ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್

ಕಾವ್ಯ ಸಂಗಾತಿ ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಗಜಲ್ *ಸಪ್ತ* ಸಾಗರ ದಾಟಿ ಪರ್ಯವಸಾನಗೊಂಡ *ಹಾದಿಯಿದು* ಪ್ರೇಮ*ಗುಪ್ತ* ಬಯಕೆಯ ಮೀಟಿ ಆಲಾಪಗೊಂಡ *ಶೃತಿಯಿದು* ಪ್ರೇಮ ಹೃದಯದಂಗಳದಲ್ಲಿ ಮಲ್ಲಿಗೆ ಬಳ್ಳಿ ನೆಟ್ಟವನು ನೀನಲ್ಲವೆ ಒಡೆಯ*ಸುಪ್ತ* ಮನವ ಮತ್ತೆ ಮತ್ತೆ ತೀಡಿ *ಲಯಗೊಂಡ* ಭಾವವಿದು ಪ್ರೇಮ ತನ್ನ ತಾ ಅರಿವಿನ ಮೊರೆಗೆ ಕಿವಿ ತೆರೆದು ಕೇಳಿದವರಾರು?*ಕ್ಲುಪ್ತ* ಕಲ್ಪನೆ ಕಟಿ ಕಟಿದು ಕೆನೆಗೊಂಡ *ಚತ್ರವಿದು* ಪ್ರೇಮ ಸುಟ್ಟು ಬೂದಿಯಾಗುವ ಹಂಬಲಕೆ ಕೊನೆ ಮೊದಲಿಲ್ಲ ಗೆಳತಿ*ತಪ್ತ* ಸ್ವರವ ಕುಡಿ ಕುಡಿದು ಹದಗೊಂಡ *ಗುನುಗಿದು* ಪ್ರೇಮ ಜಗದಲಿ ಅದೆಷ್ಟು ಮಧುಪಾತ್ರೆಗಳು ಬರಿದಾಗಿವೆ ನೋಡು ಹಸೀನಾ..*ತೃಪ್ತ* ಹೃದಯವ ಹುರಿದು ಮೆದುಮಾಡಿಕೊಂಡ *ನೈವೇದ್ಯವಿದು* ಪ್ರೇಮ -ಡಾ.ಹಸೀನಾ ಹೆಚ್.ಕೆ, ಶಿವಮೊಗ್ಗ

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್ Read Post »

ಇತರೆ, ಜೀವನ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ

ಸಮಾಜ ಸಂಗಾತಿ ಪ್ರೊ.ರಾಜೇಶ್ವರಿ ಶೀಲವಂತ ಪುಣೆ “ಭಾರತೀಯ ಮಕ್ಕಳ ಇಂದಿನ ನಡವಳಿಕೆ” ಅಂದಿನ ಭಾರತೀಯ ಮಕ್ಕಳಲ್ಲಿ ಸಂಪ್ರದಾಯ ಮತ್ತು ಸಂಸ್ಕಾರ ಗುಣಗಳು ತುಂಬಿ ತುಳುಕುತ್ತಿದ್ದವು .ಅವರಲ್ಲಿ ತಂದೆ, ತಾಯಿ, ಗುರು ಹಿರಿಯರ ಬಗ್ಗೆ ಆದರದ ಭಾವವಿತ್ತು. ಮನೆಯಲ್ಲಿ ಮಕ್ಕಳು  ಎಲ್ಲರೊಂದಿಗೆ ಪ್ರೀತಿ ಸೌಹಾರ್ದತೆಯ ವಾತಾವರಣದೊಂದಿಗೆ ಸಂಭ್ರಮಿಸುತ್ತಿದ್ದರು.ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಲೀಲಾಜಾಲವಾಗಿಕಲಿಯುತ್ತಿದ್ದರು.ಹೆಣ್ಣು ಮಗು ಅಭ್ಯಾಸದ ಜೊತೆ ಮನೆಗೆಲಸ ಕಲಿತರೆ ಗಂಡು ಮಗುಹೊರಗಿನ ವ್ಯವಹಾರ ಜ್ಞಾನ ಬೆಳೆಸಿಕೊಕೊಳ್ಳುತ್ತಿತ್ತು.ಹೀಗಾಗಿ ಮದುವೆಯ ನಂತರವೂ ಅವರಿಗೆ ಮನೆಯ ಜವಾಬ್ದಾರಿ ಹೊಂದಾಣಿಕೆಯಲ್ಲಿ ಚಾತುರ್ಯವಿತ್ತು. ಆಗ ಹೆಣ್ಣು ಮಗಳು  ಮದುವೆ ನಂತರ ಅತ್ತೆ ಮನೆಯಲ್ಲಿ ತನ್ನ ಉದ್ಯೋಗದ ಜೊತೆಗೆ ಸಂಸಾರಿಕ ಜೀವನವನ್ನು ಸಾಮರಸ್ಯದಿಂದ ನಿಭಾಯಿಸುತ್ತಿದ್ದಳು.ಅಂದಿನ  ಪೀಳಿಗೆಯಲ್ಲಿ ಪಾಲಕರು ತಮ್ಮ ಮಕ್ಕಳ  ಶಿಕ್ಷಣದ ಜೊತೆಗೆ ಅವರ ಭಾವನಾತ್ಮಕ ಬೆಳವಣಿಗೆ ಹಾಗೂ ಮಾನಸಿಕ  ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನಹರಿಸುತ್ತಿದ್ದರು.  ಅಂದು  ಅಜ್ಜ, ಅಜ್ಜಿ ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನ ಮತ್ತು ಸಂಸ್ಕೃತಿಯನ್ನ ಹೇಗೆ ಕಾಪಾಡಬೇಕೆಂದು ತಿಳಿಸುತ್ತಿದ್ದರು. ಹೀಗಾಗಿ ಭಾರತದಲ್ಲಿ ಮಕ್ಕಳು ತಮ್ಮ ಹಿರಿಯರು, ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ಜಂಟಿ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಆಗಿನ ಮಕ್ಕಳು ಹಂಚಿಕೊಳ್ಳುವಿಕೆ  ಮತ್ತು ಸಾಮಾಜಿಕ  ಹೊಂದಾಣಿಕೆಗಳನ್ನು ಬೆಳೆಯುತ್ತಲೇ ಕಲಿಯುತ್ತಿದ್ದರು .ಆದರೆ ಈಗ  ಆಧುನಿಕತೆಯ ಹೆಸರಿನಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ .ಭಾರತೀಯ ಮಕ್ಕಳ  ಆಧುನಿಕ ತಂತ್ರಜ್ಞಾನದ ಬಳಕೆ ಅವರ  ನಡವಳಿಕೆಯಲ್ಲಿಯ ಮುಖ್ಯ ಅಂಶಗಳಾದ ಕುಟುಂಬದ ಮೌಲ್ಯಗಳು ,ಸಂಸ್ಕೃತಿ, ಹಿರಿಯರು, ಪೋಷಕರು ಮತ್ತು ಶಿಕ್ಷಕರು  ಇವುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ.  ವಿಭಕ್ತ  ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದ ಅಭಾವದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ, ಹೊಂದಾಣಿಕೆಗಳಂತಹ  ಜೀವನಮೌಲ್ಯಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ  ಮಕ್ಕಳು ಆಟಿಕೆಗಳಿಗಿಂತ ಸ್ಮಾರ್ಟ್‌ಫೋನ್, ವಿಡಿಯೋ ಗೇಮ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.ಹಠಮಾರಿ ಸ್ವಭಾವ ಹೆಚ್ಚುತ್ತಿದೆ.ತಾವು ಕೇಳಿದ್ದು ಸಿಗದಿದ್ದರೆ ಬೇಗನೆ ಸಿಟ್ಟು ಮಾಡಿಕೊಳ್ಳುವುದು, ಹಠ ಹಿಡಿಯುವುದು ಇಂದಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತಿದೆ.ಒಂದೇ ವಿಷಯದ  ಮೇಲೆ ಹೆಚ್ಚು ಹೊತ್ತು ಗಮನ ಹರಿಸಲು ಕಷ್ಟಪಡುವುದು ಮತ್ತು ಬೇಗನೆ ಬೇಸರಗೊಳ್ಳುವುದು ಹೆಚ್ಚಾಗಿದೆ.ಸಾಮಾಜಿಕ ಹೊಂದಾಣಿಕೆಯ  ಕೌಶಲ್ಯಗಳ ಕೊರತೆಯಿಂದ ಮಕ್ಕಳು  ಹೊರಗಡೆ ಆಟವಾಡುವುದನ್ನ  ಮರೆತು ಮನೆಯಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇತರರೊಂದಿಗೆ ಬೆರೆಯುವದೂ  ದಿನೇ ದಿನೇ ಕಡಿಮೆಯಾಗುತ್ತಿದೆ.ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು, ಸ್ನೇಹಿತರಂತೆ ವರ್ತಿಸುವುದು ,ಅವರ ಮಾನಸಿಕ ಸಮಸ್ಯೆಗಳನ್ನು  ದೂರ  ಮಾಡಬಹುದು.ಅತಿಯಾದ ಟಿವಿ ಅಥವಾ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ದೈಹಿಕ ಚಟುವಟಿಕೆಗಳು, ಸೃಜನಶೀಲ ಚಟುವಟಿಕೆಗಳು,ಯೋಗ, ಧ್ಯಾನ ಮುಂತಾದವುಗಳಲ್ಲಿ ಅವರನ್ನು  ತೊಡಗಿಸಬೇಕು. ಅದೇ ರೀತಿ ಮಕ್ಕಳಲ್ಲಿ ಮದುವೆ ಮಕ್ಕಳ ಪ್ರಾಮುಖ್ಯತೆ ಕೂಡ ಕಡಿಮೆಯಾಗುತ್ತಿದೆ. ಜಾಸ್ತಿ ಸಂಪಾದನೆಯ ಅಹಂ ಹೆಚ್ಚಾಗಿ ಗಂಡನ ಜೊತೆ ಕೂಡ ಹೊಂದಾಣಿಕೆ ಕಳೆದುಕೊಂಡು ವಿಚ್ಛೇದನಕ್ಕೆ ಮೊರೆ ಹೋಗುತ್ತಿರುವುದು ಬಹು ದೊಡ್ಡ ವಿಷಾದನೀಯ ಸಂಗತಿ ಕೂಡ.ಹೇಳಿ ಆಧುನಿಕತೆ ವರವೋ ಶಾಪವೋ!! ಪ್ರೊ. ರಾಜೇಶ್ವರಿ ಶೀಲವಂತ ಪುಣೆ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ Read Post »

ಕಾವ್ಯಯಾನ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು”

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ “ಒಲವಮುಖಗಳು” 1ಹೊಳಿ ಮಗ್ಗುಲ ಕಲ್ಲುಚಿಗುರದು, ಒಣಗದುನೀನಿದ್ದೂ ನನ್ನಂತೆ..!2ರೆಕ್ಕೆ ನಂಬಿ ಹೊಂಟ ಹಕ್ಕಿ…ಒಲವುನಿನ್ನನ್ನೇ…ನಂಬಿದೆಮರದ ಕೊಂಬೆ ಬೇಕೀಗ…3ಸಿಮೆಂಟು ರೋಡೇ ಎರಡುತಿಂಗಳಿಗೆ ಸೀಳಿದೆ…ಒಲವಿಗೀಗವ್ಯಾಲಿಡಿಟಿ ಕಡಿಮೆ ಅಂತಿದ್ರಪ..4ಹಣದ ಹಿಂದೆ ಗಿರಕಿ ಹೊಡೆವಜಗತ್ತಿಗೆ ಒಲವಿನಭಾಷೆ ಹೊಸದು; ಕಾಗುಣಿತದ ಅರಿವಿಲ್ಲ5ಅವ್ವ ಮುನಿಸಿಕೊಂಡಾಗೆಲ್ಲಾಅಪ್ಪ ತುತ್ತು ಜಾಸ್ತಿ ಉಣ್ತಿದ್ದ;ಒಲವಿಗೆ ಹೊಸ ವ್ಯಾಖ್ಯಾನ ಅಂತ ಅವ್ವನ ಸಮಜಾಯಿಷಿ!6ಮಸಣ ದೂರ ಕಣೋ ಇಲ್ಲಿಂದಲೇ ಹೂಒಗೆವೆ ದಾರಿಯಲ್ಲಿಜೊತೆಗಿದ್ದೇನೆ ಅಂದುಕೋ ಒಲವ ಹುಡುಗಾ..7ಬೆರಳು ಸೋಕದೆಯೂ ಒಲವ ಉಣಬಡಿಸಿದರಾಜಕುಮಾರನೆದುರುಮೇಲೆ ಬಿದ್ದು ಹೊರಳಾಡಿದ ಈಗಿನ ಪ್ರೀತಿ ಸಪ್ಪೆ ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು” Read Post »

ಕಥಾಗುಚ್ಛ

ರೋಹಿಣಿ ಜೆ ಅವರ ಸಣ್ಣ ಕಥೆ “ಹಾರಾಟ ಮುಗಿದ ಹಕ್ಕಿ!”

ಕಥಾ ಸಂಗಾತಿ ರೋಹಿಣಿ ಜೆ “ಹಾರಾಟ ಮುಗಿದ ಹಕ್ಕಿ!” ಒಂದೂರು.. ಊರ ಬಾಗಿಲಲೊಂದು ಅರಳಿ ಮರ. ಅದರ ಮೇಲೆ ಒಂದು ಹಕ್ಕಿ ಗೂಡು. ತಂದೆ ತಾಯಿ ಎರಡು ಮರಿಗಳು ಅದರಲ್ಲಿ ವಾಸವಾಗಿದ್ದವು. ಹಗಲಲ್ಲಿ ಹಾರಾಡುತ್ತ ಇರುಳಲ್ಲಿ ಆಕಾಶ ನೋಡುತ್ತ ಸಂಭ್ರಮಿಸುತ್ತ ಎಲ್ಲ ಚಂದಿತ್ತು.  ಕಿರಿಯ ಮರಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಬಹಳ ಮುದ್ದಿನಿಂದ ನೋಡಿಕೊಳ್ಳುತ್ತಿದ್ದವು. ತನ್ನ ಗೂಡಿನಲ್ಲಿ ಇರುವವರೆಗೂ ಆ ಹಕ್ಕಿಮರಿಗೆ ಹಸಿವು ಎಂದರೆ ಏನು ಅಂತಾನೆ ಗೊತ್ತಾಗುತ್ತಿರಲಿಲ್ಲ, ಆ ಮರದಿಂದ ಈ ಮರ ಈ ಮರದಿಂದ ಆ ಕೊಂಬೆ ಹಾರುತ್ತಾ ನಲಿದಾಡುತ್ತಾ ಎಲ್ಲದಕ್ಕೂ ಹಠ ಮಾಡುತ್ತಾ ಕಾಲ ಕಳೆಯುತ್ತಾ ಇತ್ತು. ಮಳೆ ಗಾಳಿ ಜೋರಾಯ್ತು ಅಂದ್ರೆ ಗೂಡು ಸೋರುತ್ತಾ ಇತ್ತು. ಬೀಳುವ ಭಯ ಕಾಡ್ತಾ ಇತ್ತು. ಆದರೆ ಅಪ್ಪ ಅಮ್ಮ ರೆಕ್ಕೆಯಲ್ಲಿ ಅಪ್ಪಿ ಆ ಭಯ ಕಾಡದ ಹಾಗೆ ನೋಡ್ಕೊಳ್ತಿದ್ವು, ಊಟ ಮಾಡಲಿಕ್ಕೆ ತುಂಬಾ ಹಠ ಮಾಡುತ್ತಿತ್ತು. “ತಿನ್ನು, ತಿನ್ನು” ಅಂತ ಅದರ ಹಿಂದೆನೇ ಬೀಳ್ತಾ ಇದ್ರು. ಹಕ್ಕಿಮರಿ ಬೆಳೆಯುತ್ತಾ ಹೋಯಿತು ಸ್ವಲ್ಪ ದೊಡ್ಡದಾಗುತ್ತಾ ಅದರ ಆಸೆಗಳು ಕೂಡ ದೊಡ್ಡದಾಗಲಿಕ್ಕೆ ಶುರುವಾಯಿತು. ತನ್ನ ಗೂಡು ಚಿಕ್ಕದು ಅನ್ನಿಸಲಿಕ್ಕೆ ಶುರುವಾಯಿತು.  ಕೆಲವು ಪಕ್ಷಿಗಳ ಗೂಡು ಬಹಳ ಗಟ್ಟಿಮುಟ್ಟಾಗಿತ್ತು ಇದರ ಅಪ್ಪ ಅಮ್ಮ ತನ್ನ ಶಕ್ತಿ ಮೀರಿ ಈಗಿರುವ ಗೂಡನ್ನು ಕಟ್ಟಿದ್ದು ಇನ್ನೂ ಅದಕ್ಕಿಂತ ಹೆಚ್ಚು ಅವುಗಳಿಂದ ನಿರೀಕ್ಷೆ ಮಾಡಲಿಕ್ಕೆ ಆಗ್ತರ‍್ಲಿಲ್ಲ. ಈ ಹಕ್ಕಿಗೆ ಮಳೆಗಾಲದಲ್ಲಿ ಸೋರದ, ಬಿರುಗಾಳಿಗೆ ಬೀಳದ ಗಟ್ಟಿ ಮನೆ ಒಂದನ್ನು ಕಟ್ಟಬೇಕೆಂಬ ಆಸೆ ಮೂಡತೊಡಗಿತು. ಅಷ್ಟೇ ಅಲ್ಲ ತನ್ನನ್ನು ಮುದ್ದಿನಿಂದ ಸಾಕಿದ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಕೊನರತೊಡಗಿತು.ಹೀಗಿರುವಾಗ ಅಪ್ಪ ಅಮ್ಮ ಬೇಡುವ ಅಗೋಚರವಾದ ಆ ʼದೇವʼನನ್ನು ತಾನೂ ಬೇಡಿತು. ಅವನು ತಥಾಸ್ತು ಅಂದನೋ ಇಲ್ಲ ಅದರ ವಿಧಿಯೇ ಅಂತಿತ್ತೋ ಯಾರಿಗೆ ಗೊತ್ತು! ಯಾವುದೋ ಹಕ್ಕಿಗಳ ಮೂಲಕ ಇದಕ್ಕೆ ಹಣ್ಣಿನ ಸಾಮ್ರಾಜ್ಯದ ಪರಿಚಯ ಆಯ್ತು. ಅಲ್ಲಿ ಹೋದರೆ ಊಟ, ಸಂಪತ್ತು ಯಾವುದಕ್ಕೂ ಕೊರತೆ ಇಲ್ಲ ಎನಿಸಿತು. ತಾನು ಶ್ರೀಮಂತರಾಗಿ ತನ್ನವರನ್ನು ಶ್ರೀಮಂತವಾಗಿಸುವ ಬಯಕೆ ಚಿಗುರೊಡೆಯಿತು. ಹಿಂದೆ ಮುಂದೆ ಯೋಚನೆ ಮಾಡದೆ ಆದದ್ದಾಗಲಿ ಏನಾದರೂ ಸಾಧಿಸಲೇಬೇಕೆಂದು ತನ್ನ ಸೋದರಹಕ್ಕಿಯನ್ನು ಅಪ್ಪ ಅಮ್ಮರ ಜೊತೆ ಇರಲು ಹೇಳಿ ಮರಿ ಹಕ್ಕಿ ಹೊರಟು ನಿಂತಿತು. ತಂದೆ ಹಕ್ಕಿ ಇದನ್ನು ಕಂಡು ತುಂಬಾ ದುಃಖಿಸಿತು “ಬೇಡ ಮಗು ಇಲ್ಲೇ ಇರೋಣ ಇದ್ದಿದ್ರಲ್ಲಿ ಖುಷಿಯಾಗಿ, ದೂರದ ಕಾಣದ ಊರಿನ ಸಹವಾಸ ಯಾಕೆ?”.  ಹಕ್ಕಿಮರಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸಾಲದ್ದಕ್ಕೆ ಅದರ ತಾಯಿ ಹಕ್ಕಿ ತನ್ನ ಮರಿಗೆ ಬೆಂಬಲ ಕೊಟ್ಟಿತು. “ಹೋಗಿ ಬಾ ಕಂದಾ, ಒಳ್ಳೆಯದಾಗಲಿ ನಿನಗೆ” ಎಂದು. ಇತ್ತ ತನ್ನ ಗಂಡನನ್ನು ಸಂತೈಸಿತು “ಇರಲಿ ಬಿಡು ಅದರಿಂದಲಾದರೂ ನೆಮ್ಮದಿ ಕಾಣೋಣ, ನಾವೂ ಎಲ್ಲರಂತೆ ಬದುಕಬಹುದು”. ಒಂದು ದಿನ ಅದು ಹೊರಡುವ ಸಮಯ ಬಂದೇ ಬಿಟ್ಟಿತು. ಪ್ರೀತಿ ಭಯ ಆತಂಕಗಳಿಂದ ಕಣ್ತುಂಬಿಕೊಂಡು ಬೀಳ್ಕೊಟ್ಟವು.ಹಾರಿತು, ಹಾರಿತು ದೂರದ ತೀರಕೆ ಹಣ್ಣಿನ ರಾಜ್ಯವನ್ನು ಹುಡುಕಿಕೊಂಡು ಬಹಳ ಕ್ರಮಿಸಿದ ಬಳಿಕ ಕೊನೆಗೊಂದು ದಿನ ಸಿಕ್ಕೆ ಬಿಟ್ಟಿತು ಹಣ್ಣಿನ ಸಾಮ್ರಾಜ್ಯ. ಹೌದು ಇಲ್ಲಿ ಎಲ್ಲವೂ ಚಂದ ಎಷ್ಟೊಂದು ಹಣ್ಣುಗಳು! ಬಣ್ಣ ಬಣ್ಣದ ಹಣ್ಣುಗಳು, ಹೂವುಗಳು ಬಹುಪಾಲು ಹೆಸರೇ ಗೊತ್ತಿಲ್ಲ! ಎಲ್ಲ ಹೊಸಬಗೆಯವು. ಆ ಹಕ್ಕಿ “ಸುಂದರ ಹೂ, ಹಣ್ಣಿನ ತೋಟ ಸ್ವರ್ಗ ಅಂದ್ರೆ ಇದೇ ಏನು! ಮನುಷ್ಯರು ಮಾತಾಡ್ತಾರಲ್ಲ ಅದು” ಎಂದುಕೊಂಡಿತು ಮನದಲಿ.  ಹೊಸದರಲ್ಲಿ ಎಲ್ಲವೂ ಸೊಗಸೆನಿಸಿತು. ಇದು ಗರಿಬಿಚ್ಚಿ ರ‍್ತಿಸಿತು ಮೇಲಿಂದ ಕೆಳಗೆ ಜಿಗಿದು, ಟಪಟಪ ರೆಕ್ಕೆಬಡಿದು ಅದರ ಖುಷಿ ಸಂಭ್ರಮಕ್ಕೆ ಕೊನೆ ಇರಲಿಲ್ಲ “ಅಂತು ತಾನು ಸಾಧಿಸಿಬಿಟ್ಟೆ ಇನ್ನು ನನ್ನ ಮನೆಯ ಕಷ್ಟಗಳೆಲ್ಲ ಪರಿಹಾರವಾದಂತೆಯೇ ನನ್ನ ಪಾಲಿಗೆ ಬರಿ ಸುಖವೇ ಇನ್ನು” ಎಂದುಕೊಂಡಿತು.ಹೊಸ ಜಾಗ, ಹೊಸ ಗಿಡ ಮರಗಳು, ಹೊಸ ಮುಖಗಳು ಎಲ್ಲವೂ ಹೊಸದು. ಅಲ್ಲಿದ್ದ ಹಕ್ಕಿಗಳು ಪ್ರೀತಿಯಿಂದ ಸ್ವಾಗತಿಸಿದವು. ಇದು ಸುಮ್ಮನೆ ಪಿಳಿ ಪಿಳಿ ಮುಖ ನೋಡಿತು. ಯಾರು ಯಾರೋ ಮಾತಾಡಿಸಿದವು ಇದಕೆ ಭಾಷೆ ತಿಳಿಯುತ್ತಿಲ್ಲ. ನಕ್ಕು ಸುಮ್ಮನಾಯಿತು. ಹಣ್ಣುಗಳಂತೂ ಕಣ್ಣು ಕೋರೈಸುವಂತೆ ದಪ್ಪ ದಪ್ಪದಾಗಿ ಹಲವು ಬಣ್ಣಗಳಲ್ಲಿ ಮಾಗಿದ್ದವು. ಕೆಲವೊಂದಕ್ಕೆ ನೇರವಾಗಿ ಬಾಯಿಟ್ಟಿತು. ಇಲ್ಲ ಯಾಕೋ ತಿನ್ನಲ್ಲಾಗುತ್ತಿಲ್ಲ.  ಹಣ್ಣೇನೋ ಮಾಗಿದೆ  ಘಮಗುಡುತ್ತಿದೆ ಇದರ ನಾಲಿಗೆ ಮಾತ್ರ ರುಚಿ ಎನಿಸದು. ಈಗ ಅದಕ್ಕೆ ಹಸಿವಿನ ಬೆಲೆ, ಊಟದ ಬೆಲೆ ತಿಳಿಯುತ್ತಾ ಹೋಯಿತು. ಅಪ್ಪ ಅಮ್ಮನ ನೆನಪು ಕಾಡಕೊಡಗಿತು. ನಿಧಾನವಾಗಿ ತಿನ್ನುತ್ತಾ ತಿನ್ನುತ್ತಾ ಅಭ್ಯಾಸ ಮಾಡಿಕೊಂಡಿತು. ಕೊನೆಗೆ ಅದರಲ್ಲೇ ರುಚಿ ಕಂಡುಕೊಂಡಿತು ತನ್ನೂರಿಗೂ ಈ ಹಣ್ಣುಗಳನ್ನು ಒಯ್ದು ತನ್ನವರಿಗೂ ಅಭ್ಯಾಸ ಮಾಡಿಸಬೇಕೆಂದುಕೊಂಡಿತು.  ಒಂದು ಹಣ್ಣು ಒಯ್ದರೆ ಸಾಕು ವರ‍್ಷಕ್ಕಾಗುವಷ್ಟು ಊಟ. ಅಷ್ಟೇನೂ ಭಾರವೂ ಇಲ್ಲ ಹಣ್ಣು.  ಪ್ರತಿ ಬಾರಿ ಎರಡೆರಡು ಹೊಯ್ದು ಒಂದು ಊಟಕ್ಕೆ, ಒಂದು ಮಾರಾಟಕ್ಕೆ ಅದರಿಂದ ಬಂದ  ಲಾಭದಿಂದ ಗಟ್ಟಿ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಆಸೆಪಟ್ಟಿತು.  ಎರಡು ಹಣ್ಣು ಎತ್ತಿಕೊಂಡು ಹಾರಿಹೋಯಿತು. ಕುಟುಂಬದಲ್ಲಿ ಎಲ್ಲ ಸಂಭ್ರಮ ಪಟ್ಟವು. ಹಕ್ಕಿ ಮತ್ತೆ ಹಾರಿ ಹಣ್ಣಿನ ಸಾಮ್ರಾಜ್ಯಕ್ಕೆ ಬಂದಿತು. ಏಕೆಂದರೆ ಅಲ್ಲಿ ನಿಲ್ಲುವಂತಿರಲಿಲ್ಲ! ಇಲ್ಲಿ ಹಣ್ಣಿನ ಸಾಮ್ರಾಜ್ಯದ ಒಡೆಯ ನಿಯಮ ವಿಧಿಸಿದ್ದ ಒಂದು ಹಣ್ಣು ಒಯ್ದರೆ ನಾಲ್ಕು ದಿನಕ್ಕೆ, ಎರಡು ಹಣ್ಣು ತೆಗೆದುಕೊಂಡು ಹೋದರೆ ಎರಡೇ ದಿನಕ್ಕೆ ವಾಪಸ್ ಬರಬೇಕಿತ್ತು. ಹೀಗೆ ವರ‍್ಷಗಳೇ ಕಳೆದು ಹೋದವು. ತನ್ನ ಕುಡಿಯನ್ನು ಮತ್ತೆ ಕಳಿಸಲು ಬೇಸರ ತಂದೆ ತಾಯಿ ಹಕ್ಕಿಗಳಿಗೆ ಆದರೆ ಹೊಟ್ಟೆಪಾಡು,  ತಂದೆ ಹಕ್ಕಿಗೂ ವಯಸ್ಸಾಗುತ್ತಿತ್ತು ಆಹಾರ ಹೊಂದಿಸುವುದು ಕಷ್ಟವಾಗತೊಡಗಿತು.ಇತ್ತೀಚಿಗೆ ಈ ಹಕ್ಕಿ ಇನ್ನೂ ದೊಡ್ಡದಾಗಿತ್ತು ಅಷ್ಟೇ ಅಲ್ಲ ಅದರ ಸ್ವಾರ್ಥವೂ ಹೆಚ್ಚಿತ್ತು ಈಗ ಅದು ಒಮ್ಮೆಲೇ ಐದೈದು ಹಣ್ಣುಗಳನ್ನು ಸಂಪಾದಿಸುವ ಶಕ್ತಿ ಬೆಳೆಸಿಕೊಂಡಿತ್ತು ಹಾಗಾಗಿ ತಾನು ಬಯಸಿದಂತೆ ಗಟ್ಟಿಯಾದ ಸುಭದ್ರವಾದ ಸುಂದರವಾದ ಅಕ್ಕಪಕ್ಕದ ಗೂಡಿನ ಹಕ್ಕಿಗಳೆಲ್ಲ ಮೆಚ್ಚುವಂತಹ ʼಹಕ್ಕಿಗೂಡುʼ ಒಂದನ್ನು ಕಟ್ಟಿತು. ಬಂದಂತಹ ನೆಂಟರಿಷ್ಟರು ಬಂಧುಗಳೆಲ್ಲ ಹರಸಿ ಸಂಭ್ರಮಿಸಿ ಹೋದರು. ಜೊತೆಗೆ ಕೇಳಿಯೂ ಹೋದರು “ಏನು ಹಣ್ಣಿನ ರಾಜ್ಯದಲ್ಲೇ ಉಳಿದುಬಿಡುವ ಬಯಕೆಯೇ? ಇತ್ತ ಬರುವ ಮನಸಾಗದೆ! ನಿನ್ನ ಹೆತ್ತವರಿಗೂ ವಯಸ್ಸಾಯ್ತು ಬಂದುಬಿಡು”. ಇಂತಹ ನೂರಾರು ಪ್ರಶ್ನೆಗಳು, ಮಾತುಗಳು ಚೂಪಾದ ಬಾಣದಲ್ಲಿ ಚುಚ್ಚಿದಂತೆ ಭಾಸವಾಗುತ್ತಿತ್ತು. ಅಲ್ಲಿ ಹಣ್ಣಿನ ಸಾಮ್ರಾಜ್ಯದಲ್ಲಿ ಬಿಡುಗಡೆ ಅಷ್ಟು ಸುಲಭವಿರಲಿಲ್ಲ ಇಲ್ಲಿ ತನಗೆ ವಹಿಸಿದ ಎಲ್ಲ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ, ಸುತ್ತ ಪ್ರೀತಿ ಹಂಚುತ್ತಾ ಯಾರಿಗೂ ನೋವಾಗದೆ, ಎಲ್ಲರೊಡನೆ ಹೊಂದಿಕೊಂಡು ಎಷ್ಟೆಲ್ಲ ದುಡಿದರೂ ಹಣ್ಣಿನ ಸಾಮ್ರಾಜ್ಯದ ಒಡೆಯ ಕರುಣೆ ತೋರುವಂತೆ ಕಾಣಲಿಲ್ಲ. ಹಕ್ಕಿಗೆ ಸಂಕಟ ಹೆಚ್ಚಾಗತೊಡಗಿತು, ಪಶ್ಚಾತ್ತಾಪದಲ್ಲಿ ಬೇಯತೊಡಗಿತು. ತನ್ನವರು, ಬಂಧುಗಳಿಂದ ದೂರಾಗಿ ಒಂಟಿತನ ಕಾಡತೊಡಗಿತು. ಸಂಬಂಧಿಗಳ ಸಂಭ್ರಮದಲಿ, ಸಂತಾಪಗಳಲಿ ಭಾಗವಹಿಸಲಾಗಲಿಲ್ಲ. ಇದೆಲ್ಲದರ ನಡುವೆ ತನ್ನ ತಂದೆಯನ್ನೂ, ಆಪ್ತ ಸಂಬಂಧಿಗಳನ್ನು ಕಳೆದುಕೊಂಡಿತು! ಈಗಂತೂ ಅದಕ್ಕೆ ಹುಚ್ಚುಹಿಡಿಯುವುದೊಂದೇ ಬಾಕಿ ವಿಲವಿಲ ಒದ್ದಾಡಿತು. ಕಾದನೆಲದಲ್ಲಿ ಹೊರಳಾಡಿತು. ಬೇಡಿತು, ಕಾಡಿತು ಹಣ್ಣಿನ ಸಾಮ್ರಾಜ್ಯದ ಒಡೆಯನ ಕಣ್ಣು ತೆರೆಯಲೇ ಇಲ್ಲ. ಅದರ ಜೊತೆಯಾದ ಅದೇ ಸಾಮ್ರಾಜ್ಯದ ಇತರ ಹಕ್ಕಿಗಳು ಅದನ್ನು ಅಪ್ಪಿ ಸಂತೈಸತೊಡಗಿದವು. ಆದರೆ ಪಾಪ ಅವಕ್ಕೂ ಮನೆ ಕುಟುಂಬ ಇದರ ಜೊತೆ ಎಷ್ಟು ಹೊತ್ತು ಇರಲಾದೀತು. ಅವುಗಳ ಪ್ರೀತಿಯೇನೋ ಅಗಾಧವಾಗಿತ್ತು. ಆದರೆ ಎಲ್ಲರ ನಡುವೆ ಇದಕ್ಕೆ ಕೊರಗು ಕಾಡಲು ಶುರು ಆಯ್ತು ಈಗ ಯಾವ ಹಣ್ಣನ್ನ ಹುಡುಕಿ ಬಂದಿತ್ತೋ ಆ ಹಣ್ಣಲ್ಲಿ ರುಚಿ ಕಳೆದುಕೊಳ್ಳಲಾರಂಭಿಸಿತು. “ಹಣ್ಣು ಈಗ ಮೊದಲಿಗಿಂತಲೂ ರುಚಿಯಾಗಿವೆ” ಅಲ್ಲಿನ ಹಕ್ಕಿಗಳು ಹೇಳುತ್ತವೆ. ಆದರೆ ಇದರ ನಾಲಿಗೆಗೆ ರುಚಿ ಎನಿಸುತ್ತಿಲ್ಲ. ಇದೆಲ್ಲದರ ಮಧ್ಯ  ತಿಂಗಳಿಗೆ ಒಂದೊಂದು ಗರಿ ಉದುರಲಾರಂಭಿಸಿತು. ನೋಡು ನೋಡುತ್ತಲೇ ಹಕ್ಕಿ ಹಣ್ಣಾಗಿ  ಗರಿಕಳಚಿ ಬೋಳಾಗತೊಡಗಿತು. ಈಗ ಮತ್ತಷ್ಟು ಭಯ ಉಂಟಾಯಿತು ಅದಕೆ. ತನ್ನ ಮನೆಯ ತುಂಬಾ ರಾಶಿ ಹಣ್ಣುಗಳಿವೆ ಯಾವುದಕ್ಕೂ ಕೊಕ್ಕು ಹಚ್ಚಲಾಗುತ್ತಿಲ್ಲ ಬಣ್ಣ ಬಣ್ಣದ ರಾಶಿ ಹೂವುಗಳಿವೆ ಸಂಭ್ರಮಿಸಲಾಗುತ್ತಿಲ್ಲ. ಏನೇನೋ ಪ್ರಯತ್ನ ಪಡ್ತಿದೆ ಎಲ್ಲ ಸರಿ ಮಾಡಬೇಕು, ಇದೆಲ್ಲದರಿಂದ ಹೊರ ಬರಬೇಕು, ನಾನು ಮರಳಿ ಗೂಡು ಸೇರಬೇಕು, ತನ್ನವ್ವನ ಮಡಿಲಲ್ಲಿ ಮಲಗಬೇಕು. ಇಲ್ಲ ಹಣ್ಣಿನ ಸಾಮ್ರಾಜ್ಯದ ಒಡೆಯ ಹೃದಯ ಕಲ್ಲಾಗಿಸಿದ್ದ..! ಒಂದೊಂದಾಗಿ ತನ್ನದೆಲ್ಲವನ್ನು ಕಳೆದುಕೊಂಡ ಹಕ್ಕಿ ಗೂಡಿಂದ ಹೊರಬರುವುದನ್ನು  ನಿಲ್ಲಿಸಿ ಬಿಟ್ಟಿತು. ತನ್ನೂರಿಗೆ ಹೋಗುವಾಗ ಮಾತ್ರ ಸಂಭ್ರಮಿಸಿ ಮತ್ತೆ ಅಲ್ಲಿಂದ ಬರುವಾಗ ದಾರಿಯುದ್ದಕ್ಕೂ ಕಣ್ಣೀರುಗರೆಯುತ್ತ ಬರುತ್ತಿತ್ತು.ಇತ್ತ ಎಲ್ಲ ಇದ್ದು ತನ್ನವರಿಂದ ದೂರ ಉಳಿದು ನರಳುವ ಪಾಡು ತನ್ನದಾದರೆ ಅತ್ತ ಕಟ್ಟಿದ ಗೂಡಲ್ಲಿ ಯಾರು ವಾಸವಿರದೆ ಯಾವುದೋ ಬರಸಿಡಿಲಿಗೆ ಬಲಿಯಾಗಿ ಕುಟುಂಬ ದಿಕ್ಕಾಪಾಲಾಗಿ ಇರುವ ಪರಿಸ್ಥಿತಿ ಮತ್ತೊಂದೆಡೆ. ಕೊನೆಗೆ ಹಕ್ಕಿ  ಹಣ್ಣೊಂದರ ಮೇಲೆ ಕುಳಿತು ಯೋಚಿಸತೊಡಗಿತು ಕಣ್ಣೀರು ಅದರ ಪಾದ ಸವರಿ ಹಣ್ಣಿನ ಮೇಲೆ ಹರಿಯತೊಡಗಿತು. “ತಾನು ಸಾಧಿಸಿದ್ದಾದರೂ ಏನು…! ಹೊಟ್ಟೆಪಾಡಿಗಾಗಿ ಆ ದೇವರನ್ನು ಹಣ್ಣಿನ ಸಾಮ್ರಾಜ್ಯದ ದಾರಿ ತೋರಿಸು ಎಂದು ಬೇಡಿದ್ದೇ ತಪ್ಪಾಯ್ತೇ.. ಅನ್ನ ಬೇಡಿದ್ದಕ್ಕೆ ಈ ಪರಿ ಶಿಕ್ಷೆಯೇ, ಯಾವ ತಪ್ಪಿಗೆ! ಯಾರಿಗೆ ತೊಂದರೆ ಕೊಟ್ಟಿದ್ದಕ್ಕೆ!” ಸುಮ್ಮನೆ ಪಶ್ಚಾತಾಪದಲ್ಲಿ ಬೇಯತೊಡಗಿತ್ತು. ಯೋಚನೆಯಲಿ ಹಕ್ಕಿ ಮತ್ತಷ್ಟು ಹಣ್ಣಾಯಿತು. ಈಗ ಅದಕ್ಕೆ  ಈ ಹಣ್ಣುಗಳನ್ನು ನೋಡಿ ವಾಕರಿಕೆ ಶುರುವಾಯಿತು. ಹಸಿವೂ ಪ್ರಾಯಶ್ಚಿತ ರೂಪದಿ ಇಂಗತೊಡಗಿತು. “ಇಲ್ಲ, ಇಲ್ಲ ಆಗುತ್ತಿಲ್ಲ” ಕೊಕ್ಕಿನಿಂದ ಒಂದು ಚೂರು ತಿನ್ನಲಾಗುತ್ತಿಲ್ಲ, ದುಸ್ತರವಾಯಿತು ಮಲಗಲೂ ಕೂಡ. ಬದುಕಲು ಬಹಳ ಕಷ್ಟ ಪಡುತ್ತಿದೆ ಜೀವವಿದ್ದಾಗಲೇ ತನ್ನ ಗೂಡು ಸೇರಬೇಕೆಂಬ ಹಂಬಲ ಹಿಡಿದು ಉಸಿರಾಡುತಿದೆ. ಇನ್ನೇನೋ ಇದು ಉಳಿಯುವುದೇ ಇಲ್ಲ ಎನ್ನುವುದು ಅವನಿಗೆ ಅರಿವಾಯಿತೋ ಏನೋ ಅವನು ಎಲ್ಲ ಬಲ್ಲವ!  ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದ ಎಷ್ಟೋ ರ‍್ಷಗಳ ನಂತರ!   ಅದರ ಸುತ್ತಮುತ್ತ ವಾಸವಿದ್ದ ಹಕ್ಕಿಗಳೆಲ್ಲ ಸಂಭ್ರಮಿಸಿದವು “ಹೋ!!” ಎಂದು. ಇದು ತನ್ನ ಬಾಡಿಗೆಗೂಡಿನಿಂದ ಹೊರಬರಲಾಗದೆ ತೆವಳುತ್ತಾ ಇಣುಕಿ ನೋಡಿತು ನಂಬಲಾಗುತ್ತಿಲ್ಲ ಅದಕ್ಕೆ. ಹೌದು! ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದಿದ್ದಾನೆ! ಇಷ್ಟು ರ‍್ಷ ಕಾಡಿ ಬೇಡಿದರೂ ಮೂಕನಾಗಿದ್ದನವ ಇಂದು ಕಣ್ಣು ತೆರೆದ. ಹಕ್ಕಿಗೆ ಸಂಭ್ರಮಿಸಬೇಕೋ, ಸಂಕಟಪಡಬೇಕೋ ತಿಳಿಯುತ್ತಿಲ್ಲ ತಾನು “ವಾಪಸ್ ತನ್ನೂರಿಗೆ ತೆರಳುವೆನೇ, ಇಲ್ಲಿಂದ ಪರ‍್ತಿ ಪ್ರಮಾಣದಲ್ಲಿ ಬಿಡುಗಡೆ ಹೊಂದಿ ನನ್ನ ಊರಲ್ಲಿ ನೆಲೆಸುವ ಭಾಗ್ಯ ನನಗೆ ದೊರೆತೀತೇ, ಅಥವಾ ಮತ್ತಾವುದೋ ಜನ್ಮದ ತಪ್ಪಿನ ಲೆಕ್ಕ ತೆಗೆದು ಶಿಕ್ಷೆ ರೂಪದಿ ಮತ್ತೊಂದು ಹಣ್ಣಿನರಾಜ್ಯಕ್ಕೆ ಎಸೆಯುವನೇ?” ಏನೊಂದು ತೋಚುತ್ತಿಲ್ಲ. ಏನನ್ನು ನಂಬಲಾಗುತ್ತಿಲ್ಲ. ಹಣ್ಣಿನ ಸಾಮ್ರಾಜ್ಯದ ಒಡೆಯ ಬಳಿ ಕರೆದು ಹೇಳಿದ “ನೀನಿನ್ನು ಹೊರಡಬಹುದು, ನಿನ್ನ ಸಮಯ ಮುಗಿಯಿತು”. ಖುಷಿಯಲ್ಲಿ ಹಕ್ಕಿ ಹಾರಲು ಪ್ರಯತ್ನಿಸಿತು ಆಗುತ್ತಿಲ್ಲ, ತಿನ್ನಲು ಪ್ರಯತ್ನಿಸಿತು ಆಗುತ್ತಿಲ್ಲ. ಏನು ಮಾಡುವುದು ತಿಳಿಯದೆ ಹಣ್ಣಿನ ಸಾಮ್ರಾಜ್ಯದ ಒಡೆಯನನ್ನೇ ಕೇಳಿತು‌. “ನಾನೀಗ ಶಕ್ತಿಹೀನ ಎಲ್ಲವನ್ನು ಕಳೆದುಕೊಂಡಿದ್ದೇನೆ”. ಕರುಣಾಳು ದಯಾಮಯಿ ಅವ ಹೇಳಿದ “ಸರಿ, ನಿನ್ನ  ಊರಿಗೆ ಹೋಗಿ ತಲುಪುವಷ್ಟು ಶಕ್ತಿಯನ್ನು ನೀಡುತ್ತೇನೆ ಮುಂದಿನದು ನಿನ್ನ ಜವಾಬ್ದಾರಿ”. ಅಷ್ಟಕ್ಕೆ ಹಕ್ಕಿ ಸಂಭ್ರಮಿಸಿ ನಲಿದಾಡಿತು ಅವನ ಮಹಿಮೆಯನ್ನು ಕೊಂಡಾಡಿತು. ದೂರದ ತೀರಕೆ ಹಾರಿತು ಹಾರಿತು ತಾನು ಹಾರಿ ಬಂದಿದ್ದ ದಿಕ್ಕಿಗೆ. ಆದರೆ ಕಣ್ಣು ಮಂಜು ಮಂಜು ನೋಡಿದರೆ ಯಾವುದೋ ಹೊಸ ಊರು!“ಅಯ್ಯೋ ನಾನು

ರೋಹಿಣಿ ಜೆ ಅವರ ಸಣ್ಣ ಕಥೆ “ಹಾರಾಟ ಮುಗಿದ ಹಕ್ಕಿ!” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-34 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ರಣವೀರನಾಗಬೇಕಾದ ಮಣಿಪುರದರಸ ಮಣಿದ ನನಗೆ ‘ಮಣಿಪುರದರಸು ಬಭ್ರುವಾಹನ ನಿಮ್ಮ ಯಜ್ಞಾಶ್ವವನ್ನು ಕಟ್ಟಿಹಾಕಿದ್ದಾನೆ. ಬಿಡಿಸಿಕೊಂಡುಹೋಗುವ ಸಾಮರ್ಥ್ಯವಿದ್ದರೆ ಯುದ್ಧರಂಗದಲ್ಲಿ ಪರಾಕ್ರಮ ತೋರುವವರಾಗಬೇಕು’ ಎಂಬ ಸಂದೇಶವದು ನಮ್ಮನ್ನು ತಲುಪಿತು. ಅದಾಗಲೇ ಸೂರ್ಯ ಅಸ್ತಂಗತನಾಗಿದ್ದ. ಆ ದಿನ ಯುದ್ಧ ನಡೆಯುವುದು ಸಾಧ್ಯವಿರಲಿಲ್ಲ. ಇನ್ನೇನಿದ್ದರೂ ಮರುದಿನವಷ್ಟೇ ಕದನಕೋಲಾಹಲ ಆರಂಭ.ನನ್ನ ಆಪ್ತರ ಜೊತೆ ಮರುದಿನದ ಯುದ್ಧತಂತ್ರಗಳನ್ನು ಚರ್ಚಿಸಿದೆ. ಸಮರ್ಥನೆನಿಸಿಕೊಂಡ ಬಭ್ರುವಾಹನನನ್ನು ಹೀನಾಯವಾಗಿ ಸೋಲಿಸಿದರೆ ನನ್ನ ವಿಜಯಮಾಲೆಗೆ ಹೊಸದೊಂದು ಕುಸುಮದ ಆಗಮನವದು ಖಚಿತ ಎನಿಸಿತು. ಬಭ್ರುವಾಹನನ ಸ್ಮರಣೆಯಲ್ಲಿಯೇ ಇರುಳು ಕಳೆಯಿತು.ಬೆಳಕು ಮೂಡಿತು. ನಿತ್ಯಕರ್ಮಗಳನ್ನು ಪೂರೈಸಿದೆ. ಜಪತಪಾದಿಗಳನ್ನು ಮುಗಿಸಿದೆ. ಕೃಷ್ಣ ಪಾದಪದ್ಮಗಳನ್ನು ನೆನೆದೆ. ನಮ್ಮ ಪಾಳಯದ ವೀರರೆಲ್ಲರನ್ನೂ ಕರೆಸಿದೆ. ಅವರ ಜೊತೆಗೆ ಯುದ್ಧರಂಗಕ್ಕೆ ಹೊರಟೆ.ಅನುಸರಿಸುತ್ತಿತ್ತು ಅನುಸಾಲ್ವಕನ ಸೇನೆ ನನ್ನನ್ನು. ಯುಕ್ತಿಯ ಯಾದವ ಚತುರಂಗವದು ಜೊತೆಗಿತ್ತು. ಒಡನೆಯೇ ಬಂತು ವೃಷಕೇತುವಿನ ವ್ಯಗ್ರಸೇನೆ. ಯುದ್ಧಚತುರ ಯೌವನಾಶ್ವನ ದಂಡು ಹಿಂದೆಯೇ ಇತ್ತು. ಹಂಸಧ್ವಜನ ಹೋರಾಟದ ಪಡೆಯದು ಮುನ್ನುಗ್ಗುತ್ತಿತ್ತು. ಘನವಾದ್ಯಗಳ ಧ್ವನಿಯದು ಮೊಳಗಿರಲು ನಾವೆಲ್ಲರೂ ಬಂದುಸೇರಿದೆವು ರಣರಂಗವನ್ನು.ನಾನು ಮುಂಚೂಣಿಯಲ್ಲಿದ್ದೆ. ಬಭ್ರುವಾಹನನ ಆಗಮನಕ್ಕಾಗಿ ನನ್ನ ಕಣ್ಣು ಕಾತರಿಸುತ್ತಿತ್ತು. ಅಪಾರ ಜನಸಮೂಹದೊಂದಿಗೆ ಮಣಿಪುರದೊಡೆಯ ಬರುತ್ತಿರುವುದು ಕಂಡಿತು. ನೋಡಿದೆ! ಸರಿಯಾಗಿ ಇನ್ನೊಮ್ಮೆ ನೋಡಿದೆ! ಯುದ್ಧೋನ್ಮುಖವಾಗಿ ಬರುತ್ತಿರುವ ದಂಡು ಅದಲ್ಲ ಎಂದು ತೋರಿತು ನನಗೆ.ಘನವಾದ್ಯದ ಮೊರೆತವಿರಲಿಲ್ಲ. ಕಾಳಗದ ಆರ್ಭಟವದು ಅಲ್ಲಿರಲಿಲ್ಲ. ಶುಭಸೂಚಕವಾದ ಇಂಪು ವಾದನಗಳ ಧ್ವನಿಯದು ಕೇಳಿಬರುತ್ತಿತ್ತು. ಕಳಶ, ಕನ್ನಡಿಗಳನ್ನು ಹಿಡಿದು ಅಲಂಕೃತರಾಗಿ ಮಂದಗಮನೆಯರಾಗಿ ಸಾಗಿಬರುತ್ತಿದ್ದರು ಲಲಿತಾಂಗಿಯರು. ಬ್ರಾಹ್ಮಣರಿದ್ದರು ಆ ಮೆರವಣಿಗೆಯಲ್ಲಿ, ವೇದಮಂತ್ರಗಳನ್ನು ಪಠಿಸುತ್ತಾ. ಈ ಬಗೆಯಲ್ಲಿ ಯುದ್ಧಕ್ಕೆ ಆಗಮಿಸುವುದೂ ಇದೆಯೇ! ಎಂದು ಅಚ್ಚರಿಯಾಯಿತು ನನಗೆ.ಮೆರವಣಿಗೆಯ ಮೊಟ್ಟಮೊದಲಲ್ಲಿದ್ದ ಬಭ್ರುವಾಹನ. ಹತ್ತಿರ ಬಂದAತೆಲ್ಲಾ ಅವನ ರೂಪವದು ಸ್ಪಷ್ಟವಾಯಿತು. ಒಂದಷ್ಟು ವರ್ಷಗಳಿಗೆ ಮೊದಲು ನಾನು ಹೇಗಿದ್ದೆನೋ ಹಾಗೆಯೇ ಇದ್ದಾನೆ.ನೇರವಾಗಿ ಬಂದ ನನ್ನೆಡೆಗೆ, ನಗುವನ್ನು ಸೂಸುತ್ತಾ. ಕದನ ಭಾವವದು ಅವನ ಮುಖದಲ್ಲಿ ಎಳ್ಳಷ್ಟೂ ಕಾಣಿಸಲಿಲ್ಲ. ನನಗೆ ತೀರಾ ಸನಿಹದವನಾಗಿ ನಿಂತ, ಆನಂದದಿAದ ನನ್ನ ಮೊಗವನ್ನು ನಿಟ್ಟಿಸುತ. ಒಡನೆಯೇ ತನ್ನ ಶಿರದಲ್ಲಿ ಶೋಭಿಸುತ್ತಿದ್ದ ಕಿರೀಟವನ್ನು ತೆಗೆದ. ನನ್ನ ಪಾದಗಳ ಬಳಿಯಿಟ್ಟ. ಅದು ಶರಣಾಗತಿಯ ಸಂಕೇತ. ಅಚ್ಚರಿಯಾಯಿತು ನನಗೆ. ಯುದ್ಧಕ್ಕೂ ಮೊದಲೇ ಶರಣು ಬಂದನೇ ಈತ! ಎನಿಸಿತು. ಮುಂದೇನು ಮಾಡಲಿದ್ದಾನೋ ಎಂಬAತೆ ನೋಡಿದೆ. ಅನರ್ಘ್ಯ ರತ್ನಗಳನ್ನು ನನ್ನ ಪಾದಮೂಲಕ್ಕೆ ಸುರಿದ. ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ಹಾಗೆಯೇ ಸಾಷ್ಟಾಂಗ ಪ್ರಣಾಮವನ್ನೇ ಮಾಡಿದ, ನೆಲದ ಮೇಲೆ ಒರಗಿ.ತಕ್ಷಣವೇ ಅಲ್ಲಿ ನೆರೆದಿದ್ದ ಮಣಿಪುರದ ಜನರು, ಹೆಂಗಳೆಯರು ನನ್ನ ಮೇಲೆ ಮುತ್ತಿನ ಮಳೆಗರೆದರು. ಬಗೆಬಗೆಯ ಕಾಣಿಕೆಗಳನ್ನು ನನಗಿತ್ತರು ಅಲ್ಲಿಯ ಸಚಿವರು. ಪರಾಕ್ರಮದ ಮಾತು, ಹರಿತ ಬಾಣಗಳ ಪ್ರಯೋಗ, ಹೀಗಳೆವ ಹೀನನನುಡಿ ಇವುಗಳನ್ನೆಲ್ಲಾ ನಿರೀಕ್ಷಿಸಿ ಹೋಗಿದ್ದ ನಾನು ಬಭ್ರುವಾಹನನ ವಿನಯಶೀಲತೆ, ಅಲ್ಲಿನ ಜನರ ಮುತ್ತಿನ ಮಳೆ, ಅಪೂರ್ವ ಕಾಣಿಕೆಗಳು ಇದನ್ನೆಲ್ಲಾ ಕಂಡು ವಿಸ್ಮಯಚಕಿತನಾದೆ. ನನ್ನ ಜೊತೆಗಿದ್ದ ನನ್ನ ಆಪ್ತರೂ ಸಹ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿದ್ದರು. ಕೇಳಿದೆ ಬಭ್ರುವಾಹನನಲ್ಲಿ, “ಏನಿದೆಲ್ಲಾ?! ಯಾಕೆ ಈ ಪರಿಯ ವಿನಯಶೀಲತೆ?!”ಒಡನೆಯೇ ಅವನು ನನ್ನನ್ನು ‘ತಂದೆ’ ಎಂದು ಸಂಭೋದಿಸಿದ. ನನ್ನ ಕಣ್ಣುಗಳರಳಿದವು, ಚಕಿತತೆಯಿಂದ. “ನಾನು ನಿಮ್ಮ ಮಗ. ನೀವಂದು ತೀರ್ಥಯಾತ್ರೆಗೆಂದು ಇಲ್ಲಿಗೆ ಬಂದಾಗ ನಿಮ್ಮಿಂದ ಜನಿಸಿದವನು ನಾನು. ನನ್ನ ತಾಯಿ ಚಿತ್ರಾಂಗದೆ. ಪ್ರೀತಿಯಿಂದ ಸಲಹಿದವಳು ಉಲೂಪಿ. ನೀವೆನ್ನ ಜನಕ ಎಂಬ ಸತ್ಯವನ್ನು ಅರಿಯದೆಯೇ ಕಟ್ಟಿದೆ ಕುದುರೆಯನ್ನು. ಕ್ಷಮಿಸಬೇಕು ನಾ ಮಾಡಿದ ಈ ಬಗೆಯ ತಪ್ಪನ್ನು” ಎಂದವನು ತಪ್ಪು ಮಾಡಿ ಸಿಕ್ಕಿಬಿದ್ದ ಎಳೆಮಗುವಿನಂತೆ ಕಾಲಿಗೆ ಬಿದ್ದ.ನಾನು ಏನೊಂದು ನುಡಿಯನ್ನೂ ಆಡಲಿಲ್ಲ. ನನ್ನನ್ನೇ ನೋಡುತ್ತಿದ್ದರು ನನ್ನಾಪ್ತರು, ಆತ್ಮೀಯರು. ಇದಾವ ಹೊಸ ಬಾಂಧವ್ಯವಿದು ಬಂದಪ್ಪಿದೆ ಈ ಅರ್ಜುನನನ್ನು ಎಂಬ ಭಾವವಿತ್ತು ಅವರ ಆ ಕಣ್ಣೋಟದಲ್ಲಿ. ಬಭ್ರುವಾಹನ ನನ್ನ ಮಗ ಎನ್ನುವುದನ್ನು ಸಂಪೂರ್ಣವಾಗಿ ನಂಬಿದAತಿತ್ತು ಅವರ ಮಾತುಗಳು.“ನಿನ್ನ ಮಗನಾದ ಈ ಬಭ್ರುವಾಹನ ಮಹಾ ಪರಾಕ್ರಮಿ. ವೈಭವಯುತನಾಗಿದ್ದಾನೆ. ಹೊಗಳಿಕೆಗೆ ಅರ್ಹನೆನಿಸಿಕೊಂಡಿದ್ದಾನೆ. ನಿನ್ನನ್ನೇ ಹೋಲುತ್ತಾನೆ ರೂಪದಲ್ಲಿ. ಪಾದವನ್ನಪ್ಪಿರುವ ಈತನನ್ನು ಕ್ಷಮಿಸದೆಯೇ ಸುಮ್ಮನೆ ಏಕೆ ನಿಂತೆ?! ಮನ್ನಿಸು ಅವನನ್ನು” ಎಂದರು ಅವರೆಲ್ಲರೂ.ಹೀಗೆ ಬಭ್ರುವಾಹನ ನಡೆದುಕೊಳ್ಳುವುದರ ಹಿಂದೆ ಒಂದು ಬಲವಾದ ಕಾರಣವಿತ್ತು. ಹಿಂದಿನ ದಿನ ನಮ್ಮ ಕುದುರೆಯನ್ನು ಕಟ್ಟಿಸಿದ್ದ ಆತ ನಮ್ಮೆದುರಿನ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದ. ಈ ಸಮಯದಲ್ಲಿಯೇ ಅವನ ತಾಯಿಗೆ ಈ ವಿಷಯ ಗೊತ್ತಾಯಿತಂತೆ. ತಕ್ಷಣವೇ ಅವನ ಬಳಿಹೋಗಿ, “ಅರ್ಜುನ ನಿನ್ನ ತಂದೆ. ಅವನ ಕುದುರೆಯನ್ನು ಕಟ್ಟಿರುವುದು ಸರಿಯಲ್ಲ” ಎಂದಳAತೆ. ಈ ವಿಚಾರವನ್ನು ಸುಬುದ್ಧಿಯ ಜೊತೆಗೆ ಚರ್ಚಿಸಿದನಂತೆ ಬಭ್ರುವಾಹನ. “ತಂದೆಯೆAದು ತಿಳಿಯದೇ ಇದ್ದಾಗ ಕುದುರೆಯನ್ನು ಕಟ್ಟಿಸಿದವ ನೀನು. ಈಗ ನಿಜ ವಿಚಾರ ತಿಳಿದ ಬಳಿಕವೂ ಹಾಗೆಯೇ ನಡೆದುಕೊಳ್ಳುವುದು ಉಚಿತವಲ್ಲ” ಎಂಬ ಸಲಹೆಯನ್ನು ನೀಡಿದನಂತೆ ಸುಬುದ್ಧಿ. ಈ ಕಾರಣಕ್ಕೇ ಬಭ್ರುವಾಹನ ಯುದ್ಧಚಂತನೆಯನ್ನು ತೊರೆದು, ಶರಣಾಗತನಾಗಿ ನನ್ನೆದುರಿಗೆ ಬಂದದ್ದು.ನನಗಂತೂ ಬಭ್ರುವಾಹನ ನುಡಿದದ್ದೆಲ್ಲವೂ ಕಟ್ಟುಕಥೆ ಎಂದೇ ತೋರಿತು. ನನ್ನನ್ನು ಎದುರಿಸಲಾರದ ಅಧೈರ್ಯಕ್ಕೆ ಒಳಗಾದವನು ಸುಳ್ಳು ಹೇಳುತ್ತಿದ್ದಾನೆ ಎನಿಸಿತು. ಹೀಗಿದ್ದಾಗಲೇ ನಮ್ಮವರಾಡಿದ “ಕ್ಷಮಿಸು ಮಗನನ್ನು” ಎಂಬ ಮಾತು ನನ್ನನ್ನು ಕೆರಳಿಸಿತು. ಉಗ್ರನೋಟ ಬೀರಿದೆ ಬಭ್ರುವಾಹನನೆಡೆಗೆ… ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಇತರೆ

ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ(ಒಂದು ಶ್ರದ್ಧಾಂಜಲಿ )ವೀಣಾ ಹೇಮಂತ್‌ ಗೌಡ ಪಾಟೀಲ

ಶ್ರದ್ಧಾಂಜಲಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ (ಒಂದು ಶ್ರದ್ಧಾಂಜಲಿ ) ಜಾನಕಿ ಅಮ್ಮ…. ಚಿಕ್ಕಂದಿನಲ್ಲಿ ನಾವು ರೇಡಿಯೋದಲ್ಲಿ ಕೇಳುತ್ತಿರುವಾಗ ಬಾಯಿ ಪಾಠವಾದ ನಿಮ್ಮ ಹೆಸರು ಇಂದಿಗೂ ನಮ್ಮ ಕಿವಿಗಳಲ್ಲಿ ಅನುರಣಿಸುತ್ತದೆ . ಚಲನಚಿತ್ರದ ಹಾಡಿನ ಗಾಯಕರು ಎಂದೊಡನೆ ನಾವು ಕೂಡ ನಿಮ್ಮ ಹೆಸರನ್ನು ಉದ್ಘೋಷಕರ ಜೊತೆಗೆ ಅದೆಷ್ಟು ಆತ್ಮವಿಶ್ವಾಸದಿಂದ ಹೇಳುತ್ತಿದ್ದೆವು ಗೊತ್ತೇ?.ಹಾಗೆ ನಿಮ್ಮ ಸುಶಾವ್ಯವಾದ ಕಂಠಸಿರಿ, ಅತ್ಯಪರೂಪದ ಪ್ರತಿಭೆ, ಭಾವಪೂರ್ಣ ಗಾಯನಗಳಿಂದ ಇಡೀ ಭಾರತ ದೇಶದ ಹೆಮ್ಮೆಯ ಹಿನ್ನೆಲೆ ಗಾಯಕಿಯಾಗಿ ಗಾನ ಸರಸ್ವತಿಯಾದವರು ನೀವಲ್ಲವೇ? ಬಹುಶಹ ಅಂದಿನಿಂದ ಇಂದಿನವರೆಗೂ ನಿಮ್ಮದೇ ಹಾಡುಗಳನ್ನು ಕೇಳುತ್ತಲೇ  ಹುಟ್ಟಿ ಬೆಳೆದು ಅರಳಿ ದೊಡ್ಡವರಾಗಿ ಮಧ್ಯ ವಯಸ್ಸನ್ನು ತಲುಪಿದ್ದೇವೆ. ಪ್ರಸ್ತುತ ನೀವು ನಮ್ಮೊಂದಿಗಿಲ್ಲ, ನಿಜ….ಆದರೆ ನಿಮ್ಮ ಹಾಡುಗಳು…. ಎಂದೆಂದಿಗೂ  ಅಮರ… ಅತ್ಯಂತ ಸುಮಧುರ.1938ರ ಏಪ್ರಿಲ್ 23ರಂದು ನೀವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಟಣ ಗ್ರಾಮದಲ್ಲಿ ಜನಿಸಿದಿರಿ. ಶಾಸ್ತ್ರೀಯವಾಗಿ ಗಾಯನವನ್ನು ಕಲಿಯದೆ ಹೋದರೂ ಕೂಡ ನಿಮ್ಮ ಆಸಕ್ತಿ, ಶ್ರದ್ದೆ ಹಾಗೂ ನಿರಂತರ ಪರಿಶ್ರಮದ ಫಲವಾಗಿ 1957ರಲ್ಲಿ ಮೊತ್ತ ಮೊದಲ ಬಾರಿಗೆ ತೆಲುಗು ಚಿತ್ರರಂಗದ ಮೂಲಕ ಗಾಯನ ಪ್ರಪಂಚಕ್ಕೆ ಕಾಲಿಟ್ಟಿರಿ. ಮುಂದೆ ನಡೆದದ್ದು ಇತಿಹಾಸ. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿಯಂತಹ ದೇಶಿ ಭಾಷೆಗಳಲ್ಲಿ, ಇಂಗ್ಲೀಷ್ ಜಪಾನಿ ಜರ್ಮನಿ, ಸಿಂಹಳೀಹಾಗೂ ಫ್ರೆಂಚ್ ಭಾಷೆಗಳನ್ನು ಸೇರಿದಂತೆ  ಸುಮಾರು 17 ಭಾಷೆಗಳಲ್ಲಿ ನೀವು ಹಾಡಿದಿರಿ…. ಆ ದೇವಗಂಗೆ ನಿರಂತರವಾಗಿ ಪುಣ್ಯ ಸಲಿಲವನ್ನು  ಹೊತ್ತು ಹರಿದರೆ  ನೀವು ನಿರಂತರವಾಗಿ ಹಾಡುಗಳ ಗಾಯನದ ಶರೀರವನ್ನು ಹೊತ್ತು ನಡೆದಿರಿ ಅಂತೆಯೇ ನೀವು…. ಗಾಯನ ಗಂಗೆ. ಭಕ್ತಿ ಗೀತೆಗಳು ಭಾವಗೀತೆಗಳು ವಿರಹ ಗೀತೆಗಳು ಪ್ರೀತಿ ಪ್ರೇಮ ಸರಸ ಸಲ್ಲಾಪ ಚೆಲ್ಲಾಟ ಹೀಗೆ ಹತ್ತು ಹಲವು ಭಾವಗಳನ್ನು ಸೂಸಿ ಹಾಡುವ ನಿಮ್ಮ ಗಾಯನ ಪ್ರತಿಭೆ ಅದ್ಭುತವಾದದ್ದು. ಭಾಷೆ ಯಾವುದೇ ಇರಲಿ ಭಾವಪೂರ್ಣವಾಗಿ ಹಾಡುವ ನಿಮ್ಮ ಕಲೆಗೆ ನೀವೇ ಸಾಟಿ… ಆದ್ದರಿಂದಲೇ ನೀವು ದಕ್ಷಿಣ ಭಾರತದ ಗಾನ ಸರಸ್ವತಿ ಎಂದರೆ ತಪ್ಪಿಲ್ಲ ಅಲ್ವೇ ಅಮ್ಮನೂರಾರು ಚಲನಚಿತ್ರಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ನಮ್ಮೆಲ್ಲರ ಮನೆ ಮನೆಗಳಲ್ಲಿ ನಿಮ್ಮದೇ ಆದ ಪ್ರೀತಿಯ ನೆಲೆಯನ್ನು ಕಂಡುಕೊಂಡಿರುವ ನೀವು ಹಾಡಿದ ಹಾಡುಗಳ ವಿನ: ನಮ್ಮ ಮುಂಜಾನೆಗಳು ಆರಂಭವಾಗುವುದಿಲ್ಲ ರಾತ್ರಿಗಳು ಕೊನೆಗೊಳ್ಳುವುದಿಲ್ಲ. ಯಾವುದೋ ಒಂದು ರೀತಿಯಲ್ಲಿ ನಿಮ್ಮ ದನಿ ನಮಗೆ ಕೇಳಿಸುತ್ತಲೇ ಇರುತ್ತದೆ. ಸರಿಸುಮಾರು ಆರು ದಶಕಗಳ ಕಾಲ ಒಟ್ಟು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದವರು ನೀವಲ್ಲವೇ ಅಮ್ಮ ? ವಿವಿಧ ರಾಜ್ಯಗಳ ಒಟ್ಟು 33 ರಾಜ್ಯ ಪ್ರಶಸ್ತಿಗಳು,. ನಾಲ್ಕು ಬಾರಿ ಭಾರತ ದೇಶದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ನೀವು ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಕೂಡ ನಿಮ್ಮ ಯಶಸ್ಸಿನ ಮುಕುಟದ ಗರಿಗೆ ಸಿಕ್ಕಿಸಿಕೊಂಡವರು. ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವವನ್ನು ಪಡೆದುಕೊಂಡವರು ನೀವು. ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಹಾಗೂ ಕರ್ನಾಟಕದ ಅತ್ಯುನ್ನತ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರು ಕೂಡ ನೀವೇ ಅಲ್ಲವೇ ಕನ್ನಡದಲ್ಲಿ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿಯನ್ನು ನೀಡದೆ ಇರುವುದನ್ನು ವಿರೋಧಿಸಿ ಸರ್ಕಾರವನ್ನು ನಿಷ್ಟುರವಾಗಿ ಖಂಡಿಸಿದವರು. ಆದರೆ ಒಂದೊಮ್ಮೆ ನಿಮ್ಮ ನಿಷ್ಟುರತೆಯ ಹಿಂದಿರುವ ಕಳಕಳಿಯನ್ನು ಅರ್ಥ ಮಾಡಿಕೊಂಡ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಲು ಆರಂಭಿಸಿದಾಗ ಅತಿ ಹೆಚ್ಚು ಸಂತಸ ಪಟ್ಟವರು ಕೂಡ ನೀವೇ ಅಲ್ಲವೇ ಅಮ್ಮ.?ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಭಾಷೆಗಳಿಗೆ ಇರುವುದು ಕೂಡ ಒಂದೇ ಭಾವ ಅದು ಮನದ ಭಾವ. ದೇಶ ಭಾಷೆ ಗಡಿಗಳನ್ನು ದಾಟಿ ಸಂಗೀತವು ಎಲ್ಲರ ಮನಗಳನ್ನು ತಲುಪುತ್ತದೆ ಎಂದು ನೀವು ಹೇಳಿರುವುದು ಅದೆಷ್ಟು ಸತ್ಯ ಅಲ್ಲವೇ ಅಮ್ಮ ? ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾನಿಂದೇ ಎಂದು ನೀವು ಹೇಳಿದಾಗ ಖುದ್ದು ನಮ್ಮ ಅಮ್ಮನೇ ಹಾಡುತ್ತಿರುವಳೇನು ಎಂಬ ಭಾವ. ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ವಿನೂತನ ಜೀವಭಾವ ಎಂದು ನೀವು ಹಾಡಿದಾಗ ಹರೆಯದ ಹೆಣ್ಣು ಮಕ್ಕಳ ಮನದಲ್ಲಿ ಉಲ್ಲಾಸವನ್ನು ಕಾಣಬಹುದು ಅಲ್ಲವೇ ಅಮ್ಮ. ಎಳೆಯ ಬಾಲಕಿಯ ಧ್ವನಿಯಿಂದ ಹಿಡಿದು ಮುಪ್ಪಾನ ಮುದುಕಿಯವರೆಗೆ ಎಲ್ಲ ವಯೋಮಾನಕ್ಕೆ ಹೊಂದುವಂತೆ ನಿಮ್ಮ ಕಂಠ ಸಿರಿಯನ್ನು ಬದಲಿಸಿ ಹಾಡುವ ಕೌಶಲ್ಯ ನಿಮ್ಮದಾಗಿತ್ತು. ಇದರ ಸಂಪೂರ್ಣ ಲಾಭವನ್ನು ಪಡೆದ ನೀವು ಕಳೆದ ಹಲವಾರು ದಶಕಗಳಿಂದ ನಿಮ್ಮ ಹಾಡುಗಾರಿಕೆಯಿಂದ ನಮ್ಮನ್ನು ತಣಿಸುತ್ತಲೇ ಬಂದಿರುವಿರಿ. ನಿಮ್ಮ ಇಂಪಾದ ದನಿಯು ಬದುಕಿನಲ್ಲಿ ನೊಂದವರಿಗೆ ಸಮಾಧಾನ ಹೇಳುವ ಸ್ನೇಹಿತೆಯ ದನಿಯಾಗಿ ಬೆಂದವರಿಗೆ ಆಶಾ ದೀಪವಾಗಿಯೂ, ಪ್ರೇಮಿಗೆ ತನ್ನ ಪ್ರೀತಿಯ ದ್ಯೋತಕವಾಗಿಯೂ ತಾಯಿಗೆ ತನ್ನ ಅಕ್ಕರೆಯ ಪ್ರತೀಕವಾಗಿ ಮಗುವಿಗೆ ತನ್ನ ಅಮ್ಮನ ಮಮತೆಯ ಮಹಾಪೂರದಂತೆ ಭಾಸವಾಗುತ್ತದೆ. ಅಮ್ಮ ನಿಮ್ಮ ಭಕ್ತಿ ಗೀತೆಗಳು ನಮ್ಮನ್ನು ಭಾವ ಪರವಶರನ್ನಾಗಿಸಿದರೆ, ಪ್ರೇಮಗೀತೆಗಳು ಮನವನ್ನು  ಬೆಚ್ಚಗಾಗಿಸುತ್ತದೆ. ತುಂಟಾಟದ ಗೀತೆಗಳು ಆಪ್ತವೆನಿಸಿದರೆ ಭಾವಗೀತೆಗಳು ನಮ್ಮ ಎದೆಯಾಳದ ಭಾವಗಳನ್ನು ಬಗೆದು ತೋರುತ್ತವೆ. ನಮ್ಮ ಬದುಕಿನ ಮುಂಜಾನೆಯಿಂದ ಸಂಜೆಯವರೆಗಿನ ಪ್ರತಿ ಗಳಿಗೆಯಲ್ಲೂ, ನಮ್ಮೆದೆಯ ಜೀವ ಭಾವಗಳಲ್ಲಿ ನೀವು ನಿಮ್ಮ ಸಂಗೀತದ ಪ್ರತಿಭೆಯ ಮೂಲಕ ಹಾಡುಗಳ ಮೂಲಕ ಮಧುರ ಭಾವಗಳನ್ನು ತುಂಬಿರುವಿರಿ…… ಮುಂದೆಯೂ ಕೂಡ ಶತಶತಮಾನಗಳ ಕಾಲ ನಿಮ್ಮನ್ನು ನಾವು ಕೇಳುತ್ತೇವೆ. ನೀವಿಲ್ಲದ ಈ ಜಗತ್ತಿನಲ್ಲಿ ಕೂಡ ನೀವು ಅಜರಾಮರರಾಗಿರುವುದು ನಿಮ್ಮ ಸುಶ್ರಾವ್ಯ ಕಂಠದಿಂದ… ಅದರ ಸಿರಿಯ ಗರಿಮೆಯಿಂದ. ಹೋಗಿ ಬನ್ನಿ ಅಮ್ಮ ನಿಮ್ಮನ್ನು ನಾವು ಮರೆಯಲು ಸಾಧ್ಯವಿಲ್ಲ…. ಎಂದೆಂದಿಗೂ ನಿಮ್ಮ ಆರಾಧಕರಾಗಿ ನಾವು ಇದ್ದೇ ಇರುತ್ತೇವೆ…. ಮತ್ತೆ ನೀವು ಹುಟ್ಟಿ ಬರಲಿ ಎಂಬ ಆಶಯವನ್ನು ಹೊತ್ತು.  ವೀಣಾ ಹೇಮಂತ್ ಗೌಡ ಪಾಟೀಲ್

ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ(ಒಂದು ಶ್ರದ್ಧಾಂಜಲಿ )ವೀಣಾ ಹೇಮಂತ್‌ ಗೌಡ ಪಾಟೀಲ Read Post »

ನಿಮ್ಮೊಂದಿಗೆ

ಎಡ್ಗರ್‌ ಅಲಾನ್‌ ಪೋನ ಕತೆ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” ನ ರೂಪಾಂತರ “ಕೆಂಪು ಮೃತ್ಯುವಿನ ಛದ್ಮವೇಷ”ಬಿ. ವಿ. ರಾಮಪ್ರಸಾದ್ ಅವರಿಂದ

ಅನುವಾದ ಸಂಗಾತಿ ಬಿ. ವಿ. ರಾಮಪ್ರಸಾದ್ ಎಡ್ಗರ್‌ ಅಲಾನ್‌ ಪೋ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” “ಕೆಂಪು ಮೃತ್ಯುವಿನ ಛದ್ಮವೇಷ” ಕೆಂಪು ಮೃತ್ಯುವಿನ ಛದ್ಮವೇಷ ಎಡ್ಗರ್‌ ಅಲಾನ್‌ ಪೋನ ಕತೆ ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌ ನ ರೂಪಾಂತರ “ಕೆಂಪು ಮೃತ್ಯು” ದೀರ್ಘ ಕಾಲದವರೆಗೆ ನಾಡನ್ನು ಹಾಳುಗೆಡವಿತ್ತು. ಅಲ್ಲಿಯವರೆಗಿನ ಯಾವ ಜಾಡ್ಯವೂ ಅಷ್ಟು ಮಾರಣಾಂತಿಕ ಅಥವಾ ವಿಕಾರವಾಗಿರಲಿಲ್ಲ. ರಕ್ತವೇ – ರಕ್ತದ ಕೆಂಪು ಮತ್ತು ಅದರ ಭೀಕರತೆಯೇ – ಅದರ ಅವತಾರ, ಮೊಹರು. ಚುಚ್ಚಿದಂತ ನೋವು, ಮತ್ತು ತಲೆ ತಿರುಗುವಿಕೆ, ಮತ್ತು ರಂಧ್ರಗಳ ಮೂಲಕ ಸೋರುತ್ತಿರುವ ರಕ್ತ ಮತ್ತು ಕೀವು, – ಇವು ಅದರ ಲಕ್ಷಣಗಳು. ಬಲಿಪಶುವಿನ ದೇಹದ, ಅದರಲ್ಲೂ ಮುಖದ ಮೇಲಿನ ಕಡುಕೆಂಪು ಕಲೆಗಳು ಅವನನ್ನು ಕ್ರಿಮಿಯಾಗಿಸಿ ಸಹಚರರ ಸಹಾಯ ಹಾಗು ಸಹಾನುಭೂತಿಯಿಂದ  ದೂರ ಮಾಡುತ್ತಿದ್ದವು.  ಮತ್ತು ರೋಗ ಬರುವುದು, ಜೋರಾಗುವುದು, ಮತ್ತು ಸಾವಿನಲ್ಲಿ ಕೊನೆಗೊಳ್ಳುವುದು – ಕೇವಲ ಅರ್ಧ ತಾಸಿನ ಘಟನೆಗಳಾಗಿದ್ದವು. ಆದರೆ ದೊರೆ ಪ್ರಾಸ್ಪೆರೊ ಖುಷಿಯಾಗಿದ್ದ, ನಿರ್ಭೀತನಾಗಿದ್ದ ಮತ್ತು ಜಾಣನಾಗಿದ್ದ. ತನ್ನ ನಾಡಿನ ಜನಸಂಖ್ಯೆ ಅರ್ಧಕರ್ಧ ಅಳಿದುಹೋದಾಗ, ತನ್ನ ಆಸ್ಥಾನಿಕರಲ್ಲಿ ಗಂಡು ಹೆಣ್ಣು ಸೇರಿದಂತೆ ಗಟ್ಟಿಮುಟ್ಟಾದ ಮತ್ತು ಉಲ್ಲಾಸದಿಂದ ತುಂಬಿರುವ ಸಾವಿರ ಜನರನ್ನು ಸನ್ನಿಧಿಗೆ ಕರೆದು  ಕೋಟೆಯೊಂದರಲ್ಲಿ ಸಂಪೂರ್ಣ ಪ್ರತ್ಯೇಕ ವಾಸಕ್ಕೆ ತೆರಳಿದ. ಆ ಕೋಟೆಯೋ, ವಿಶಾಲವಾದ ಮತ್ತು ಮಹಾವೈಭವದ ಆಕೃತಿ – ದೊರೆಯ ವಿಲಕ್ಷಣ ಆದರೂ ಭವ್ಯ ಅಭಿರುಚಿಯ ಪ್ರತೀಕ. ಆ ಕೋಟೆಗೆ ಎತ್ತರದ ಗಟ್ಟಿಮುಟ್ಟಾದ ಗೋಡೆಯಿತ್ತು. ಈ ಗೋಡೆಗೆ ಕಬ್ಬಿಣದ ದ್ವಾರಗಳಿದ್ದವು. ಒಳಸೇರಿಕೊಂಡ ಆಸ್ಥಾನಿಕರು ಕುಲುಮೆಗಳನ್ನು ಮತ್ತು ಭಾರವಾದ ಸುತ್ತಿಗೆಗಳನ್ನು ತಂದು ಅಗಣಿಗಳನ್ನು ಜೋಡಿಸಿದರು. ಒಳಗಿನ ಹತಾಶೆ ಅಥವಾ ಉನ್ಮಾದದ ಹಠಾತ್‌ ಪ್ರಚೋದನೆಗಳಿಗೆ ಆಗಮನದ್ದಾಗಲೀ, ನಿರ್ಗಮನದ್ದಾಗಲೀ ಯಾವುದೇ ದಾರಿಯಿರಬಾರದೆಂದು ತೀರ್ಮಾನ ಮಾಡಿದರು. ಕೋಟೆಯಲ್ಲಿ ಸಾಕಷ್ಟು ಸಾಮಾನು ಸರಂಜಾಮುಗಳಿದ್ದವು. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿರುವುದರಿಂದ ಆಸ್ಥಾನಿಕರು ಸೋಂಕಿಗೆ ಸವಾಲೆಸೆಯುವುದು ಸಾಧ್ಯವಿತ್ತು. ಹೊರ ಜಗತ್ತಿಗೆ ಏನಾದರೂ ಆಗಲಿ. ಅದಕ್ಕಾಗಿ ದುಃಖಿಸುವುದಾಗಲೀ, ಅದರ ಬಗ್ಗೆ ಚಿಂತಿಸುವುದಾಗಲೀ, ಮೂರ್ಖತನ. ದೊರೆ ವಿಲಾಸಕ್ಕೆ ಅಗತ್ಯವಾದ ಎಲ್ಲದ್ದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದ. ಅಲ್ಲಿ ವಿದೂಷಕರಿದ್ದರು. ಅಲ್ಲಿ ಆಶುಕವಿಗಳಿದ್ದರು, ಅಲ್ಲಿ ನರ್ತಕರಿದ್ದರು, ಅಲ್ಲಿ ಸಂಗೀತಗಾರರಿದ್ದರು, ಅಲ್ಲಿ ಸೌಂದರ್ಯವಿತ್ತು, ಅಲ್ಲಿ ಹೆಂಡವಿತ್ತು. ಇವೆಲ್ಲಾ ಮತ್ತು ರಕ್ಷಣೆಗೆ ಭಟರು ಒಳಗೆ: ಹೊರಗಡೆ ʼʼಕೆಂಪು ಮೃತ್ಯುʼʼ. ಈ ಗುಪ್ತವಾಸದಲ್ಲಿರುವ ಐದನೇ ಅಥವಾ ಆರನೇ ತಿಂಗಳು ಹತ್ತಿರ ಬಂದಾಗ, ಮತ್ತು ಹೊರಗಡೆ ಮಹಾಮಾರಿ ರೌದ್ರಾವತಾರದಲ್ಲಿ ಅಬ್ಬರಿಸುತ್ತಿರುವಾಗ, ದೊರೆ ತನ್ನ ಸಾವಿರ ಹಿಂಬಾಲಕರಿಗೆ ಅಸಾಮಾನ್ಯ ಭವ್ಯತೆಯ ಛದ್ಮವೇಷದ ಔತಣಕೂಟವನ್ನು ಏರ್ಪಟಿಸಿದನು. ಆ ಔತಣಕೂಟವೋ, ಅತೀವ ಭೋಗವಿಲಾಸದ್ದಾಗಿತ್ತು. ಆದರೆ ಮೊದಲು ಆ ಔತಣಕೂಟ ನಡೆದ ವಿಲಾಸ ಖಾನೆಯ ಕೊಠಡಿಗಳ ವಿವರಣೆ ಕೊಡುತ್ತೇನೆ ಇರಿ. ಅದು ಏಳು ಕೊಠಡಿಗಳ ಒಂದು ಸೌದ. ಅನೇಕ ಸೌದಗಳಲ್ಲಿ ಕೊಠಡಿಗಳು ಸಾಮಾನ್ಯವಾಗಿ ಒಂದರ ಪಕ್ಕ ಒಂದು ಮತ್ತು ಎದುರು ಬದುರು ಇದ್ದು ಅಷ್ಟನ್ನು ಒಟ್ಟಿಗೆ ನೋಡುವುದಕ್ಕಾಗುವ ಹಾಗಿರುತ್ತದೆ. ಆದರೆ ಇಲ್ಲಿ ಹಾಗಿರಲಿಲ್ಲ; ದೊರೆಯ ಅತಿರೇಕಗಳ ಮೇಲಿನ ಮೋಹ ಹಾಗಿರಲು ಬಿಡುತ್ತಿರಲಿಲ್ಲ. ಕೋಣೆಗಳು ಹೇಗೆ ಅಡ್ಡಾದಿಡ್ಡಿಯಾಗಿದ್ದವೆಂದರೆ ಒಮ್ಮೆಗೆ ಒಂದು ಕೋಣೆ ಮಾತ್ರ ಕಾಣುತಿತ್ತು. ಪ್ರತಿ ಇಪ್ಪತ್ತು ಮೂವತ್ತು ಗಜಗಳಲ್ಲಿ ಒಂದು ಹಠಾತ್‌ ತಿರುವಿತ್ತು, ಮತ್ತು ಪ್ರತೀ ತಿರುವಿನಲ್ಲೂ ಏನೋ ಹೊಸ ದೃಶ್ಯ. ಪ್ರತೀ ಗೋಡೆಯ ಮಧ್ಯಭಾಗದಲ್ಲಿ, ಎಡಕ್ಕೆ ಹಾಗು ಬಲಕ್ಕೆ, ಕಿರಿದಾದ, ನೀಳವಾದ ಕಿಟಕಿಗಳು. ಈ ಕಿಟಕಿಗಳಿಗೆ ಪ್ರತಿ ಕಿಟಕಿಯ ಒಳಗಿನ ಕೋಣೆಯಲ್ಲಿನ ಒಳಾಂಗಣ ವಿನ್ಯಾಸದ ಬಣ್ಣದ್ದೇ ಗಾಜು. ಉದಾಹರಣೆಗೆ, ತೀರಾ ಪೂರ್ವದ ಕೊಠಡಿಯಲ್ಲಿನ ಅಲಂಕಾರಿಕ ಬಟ್ಟೆಗಳ ಬಣ್ಣ ನೀಲಿ – ಮತ್ತು ಅದರ ಕಿಟಕಿಯ ಗಾಜುಗಳು ಅಚ್ಚ ನೀಲಿ ಬಣ್ಣದವು. ಎರಡನೇ ಕೊಠಡಿಯ ತೂಗು ಬಟ್ಟೆಗಳು ಬೂದಿ ಬಣ್ಣದ್ದು; ಅದರ ಕಿಟಕಿಯ ಗಾಜೂ ಬೂದಿ ಬಣ್ಣದ್ದು. ಮೂರನೆಯ ಕೊಠಡಿ ಹಸಿರುಮಯ, ಅದರ ಕಿಟಕಿಯ ಗಾಜುಗಳೂ ಅಷ್ಟೆ. ನಾಲಕ್ಕನೆಯ ಕೊಠಡಿಯ ಅಲಂಕಾರ ಹಾಗು ಬಣ್ಣ ಕಿತ್ತಳೆ, ಐದನೆಯದು ಬಿಳಿ, ಆರನೆಯದು ನೇರಳೆ. ಏಳನೆಯ ಕೊಠಡಿಯಲ್ಲಿ ಕಪ್ಪು ವೆಲ್ವೆಟ್‌ ಅಲಂಕಾರಿಕ ಬಟ್ಟೆಗಳು ತಾರಸಿ ಗೋಡೆಗಳ ಮೇಲೆಲ್ಲ ಆವರಿಸಿ ಕೆಳಗಿನ ಅದೇ ಬಣ್ಣದ ಅದೇ ರೀತಿಯ ನೆಲಹಾಸಿನ ಮೇಲೆ ಮಡಿಕೆ ಮಡಿಕೆಯಾಗಿ ಬಿದ್ದಿದ್ದವು. ಆದರೆ ಈ ಕೊಠಡಿಯಲ್ಲಿ ಮಾತ್ರ ಒಳಗಿನ ಅಲಂಕಾರದ ಬಣ್ಣಕ್ಕೆ ಸಮನಾಗಿ ಕಿಟಕಿ ಗಾಜಿನ ಬಣ್ಣವಿರಲಿಲ್ಲ. ಕಿಟಕಿ ಗಾಜುಗಳು ಕಡುಕೆಂಪಿನ ಬಣ್ಣದ್ದಾಗಿದ್ದವು – ರಕ್ತ ಕೆಂಪು ಬಣ್ಣ. ಏಳೂ ಕೊಠಡಿಗಳಲ್ಲಿ ಸುವರ್ಣ ಆಭರಣಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಆಥವಾ ತಾರಸಿಯಿಂದ ತೂಗುಹಾಕಿಸಿಕೊಂಡು ಇದ್ದವೇ ಹೊರತು ಯಾವುದರಲ್ಲೂ ದೀಪಗಳಾಗಲೀ, ದೀಪಸ್ತಂಭಗಳಾಗಲೀ ಇರಲಿಲ್ಲ. ಈ ವಿಲಾಸ ಖಾನೆಯ ಯಾವುದೇ ಕೊಠಡಿಗಳಲ್ಲಿ ದೀಪದಿಂದಾಗಲೀ, ಹಣತೆಯಿಂದಾಗಲೀ ಹರಡುವ ಬೆಳಕಿರಲಿಲ್ಲ. ಆದರೆ ಪ್ರತೀ ಕೊಠಡಿಯ ಹೊರಗಿನ ಹಜಾರದಲ್ಲಿ, ಪ್ರತೀ ಕಿಟಕಿಯ ಹೊರಗೆ ಒಂದು ದೊಡ್ಡ ಪಂಜು ಬೆಂಕಿ ಉಗುಳುತ್ತಾ ಬಣ್ಣದ ಗಾಜಿನ ಮೂಲಕ ಕಿರಣಗಳನ್ನು ತೂರಿಸಿ ಪ್ರತೀ ಕೊಠಡಿಗೆ  ಕಣ್ಣು ಕುಕ್ಕುವ ಬೆಳಕನ್ನು ಚೆಲ್ಲುತಿತ್ತು. ಮತ್ತು ಹೀಗೆ ಅನೇಕ ಆಡಂಬರದ ಭ್ರಾಮಕ ರೂಪಗಳು ಸೃಷ್ಟಿಯಾಗಿದ್ದವು. ಆದರೆ ಪಶ್ಚಿಮದ ಅಥವಾ ಕಪ್ಪು ಕೋಣೆಯಲ್ಲಿ ರಕ್ತ ಸಿಂಚಿತ ಗಾಜುಗಳ ಮೂಲಕ ಕಪ್ಪು ಪರದೆಗಳ ಮೇಲೆ ಹರಡಿದ ಬೆಂಕಿ-ಬೆಳಕಿನ ಪ್ರತಿಫಲನ ಎಷ್ಟು ಭಯಾನಕವಾಗಿತ್ತೆಂದರೆ, ಆ ಕೊಠಡಿಯನ್ನು ಪ್ರವೇಶಿಸಿದವರ ಮುಖ ಗಾಭರಿಯನ್ನು ವ್ಯಕ್ತಪಡಿಸುತಿತ್ತು ಮತ್ತು ಆ ಆವರಣದೊಳಗೆ ಕಾಲಿಡುವ ಧೈರ್ಯವನ್ನು ಮಾಡುವವರಾರೂ ಆ ಕೂಟದಲ್ಲಿ ಇರಲಿಲ್ಲ. ಈ ಕೊಠಡಿಯಲ್ಲೇ ಅದರ ಪಶ್ಚಿಮದ ಗೋಡೆಗೆ ನೇತುಹಾಕಿಕೊಂಡು ಕಾಡಿಗೆ ಕಪ್ಪು ಬಣ್ಣದ  ಮತ್ತಿ ಮರದಿಂದ ಮಾಡಿದ ಒಂದು ದೈತ್ಯ ಗಡಿಯಾರವಿತ್ತು. ಅದರ ಲೋಲಕ ನೀರಸ, ಗಂಭೀರ, ಏಕತಾನತೆಯ ಠೇಂಕಾರವನ್ನು ಮಾಡುತ್ತಾ ಆಚೆ ಈಚೆ ತೋಯ್ದಾಡುತ್ತಿತ್ತು. ಮತ್ತು ನಿಮಿಷದ ಮುಳ್ಳು ಒಂದು ಸುತ್ತು ಬಂದು ಗಂಟೆಯ ಘಂಟೆ ಬಾರಿಸಬೇಕಾದಾಗ ಆ ಗಡಿಯಾರದ ಲಜ್ಜೆಗೆಟ್ಟ ಶ್ವಾಸಕೋಶಗಳಿಂದ ಸ್ಪಷ್ಟವಾದ, ಗಟ್ಟಿಯಾದ, ಆಳವಾದ, ಮತ್ತು ಸಂಪೂರ್ಣವಾಗಿ ಸಂಗೀತಮಯವಾದ, ಆದರೆ  ತೀರ ವಿಚಿತ್ರ ಸ್ವರ ಮತ್ತು ಭಾವದಿಂದ ಕೂಡಿದ ಸದ್ದು ಹೊರಡುತಿತ್ತು. ಅದು ಎಷ್ಟು ವಿಲಕ್ಷಣವಾಗಿರುತ್ತಿತ್ತೆಂದರೆ, ಸಂಗೀತಗಾರರು ಆ ಸದ್ದಿಗೆ ಕಿವಿಕೊಡಲು ತಮ್ಮ ಪ್ರದರ್ಶನಕ್ಕೆ ವಿರಾಮ ಕೊಡಬೇಕಾಗುತಿತ್ತು; ಹೀಗಾಗಿ ನರ್ತಕರು ತಮ್ಮ ನರ್ತನವನ್ನು ನಿಲ್ಲಿಸಬೇಕಾಗುತಿತ್ತು; ಮತ್ತು ಆ ಇಡೀ ವಿಲಾಸಮಯೀ ಗುಂಪಿಗೆ ಸ್ವಲ್ಪ ಸಮಯದ ಆಯೋಮಯ ಪರಿಸ್ಥಿತಿ ಎದುರಾಗುತಿತ್ತು; ಮತ್ತು ಗಡಿಯಾರದ ಘಂಟೆ ಮೊಳಗುತ್ತಿರುವವರೆಗೆ ಅಳುಕಿನವರು ಪೇಲವವಾಗುತಿದ್ದರು ಮತ್ತು ಹೆಚ್ಚು ವಯಸ್ಸಾದವರು ಮತ್ತು ಸ್ತಿಮಿತ ಸ್ವಭಾವದವರು ಗೊಂದಲಮಯ ಸ್ವಪ್ನದಲ್ಲೋ, ಧ್ಯಾನದಲ್ಲೋ ಇರುವಂತೆ ಹಣೆಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. ಆದರೆ ಮಾರ್ದನಿಗಳು ಸಂಪೂರ್ಣವಾಗಿ ನಿಂತು ಹೋದಾಗ, ಆ ಕೂಟವನ್ನು ಹಗುರವಾದ ನಗು ಆವರಿಸಿಕೊಳ್ಳುತಿತ್ತು; ಸಂಗೀತಗಾರರು ತಮ್ಮದೇ ಪುಕ್ಕಲುತನವನ್ನು, ದಡ್ಡತನವನ್ನು  ಅಣಗಿಸಿಕೊಳ್ಳುವಂತೆ ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುತ್ತಿದ್ದರು, ಮತ್ತು  ಮುಂದಿನ ಬಾರಿ ಗಡಿಯಾರದ ಘಂಟೆ ಬಾರಿಸುವಾಗ ಈ ರೀತಿಯ ಅಂಜಿಕೆಗೆ ಎಡೆ ಮಾಡಿಕೊಡಬಾರದೆಂದು ತಮ್ಮ ತಮ್ಮಲ್ಲಿ ವಾದ ಮಾಡಿಕೊಳ್ಳುತ್ತಿದ್ದರು; ಮತ್ತೆ ಅರವತ್ತು ನಿಮಿಷಗಳು ಆದ ಮೇಲೆ ( ಅದು ಹರಿಯುತ್ತಿರುವ ಸಮಯದ ಮೂರು ಸಾವಿರ ಮತ್ತು ಆರು ನೂರು ಕ್ಷಣಗಳನ್ನು ಒಳಗೊಂಡಿರುತ್ತದೆ), ಮತ್ತೊಮ್ಮೆ ಘಂಟೆಯ ನಾದ ಮೊಳಗುತಿತ್ತು, ಮತ್ತು ಮತ್ತೆ ಅದೇ ಆಯೋಮಯತೆ, ಮತ್ತು ನಡುಕ ಮತ್ತು ಧ್ಯಾನ, ಹಿಂದಿನಂತೆ.  ಇದೆಲ್ಲಾ ಹೇಗೇ ಇದ್ದರೂ ಅದು ಒಂದು ವಿಲಾಸೀ ಹಾಗು ಅದ್ದೂರಿ ಉತ್ಸವವಾಗಿತ್ತು. ದೊರೆಯದು ವಿಲಕ್ಷಣವಾದ ಅಭಿರುಚಿ. ಬಣ್ಣ ಮತ್ತು ಅಲಂಕಾರದಲ್ಲಿ ಅವನ ಗ್ರಹಿಕೆ ಸೂಕ್ಷವಾಗಿತ್ತು. ಕೇವಲ ಕಟ್ಟಳೆಗೋಸ್ಕರ ಮಾಡುವ ಸಿಂಗಾರವನ್ನು ಅವನು ಕೈ ಬಿಟ್ಟನು. ಅವನ ಏರ್ಪಾಡುಗಳಲ್ಲಿ ದಿಟ್ಟತನ ಹಾಗೂ ಉನ್ಮಾದವಿತ್ತು ಮತ್ತು ಅವನ ಕಲ್ಪನೆಗಳಲ್ಲಿ ಒಂದು ಒರಟು ಹೊಳಪಿತ್ತು.  ಅವನು ಹುಚ್ಚ ಅಂದುಕೊಂಡ ಕೆಲವರಿದ್ದರು. ಅವನ ಅನುಯಾಯಿಗಳು ಅವನು ಹುಚ್ಚನಲ್ಲ ಅನ್ನುತ್ತಿದ್ದರು. ಅವನು ಹುಚ್ಚನಲ್ಲ ಎಂದು ಖಾತ್ರಿಯಾಗಬೇಕಾದರೆ ಅವನನ್ನು ಕೇಳಿಸಿಕೊಳ್ಳಬೇಕಾಗಿತ್ತು ಮತ್ತು ನೋಡಬೇಕಾಗಿತ್ತು ಮತ್ತು ಮುಟ್ಟಬೇಕಾಗಿತ್ತು. ಈ ಭವ್ಯ ಉತ್ಸವದ ಎಲ್ಲಾ ಚರ ಸಿಂಗಾರಗಳನ್ನೂ ಹೆಚ್ಚು ಕಮ್ಮಿ ಅವನೇ ಯೋಜಿಸಿದ್ದನು; ಮತ್ತು ಅವನ ಅಭಿರುಚಿಯೇ ಆ ಛದ್ಮವೇಷಕೂಟದ ಸ್ವಭಾವವನ್ನು ನಿರ್ದೇಶಿಸಿತ್ತು. ಅವು ಕಂಡಿತಾ ವಿಕೃತವಾಗಿದ್ದವು. ಅಲ್ಲಿ ಸಾಕಷ್ಟು ತಳುಕು ಮತ್ತು ಬಳುಕು ಮತ್ತು ಹೊಳಪು ಮತ್ತು ಭ್ರಾಂತು ಇದ್ದವು. ಅಸಂಮಜಸ ಕೈಕಾಲು ಮತ್ತು ಉಡುಪುಗಳಿದ್ದ ವಿಚಿತ್ರ ಆಕೃತಿಗಳಿದ್ದವು. ಹುಚ್ಚನೊಬ್ಬ ಸೃಷ್ಟಿಸಿದಂತ ಮತ್ತು ಬರಿಸುವ ಕಲ್ಪನೆಗಳಿದ್ದವು. ಸುಂದರವಾದದ್ದು ಸಾಕಷ್ಟಿತ್ತು, ಚಂಚಲವಾದದ್ದು ಸಾಕಷ್ಟಿತ್ತು, ವಿಕೃತವಾದದ್ದು ಸಾಕಷ್ಟಿತ್ತು, ಭೀಕರವಾದದ್ದು ಸಾಕಷ್ಟಿತ್ತು, ಮತ್ತು ಅಸಹ್ಯ ತರಿಸಿವಂತದ್ದೂ ಸ್ವಲ್ಪ ಮಟ್ಟಿಗೆ ಇತ್ತು. ಏಳೂ ಕೋಣೆಗಳಲ್ಲಿ ಅಸಂಖ್ಯ ಸ್ವಪ್ನಗಳು ಆಚೆ ಈಚೆ ಅಲೆದಾಡುತಿದ್ದವು. ಮತ್ತು ಇವು – ಈ ಸ್ವಪ್ನಗಳು –  ಕೊಠಡಿಗಳ ಬಣ್ಣವನ್ನೇ ಮೈಮೇಲೇರಿಸಿಕೊಂಡು ನರಳಾಡಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದವು ಮತ್ತು ವಾದ್ಯವೃಂದದ ಒರಟು ಸಂಗೀತ ಅವುಗಳ ಹೆಜ್ಜೆಗಳ ಮಾರ್ದನಿ ಅನ್ನಿಸುತಿತ್ತು. ಮತ್ತು, ಅಲ್ಲಿ ಕೇಳಿಸಿಕೊಳ್ಳಿ, ವೆಲ್ವೆಟ್‌ ಕೋಣೆಯಲ್ಲಿರುವ ಆ ಮತ್ತಿ ಮರದ ಗಡಿಯಾರ ಹೊಡೆಯಲಾರಂಭಿಸಿದೆ. ಸ್ವಪ್ನಗಳು ನಿಂತಲ್ಲೇ ಮರಗಟ್ಟಿವೆ. ಅದರೆ ಘಂಟಾನಾದದ ಮಾರ್ದನಿಗಳು ಕರಗಿ ಹೋಗುತ್ತಿವೆ – ಅವು ಒಂದು ಕ್ಷಣ ಮಾತ್ರ ಬದುಕಿದ್ದವು – ಮತ್ತು ಆ ಸದ್ದು  ಕರಗಿಹೋದಂತೆ ತಿಳಿಯಾದ, ಅರೆ ಅದುಮಿಟ್ಟ ನಗು ಹರಿದಾಡುತ್ತಿದೆ. ಈಗ ಮತ್ತೆ ಸಂಗೀತ ಭೋರ್ಗರೆಯುತ್ತಿದೆ – ಮತ್ತು ಸ್ವಪ್ನಗಳಿಗೆ ಜೀವ ಬಂದಿದೆ, ಮತ್ತು ಅವು ಪಂಜುಗಳ ಕಿರಣಗಳು ತೂರಿ ಬರುತ್ತಿರುವ ಕಿಟಕಿಗಳ ಗಾಜುಗಳ ಬೇರೆ ಬೇರೆ ಬಣ್ಣಗಳನ್ನು ಮೆತ್ತಿಕೊಂಡು ಉಲ್ಲಾಸದಿಂದ ಅತ್ತ ಇತ್ತ ನರಳಾಡುತ್ತಿವೆ. ಆದರೆ ಆ ಏಳು ಕೊಠಡಿಗಳಲ್ಲಿ ತೀರಾ ಪಶ್ಚಿಮಕ್ಕೆ ಇರುವ ಕೊಠಡಿಗೆ ಆ ಛದ್ಮವೇಷಿಗಳಲ್ಲಿ ಯಾರೂ ಕಾಲಿಡುವ ಧೈರ್ಯ ಮಾಡಿಲ್ಲ; ಯಾಕೆಂದರೆ ಕತ್ತಲು ಕರಗುತ್ತಿದೆ; ಮತ್ತು ಅಲ್ಲಿ ರಕ್ತವರ್ಣದ ಗಾಜುಗಳ ಮೂಲಕ ಕಾಂತಿಯುತ ಕೆಂಬಣ್ಣ ಪಸರಿಸುತ್ತಿದೆ; ಮತ್ತು ಕಡುಕಪ್ಪು ಬಣ್ಣದ ಪರದೆಗಳ ಮಂಕು ಗಾಭರಿ ಹುಟ್ಟಿಸುತ್ತಿದೆ; ಮತ್ತು ಕಪ್ಪು ರತ್ನಗಂಬಳಿಯ ಮೇಲೆ ಹೆಜ್ಜೆ ಇಡುವವನ ಕಿವಿಯ ಮೇಲೆ, ಇತರೇ ಕೊಠಡಿಗಳಲ್ಲಿ ಹೆಚ್ಚು ಅಪರಿಚಿತ ಮೋಜುಗಳಲ್ಲಿ ತೊಡಗಿರುವವರ ಕಿವಿಯ ಮೇಲೆ ಬೀಳುವುದಕ್ಕಿಂತ ಹೆಚ್ಚು ಖಚಿತವಾದ  ಮತ್ತಿ ಮರದ ಗಡಿಯಾರದ ಗದ್ಗದಿತ ನಿನಾದ ಬೀಳುತ್ತಿದೆ. ಆದರೆ ಈ ಇತರೆ ಕೊಠಡಿಗಳು ಜನಜುಂಗಳಿಯಿಂದ ತುಂಬಿರುತ್ತಿದ್ದವು, ಮತ್ತು ಅವುಗಳಲ್ಲಿ ಜೀವ ಹೃದಯ ಉದ್ರಿಕ್ತವಾಗಿ ಬಡಿದುಕೊಳ್ಳುತ್ತಿತ್ತು. ಗಡಿಯಾರವು ಮಧ್ಯರಾತ್ರಿಯ ಘಂಟೆ ಬಾರಿಸುವವರೆಗೆ ಸಂಭ್ರಮ ಕುಣಿದಾಡಿತು. ಮತ್ತು ಆಗ ನಾನು ಮೊದಲೇ ಹೇಳಿದಂತೆ ಸಂಗೀತ ಸ್ಥಗಿತವಾಯಿತು; ನರ್ತಕರ ನರ್ತನ ಸ್ತಂಭಿತವಾಯಿತು; ಮತ್ತು ಮೊದಲು ಆದ ಹಾಗೇ ಎಲ್ಲಾ ಚಟುವಟಿಕೆಗಳು ನಿಂತುಹೋದವು. ಆದರೆ ಈಗ ಗಡಿಯಾರದ ಘಂಟೆ ಹನ್ನೆರಡು ಬಾರಿ ಹೊಡೆಯಬೇಕಾಗಿತ್ತು; ಮತ್ತು ಬಹುಶಃ ಹಾಗಾಗಿ ಮೋಜು ಮಾಡುತ್ತಿರುವವರಲ್ಲಿ ವಿಚಾರಶೀಲರಾಗಿದ್ದವರ ಮಂಥನದಲ್ಲಿ ಹೆಚ್ಚು ಸಮಯವಾದಂತೆ ಹೆಚ್ಚು ವಿಚಾರಗಳು ಮೊಳಕೆಯೊಡೆದವು. ಮತ್ತು, ಬಹುಶಃ ಹಾಗಾಗಿ ಗಡಿಯಾರದ ಕೊನೆಯ ಠೇಂಕಾರದ ಪ್ರತಿಧ್ವನಿಗಳು ನಿಶಬ್ದದಲ್ಲಿ ಕರಗಿಹೋಗುವುದರ ಒಳಗೆಯೇ ಅಲ್ಲಿಯವರೆಗೆ ಯಾರೊಬ್ಬನೂ ಗಮನಿಸದೇ ಇರುವ ಛದ್ಮವೇಷಿಯೊಬ್ಬನ ಇರುವಿಕೆಯ ಅರಿವು ಆ ಗುಂಪಿನ ಅನೇಕರಿಗೆ ಆಯಿತು. ಈ ಹೊಸ ಅಸ್ತಿತ್ವದ ಸುದ್ದಿ ಪಿಸುಗುಟ್ಟಿನ ಮೂಲಕ ಹರಡಿದಂತೆ, ಆ ಇಡೀ ಗುಂಪಿನಿಂದ ಒಂದು ಗುಸುಗುಟ್ಟುವಿಕೆ, ಗೊಣಗಾಡುವಿಕೆ, ತೇಲಿ ಬಂತು

ಎಡ್ಗರ್‌ ಅಲಾನ್‌ ಪೋನ ಕತೆ “ದ ಮಾಸ್ಕ್‌ ಆಫ್‌ ದ ರೆಡ್‌ ಡೆತ್‌” ನ ರೂಪಾಂತರ “ಕೆಂಪು ಮೃತ್ಯುವಿನ ಛದ್ಮವೇಷ”ಬಿ. ವಿ. ರಾಮಪ್ರಸಾದ್ ಅವರಿಂದ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-125 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಗೆ ಡಯಾಲಿಸಿಸ್‌ ಮಾಡಿಸಲು ಮಗಳ ಪ್ರಯತ್ನ ಮರುದಿನ ಬೆಳಿಗ್ಗೆ ಸುಮತಿಯ ಎರಡನೇ ಮಗಳು ತನ್ನ ತಾಯಿಯ ಚಿಕಿತ್ಸೆಯನ್ನು ಮಾಡುತ್ತಿದ್ದ ವೈದ್ಯರ ಬಳಿಗೆ ಹೋದಳು. ಅವಳನ್ನು ನೋಡಿದ ವೈದ್ಯರು…. ಏನಮ್ಮ ನಿನ್ನ ತಾಯಿ ಹೇಗಿದ್ದಾರೆ?…. ಎಂದು ಕೇಳಿದರು. ಹಿಂದಿನ ದಿನ ತಂಗಿಯು ಹೇಳಿದ್ದ ವಿಚಾರವನ್ನು ಮಾತನಾಡಲೆಂದು ಅವಳು ವೈದ್ಯರಲ್ಲಿಗೆ ಬಂದಿದ್ದಳು…. _ಸರ್ ನನ್ನ ತಾಯಿಯ ಆರೋಗ್ಯ ಸುಧಾರಿಸಲು ಬೇರೆ ಯಾವ ಚಿಕಿತ್ಸೆಯೂ ಇಲ್ಲವೇ?”… ಎಂದು ಕೇಳಿದಳು. ಆಗ ವೈದ್ಯರು…. “ಇದೆಯಮ್ಮಾ….. ಆದರೆ ಅದು ಬಹಳ ದುಬಾರಿ…. ನಿನ್ನ ತಾಯಿಯ ಆಂತರಿಕ ಅಂಗಾಂಗಗಳೆಲ್ಲವೂ ತಮ್ಮ ಕಾರ್ಯವನ್ನು ನಿರ್ವಹಿಸಲು ವಿಫಲವಾಗಿವೆ….. ಆದರೆ ಆಗಾಗ ಡಯಾಲಿಸಿಸ್ ಮಾಡಿಸುವ ಮೂಲಕ ನಿನ್ನ ತಾಯಿಯ ಆರೋಗ್ಯವನ್ನು ಸ್ವಲ್ಪ ಹೆಚ್ಚು ಕಾಲ ಸುಧಾರಿಸಿಕೊಳ್ಳುವಂತೆ ಮಾಡಬಹುದು”….. ಎಂದು ವೈದ್ಯರು ಹೇಳಿದ ಈ ವಿಚಾರ ಆ ಹುಡುಗಿಗೆ ಸರಿಯಾಗಿ ತಿಳಿದಿರಲಿಲ್ಲ ಹಾಗಾಗಿ…._ “ಡಯಾಲಿಸಿಸ್ ಎಂದರೇನು, ಸರ್?”… ಎಂದು ಕೇಳಿದಳು….”ನಮ್ಮ ಶರೀರವನ್ನು ನಿರಂತರವಾಗಿ ಶುದ್ಧೀಕರಣಗೊಳಿಸಲು ಮುಖ್ಯವಾಗಿ ಕಿಡ್ನಿಗಳು ಕೆಲಸ ಮಾಡಬೇಕು…. ಅವುಗಳು ಕೆಲಸ ಮಾಡಲು ವಿಫಲವಾದಾಗ ರಕ್ತದಲ್ಲಿನ ವಿಷಕಾರಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಕೃತಕವಾಗಿ ಫಿಲ್ಟರ್ ಮಾಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯುತ್ತಾರೆ…. ಇದನ್ನು ಮಾಡಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಕಾಲ ನಿನ್ನ ತಾಯಿ ಜೀವಂತವಾಗಿರಬಹುದು…. ಆದರೆ ಇದನ್ನು ಆಗಾಗ ಮಾಡಿಸುತ್ತಿರಬೇಕಾಗುತ್ತದೆ…. ಇದರ ಖರ್ಚು ಅಧಿಕ…. ಎಂದರು”….. “ಹಾಗಾದರೆ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಬಹುದಲ್ಲವೇ?”… ಎಂದು ಕೇಳಿದಳು.  ಅವಳ ಮಾತಿಗೆ,… “ಹೌದು ಆಕೆಯು ಹೆಚ್ಚಿನ ಕಾಲ ಬದುಕುಳಿಯಬೇಕಾದರೆ ಈ ಚಿಕಿತ್ಸೆಯನ್ನು ನಿಮ್ಮ ತಾಯಿಗೆ ಕೊಡಿಸಲೇಬೇಕು”…. ಎಂದಾಗ….” ಸರ್ ದಯವಿಟ್ಟು ಆದಷ್ಟು ಬೇಗ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಿಸಿ”…. ಎಂದು ಆ ಹುಡುಗಿ ಕೇಳಿಕೊಂಡಾಗ, ಅವಳ ಮುಗ್ದತೆಯನ್ನು ಅರಿತ ವೈದ್ಯರು…. “ಮಗು ಈ ಚಿಕಿತ್ಸೆಯನ್ನು ಇಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊಡಲು ಸಾಧ್ಯವಿಲ್ಲ…. ಅದಕ್ಕೆ ಬೇಕಾದ ಉಪಕರಣಗಳು ಇಲ್ಲಿಲ್ಲ…. ಈ ಚಿಕಿತ್ಸೆಯನ್ನು ಕೊಡಲು ವಿಶೇಷ ಯಂತ್ರವು ಬೇಕಾಗಿದೆ…. ಇದು ಬಹಳ ಅಪರೂಪಕ್ಕೆ ಈ ಚಿಕಿತ್ಸೆಗೆಂದೇ ವಿಶೇಷವಾದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ”…. ಎಂದು ವೈದ್ಯರು ಹೇಳಿದಾಗ…. “ಯಾವ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಕೊಡಬಹುದು?… ಎಂದು ಕೇಳಿದಳು,…. “ಬೆಂಗಳೂರಿನ ಕಿಡ್ನಿ ಫೌಂಡೇಶನ್ ಎನ್ನುವ ಆರೋಗ್ಯ ಸಂಸ್ಥೆಯಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ…. ಸಾಧ್ಯವಾದರೆ ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಮ್ಮ”…. ಎಂದು ವೈದ್ಯರು ಹೇಳಿದರು.‌ ಅದನ್ನು ಕೇಳಿದ ಹುಡುಗಿಯ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಏನು ಮಾಡಬೇಕು ಎನ್ನುವುದು ಹೊಳೆಯಲಿಲ್ಲ. ವೈದ್ಯರಿಗೆ ಧನ್ಯವಾದ ತಿಳಿಸಿ, ಕೊಠಡಿಯಿಂದ ಹೊರ ನಡೆದಳು.  ಆಸ್ಪತ್ರೆಯ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡು ಆಲೋಚನೆ ಮಾಡ ತೊಡಗಿದಳು. ಅಕ್ಕ-ಬಾವನಿಗೆ ಹೇಳಿದರೆ ಹೇಗೆ? ಅವರು ಏನಾದರೂ ಸಹಾಯ ಮಾಡಬಹುದೇ? ಹಾಗೆ ಯೋಚಿಸಿದಾಗ ಅವರಿಂದ ಅದು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸಿತು. ಏಕೆಂದರೆ ಅವರು ಕೂಡ ಹೆಚ್ಚು ಹಣವಂತರಾಗಿರಲಿಲ್ಲ. ಬಾವ ಟಿಂಬರ್ ಕೆಲಸದಿಂದ ಬರುವ ಆದಾಯದಲ್ಲಿ ಅಕ್ಕ ಮತ್ತು ಮಕ್ಕಳ ಖರ್ಚು ವೆಚ್ಚ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಿದ್ದಾರೆ.  ತಾಯಿಯ ತಮ್ಮಂದಿರು ಹಾಗೂ ನೆಂಟರಿಷ್ಟರನ್ನು ಕೇಳುವಂತೆ ಇಲ್ಲ. ತಾಯಿಯ ಎರಡನೇ ತಮ್ಮ ಅವರ ಕೈಲಿ ಆಗುವಷ್ಟು ಮತ್ತು ಅವರ ಶಕ್ತಿಯನ್ನೂ ಮೀರಿ ಹಲವು ಸಲ ನಮಗೆ ಸಹಾಯ ಮಾಡಿದ್ದಾರೆ. ಇನ್ನು ನೆಂಟರಿಷ್ಟರು ಇದ್ದರೂ ಕೂಡ ಅಮ್ಮನ ಕಷ್ಟಕರ ಜೀವಿತ ಹಾಗೂ ಅಪ್ಪ ತೀರಿ ಹೋದ ನಂತರ ಒಬ್ಬರ ಸುಳಿವೂ ಇಲ್ಲ. ನೆಂಟರಿಷ್ಟರಾದ ಯಾರನ್ನೂ ಆಶ್ರಯಿಸದೇ ಸ್ವಾಭಿಮಾನದಿಂದ ಬದುಕಿದ ತಾಯಿ ನಮಗೂ ಅದನ್ನೇ ಕಲಿಸಿದ್ದಾರೆ. ಇನ್ನು ಉಳಿದಿರುವುದು ನಮಗೆ ಆಶ್ರಯವಿತ್ತು ನಮ್ಮ ಕಷ್ಟಕ್ಕೆ ಸದಾ ಹೆಗಲಾಗಿ ನಿಂತಿರುವವರು ನಮ್ಮ ಎಸ್ಟೇಟಿನ ದಯಾಳುವಾದ ಸಾಹುಕಾರರು ಮತ್ತು ಅವರ ಪತ್ನಿ ‘ಅಮ್ಮ’. ಅವರಲ್ಲಿ ಈ ಬಗ್ಗೆ ತಿಳಿಸಿ ನೋಡೋಣ. ಏಕೆಂದರೆ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ, ಈವರೆಗೂ ಅಮ್ಮನಿಗೆ ಬೇಕಾದ ಇನ್ಸುಲಿನ್ ಚುಚ್ಚುಮದ್ದು ಹಾಗೂ ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರೆ ಚಿಕಿತ್ಸೆಗಳಿಗೆ ಅವರು ಸಹಾಯ ಮಾಡಿದ್ದಾರೆ. ಬಹುಶಃ ಈ ವಿಚಾರ ತಿಳಿದರೆ ಖಂಡಿತ ನಮಗೆ ಏನಾದರೂ ಒಂದು ಸಹಾಯ ಮಾಡಿಯೇ ಮಾಡುತ್ತಾರೆ ಎಂಬ ವಿಚಾರ ಮನಸ್ಸಿಗೆ ಬಂದಾಗ, ನನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಇರುವಾಗಲೇ ನಾನು ಎಸ್ಟೇಟ್ ಗೆ ಹೋಗಿ ಅಲ್ಲಿ ಸಾಹುಕಾರರನ್ನು ಕಂಡು ಅವರಲ್ಲಿ ಈ ಬಗ್ಗೆ ಮಾತನಾಡಿ ವಿನಂತಿಸಿಕೊಳ್ಳುತ್ತೇನೆ. ಅವರು ಖಂಡಿತ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಮೂಡಿದ ಕೂಡಲೇ ಕುಳಿತಲ್ಲಿಂದ ಎದ್ದು ನೇರವಾಗಿ ವಾರ್ಡಿಗೆ ಹೋದಳು.  ಈ ವಿಷಯವನ್ನು ತಾಯಿಗೆ ತಿಳಿಸಲಿಲ್ಲ. ಏನಾದರೂ ಒಂದು ವ್ಯವಸ್ಥೆ ಆದ ಮೇಲೆ ತಿಳಿಸಿದರಾಯ್ತು. ಈಗಲೇ ಹೇಳಿ ಮನಸ್ಸಿನಲ್ಲಿ ಇಲ್ಲದ ಆಸೆಯನ್ನು ತರಿಸುವುದು ಬೇಡವೆಂದು ತೀರ್ಮಾನಿಸಿದಳು. ತಾಯಿ ಊಟ ಮಾಡಿದ ನಂತರ ಅಲ್ಲಿಂದ ಆಶ್ರಮಕ್ಕೆ ಹೊರಟಳು. ಅವಳ ಕಾಲೇಜಿನ ಕಲಿಕೆ ಆಶ್ರಮದ ಮಕ್ಕಳಿಗೆ ಪಾಠ ಮಾಡುವುದು ಜೊತೆಗೆ ಅಮ್ಮನ ಆರೈಕೆ ಅವಳ ಗೆಳತಿಯ ಸಹಾಯದಿಂದ ನಿರಾತಂಕವಾಗಿ ನಡೆಯುತ್ತಿತ್ತು. ಆಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ ಅವರನ್ನು ಭೇಟಿ ಮಾಡಿದಳು. ನಾಳೆ ತಾನು ಕಾಲೇಜಿಗೆ ರಜೆ ಹಾಕಿ ಎಸ್ಟೇಟಿಗೆ ಹೋಗಿ ಸಾಹುಕಾರರನ್ನು ಹಾಗೂ ಅವರ ಪತ್ನಿ ‘ಅಮ್ಮ’ನನ್ನು ಕಂಡು ತನ್ನ ತಾಯಿಯ ಡಯಾಲಿಸಿಸ್ ಗೆ ಸಹಾಯವನ್ನು ಕೋರಿ, ಅಲ್ಲಿರುವ ತನ್ನ ತಂಗಿಯನ್ನು ಕಂಡು ಅವಳಿಗೆ ವಿಷಯ ತಿಳಿಸಿ ಸಂಜೆ ಪುನಹ ಆಶ್ರಮಕ್ಕೆ ಬರುರುವುದಾಗಿ ವಿನಂತಿಸಿಕೊಂಡು ಅವರ ಅನುಮತಿಯನ್ನು ಪಡೆದಳು. ಆತ ಒಬ್ಬ ದಯಾಳು ಮನುಷ್ಯನಾದ ಕಾರಣ ಹಾಗೂ ಸುಮತಿಯ ಮಗಳ ಜವಾಬ್ದಾರಿಯುತ ನಡೆಯನ್ನು ಮೆಚ್ಚುತ್ತಿದ್ದ ಕಾರಣ ಅವಳಿಗೆ ತನ್ನಿಂದಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದರು. ತನ್ನ ಗೆಳತಿಗೂ ಈ ವಿಷಯವನ್ನು ತಿಳಿಸಿದಳು. ಅವಳು…. “ನಿಶ್ಚಿಂತೆಯಿಂದ ಹೋಗಿ ಬಾ… ಇಲ್ಲಿನ ಎಲ್ಲಾ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ…. ಮೊದಲು ನಿನ್ನ ತಾಯಿಯ ಆರೋಗ್ಯದ ಕಡೆ ನಿನ್ನ ಗಮನವನ್ನು ಹರಿಸು…. ಆದಷ್ಟು ಬೇಗ ನಿನ್ನ ತಾಯಿ, ಚಿಕಿತ್ಸೆಯನ್ನು ಪಡೆಯುವಂತಾಗಲಿ”… ಎಂದಳು.

Read Post »

ಇತರೆ

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು”

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ. “ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು”ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತಿಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ. ನಿನಗೆ ಅದರಿಂದ ಬೇಸರ ಆಗುವುದಿಲ್ಲವೇ?” ಜೇನು ಹುಳು ಹೇಳಿತು: ‘ಇಲ್ಲ ಜನರು ನನ್ನ ಜೇನನ್ನು ಕದಿಯಬಹುದು, ಆದರೆ ಯಾರೊಬ್ಬರೂ ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.’  ಇದರ ಅರ್ಥ ಇಷ್ಟೇ ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ” ಪೂರ್ವ ವೈಭವ ಮೊದಲೆಲ್ಲ ನಮ್ಮ ತಾತ ಮುತ್ತಾಂದಿರು ನೂರು ವರ್ಷಗಳ ತುಂಬು ಜೀವನ ಸಂತೃಪ್ತಿಯಿoದ ಬಾಳಿ ಬದುಕುತ್ತಿದ್ದರು. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಮನೆ ಮನವನ್ನು ಬೆಳಗುವ ಜ್ಯೋತಿಯಾಗುತ್ತಿದ್ದರು. ಹೆಣ್ಣಾದರೆ ತವರು ಮನೆಯ ಕೀರ್ತಿಯನ್ನು ಬೆಳಗುವ ಸದಾಶಯದೊಂದಿಗೆ ಸದಾ ಜೀವವನ್ನು ಸವೆಸುತ್ತಿದ್ದಳು. ಬದುಕಿನ ಪಯಣದಲ್ಲಿ ಬರುವ ಎಲ್ಲ ನೋವನ್ನು ನುಂಗಿಕೊoಡು ಕುಟುಂಬಕ್ಕಾಗಿ ಜೀವ ತೇಯುತ್ತಿದ್ದಳು. ಗಂಡಾದರೆ ಹೊಲದ ಕೃಷಿ ಕೆಲಸಗಳಲ್ಲಿ ವೃತ್ತಿ ವ್ಯಾಪಾರ ಕರ್ತವ್ಯದಲ್ಲಿ ಶ್ರಮವಹಿಸುತ್ತಿದ್ದರು. ಬದುಕು ಹೋರಾಟ ಎರಡೂ ಬೇರೆ ಬೇರೆ ಅಲ್ಲ ಎನ್ನುವ ತಲೆಮಾರಿಗೆ ಸೇರಿದವರಾಗಿದ್ದರು. ಅನನ್ಯ ಜೀವನದ ಅನುಭವವನ್ನು ಪಡೆಯುತ್ತಿದ್ದರು. ಬಹುಶಃ ಆ ತಲೆಮಾರಿನ ಕೊನೆಯ ಕೊಂಡಿಗಳು ಕಳಚಿ ಹೋಗಿವೆ. ನಮ್ಮ ಹಿರಿಯರ ಬದುಕು ನಮಗೆ ಜೀವನದ ವಿಶಿಷ್ಟ ಹೊಳಹುಗಳನ್ನು ನೀಡುತ್ತದೆ. .ಪೂರ್ವಜರ ಬದುಕು ಅವರ  ಪಾರಂಪರಿಕ ಜ್ಞಾನ ವಿಜ್ಞಾನವನ್ನು ಪರಿಚಯಿಸುತ್ತದೆ. ಜನಪದ ಸಾಹಿತ್ಯ ಅವರ ಅಗಾಧ ಜ್ಞಾನಕ್ಕೆ ತೋರುಬೆರಳಿನಂತಿದೆ. ಬದಲಾದ ಕಾಲ ಈಗ ಕಾಲ ಬದಲಾಗಿದೆ. ಮನುಷ್ಯನ ಜೀವನಶೈಲಿ ಅಗಾಧವೆನಿಸುವಷ್ಟು ಬದಲಾಗಿದೆ. ವ್ಯಕ್ತಿತ್ವದ ವಕ್ರತೆಯನ್ನು ತಿದ್ದಿಕೊಳ್ಳುವ ಮನಸ್ಥಿತಿ ಕಡಿಮೆಯಾಗಿದೆ. ಒತ್ತಡ ದಾವಂತ ಹೆಚ್ಚಿದೆ. ಹೀಗಾಗಿ ನೂರು ವಸಂತಗಳನ್ನು ಸಂತಸದಿoದ  ಕಳೆಯುವುದು ದುರ್ಭರವಾಗಿದೆ. ಐಶಾರಾಮಿ ಬದುಕಿನ ಆಕರ್ಷಣೆಗೆ ಒಳಗಾಗಿ ಮೋಸ ವಂಚನೆ ದರೋಡೆ ಸುಲಿಗೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಸರಳ ಜೀವನವೇ ಸುಖೀ ಜೀವನವೆಂಬ ಕಲೆಯನ್ನು ಕಲಿತರೆ ಎತ್ರರವು ವಿಸಾರವೂ ಆಗಿರುವ ಅಮೂಲ್ಯ ಬದುಕನ್ನು ಸವಿಯಬಹುದು. ಜೀವನವೆಂದರೆ.. ಜೀವನಕ್ಕೆ ಒಂದೇ ಮುಖವಿಲ್ಲ.  ಹಲವಾರು ಮುಖಗಳಿವೆ. ಇದೊಂದು ಜೈವಿಕ ಜಗತ್ತಿನ ವ್ಯಾಪಾರ.ಜೀವನವೆಂಬುದು ಒಂದು ಸಾಗರವಿದ್ದಂತೆ ಅದನ್ನು ಈಜುವುದು ಬಹಳ ಕಷ್ಟ. ಅದಕ್ಕೆ ದಾಸರು ‘ಈಸಬೇಕು ಇದ್ದು ಜಯಿಸಬೇಕು.’ ಎಂದು ಹೇಳಿದರು. ಈಸುವುದು ಬಲು ಕಠಿಣ. ಈಜಿ ದಡ ಸೇರುವುದೇ ಜೀವನ. ದಾರ್ಶನಿಕರು ಶರಣರು ಸಾಧು ಸಂತರು ತತ್ವಜ್ಞಾನಿಗಳು ಮೇದಾವಿಗಳು ತಾವು ಕಂಡoತೆ ಅದನ್ನು ವ್ಯಾಖ್ಯಾನಿಸಿದರು ಕೆಲವರು ಹೋರಾಟವೆಂದರು. ಇನ್ನೂ ಕೆಲವರು ಒಂದು ಆಟವೆಂದರು ನಾಟಕವೆಂದರು ಸವಾಲೆಂದರು. ಇದನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಎನ್ನಬಹುದುಅನುಭವಿಸುವಂಥದ್ದುಜೀವನವೆoದರೆ ಅರ್ಥ ಮಾಡಿಕೊಳ್ಳುವಂಥದ್ದಲ್ಲ. ಅನುಭವಿಸುವಂತದ್ದು. ಸೋಲು ಗೆಲುವು ಅಳುವು ನಗುವು ಜೀವನದ ಅವಿಭಾಜ್ಯ ಅಂಗಗಳು. ಸುಖ ದುಃಖಗಳು ಇದರ ಭಾಗಗಳು. ಅವು ಒಂದರ ನಂತರ ಒಂದು ಬರುತ್ತವೆ. ಸುಖ ದುಃಖಗಳನ್ನುಸಮಾನವಾಗಿ ಸ್ವೀಕರಿಸುವುದು  ಸಮಾಧಾನದಿಂದ ಇರುವುದೇ ಕಷ್ಟಗಳಿಗೆ ಮದ್ದು. ಬಲ್ಲವರು ಹೇಳಿದ ಮಾತಿನಂತೆ ’ಸೋಲಿನ ಪಾಠ ಚಂದ. ಹಸಿವಿನ ಊಟ ಚೆಂದ ಪ್ರೀತಿಯ ಕೋಪ ಚೆಂದ ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ.’ಜೀವಿಸುವುದು ಮುಖ್ಯವಲ್ಲಜೀವನದಲ್ಲಿ ಕೇವಲ ಜೀವಿಸುವುದು ಮುಖ್ಯವಲ್ಲ. ಯಾವ ರೀತಿ ಜೀವಿಸುತ್ತೇವೆ ಎನ್ನುವುದು ಮುಖ್ಯ. ನಮಗಾಗಿ ಜೀವಿಸುವುದಕ್ಕಿಂತ ನಮ್ಮವರಿಗಾಗಿ ಮತ್ತು ಬೇರೆಯವರಿಗಾಗಿ ಜೀವಿಸುವುದು ಹೆಚ್ಚು ಬೆಲೆಯನ್ನು ತರುತ್ತದೆ. ಬದುಕನ್ನು ಒಂದು ಕ್ಷಣದಲ್ಲಿ ಬದಲಿಸಲು ಸಾಧ್ಯವಿಲ್ಲ. ಆದರೆ, ಆ ಒಂದು ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಬದುಕನ್ನು ಬದಲಿಸಬಲ್ಲದು. ಐದು ಸಂಗತಿಗಳು  ಹೇಳಿದ ವಿಷಯವನ್ನು ಬಿಟ್ಟು ಸಂಬoಧವೇ ಇಲ್ಲದ ಬೇರೆ ವಿಷಯದ ಬಗ್ಗೆ ಮಾತನಾಡುವುದು, ಮಾಡಿದ ಕೆಲಸವು ಸಮರ್ಪಕವಾಗಿದ್ದರೂ ಕಾರಣವಿಲ್ಲದೇ ದ್ವೇಷಿಸುವುದು, ಅವಶ್ಯವಾಗಿ ಇರಬೇಕಾದ ಸ್ಥಳದಲ್ಲಿ ಇಲ್ಲದೇ ಇರುವುದು, ತಮ್ಮ ಸಂಶಯ ನಿವಾರಣೆಗೆ ಯಾರೇ ಯಾವುದೋ ಒಂದು ಪ್ರಶ್ನೆ ಮಾಡಿದಾಗ ಉತ್ತರಿಸದೇ ಇರುವುದು ಮತ್ತು ಪ್ರೀತಿಯಿಂದ ಆಮಂತ್ರಣ ಕೊಟ್ಟಾಗ ಉಪೇಕ್ಷಾ ಭಾವದಿಂದ ಅಲ್ಲಿಗೆ ಹೋಗದೇ ಇರುವುದು ಈ ಐದು ಸಂಗತಿಗಳು ಗುಣರಹಿತನ ಲಕ್ಷಣಗಳಾಗಿವೆ.ಇವುಗಳ ಬಗ್ಗೆ ಅಲಕ್ಷö್ಯ ಮಾಡದೇ ಸದ್ಗುಣವಂತನಾಗಲು ಪ್ರಯತ್ನಿಸಬೇಕು ಅಪರಮಿತ ತ್ಯಾಗ ಮಾಡಿದ ಬದುಕಿಗೆ ಬೆಲೆಯನ್ನು ಕಟ್ಟಲಾಗುವುದಿಲ್ಲ. ಹಿಡಿ ಪ್ರೀತಿ ಮಾತಿಲ್ಲದಿದ್ದರೆ ಜೀವನವೇ ಮೂಕವಾಗುತ್ತದೆ. ಕೊಂಕು ಮಾತುಗಳು ಹೆಚ್ಚಾದರೆ ಮೂಕರೋಧನವನ್ನು ಅನುಭವಿಸಬೇಕಾಗುತ್ತದೆ. ಯಾರೇ ಆಗಲಿ ಬಯಸುವುದು ಒಂದು ಹಿಡಿ ಪ್ರೀತಿಯನ್ನು. ಮಾತೆಯ ಮಮತೆಯನ್ನು ಧಾರೆಯೆರೆಯುವ ಹೃದಯ ನಮ್ಮದಾಗಬೇಕು. ಪ್ರತಿಯೊಬ್ಬರೊಂದಿಗೂ ಪ್ರೀತಿ ವಿಶ್ವಾಸ ವಾತ್ಸಲ್ಯದೊಂದಿಗೆ ನಡೆದುಕೊಳ್ಳಬೇಕು. ಒಪ್ಪ ಓರಣ ಶಿಸ್ತು ಸಹನೆ ಕಲಿಯಬೇಕು. “ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ,”ಎಲ್ಲವನ್ನೂ ಅನುಭವಿಸುತ್ತ ಬಾಳುವುದೇ ಬದುಕು. ಕೈಯಲ್ಲಿ ಅಧಿಕಾರವಿರುವಾಗ ಸ್ಥಾನದ ಮಹತ್ವವನ್ನು ಅರಿಯದೆ, ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಅಧಿಕಾರವಿರುವಾಗ ಅರಿತು ನಡೆದುಕೊಳ್ಳಬೇಕು. ಹಣವಿದೆ ಆಸ್ತಿಯಿದೆ ಎಂಬ ಕಾರಣಕ್ಕೆ ಅಸಭ್ಯವಾಗಿ ವರ್ತಿಸುವುದು ಉಚಿತವಲ್ಲ. ಜಗಕೆ ಮಾದರಿಯಾಗಿ ಬಾಳಬೇಕು. ಸಭ್ಯ ಸಂಸ್ಕೃತಿಯ ಹರಿಕಾರರಾಗಬೇಕು. ಪ್ರತಿಯೊಬ್ಬರ ಅಭಿರುಚಿ ಆಸಕ್ತಿ ಹವ್ಯಾಸಗಳು ವಿಭಿನ್ನ.ಆದ್ದರಿಂದ ತಿಳಿದು ನಡೆಯಬೇಕು. ಸವಾಲುಗಳು ಸವಾಲುಗಳು ಏಕಾಏಕಿ ಹರಡಿಕೊಳ್ಳುತ್ತವೆ. ಇನ್ನೇನು ಜೀವನ ಮುಗಿದು ಹೋಯಿತಲ್ಲ ಎನ್ನುವಷ್ಟರಲ್ಲಿ ಭರವಸೆಯ ಬೆಳಕಿನ ಕಿರಣವೊಂದು ಮೂಡುತ್ತದೆ. ಬದುಕಿನ ಏರಿಳಿತಗಳು ಇತ್ತೀಚಿಗೆ ಮೈ ತಾಳಿದ ವಿದ್ಯಮಾನಗಳಲ್ಲ. ಅನಾದಿಕಾಲದಿಂದಲೂ ಈ ಜೀವನ ಇರುವುದೇ ಹೀಗೆ. ಸುಖ ದುಃಖಗಳು ಪ್ರತಿ ಕ್ಷಣವನ್ನು ವರ್ಣಮಯವಾಗಿಸುತ್ತದೆ. ಬದುಕು ನಮಗೆ ಬದುಕುವುದನ್ನು ಕಲಿಸುತ್ತದೆಯೇ? ಎಂಬ ಪ್ರಶ್ನೆ ಕೇಳಬಹುದು. ಬದುಕೇ ಅದಕ್ಕೆ ಉತ್ತರ ನೀಡುತ್ತದೆ. ಜೀವನದಲ್ಲಿ ಬಗೆಬಗೆಯ ಪಾಠಗಳಿವೆ.ಅವುಗಳ ಪಟ್ಟಿ  ನಮ್ಮ ಪದಕೋಶದಲ್ಲೇ ಇಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಜೀವನದಲ್ಲಿ ಕಹಿ ಅನುಭವಾದಾಗಲೇ ಆ ವ್ಯಕ್ತಿಗೆ ಹೊಸ ಜೀವನ ಶುರು ಆದಂತೆ.  ಹೇಗೆಂದರೆ ಇಲ್ಲಿ ಯಾರಿಗೆ ಯಾರೂ ಇಲ್ಲ. ನಮಗೆ ನಾವೇ ಎಲ್ಲ ಅನ್ನೋ ಸತ್ಯ ಆಗಲೇ ಸ್ಪಷ್ಟವಾಗಿ ಅರ್ಥವಾಗೋದು.’ ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ. ಎನ್ನುವುದೇ ಬದುಕು ಕಲಿಸುವ ಪಾಠ. ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು. ಮುಳ್ಳಿನ ಗಿಡವಾಗುವುದಕ್ಕಿಂತ, ನೆರಳು ನೀಡುವ  ಫಲಭರಿತ ವೃಕ್ಷವಾಗಬೇಕು. ಕೊನೆ ಹನಿ ನಿನ್ನೆಯದನ್ನು ಚಿಂತಿಸಬಾರದು. ನಾಳೆ ಏನಾಗುತ್ತದೆಂದು ಅತಿಯಾಗಿ ಯೋಚಿಸಬಾರದು. ಇಂದಿನ ಬದುಕನ್ನು ವ್ಯಥೆಗೆ ದೂಡಿ ವ್ಯರ್ಥವಾಗಿ ಮಾಡಿಕೊಳ್ಳಬಾರದು. ವರ್ತಮಾನವೆಂಬುದು ಭಗವಂತನ ಮೌಲಿಕ ಕಾಣಿಕೆಯೆಂದು ಬಾಳಬೇಕು. ಇದೇ ಮಾತನ್ನು ಸುಭಾಷಿತವೊಂದು ಹೀಗೆ ಹೇಳುತ್ತದೆ. ‘ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ ಹಾರಾಡಲಿ ಬಿಡಿ. ಆದರೆ, ಅಲ್ಲೇ ಗೂಡು ಕಟ್ಟಲು ಅವಕಾಶ ನೀಡಬೇಡಿ.’ ಜೀವನವೆಂಬುದು, ಹೆಮ್ಮರದ ತುದಿಯಲ್ಲಿ ಕಟ್ಟಿದ ಜೇನುಗೂಡುಗಳಿಂದ ತುಪ್ಪವನ್ನು ತೆಗೆಯುವಂತಿದೆ. ಆ ಕುಶಲತೆಯನ್ನು ಕಲಿತುಕೊಂಡರೆ ಜೀವನದ ಸವಿಜೇನು ಚಪ್ಪರಿಸಬಹುದು. ಜಯಶ್ರೀ.ಜೆ. ಅಬ್ಬಿಗೇರಿ.

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ತಾ ಪಾಲಿಸದೇ ಇತರರಿಗೆ ಉಪದೇಶ ನೀಡುವುದು ವ್ಯರ್ಥಇತರರಿಗೆ ಹೋಲಿಸಿಕೊಂಡು ಬಾಳ್ವೆ ಮಾಡುವುದು ವ್ಯರ್ಥ ಆಕಾಶದಲ್ಲಿ ಹಕ್ಕಿ ನೀರಲ್ಲಿ ಮೀನು ಬದಲಾಗಬಾರದು ಸ್ಥಾನಅವರು ಇವರಂತೆ ನಾನಾಗುವೆನೆಂದು ಆಡುವುದು ವ್ಯರ್ಥ ಯಾರ ಮೆಚ್ಚುಗೆಗೋ ಇಚ್ಛೆಗೋ ಬಲಿಯಾಗದಿರಲಿ ಬಾಳುಇಂದು ಗೈಯುವ ಕಾಯಕವ ನಾಳೆಗೆ ದೂಡುವುದು ವ್ಯರ್ಥ ಕುಣಿಯೋವಾಗ ಜೊತೆಗಿದ್ದವರು ಕೊನೆತನಕ ಬರಲಾರರುಅವರಿವರನ್ನು ನಂಬಿಕೊಂಡು ಹೆಜ್ಜೆಯ ಇಡುವುದು ವ್ಯರ್ಥ ಕುಂಬಾರ ಕಂಡಿದ್ದು ಸಾಸಿವೆ ಕಾಣಬೇಕಿರುವುದು ಸಾಗರವೇಮರೀಚಿಕೆಯ ಬೆನ್ನತ್ತಿ ಸುಮ್ಮನೆ ಕಾಲ ದೂಡುವುದು ವ್ಯರ್ಥ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

You cannot copy content of this page

Scroll to Top