ಅದೆಷ್ಟೋ ಜೀವನದ ಸತ್ಯಗಳನ್ನು ತಿಳಿಸುತ್ತಾ ಬದುಕನ್ನು ಮುನ್ನಡೆಸಲು ದೀವಟಿಗೆಯಾಗಿ ನಿಲ್ಲುತ್ತದೆ. ಬುದ್ಧಿ, ಮಾತು, ಹೆಣ್ಣು, ತಾಯಿ, ಸಂಸಾರ, ದಾಂಪತ್ಯ, ಮಾನವ ಸಂಬಂಧ, ಮೂಢನಂಬಿಕೆ ಹೀಗೆ ಇನ್ನೂ ಹಲವು ವಿಷಯಗಳ ಹಾಗೂ ಜೀವನದ ಸತ್ಯಗಳನ್ನು ತಿಳಿಸುವ ವಚನಗಳು ಈ ವಚನ ಸುಧೆಯಲ್ಲಿ ಹನಿ ಹನಿಯಾಗಿ ಕೂಡಿವೆ. ‘ಜಗದೀಶ’ ಎನ್ನುವ ಅಂಕಿತದೊಂದಿಗೆ ಸಾವಿರಾರು ವಚನಗಳನ್ನು ರಚಿಸಿರುವ ಶ್ರೀ ಎಂ ಬಿ ಸಂತೋಷ್ ಅವರು ತಮ್ಮ ಅಮೂಲ್ಯವಾದ ವಚನಗಳಿಂದ ಅದೆಷ್ಟೋ ಶರಣ ಸಹೃದಯರಿಗೆ ಸುಧೆಯನ್ನು ಉಣಬಡಿಸಿದ್ದಾರೆ. ಬಲವಂತದಿಂದ ಪಡೆದದ್ದುಬಹುಕಾಲ ಉಳಿಯುವುದಿಲ್ಲಇನ್ನೊಬ್ಬರ ಮನವ ನೋಯಿಸಿ ಪಡೆದದ್ದುನಮ್ಮನ್ನು ಹಾಳು ಮಾಡದೆ ಬಿಡುವುದಿಲ್ಲಕಷ್ಟಪಟ್ಟು ದುಡಿದದ್ದು ಎಂದಿಗೂ  ನಮ್ಮನ್ನು ಬಿಟ್ಟು ಹೋಗುವುದಿಲ್ಲ-ಜಗದೀಶ  ಈ ವಚನವು ದುಡಿಮೆಯ ಮಹತ್ವವನ್ನು ತಿಳಿಸುತ್ತದೆ. ಹತ್ತನೆಯ ಶತಮಾನದಿಂದಲೂ ಬಸವಣ್ಣನವರಾದಿಯಾಗಿ ದುಡಿಮೆಯ ಅಂದರೆ ಕಾಯಕದ ಮಹತ್ವವನ್ನು ಸಾರುತ್ತಲೇ ಬಂದಿದ್ದಾರೆ. ಕಾಯಕದ ಮೂಲಕವೇ ನಾವು ಕೈಲಾಸವನ್ನು ಕಾಣಬೆಕು ಎನ್ನುವ ಆದ್ಯ ವಚನಕಾರರ ಸಂದೇಶವನ್ನು ತಿಳಿಸುವ ಮತ್ತೊಂದು ವಚನ ಇಲ್ಲಿ ಮೂಡಿಬಂದಿದೆ. ನಾವು ಯಾವಾಗಲೂ ದುಡಿದು ತಿನ್ನಬೇಕೇ ಹೊರತು ಮತ್ತೊಬ್ಬರಿಂದ ಬಲವಂತವಾಗಿ ಕಿತ್ತು ತಿನ್ನುವ ಬುದ್ಧಿಯನ್ನು ಬಿಡಬೇಕು. ‘ಪರರ ಸ್ವತ್ತು ಪಾಶಾಣ’ ಎನ್ನುವುದನ್ನು ಅರಿಯಬೇಕು. ಬೇರೆಯವರನ್ನು ನೋಯಿಸಿ ಅವರ ಸ್ವತ್ತನ್ನು ಕಿತ್ತು ಅನುಭವಿಸಿದರೆ ಅವರ ನಿಟ್ಟುಸಿರು ನಮ್ಮನ್ನು ತಟ್ಟಿಯೇ ತೀರುತ್ತದೆ. ಈ ಸತ್ಯವು ಇಂದಿನ ಜನಮನಕ್ಕೆ ತಿಳಿದಿದ್ದರೂ ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೇ ಪಾಪ ಪುಣ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ತಾನು ಬದುಕುವುದಕ್ಕಾಗಿ ಸ್ವಾರ್ಥತೆಯಿಂದ ಕೊಲೆ, ಸುಲಿಗೆ, ದರೋಡೆಗಳನ್ನು ಮಾಡುತ್ತಿರುವುದನ್ನು ನಾವು ಕಾಣಬಹುದು. ಅಂತಹ ಮನಸ್ಥಿತಿಗೆ ಈ ವಚನ ಕಿವಿ ಹಿಂಡಿ ಬುದ್ಧಿ ಹೇಳುತ್ತದೆ. ಆದಿ ಮತ್ತು ಅಂತ್ಯನೀನೇ ಆಗಿರುವಾಗಹೇ ದೇವ; ನನ್ನದೇನಿದೆನೀ ತೋರಿದ ದಾರಿಯಲ್ಲಿನಡೆಯುವುದಷ್ಟೇ ನನ್ನ ಕೆಲಸವಾಗಿದೆ – ಜಗದೀಶ   ಇಲ್ಲಿ ಮನುಷ್ಯ ತಾನು ಏನೇ ಸಾಧಿಸಿದ್ದರೂ ಸಹ ಸೃಷ್ಟಿ ನಿಯಮದಡಿ ಆ ದೈವ ಮಹಿಮೆಯ ಮುಂದೆ ಅವನು ಅಲ್ಪನೇ. ಜೀವನದ ಆದಿ ಅಂತ್ಯಗಳನ್ನು ನಿರ್ಧರಿಸುವವನು ಅವನೇ. ಹುಟ್ಟು ಉಚಿತ ಸಾವು ಖಚಿತ ಎನ್ನುವಂತೆ; ಹುಟ್ಟು ಎನ್ನುವ ಪ್ರಕೃತಿಯ ನಿಯಮವನ್ನು ಮೀರಿ ತನಗೆ ಬೇಕಾದ ಹಾಗೆ ನಿರ್ಧರಿಸಲು ಸಾಧ್ಯವೇ ಇಲ್ಲ. ಈಗ ಐವಿಎಫ್‌ನಂತಹ ತಂತ್ರಜ್ಞಾನದ ಮೂಲಕ ಅಥವಾ ಟೆಸ್ಟ್ ಟ್ಯೂಬ್ ಬೇಬಿ ಎನ್ನುವ ಪರಿಕಲ್ಪನೆ ಇದ್ದರೂ ಸಹ ಅದೂ ಕೂಡ ದೈವ ಕೃಪೆಯ ಜೀವಾಣುಗಳಿಂದ ಸೃಷ್ಟಿಸಲು ಸಾಧ್ಯವೇ ಹೊರತು ಜೀವಾಣುಗಳನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲ. ಹಾಗೆಯೇ ಸುದೀರ್ಘ ಆಯಸ್ಸಿಗಾಗಿ ಮನುಷ್ಯ ತನ್ನ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳಲು ಏನೇ ಕಸರತ್ತು ಮಾಡಿದರೂ, ಇತ್ತೀಚಿನ ಹಲವಾರು ಅಕಾಲಿಕ ಮರಣಗಳ ಉದಾಹರಣೆಗಳನ್ನು ನಾವು ಕಾಣಬಹುದು. ಹೀಗಿರುವಾಗ ಸಿಕ್ಕಿರುವ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಾ ದೇವರು ತೋರಿದ ಹಾದಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಾಗುವುದಷ್ಟೇ ನಮ್ಮ ಕಾಯಕವಾಗಬೇಕು ಎನ್ನುವ ಅಪೂರ್ವವಾದ ಸಂದೇಶವನ್ನು ತಿಳಿಸುವ ಈ ವಚನವು ಸಕಾಲಿಕವಾಗಿದೆ. ಸಂಬಂಧಗಳು ಹೇಗಿರಬೇಕೆಂದರೆಶ್ರೀಗಂಧದಂತೆ ಸುವಾಸನೆ ಬೀರಬೇಕುಸಂಬಂಧಗಳನ್ನು ಮುರಿಯುವ ಪ್ರಯತ್ನಯಾರೇ ಮಾಡಿದರೂ ಸುವಾಸನೆ ಮಾತ್ರಹಾಗೇ ಉಳಿಯಬೇಕು- ಜಗದೀಶ  ಇತ್ತೀಚೆಗೆ ವಿಭಕ್ತ ಕುಟುಂಬಗಳೇ ಹೆಚ್ಚುತ್ತಿರುವ ಈ ಜಗತ್ತಿನಲ್ಲಿ ಪರಸ್ಪರ ಮಾನವನ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಿದೆ ಅಥವಾ ಈ ಸಂಬಂಧಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ ಎಂದೇ ಹೇಳಬಹುದು. ಗಂಡ ಹೆಂಡತಿ ಮಗು ಮಾತ್ರ ಜೊತೆಗಿದ್ದರೇ ಅದೇ ಅವಿಭಕ್ತ ಕುಟುಂಬ ಎನ್ನುವ ಕಾಲ ಇದಾಗಿದೆ. ಇಲ್ಲಿ ತಂದೆ-ತಾಯಿ-ಮಕ್ಕಳು, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತಿಗೆ-ನಾದಿನಿ, ಅತ್ತೆ-ಸೊಸೆ ಎನ್ನುವ ಸಂಬಂಧವು ಅದರ ಬೆಲೆಯನ್ನು ಕಳೆದುಕೊಂಡಿದೆ. ಕೇವಲ ಹಣದ ದಾಹ ಆಸ್ತಿಯ ಮೋಹವು ಈ ಎಲ್ಲಾ ಸಂಬಂಧವನ್ನು ದೂರ ಮಾಡುತ್ತಿದೆ. ಸಂಪತ್ತಿನ ಹಿಂದೆಯೇ ಓಡುತ್ತಿರುವ ಈ ಜಗತ್ತು ಸಂಬಂಧದ ಕಡೆಗೆ ಕಣ್ಪಟ್ಟಿಯನ್ನು ಕಟ್ಟಿಕೊಂಡಿದೆ. ಹಣಕ್ಕಾಗಿ, ಪತಿಷ್ಟೆಗಾಗಿ ಈ ಸಂಬಂಧಗಳು ಕಚ್ಚಾಡುವುದಷ್ಟೇ ಅಲ್ಲ ಜೀವ ತೆಗೆಯುತ್ತಿರುವ ಅನೇಕ ಘಟನೆಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ ಅನೈತಿಕ ಸಂಬಂಧಗಳ ಅಟ್ಟಹಾಸವು ಇಂದು ಅನಾಚಾರಗಳಿಗೆ ಎಡೆಮಾಡಿಕೊಡುತ್ತಿವೆ. ಇಂತಹ ಸಂಬಂಧದಲ್ಲಿ ಶ್ರೀಗಂಧದಹಾಗೆ ಸುವಾಸನೆ ಬೀರುಂತೆ ಸಂಬಂಧಗಳು ಇರಬೇಕು ಎನ್ನುವ ವಚನಗಾರರ ಭಾವ ನಿಜಕ್ಕೂ ಸಂದರ್ಭೋಚಿತವಾಗಿದೆ. ಹೆಸರಿಗೆ ಮಾತ್ರ ಹಣ ಆಸ್ತಿಗಾಗಿ ಮಾತ್ರ ಸಂಬಂಧಗಳನ್ನು ನಿಭಾಯಿಸುತ್ತಾ ಬಾಳುವ ಜನರಿಗೆ ಪಾಠ ಹೇಳುವ ಮತ್ತೂ ಕೆಲವು ವಚನಗಳು ಕೂಡ ಇಲ್ಲಿವೆ. ಅಂತಹದ್ದೇ ಮತ್ತೊಂದು ವಚನವನ್ನು ನೋಡುವುದಾದರೆ, ಇಂದು ನಮ್ಮಲ್ಲಿರುವ ಸಂಪತ್ತುನಾಳೆ ಇಲ್ಲದೇ ಇರಬಹುದುಇಲ್ಲದ ಸಂಪತ್ತು ನಾಳೆಒಂದು ವೇಳೆ ಸಿಕ್ಕರೂ ಸಿಗಬಹುದುಆದರೆ ಪ್ರೀತಿ, ವಿಶ್ವಾಸ, ನಂಬಿಕೆಒಮ್ಮೆ ಕಳೆದುಕೊಂಡರೆ ಮತ್ತೆಜೀವನದಲ್ಲಿಬಾರದು- ಜಗದೀಶ  ಇಲ್ಲಿ ವಚನಕಾರರು ಇಂದಿನ ಪೀಳಿಗೆಯವರಿಗೆ ಜೀವನದಲ್ಲಿ ಯಾವುದು ಪ್ರಮುಖ ಎನ್ನುವುದರ ಬಗೆಗೆ ಕಿವಿಮಾತನ್ನು ಹೇಳುತ್ತಿದ್ದಾರೆ. ಹಣದ ಹಿಂದೆಯೇ ಬಿದ್ದಿರುವ ಜಗತ್ತಿಗೆ ಸಂಪತ್ತು ಎನ್ನುವುದು ಕ್ಷಣಿಕವಾದದ್ದು ಎನ್ನುತ್ತಾರೆ. ಸಂಪತ್ತು ಇಂದು ನಮ್ಮ ಬಳಿ ಅಗಾಧವಾಗಿರುತ್ತದೆ. ಆದರೆ ನಾಳೆ ಇಲ್ಲದೇ ಹೋಗಬಹುದು ಅಥವಾ ಇಂದು ಬಡವನಾದವನು ನಾಳೆ ಬಲ್ಲಿದನಾಗಬಹುದು. ನಾವು ನಮ್ಮ ಬಳಿ ಇರುವ ಸಂಪತ್ತನ್ನು ಕಳೆದುಕೊಂಡರೆ  ಯಾವುದೇ ನಷ್ಟವಿಲ್ಲ ಆದರೆ, ಜನರ ನಡುವೆ ಬದುಕುತ್ತಿರುವ ನಾವು ಅವರೊಂದಿಗೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಹೊಂದಿರಬೇಕು. ಏಕೆಂದರೆ ಒಮ್ಮೆ ನಾವು ಇವುಗಳನ್ನು ಕಳೆದುಕೊಂಡರೆ ಎಂದಿಗೂ ಮತ್ತೆ ಪಡೆಯಲು ಸಾಧ್ಯವಿಲ್ಲ. ಇದನ್ನು ನಾವು ನೆನಪಿನಲ್ಲಿ ಇಟ್ಟುಕೊಂಡಿರಬೇಕು ಎಂದು ಹೇಳುವ ಈ ವಚನವು ಸಮಯೋಚಿತವಾದದ್ದು. ಸಾವಿರ ತಪ್ಪುಗಳನ್ನು ಮಾಡಿದ್ದರೂಕ್ಷಮಿಸುವ ಮತ್ತು ಬೆಳೆಸುವಗುಣವಿರುವುದು ಕೇವಲ ಜನ್ಮಕೊಟ್ಟತಂದೆ ತಾಯಿಗೆ ಮಾತ್ರ ಹಾಗಾಗಿತಂದೆ ತಾಯಿಯನ್ನು ಗೌರವಿಸುವಜವಾಬ್ದಾರಿ ನಮ್ಮದಾಗಬೇಕು- ಜಗದೀಶ   ಆಧುನಿಕತೆಯ ಈ ಜಗತ್ತಿನಲ್ಲಿ ಇಂದು ಸಾಂಪ್ರದಾಯಿಕ ಮನಸ್ಸಿನ ತಂದೆ ತಾಯಿ ಆಧುನಿಕತೆಯ ಸೋಗಿನಲ್ಲಿರುವ ಮಕ್ಕಳು ಇಂದು ತಂದೆ ತಾಯಿಯರನ್ನು ಹಲವಾರು ರೀತಿಯಲ್ಲಿ ದೂರುವುದನ್ನು ಕಾಣುತ್ತೇವೆ. ಮಕ್ಕಳು ಹುಟ್ಟಿದಾಗಿನಿಂದ ಏನೇ ತಪ್ಪುಮಾಡಿದ್ದರೂ, ಎಷ್ಟೇ ಕಷ್ಟಗಳನ್ನು ನೀಡಿದ್ದರೂ ತಂದೆ ತಾಯಿಯರು ಮಕ್ಕಳನ್ನು ಕ್ಷಮಿಸುತ್ತಾ, ಹೊಂದಾಣಿಕೆ ಮಾಡಿಕೊಳ್ಳುತ್ತಾ ತಾವು ಹಸಿದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾ ಅವರ ಏಳಿಗೆಗಾಗಿಯೇ ತಮಗೆ ಎಷ್ಟೇ ಕಷ್ಟವಾದರೂ ಶ್ರಮಿಸುತ್ತಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಯಶಸ್ಸನ್ನು ಕಾಣುವಲ್ಲಿ ತಮ್ಮ ಸ್ವಂತ ಸುಖವನ್ನೇ ಮರೆಯುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಮಕ್ಕಳನ್ನು ಸಾಕಿದ ನಂತರ ವೃದ್ದಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎನ್ನುವ ಒಂದೇ ಒಂದು ನಿರೀಕ್ಷೆಯಷ್ಟೇ ಅವರದ್ದಾರುತ್ತದೆ. ಇಂದಿನ ಝೆನ್ ಜೀ ಮಕ್ಕಳು ಇದನ್ನು ಅರ್ಥಮಾಡಿಕೊಂಡರಷ್ಟೇ ಸಾಕು. ಆದರೆ, ಈಗ ನಡೆಯುತ್ತಿರುವುದಾದರೂ ಏನು? ತಂದೆ ತಾಯಿಯ ಕನಸನ್ನು ಈಡೇರಿಸಬೇಕಾಗಿದ್ದ ಮಕ್ಕಳು ತಾವು ವಿದ್ಯಾವಂತರಾಗಿ ಒಳ್ಳೆಯ ಕೆಲಸಕ್ಕೆ ಸೇರಿ ಹೆಚ್ಚು ಹಣಸಂಪಾದಿಸಿದ ನಂತರ ತಂದೆ ತಾಯಿಗಳಿಂದ ದೂರವಾಗುತ್ತಿದ್ದಾರೆ. ಅವರಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮಕ್ಕಳು ಇಂದು ಅವರಿಗೆ ಎರಡು ಹೊತ್ತಿನ ಊಟ ಹಾಕಲೂ ಕೂಡ ಹಿಂದೆ ಮುಂದೆ ನೋಡುತ್ತಿರುವ ಮಕ್ಕಳನ್ನು ನೋಡುತ್ತಿದ್ದೇವೆ.  ಮಕ್ಕಳ ದೊಡ್ಡ ನಗರ ಜೀವನದ ವ್ಯಾಮೋಹ ಅಥವಾ ವಿದೇಶೀ ವ್ಯಾಮೋಹದಿಂದ ಮಕ್ಕಳು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿ ಅಥವಾ ಅವರನ್ನು ಒಂಟಿಯಾಗಿ ಬಿಟ್ಟು ಕಡೆಗಣಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರಿಗೆ ಬುದ್ಧಿವಾದ ಹೇಳುವಂತಹ ವಚನ ಇದಾಗಿದೆ. ಈ ವಚನದಲ್ಲಿ ತಂದೆ ತಾಯಿಯ ಜೀವನದ ಬಗ್ಗೆ ಆತಂಕವಿದೆ. ವೃದ್ಧಾಪ್ಯದ ಬಗ್ಗೆ ಕಾಳಜಿ ಇದೆ. ಇದರ ಮೂಲಕ ಸಮಾಜವನ್ನು ತಹಬದಿಗೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ನೀತಿಯುಕ್ತ ಜೀವನವನ್ನು ನಡೆಸುವ ಮಾರ್ಗದರ್ಶನವನ್ನು ತಮ್ಮ ವಚನಗಳಲ್ಲಿ ಮಾಡಿದ್ದಾರೆ. ಪ್ರೀತಿ ವಿಶ್ವಾಸವಿರಲಿನೋವು-ನಲಿವಾಗಲಿ ಪತಿ-ಪತ್ನಿಇಬ್ಬರೂ ಗೌರವದಿಂದ ಸಮನಾಗಿಹಂಚಿಕೊಂಡಾಗಲೇ ನಮ್ಮೀ ಬದುಕುಸುಂದರವಾಗುವುದಲ್ಲವೇ – ಜಗದೀಶ      ತಮ್ಮ ನಲವತ್ತನೇ ವರ್ಷದ ದಾಂಪತ್ಯದ ತುಂಬು ಜೀವನವನ್ನು ಸಂಭ್ರಮಿಸುತ್ತಿರುವ ಆಧುನಿಕ ವಚನಕಾರರಾದ ಶ್ರೀ ಎಂ.ಬಿ.ಸಂತೋಷ್ ಅವರು ದಾಂಪತ್ಯದ ಬಗ್ಗೆ ಹಲವು ಸಲಹೆಗಳು ಹಾಗೂ ಮಾರ್ಗದರ್ಶನವನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ. ಬೆಳಿಗ್ಗೆ ಮದುವೆ ಸಂಜೆ ವಿಚ್ಚೇದನ ಎಂದಿರುವ ಈ ಕಾಲದಲ್ಲಿಗಂಡ ಹೆಂಡತಿಯರ ನಡುವಿನ ಸಂಬಂಧವು ಬೀದಿಗೆ ಬಂದು ನಿಂತಿದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಸುಳ್ಳಾಗಿದೆ. ಇಂದು ಪ್ರೀತಿ ಪ್ರೇಮ ಮದುವೆಗಳು ನಡೆಯುವಷ್ಟೇ ವೇಗವಾಗಿ ವಿಚ್ಛೇದನಗಳು ನಡೆಯುತ್ತಿವೆ.  ಅಲ್ಲದೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ಅಹಂ ಭಾವ, ಸಂದೇಹ, ಮದುವೆಯಾಚೆಗಿನ ಅನೈತಿಕ ಸಂಬಂಧಗಳು, ಹಣದಾಸೆ ಇವೆಲ್ಲವೂ ಹೆಚ್ಚಾಗಿದೆ. ಇದರಿಂದ ಹೆಂಡತಿ ಗಂಡನನ್ನು ಗಂಡ ಹೆಂಡತಿಯನ್ನು ದಾರುಣವಾಗಿ ಕೊಲೆಗೈಯ್ಯಲೂ ಸಹ ಹಿಂಜರಿಯದೇ ಇರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ. ಇಂತಹ ಘಳಿಗೆಯಲ್ಲಿ ಯುವ ಜನತೆಗೆ ದಾಂಪತ್ಯ ಎನ್ನುವುದು ಯಶಸ್ವಿಯಾಗಬೇಕಾದರೆ ಪ್ರೀತಿ-ವಿಶ್ವಾಸ, ನೋವು ನಲಿವು ಇವೆಲ್ಲದರಲ್ಲಿಯೂ ಪತಿ-ಪತ್ನಿ ಪರಸ್ಪರ ಗೌರವದಿಂದ ಸಮಾನತೆಯಿಂದ ಬದುಕಿದಾಗಲೇ ಈ ಬದುಕು ಸುಂದರ ಎನ್ನುವ ಮಾರ್ಗದರ್ಶನ ಮಾಡುವವರ ಅವಶ್ಯಕತೆ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ  “ಕಂಗಳ ಹೊಳಪು” ಹೂವಿನ ಪರಿಮಳ ಬಣ್ಣದಲ್ಲಿರದೆಸುಗಂಧವನೇ ಸೂಸುತಿದೆಸಹನೆಯ ತೊರೆದು ನಡೆಯಲು ಜಗದಲ್ಲಿಪ್ರೀತಿಯೇ ಸೋಲುತಿದೆ. ಕಾಡಿನ ದಾರಿಯು ನಾಡನು ಸೇರಲು ಪ್ರಕೃತಿಯೇ ನಗುತಲಿದೆತಿರುಗುವ ಮನುಜನ ಕಂಡು ಭೂಮಿಯೂ ತಿರುಗುತ ನೋಡುತಿದೆ. ಕಂಗಳ ಹೊಳಪಿಗೆ ಮುತ್ತನು ಹುಡುಕಲುಮನಸ್ಸು ಕಡಲಾಳಕ್ಕೆ ಇಳಿಯುತಿದೆಬೆಳದಿಂಗಳ ಚುಕ್ಕಿಯು ಮೆಲ್ಲನೆ ಭೂಮಿಗೆ ಜಾರುತಿದೆ. ಸ್ವರಗಳು ಪ್ರಾಸವ ಸೇರಿ ಛಂದಸ್ಸಿನಲ್ಲಿ ಅಡಗುತಿವೆಭಾವಗಳೆಲ್ಲವೂ ಲಯದಲ್ಲಿ ಸೇರಿ ಸಾಹಿತ್ಯವನ್ನು ನೀಡುತಿವೆ. ಮನ್ಸೂರ್ ಮುಲ್ಕಿ 

ಮನ್ಸೂರ್ ಮುಲ್ಕಿ  ಅವರ ಕವಿತೆ ” ಕಂಗಳ ಹೊಳಪು” Read Post »

ಇತರೆ

“ಬರವಣಿಗೆಯ ನಿಜಸ್ವರೂಪ” ವಿಶೇಷ ಲೇಖನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

ವಿಶೇಷ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಬರವಣಿಗೆಯ ನಿಜಸ್ವರೂಪ” ಬರವಣಿಗೆಯ ನಿಜಸ್ವರೂಪ        ಇತ್ತೀಚಿನ ಸಾರಸ್ವತ ಲೋಕದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಪದಗಳಲ್ಲಿ ವಿಮರ್ಶೆ, ಸಂಶೋಧನೆ, ಕೃತಿ ಪರಿಚಯ ಮತ್ತು ಕೃತಿ ವಿಶ್ಲೇಷಣೆ ಪ್ರಮುಖವಾಗಿವೆ. ಆದರೆ ಈ ಪದಗಳು ಹೆಚ್ಚು ಬಳಕೆಯಾಗುತ್ತಿರುವಷ್ಟೇ ಅವುಗಳ ಮೂಲ ಅರ್ಥ ಮತ್ತು ಪರಿಕಲ್ಪನೆಗಳು ಮಸುಕಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಂದು ಪುಸ್ತಕದ ಕುರಿತು ಎರಡು ಪುಟಗಳ ಪರಿಚಯ ಬರೆದರೂ ಅದನ್ನು ವಿಮರ್ಶೆ ಎಂದು ಕರೆಯಲಾಗುತ್ತಿದೆ; ಕಥಾಸಾರವನ್ನು ಹೇಳಿದರೂ ಅದನ್ನೇ ವಿಶ್ಲೇಷಣೆ ಎಂದು ಭಾವಿಸಲಾಗುತ್ತಿದೆ; ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಅದನ್ನು ವಿಮರ್ಶೆ ಎಂದು ಪರಿಗಣಿಸಲಾಗುತ್ತಿದೆ; ಕೆಲವು ಉಲ್ಲೇಖಗಳನ್ನು ಸೇರಿಸಿದ ಮಾತ್ರಕ್ಕೆ ಅದೇ ಸಂಶೋಧನೆ ಎಂಬ ತಪ್ಪು ಕಲ್ಪನೆಯೂ ಬೆಳೆಯುತ್ತಿದೆ. ಈ ಪರಿಕಲ್ಪನಾತ್ಮಕ ಗೊಂದಲವು ಕೇವಲ ಪದಗಳ ಬಳಕೆಯ ಸಮಸ್ಯೆಯಲ್ಲ; ಅದು ಸಾಹಿತ್ಯಿಕ ಮೌಲ್ಯಮಾಪನದ ಗುಣಮಟ್ಟ, ಸಂಶೋಧನೆಯ ವಿಶ್ವಾಸಾರ್ಹತೆ ಮತ್ತು ಬರವಣಿಗೆಯ ಶೈಕ್ಷಣಿಕ ಘನತೆಯ ಮೇಲೂ ನೇರ ಪರಿಣಾಮ ಬೀರುತ್ತಿದೆ.      ವಾಸ್ತವವಾಗಿ ಬರವಣಿಗೆಯ ಪ್ರತಿಯೊಂದು ಪ್ರಕಾರಕ್ಕೂ ತನ್ನದೇ ಆದ ಉದ್ದೇಶ, ವಿಧಾನ, ವ್ಯಾಪ್ತಿ ಮತ್ತು ಮಿತಿ ಇವೆ. ಕೃತಿ ಪರಿಚಯವು ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದ್ದರೆ, ಕೃತಿ ವಿಶ್ಲೇಷಣೆಯು ಕೃತಿಯ ಅಂತರಂಗವನ್ನು ತೆರೆದಿಡುತ್ತದೆ. ಇನ್ನೂ ವಿಮರ್ಶೆಯು ಕೃತಿಯ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವ ಪ್ರಕ್ರಿಯೆಯಾಗಿದ್ದರೆ, ಸಂಶೋಧನೆಯು ಹೊಸ ಜ್ಞಾನವನ್ನು ಅನ್ವೇಷಿಸುವ ವೈಜ್ಞಾನಿಕ ಅಧ್ಯಯನವಾಗಿದೆ. ಇವುಗಳಲ್ಲಿ ಯಾವುದೂ ಮತ್ತೊಂದರ ಪರ್ಯಾಯವಲ್ಲ; ಅವು ಪರಸ್ಪರ ಸಂಬಂಧ ಹೊಂದಿದ್ದರೂ ತಮ್ಮದೇ ಆದ ಸ್ವತಂತ್ರ ಸ್ವರೂಪವನ್ನು ಉಳಿಸಿಕೊಂಡಿವೆ. ಆದ್ದರಿಂದ ಈ ಬರವಣಿಗೆಯ ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಸಾಹಿತ್ಯ ಮತ್ತು ಶೈಕ್ಷಣಿಕ ವಲಯದ ಮೂಲಭೂತ ಅಗತ್ಯವಾಗಿದೆ.       ವಿಮರ್ಶೆಯು ಸಾಹಿತ್ಯ, ಕಲೆ ಅಥವಾ ಯಾವುದೇ ಸೃಜನಾತ್ಮಕ ಕೃತಿಯ ಸ್ವರೂಪ, ಆಶಯ, ರಚನಾ ವೈಶಿಷ್ಟ್ಯ, ಭಾಷೆ, ಶೈಲಿ, ಸೌಂದರ್ಯಾತ್ಮಕ ಅಂಶಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ವಿವೇಚನಾತ್ಮಕವಾಗಿ ಪರಿಶೀಲಿಸಿ ಅದರ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವ ಪ್ರಕ್ರಿಯೆಯಾಗಿದೆ. ವಿಮರ್ಶೆಯ ಉದ್ದೇಶ ಪ್ರಶಂಸೆ ಅಥವಾ ಟೀಕೆ ಮಾಡುವುದಲ್ಲ; ಕೃತಿಯ ಗುಣ-ದೋಷಗಳನ್ನು ಸಮತೋಲನದಿಂದ ವಿಶ್ಲೇಷಿಸಿ ಅದರ ಸ್ಥಾನವನ್ನು ನಿರ್ಧರಿಸುವುದಾಗಿದೆ. ಆದ್ದರಿಂದ ವಿಶ್ಲೇಷಣೆಯು ವಿಮರ್ಶೆಯ ಒಂದು ಹಂತವಾಗಿದ್ದರೂ, ವಿಶ್ಲೇಷಣೆ ಮಾತ್ರವೇ ವಿಮರ್ಶೆಯಾಗುವುದಿಲ್ಲ. ವಿಮರ್ಶೆಯು ಅಂತಿಮವಾಗಿ ಮೌಲ್ಯನಿರ್ಣಯವನ್ನು ಒಳಗೊಂಡಿರಬೇಕು. ಇದೇ ವಿಮರ್ಶೆಯ ವಿಶಿಷ್ಟತೆ.      ಸಂಶೋಧನಾ ಬರವಣಿಗೆಯು ಇದಕ್ಕಿಂತ ಭಿನ್ನವಾದ ಸ್ವರೂಪವನ್ನು ಹೊಂದಿದೆ. ಅದು ಹೊಸ ಜ್ಞಾನ, ಹೊಸ ಸತ್ಯ ಅಥವಾ ಹೊಸ ವ್ಯಾಖ್ಯಾನವನ್ನು ಸಾಕ್ಷ್ಯಾಧಾರಿತ ಮತ್ತು ವೈಜ್ಞಾನಿಕ ವಿಧಾನದಲ್ಲಿ ಅನ್ವೇಷಿಸುವ ಪ್ರಕ್ರಿಯೆಯಾಗಿದೆ. ಸಮಸ್ಯೆಯ ನಿರೂಪಣೆ, ಸಾಹಿತ್ಯ ಸಮೀಕ್ಷೆ, ಅಧ್ಯಯನ ವಿಧಾನ, ಮಾಹಿತಿ ಸಂಗ್ರಹ, ವಿಶ್ಲೇಷಣೆ ಮತ್ತು ತೀರ್ಮಾನಗಳ ಮೂಲಕ ಸಂಶೋಧನೆಯು ತನ್ನ ವಿಶ್ವಾಸಾರ್ಹತೆಯನ್ನು ಸಾಧಿಸುತ್ತದೆ. ವೈಯಕ್ತಿಕ ಅಭಿಪ್ರಾಯಕ್ಕಿಂತ ಸಾಕ್ಷ್ಯ, ಉಲ್ಲೇಖ ಮತ್ತು ತಾರ್ಕಿಕ ನಿರೂಪಣೆಗೆ ಇಲ್ಲಿ ಹೆಚ್ಚಿನ ಮಹತ್ವವಿರುತ್ತದೆ. ಹೀಗಾಗಿ ವಿಮರ್ಶೆ ಮತ್ತು ಸಂಶೋಧನೆ ಒಂದೇ ಅಲ್ಲ; ಅವು ಪರಸ್ಪರ ಪೂರಕವಾಗಿದ್ದರೂ ವಿಭಿನ್ನ ಶೈಕ್ಷಣಿಕ ಪ್ರಕ್ರಿಯೆಗಳಾಗಿವೆ.        ಕೃತಿ ಪರಿಚಯವು ಓದುಗರಿಗೆ ಒಂದು ಪುಸ್ತಕದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡುವ ಬರವಣಿಗೆಯಾಗಿದೆ. ಪ್ರಕಟಣೆ-ಪ್ರಕಾಶನದ ವಿವರಗಳು, ಲೇಖಕರ ಪರಿಚಯ, ಕೃತಿಯ ವಿಷಯವಸ್ತು, ಉದ್ದೇಶ ಮತ್ತು ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಮೂಲಕ ಓದುಗರಲ್ಲಿ ಆಸಕ್ತಿ ಮೂಡಿಸುವುದು ಇದರ ಗುರಿಯಾಗಿದೆ. ಇದರಲ್ಲಿ ಮೌಲ್ಯನಿರ್ಣಯಕ್ಕೆ ಹೆಚ್ಚಿನ ಅವಕಾಶ ಇರುವುದಿಲ್ಲ. ಅದೇ ರೀತಿ ಕೃತಿ ವಿಶ್ಲೇಷಣೆಯು ಕೃತಿಯನ್ನು ಅದರ ವಿವಿಧ ಅಂಶಗಳಾಗಿ ವಿಭಜಿಸಿ ಕಥಾವಸ್ತು, ಪಾತ್ರಚಿತ್ರಣ, ಭಾಷೆ, ಶೈಲಿ, ಸಂಕೇತಗಳು, ಪ್ರತಿಮೆಗಳು ಹಾಗೂ ರಚನಾ ತಂತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಧ್ಯಯನ ವಿಧಾನವಾಗಿದೆ. ಆದರೆ ಅದು ಅಂತಿಮವಾಗಿ ಕೃತಿಯ ಮೌಲ್ಯವನ್ನು ನಿರ್ಣಯಿಸುವುದಿಲ್ಲ. ಈ ಕಾರಣಕ್ಕಾಗಿಯೇ ವಿಶ್ಲೇಷಣೆಯು ವಿಮರ್ಶೆಗೆ ಪೂರಕವಾಗಬಹುದು; ಆದರೆ ವಿಶ್ಲೇಷಣೆಯೇ ವಿಮರ್ಶೆ ಎಂದು ಹೇಳುವುದು ಸರಿಯಲ್ಲ.       ಉಪನ್ಯಾಸ ರೂಪದ ಬರವಣಿಗೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಒಂದು ನಿರ್ದಿಷ್ಟ ವಿಷಯವನ್ನು ಶ್ರೋತೃಗಳು ಅಥವಾ ಓದುಗರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಕ್ರಮಬದ್ಧವಾಗಿ, ಉದಾಹರಣೆಗಳು ಮತ್ತು ವಿವರಣೆಗಳೊಂದಿಗೆ ನಿರೂಪಿಸುವುದು ಇದರ ಉದ್ದೇಶವಾಗಿದೆ. ಇದು ಜ್ಞಾನವನ್ನು ಪರಿಣಾಮಕಾರಿಯಾಗಿ ಹಂಚುವ ಮಾಧ್ಯಮವಾಗಿದ್ದು, ಸಂಶೋಧನಾ ಬರವಣಿಗೆ ಅಥವಾ ವಿಮರ್ಶೆಯ ಪರ್ಯಾಯವಲ್ಲ.       ಇಂದು ಸಾಹಿತ್ಯಲೋಕದಲ್ಲಿ ಕಂಡುಬರುವ ದೊಡ್ಡ ಸಮಸ್ಯೆಯೆಂದರೆ, ಬರವಣಿಗೆಯ ವಿವಿಧ ಪ್ರಕಾರಗಳ ನಡುವಿನ ಗಡಿಗಳು ಅಸ್ಪಷ್ಟವಾಗುತ್ತಿರುವುದು. ಪರಿಚಯವನ್ನು ವಿಮರ್ಶೆ ಎಂದು, ವಿಶ್ಲೇಷಣೆಯನ್ನು ಸಂಶೋಧನೆ ಎಂದು, ಅಭಿಪ್ರಾಯವನ್ನು ಮೌಲ್ಯನಿರ್ಣಯ ಎಂದು, ಪ್ರಚಾರವನ್ನು ಸಾಹಿತ್ಯ ಚರ್ಚೆ ಎಂದು ಕರೆಯುವ ಪ್ರವೃತ್ತಿ ಬೆಳೆಯುತ್ತಿದೆ. ಈ ಗೊಂದಲವನ್ನು ನಿವಾರಿಸದೆ ಸಾಹಿತ್ಯಿಕ ಶಿಸ್ತು ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಬರಹಗಾರರು, ವಿಮರ್ಶಕರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಓದುಗರು ಬರವಣಿಗೆಯ ಪ್ರತಿಯೊಂದು ಪ್ರಕಾರದ ಉದ್ದೇಶ, ವಿಧಾನ ಮತ್ತು ಮಿತಿಯನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ. ಪರಿಚಯವನ್ನು ಪರಿಚಯವೆಂದು, ವಿಶ್ಲೇಷಣೆಯನ್ನು ವಿಶ್ಲೇಷಣೆಯೆಂದು, ವಿಮರ್ಶೆಯನ್ನು ವಿಮರ್ಶೆಯೆಂದು ಮತ್ತು ಸಂಶೋಧನೆಯನ್ನು ಸಂಶೋಧನೆಯೆಂದು ಗುರುತಿಸುವ ಸಾಹಿತ್ಯಿಕ ಪ್ರಾಮಾಣಿಕತೆ ಬೆಳೆದಾಗ ಮಾತ್ರ ಆರೋಗ್ಯಕರ ವಿಮರ್ಶಾ ಸಂಸ್ಕೃತಿ, ಮೌಲಿಕ ಸಂಶೋಧನೆ ಮತ್ತು ಗುಣಮಟ್ಟದ ಸಾಹಿತ್ಯ ನಿರ್ಮಾಣ ಸಾಧ್ಯವಾಗುತ್ತದೆ. –ಡಾ. ಮಲ್ಲಿನಾಥ ಎಸ್. ತಳವಾರಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರುಕನ್ನಡ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ಬರವಣಿಗೆಯ ನಿಜಸ್ವರೂಪ” ವಿಶೇಷ ಲೇಖನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ Read Post »

You cannot copy content of this page

Scroll to Top