ನಮ್ಮ ಕವಿ

ನಮ್ಮ ಕವಿ

ಬಿದಲೋಟಿ ರಂಗನಾಥ್ ಕವಿ -ವಿಮರ್ಶಕ ಬಿದಲೋಟಿ ರಂಗನಾಥ್ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೋಕಿನ ಒಂದು ಪುಟ್ಟ ಹಳ್ಳಿಯವರು.ತಂದೆ ಮರಿರಂಗಯ್ಯ ತಾಯಿ ಸಿದ್ದಗಂಗಮ್ಮ ಅವರ ಮೊದಲನೇ ಮಗನಾಗಿ ೧೫-೭-೧೯೮೦ ರಂದು ಸ್ವಗ್ರಾಮದಲ್ಲಿ ಜನಿಸಿದ ಅವರಿಗೆ ಬೆಳೆಯುತ್ತಾ ಬೆಳೆಯುತ್ತಾ ಬದುಕು ಕಡಿದಾಗುತ್ತಲೇ ಹೋಯಿತು.ಅವರ ಕಿತ್ತು ತಿನ್ನುವ ಬಡತನ, ಸೋರುವ ಸೂರು ,ಜಾತಿಗೆ ನಲುಗಿದ ಮನಸು,ಅಮ್ಮಳನ್ನು ಆವರಿಸಿದ ಅಸ್ತಮ ಬಿ ರಂ ಅವರನ್ನು ಇನ್ನಿಲ್ಲದಂತೆ ನಲುಗುವಂತೆ ಮಾಡಿ ,ಕೆಂಡ ಹಾಸಿದ ಹಾದಿಯ ಮೇಲೆ ನಡೆಯುವಂತೆ ಮಾಡಿತ್ತು. ಬೆಳಗಿ ಜಾವಕ್ಕೆ ಎದ್ದು ಕಸಮುಸರೆ […]

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಮುಚ್ಚು ಮರೆಯಿಲ್ಲದೆ ಎದೆಕದವ ತೆರೆಯೋಣ ಅಚ್ಚು ಮೆಚ್ಚಿನಲಿ ಒಲವ ಬಂಡಿಯ ತಳ್ಳೋಣ ಅರ್ಥವಾಗದ ಮಾತು ಅದೆಷ್ಟು ಆಡಿದರೇನು ಅಕ್ಕಪಕ್ಕದಲಿ ಕೂತು ಒಳಧ್ವನಿಯ ಕೇಳೋಣ ಬಾಳ ದಾರಿಯಲೆಲ್ಲ ಹೂವಿರಲಿ, ಮುಳ್ಳೇಯಿರಲಿ ನೋವು ನಲಿವಿನ ಮಧ್ಯೆ ಮನ ಬಿಚ್ಚಿ ನಗೋಣ ತೆರೆಮರೆಯಲಿ ಕುಣಿವ ಮುಖವಾಡ ಕಂಡೆಯಾ ಒಳ ಹೊರಗುಗಳನೂ ವಂಚಿಸದೇ ಬಾಳೋಣ ನಮ್ಮ ಭರಪೂರ ಕನಸುಗಳಿಗೆ ಕಡಿವಾಣವಿರಲಿ ಸೋಲು ಗೆಲುವುಗಳಲಿ ಕೈ ಹಿಡಿದು ಸಾಗೋಣ ಎನ್ನ ಕಣ್ಣಾಳದಲಿ ನೀ ಒಮ್ಮೆ ಧುಮುಕಬಾರದೇ ಪರಿಪರಿಯ ಸುಖಕೆ ಮೈ […]

ಕಾವ್ಯಯಾನ

ಓ, ಅವನೇ.. ಪೂರ್ಣಿಮಾ ಸುರೇಶ್ ಅವನನ್ನು ಇಷ್ಟ ಪಟ್ಟಿದ್ದು ಹೇಗೆ,ಯಾವಾಗ? ಪ್ರಶ್ನೆಯಾಗದಿರು ಒಳಗಿನವಳೇ.. ಅದೆಷ್ಟು ಬಾರಿ ಸಮಜಾಯಿಷಿ ನೀಡಿದ್ದೇನೆ ಕಿರಿಕಿರಿ ಮಾಡದಿರು ಹೀಗೆಲ್ಲ ಏನು-ಯಾಕೆಗಳನ್ನು ಎದುರಿಟ್ಟು ! ನಾನು ಬದುಕುತ್ತಿದ್ದೇನೆ ಎಂಬುದಷ್ಟೇ ಸತ್ಯ. ಆದರೆ ಅವಳಿಗದು ರುಚಿಸದು. ಮನಸ್ಸಿಗೆ ಪಾತಿ ಮಾಡಿದ್ದು, ನೆಟ್ಟ ಗಿಡ ಕುಡಿಯೊಡೆದದ್ದು.. ಮೊಗ್ಗು ಕಟ್ಟಿದ್ದು ನೆನಪಿಸುತ್ತಾಳೆ. ನನ್ನ ಅವಳ ಹಾದಿಗೆಳೆಯುತ್ತಾಳೆ ಬಲವಂತವಾಗಿ. “ಗೊತ್ತಿಲ್ಲ”- ಹಾರಿಕೆ ಉತ್ತರನೀಡಲಾರೆ. ನಾನು ನನ್ನ ದಾರಿಯಲ್ಲಿ ಅವನು ತನ್ನ ಗುರಿಯತ್ತ ನಡೆವಾಗ ಒಂದೊಂದು ತಿರುವಿನಲ್ಲೂ ಕಾಡಕುಸುಮ… -ಕೆಂಪಿನ ಕೇಪಳ, […]

ಕಾವ್ಯಯಾನ

ಸ್ವಾತಿ ಮುತ್ತು ಮಧು ವಸ್ತ್ರದ್ ಬಾಲ್ಯದಾ ದಿನಗಳಲ್ಲಿ ತಾಯ್ತಂದೆ,ಅಣ್ಣಂದಿರ ಬೆಚ್ಚಗಿನಾ ಗೂಡಿನಲ್ಲಿ ನಲಿದಿದ್ದ ಮುಗ್ಧತೆಗೆ ಸಿಕ್ಕಿದ್ದು ವಾತ್ಸಲ್ಯದಮುತ್ತು ಶಾಲೆಯಾ ದಿನಗಳಲ್ಲಿ ವಿದ್ಯೆಯಾ ಕಲಿಯುವಲ್ಲಿ ಗುರುಗಳಿಂದ ಸಿಕ್ಕಿದ್ದು ಮಾರ್ಗದರ್ಶನದ ನುಡಿ ಮುತ್ತು.. ಹರಯದಾ ಬನದಲ್ಲಿ ಮುಂಜಾನೆಯ ಮಂಜಿನಲಿ ಚಿಗುರೆಲೆಯ ಅಂಚಿನಲಿ ನನ್ನ ನೋಡಿ ನಕ್ಕಿದ್ದು ಇಬ್ಬನಿಯಮುತ್ತು ಸಪ್ತಪದಿಯ ತುಳಿದಲ್ಲಿ ನವಜೀವನದ ಹೊಸಿಲಲ್ಲಿ ಮೊದಲರಾತ್ರಿಯ ಗುಂಗಿನಲ್ಲಿ ನಲ್ಲ ನನಗಿತ್ತಿದ್ದು ಒಲವಿನ ಮುತ್ತು ನವಮಾಸ ಮುಗಿಯುತಲಿ ತಾಯ್ತನದ ಮೋಡಿಯಲಿ ನನ್ನ ಮುದ್ದಿನ ಕರುಳಕುಡಿಗೆ ಕಣ್ಮುಚ್ಚಿ ನಾನಿತ್ತಿದ್ದು ಮಮತೆಯ ಮುತ್ತು ತುಂಬುಪ್ರೀತಿಯ ಬಾಳಿನಲ್ಲಿ […]

ಸ್ವಾತ್ಮಗತ

ಏಕತೆ ಸಾರುವ ಹುಸೇನ್-ಷಾವಲಿ ತಾತಯ್ಯ…! ಕೆ.ಶಿವು.ಲಕ್ಕಣ್ಣವರ `ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿನ ಒಂದು ಸಾಲು. ಇಂತಹ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂಬಂತೆ ಬಾಗೇಪಲ್ಲಿಯಲ್ಲಿ ದರ್ಗಾ-ಕರಗ, ಮಂದಿರ, ಮಸೀದಿ, ಗುಡಿ, ಚರ್ಚ್ ಎಲ್ಲವೂ ಇಲ್ಲೇ ಇವೆ. ಈ ನೆಲದಲ್ಲಿ ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರ ಕೊಡುಗೆ ಸಾಕಷ್ಟಿದೆ… ಹಿಂದು-ಮುಸ್ಲಿಂರು ತಮ್ಮ ಗುರು ಮತ್ತು ಮಾರ್ಗದರ್ಶಕರೆಂದೇ ಅವರನ್ನು ಕಾಣುತ್ತಾರೆ. […]

ಕಾವ್ಯಯಾನ

ಗಝಲ್ ಡಾ. ಗೋವಿಂದ ಹೆಗಡೆ ಸುಳಿಬಾಳೆಯಂಥ ಹೆಣ್ಣು ನೀನು ತಿಳಿಯದ್ದು ನನ್ನ ತಪ್ಪು ಆಲಿಕಲ್ಲ ಮಳೆಯಂತೆ ಸುರಿದೆ, ಸುರಿದಿದ್ದು ನನ್ನ ತಪ್ಪು ಕನಸಿನ ಪುಟದಲ್ಲಿ ಬರೆದೊಂದು ಹಾಡಂತೆ ಕಂಡೆನೇ ನಿನ್ನ ಎತ್ತಿ ಅಪ್ಪಿದೆ ನೀ ಗರುಕೆಯೆಸಳ, ಹೆಚ್ಚು ಬಯಸಿದ್ದು ನನ್ನ ತಪ್ಪು ಎದೆ ಕೊರೆದ ದುಗುಡಕ್ಕೆ ಹೊರದಾರಿ ಬಯಸಿದವಳು ನೀನು ಕಿವಿಯಾದ ಮಾತ್ರಕ್ಕೆ ಆಸರೆ ನಾನೆಂದು ಉಬ್ಬಿದ್ದು ನನ್ನ ತಪ್ಪು ಫೋಲ್ ವಾಲ್ಟ್ ನಲ್ಲಿ ಜಿಗಿದು ದಾಟಿ ಕೋಲನ್ನು ಕೈ ಬಿಡುವರು ಮಣ್ಣಿಗೆಸೆದೆ ನೀನೆಂದು ಮರುಗುತ್ತ ಉಳಿದಿದ್ದು […]

ಸಂಗೀತ ಸಂಗಾತಿ

ಸಂಗೀತದ ಹಿರಿಮೆ ರತ್ನಾ ಬಡವನಹಳ್ಳಿ ಪ್ರತಿ ಮಾನವನಲೂ ಒಂದೊಂದು ಕಲೆ ತನಗರಿಯದೆ ಅಡಗಿ ಕುಳಿತೇ ಇರುತ್ತದೆ.ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ‌ ತಕ್ಷಣ ಮೂಡುವುದಿಲ್ಲ. ಅದನ್ನು ಗ್ರಹಿಸಿ ಹೊರತರುವ ಗುರು,ಹಾಗೂ ಕಲಾಪೋಷಕರೂ ಸಿಗಬೇಕು. ಎಂತಹ ಕಠಿಣ ಮನಸಿನ ಮನುಜನಾದರೂ ಸಂಗೀತದ ರಾಗಕ್ಕೆ ಒಮ್ಮೆಯಾದರೂ ತಲೆದೂಗದೆ ಇರಲಾರ. ಎಂದಾದರೂ ಒಂದಲ್ಲ ಒಂದು ಹಾಡಿಗೆ ಕಾಲು ,ಕೈ ಬೆರಳು ತಾಳ ಹಾಕಿ ತಲೆದೂಗಿಯೇ ಇರುತ್ತಾನೆ ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ.ಒಬ್ಬೊಬ್ಬರಿಗೆ ಒಂದೊಂದು ರಾಗ ಇಷ್ಟವಾಗಬಹುದು. ರಚ್ಚೆ ಇಳಿದು ಅಳುವ […]

ಅನುವಾದ ಸಂಗಾತಿ

Solitary! ತೆಲುಗು ಮೂಲ : ರವಿ ವೀರೆಲ್ಲಿ ಅನುವಾದ : ರೋಹಿಣಿಸತ್ಯ ಒಂಟಿ ಮೇಘದಂತೆ ಅಲ್ಲಿ ಇಲ್ಲಿ ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?! ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ ಯುದ್ಧ ಮುಗಿದಮೇಲೆ ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ ಒಂಟಿಯಾಗಿ ಬಾಳಲಾಗದಿರುವುದಕ್ಕೆ ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು […]

ಕಾವ್ಯಯಾನ

ಬೆನ್ನ ಮೇಲೆ ಬರೆದ ಮುಳ್ಳಿನ ಚಿತ್ರ ಬಿದಲೋಟಿ ರಂಗನಾಥ್ ಮನುಷ್ಯತ್ವವನ್ನೇ ಗಾಳಿಗೆ ತೂರಿದ ನೀಚ ಮನಸೇ ಹೆಣದ ಮೇಲಿನ ಕಾಸಿಗೆ ನಾಲಿಗೆಯನ್ನೇಕೆ ಚಾಚಿದೆ ? ಜೀವ ಇರುವಾಗ ಇಲ್ಲದ ಹೆಸರಿನ ಮುಂದೆ ನಿನ್ನ ಹೆಸರನ್ನೇಕೆ ಜೋಡಿಸುತ್ತಿ? ನಿಷ್ಠೆ ಇಲ್ಲದ ಮನಸನು ಹೊತ್ತು ಹೊಲಸು ಆಗಿ ಕೆಸರು ರಸ್ತೆ ಚರಂಡಿಗಳಲ್ಲಿ ಉರುಳಿ ಕೈ ತೊಳೆಯದೇ ಹರಿವಿ ನೀರಿಗೆ ಕೈ ಅದ್ದುವ ನಿನ್ನ ನಡೆ ಎಂದಿಗೂ ಗಾಳಿಗೋಪುರ ಇದ್ದ ಸೀರೆಯನು ಉಡದೇ ಅಲ್ಲೆಲ್ಲೋ ಬೇಲಿ ಮೇಲಿರುವ ಸೀರೆಗೆ ಆಸೆ ಪಟ್ಟು […]

Back To Top