ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ

ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ

ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ ಸರೋಜಾ ಪ್ರಭಾಕರ್ ʻಕ-ನಾದ ಫೋನೆಟಿಕ್ಸ್‌ ಪ್ರೈ. ಲಿ.ʼ ಇದು ಕರ್ನಾಟಕ ಸ್ಟಾರ್ಟ್‌ ಅಪ್‌ ಅಡಿಯಲ್ಲಿನ ಒಂದು ಪುಟ್ಟ ಕಂಪೆನಿ. ಫೋನೆಟಿಕ್ಸ್‌ ಎಂದರೆ ಧ್ವನಿಶಾಸ್ತ್ರ, ಸ್ವರಶಾಸ್ತ್ರ, ಭಾಷಾಧ್ವನಿ ಶಾಸ್ತ್ರ ಎನ್ನುವ ಅರ್ಥವಿದೆ. ಈ ಪುಟ್ಟ ಕಂಪೆನಿಯ ಮುಂದೆಯೂ ಭಾರತೀಯ ಭಾಷೆ ಮತ್ತು ಲಿಪಿಯ ಅಳಿವು, ಉಳಿವು ಬೆಳವಣಿಗೆಯ ಮಹದಾಸೆಯಿದೆ, ಸವಾಲೂ ಇದೆ. ʻಕನ್ನಡ ಅನ್ನ ನೀಡುವ ಭಾಷೆ ಅಲ್ಲʼ ಎನ್ನುವ ಮಾತನ್ನು ಸುಳ್ಳಾಗಿಸಿ, ಭಾರತೀಯ ಭಾಷೆಗೆ ತಂತ್ರಜ್ಞಾನದ ಸ್ಪರ್ಶ ನೀಡುವ […]

ಗಝಲ್

ಗಝಲ್ ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆದೇವನಿಟ್ಟ ಕನಸುಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆದೇವನಿಟ್ಟ ಕನಸು ನಿಗಿನಿಗಿ ಕೆಂಡವಾಗಿ ಮನವು ಕಂಪನೆಕಾಯ್ದು ಹೋಯಿತೇಬನದ ಸುಮದ ಆಸೆಯ ಕಮರಿಸುತಿದೆದೇವನಿಟ್ಟ ಕನಸು ತುತ್ತು ಕೂಳಿಗೂ ನಾನಾ ಬಗೆಯಲಿವೇಷ ತೊಡಿಸಿತೆಢಂಢಂಯೆಂದು ವಾದ್ಯ ಬಾರಿಸುತಿದೆದೇವನಿಟ್ಟ ಕನಸು ಶಾಪಗ್ರಸ್ತ ಅಹಲ್ಯೆಯಂತೆ ಹೃದಯಮುಕ್ತಿ ಬೇಡುತಿದೆಬಡತನದ ಬಾಣಲೆಯಲಿ ಬೇಯುತಿದೆದೇವನಿಟ್ಟ ಕನಸು ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆಅಭಿನವನ ಕಾವ್ಯವಿದೂಷಕನ ತೆರದಿ ಹಾಸ್ಯ ಮಾಡುತಿದೆದೇವನಿಟ್ಟ ಕನಸು ಶಂಕರಾನಂದ ಹೆಬ್ಬಾಳ

ಅನುವಾದಿತ ಅಬಾಬಿಗಳು

ಅನುವಾದ ಸಂಗಾತಿ ಅನುವಾದಿತ ಅಬಾಬಿಗಳು ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೩)ಮನುಷ್ಯ ಮನುಷ್ಯನನ್ನೇ ದ್ವೇಷಿಸುವಂತೆಭೇದಭಾವಗಳನ್ನು ಸೃಷ್ಟಿಸುತ್ತಅಮಾಯಕ ಜನರನ್ನು ಹಿಂಸಿಸುತ್ತಹಕೀಮಾಮೇಕೆಬಣ್ಣದ ಹುಲಿಗಳಾಗಿ ಹೊಂಚುಹಾಕಿದರಲ್ಲಾ! ೧೪)ವೇಷಧಾರಣೆಗಳೇ ಗುರುತುಗಳಾದವೆಮನುಷ್ಯ ಮನುಷ್ಯತ್ವ ಏನಾಯಿತು?ಪಶುವಿಗಾಗಿ ಪರದಾಡುತ್ತಿವೆಯಾ?ಹಕೀಮಾದೇಶದಲ್ಲಿ ಪಶುಗಳು ರಾಜ್ಯವೆ? ೧೫)ದೇಶದಲ್ಲಿ ಕಳ್ಳರು ಹೆಚ್ಚಾಗಿದ್ದಾರೆದೇಗುಲಗಳಲ್ಲಿನ ದೇವರುಗಳೇ ಇವರ ಗುರಿಅಧಿಕಾರಿದಲ್ಲಿ ಹೂ ಇದ್ದರೆ ಇಷ್ಟೇನಾ?ಹಕೀಮಾ

ಸುಭಾಷಿತಗಳ ಸ್ವಾರಸ್ಯ

ಲೇಖನ ಸಂಗಾತಿ  ಸುಭಾಷಿತಗಳ ಸ್ವಾರಸ್ಯ ಎಂ. ಆರ್. ಅನಸೂಯ ಬಾಲ್ಯದಲ್ಲಿ ಅವಳು ಮನೆಯ ಹಿರಿಯರು ತಮ್ಮ ಮಾತು  ಕತೆಗಳಲ್ಲಿ ಸಮಯಾನುಸಾರ ಬಳಸುತ್ತಿದ್ದ ಗಾದೆಗಳನ್ನು  ಕೇಳಿಸಿಕೊಂಡೇ  ಬೆಳೆದವಳು. ಹೀಗಾಗಿಯೇ ನೂರಾರು  ಗಾದೆಗಳು ಅವಳ ನಾಲಿಗೆಯ ತುದಿಯಲ್ಲಿದ್ದವು. ಅವಳ ಹಿರಿಯರು ಅನಕ್ಷರಸ್ಥರಾದರೂ ಸಹ ಅವರ ನಾಲಿಗೆಯ ಮೇಲೆ ಸರಾಗವಾಗಿ ಬಳಸಲ್ಪಡುತ್ತಿದ್ದ ಗಾದೆಗಳ ಕುರಿತ ಮೆಚ್ಚುಗೆಯ ಜೊತೆಯಲ್ಲೇ ಹಿರಿಯರ ಸಂದರ್ಭೋಚಿತ ಗಾದೆಗಳ ಬಳಕೆಯ ವಾಕ್ಚಾತುರ್ಯಕ್ಕೆ ಬೆರಗಾಗುತ್ತಿದ್ದಳು ಗಾದೆಗಳಂತೆ ಸರ್ವಜ್ಞನ ಹಾಗೂ ಬಸವಣ್ಣನ ವಚನಗಳು ನಮ್ಮ ನಾಡಾಡಿಗಳ ಮಾತುಕತೆಗಳ ನಡುವೆ  ನುಸುಳಲು  ಕಾರಣ […]

ಬಚ್ಚಿಟ್ಟಿರುವೆ

ಕಾವ್ಯ ಸಂಗಾತಿ ಬಚ್ಚಿಟ್ಟಿರುವೆ ಲಕ್ಷ್ಮಿ ಕೆ ಬಿ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಮಳೆ ಚಳಿಗೆನಡುಗದಂತೆಉರಿಬಿಸಿಲಿಗೆ ಒಣಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಸದಾ ನಗುವಕಾಮನಬಿಲ್ಲಿನ ಬಣ್ಣಮಾಸದಂತೆ ಹೊಳೆವ ನಿನ್ನಕಂಗಳ ಚೆಲುವುಮರೆಯಾಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಜಗದ ಬಂಧಮುಗಿಸೋ ಗಳಿಗೆಯಲ್ಲೂಜೊತೆ ನಡೆವಂತೆ ಅಣಿಮಾಡಲು ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ….ಒಲವಿಂದ….

ಉತ್ತರ ಹೇಳು ಸಖ

ಕಾವ್ಯ ಸಂಗಾತಿ ಉತ್ತರ ಹೇಳು ಸಖ ಶಂಕರಾನಂದ ಹೆಬ್ಬಾಳ ನಿಬಿಡಾರಣ್ಯದಲಿಒಬ್ಬಂಟಿ ನಾನುಬೋಳು ಮರದಂತೆ,ನಿಶ್ಚಲ ಭಾವವಿಷಣ್ಣತೆಯಲಿಗೊಣಗುತಿರುವೆ… ಜಾರಿದ ಸಮಯಕ್ಕೂಗೊತ್ತಾಗಲಿಲ್ಲವೆ..?ಉಳಿದ ನೆನಪುಗಳುತೊಗಲು ಬೊಂಬೆಯಂತೆಥೈತಕ ಕುಣಿಯುತ್ತಿವೆ…. ಬೇಗೆಯಲಿ ದಿಗ್ಗನೆದ್ದುಬಂದಂತೆ ಭಾಸವಷ್ಟೆನಿಂತ ಜಾಗ ಕುಸಿದಂತೆಕೊಂಚ ಅಳುಕುಎದ್ದು ಕುಳಿತೆಬುದ್ದನಂತೆಶಾಂತಿಯಿಲ್ಲದೆ… ಈಗ ಹೊರಟಿದ್ದೇನೆಧ್ರುವಕೆ ವಿಮುಖನಾಗಿ“ದಾರಿಯಾವುದಯ್ಯಾವೈಕುಂಠಕೆ ಎಂದು”ದಾಸ ಮಾರ್ಗವನುಹಿಡಿದು,ಸತ್ಯವನರಸಿಮೋಕ್ಷಾಪೇಕ್ಷಿಯಾಗಿಅಲೆವ ಯೋಗಿನಂತೆನಡೆದಿದ್ದೇನೆ ದಿನದಿನಗಳ ಸವೆಸಿಸವೆದ ಚಪ್ಪಲಿಯಾಗಿದ್ದೇನೆ…. ದುಗುಡವಾವರಿಸಿದುಃಖದೊಳು ತೇಲಿಪರಿಹಾರವಿಲ್ಲದಫಲಾನುಭವಿ ನಾನುಉತ್ತರವೆಲ್ಲಿದ ಸಖನನ್ನ ಮನದ ಪ್ರಶ್ನೆಗೆ….?

ಲೇಖನಿ

ಕಾವ್ಯ ಸಂಗಾತಿ ಲೇಖನಿ ಅನಿತಾ ಸಿಕ್ಕಿತೊಂದು ಜಾದೂ ಲೇಖನಿಹಣೆಬರಹ ಅಳಿಸಿ, ಮತ್ತೊಮ್ಮೆ ಬರೆಯಬಹುದಿತ್ತು, ಆ ವಿಧಾತನ ದನಿ ಅಳುಬರಹ ಒರೆಸಿನೋವು, ನಲಿವಾಗಿಸಿ ಬದುಕುಬದಲಾಯಿಸಬೇಕೆಂದಿತುಆಕಾಂಕ್ಷೆಯ ತಾಸು! ಸಿರಿವಂತಿಕೆ, ಬಡತನದ್ವೇಷ, ಪ್ರೀತಿ, ಮೇಲು ಕೀಳುಕಣ್ಮುಂದೆ ಹಾದುಹೋಗುತ್ತಿತ್ತುಅಂತರಾಳದ ಕನಸು! ರವಿವರ್ಮನ ಕುಂಚದ ಬಣ್ಣತುಂಬಿ, ನವಿರಾದ ಎಳೆಗಳಿಗೆರಂಗುರಂಗಿನ ಹೊಸತನಮೂಡಿಸುವ ಹುಮ್ಮಸ್ಸು! ಅವೇನು ಕಠಿಣ ಕಾರ್ಯವಾಗಲಿಲ್ಲಜೀವ, ಜೀವಂತಿಕೆಯ ಒಳಗೆಮಾರ್ಪಾಟಾಗಿತ್ತು ಹಲವು ಮಜಲು! …. ಆಯಸ್ಸು ಮೆಟ್ಟಿಲೊಳಗೆ ಇಳಿಯಲಾಗದೆಸಾವಿನ ಕ್ಷಣ ಮುಂದೂಡಲಾಗದೆ…

Back To Top