ಕಾವ್ಯಯಾನ
ಬಡವರ ಸ್ವಾತಂತ್ರ್ಯ ರಾಜು ದರ್ಗಾದವರ ಬಡವರ ಸ್ವಾತಂತ್ರ್ಯ ಇನ್ನೆಷ್ಟು ಜೀವಬೇಕು ಕೇಳು ಸ್ವಾತಂತ್ರ್ಯವೊಂದು ಸಿಗಲಿ, ನಾಡಮಕ್ಕಳ ಬದುಕಿಗೆ; ಬೀಸಿರಕ್ತ ನಿನ್ನ ಬೇಡಿಕೆಯಾದರೆ ತಗೆದು ಬಿಡು ಖಡ್ಗವನ್ನು ತುಂಡರಸಿ ಕೊಡುವೆ ನಿನ್ನ ಪಾದಗಳಿಗೆ ಸ್ವಾತಂತ್ರ್ಯ ಸಿಗದ ಬದುಕು ಬೇಡವಾಗಿ ನರಕವೇ ಕಂಣ್ತುಂಬಿ ಹರಿದಿದೆ; ಬಡವನ ಮರಗು ತರುವುದಲ್ಲ ಮೆರಗು ಆಳಿದ್ದು ಸಾಕು,ಅರಸನಾಗಬೇಡ ಬಡವರ ಬದುಕಾಗು.. **********
ಕಾವ್ಯಯಾನ
ಕುರುಡು ಕಾಂಚಾಣ ಸುಜಾತಾ ರವೀಶ್ ಕುರುಡು ಕಾಂಚಾಣ ಬೇಂದ್ರೆಯವರ ಕುರುಡು ಕಾಂಚಾಣ ಸಾಮಾಜಿಕ ಅನಿಷ್ಟವನ್ನು ವೈಭವೀಕರಿಸುವ ದೃಶ್ಯದಲ್ಲಿ ಆ ಕರಾಳತೆಯನ್ನು ಕಟ್ಟಿಕೊಡುವ ಒಂದು ಅತ್ಯಂತ ಶಕ್ತಿಯುತ ಪ್ರಯತ್ನ .ಹಣದ ದಾಹ ಎಂಬ ಪಿಶಾಚಿಯ ಯಾವ ರೀತಿ ತನ್ನ ಕ್ರೂರತೆಯನ್ನು ತೋರಿಸುತ್ತದೆ ಹೇಗೆ ಅದಕ್ಕೆ ಕೊಂಚವೂ ದಯವಿಲ್ಲ ಎಂಬುದನ್ನು ಕವಿಯ ಪದಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ ಆ ಭೀಭತ್ಸ ತೆಯು ಮೈ ಝುಮ್ ಎನ್ನುವಂತೆ ಮಾಡುತ್ತದೆ .ಬಾಣಂತಿ ಎಲುಬಿನ ಬಿಳುಪಿನ ಕಿರು ಗೆಜ್ಜೆ ,ಸಣ್ಣ ಕಂದಮ್ಮಗಳ ಕಣ್ಣಿನ ಕವಡೆ, […]
ಪ್ರಸ್ತುತ
ನಿರುದ್ಯೋಗದ ವಿರುದ್ದ ಹೋರಾಟ ಗಣೇಶಭಟ್ ಶಿರಸಿ ನಿರುದ್ಯೋಗದ ವಿರುದ್ಧ ಹೋರಾಟ….. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಉದ್ಯಮಗಳು ಮುಚ್ಚುತ್ತಿರುವುದರಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಿದೆಯೆಂಬುದನ್ನು ಹಲವು ವರದಿಗಳು ಹೇಳುತ್ತಿವೆ. ಆರ್ಥಿಕ ಹಿಂಜರಿತ ಉಂಟಾಗಿರುವುದೇ ಇದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಬದಲಿಗೆ, ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ನಿರುದ್ಯೋಗದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಣೆ ಮಾಡಿ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆಮಾಡಿ […]
ಕಾವ್ಯಯಾನ
ಪತ್ನಿಯ ದುಗುಡ ಮಾಲತಿ ಹೆಗಡೆ ಕತ್ತು ಚಾಚಿಕಣ್ಣು ಹಾಯುವವರೆಗೂ ನೋಡಿದರೂ ನೀ ಬರಲಿಲ್ಲ ಹೊರೆಗೆಲಸಗಳು ಮುಗಿದು ಕತ್ತಲಾವರಿಸಿದರೂ ನೀ ಬರಲಿಲ್ಲ ಸಂಜೆಗೊಂದಿಷ್ಟು ದೂರದ ಸಮುದ್ರತೀರದಲಿ ವಿಹರಿಸಬೇಕಿತ್ತು ಆಟ ಪಾಟಗಳೆಲ್ಲ ಮುಗಿಸಿ ಮಕ್ಕಳು ಮಲಗಿದರೂ ನೀ ಬರಲಿಲ್ಲ ಕಂಬನಿದುಂಬಿ ನಾಳೆಯಡುಗೆಗೆ ಖಾಲಿ ಡಬ್ಬಿಗಳ ತಡಕಾಡುತ್ತಿರುವೆ ಅಳಿದುಳಿದಿದ್ದರಲ್ಲೇ ಮಾಡಿದ ಅಡುಗೆ ಆರಿದರೂ ನೀ ಬರಲಿಲ್ಲ ಸಾಲ ಕೊಟ್ಟವರಿಗೆ ಅವಮಾನ ನುಂಗುತ್ತ ತಾರಮ್ಮಯ್ಯ ಆಡಿಸಿದೆ ನೀಲ ನಭದಿ ಚಂದಿರ ನನ್ನನ್ನು ಅಣಕಿಸಿದರೂ ನೀ ಬರಲಿಲ್ಲ ಮದಿರೆಗೆ ಮರುಳಾದವನಿಗೆ ಮಡದಿಯ ನೆನಪು ಕಿಸೆ […]
ಅಂಕಣ
ಅವ್ಯಕ್ತಳ ಅಂಗಳದಿಂದ ಅವ್ಯಕ್ತ ಸಹಾನುಭೂತಿ, ತಳಮಳಗಳನ್ನು ತಿಳಿಗೊಳಿಸುತ್ತದೆ… ನಂಬಿಕೆ ಸತ್ಯವನ್ನು ಹೊರತರುತ್ತದೆ… ಸ್ವಾತ್ಮಾರೂಪ ಧರ‍್ಯದ ಬೀಜವನ್ನು ಬಿತ್ತುತ್ತದೆ… ನರ‍್ಭಯತೆ ಸ್ವಾತಂತ್ರ‍್ಯವನ್ನು ಪೋಷಿಸುತ್ತದೆ…. ಪ್ರೀತಿ-ವಿಶ್ವಾಸ, ಹಾದಿಯಲ್ಲಿ ದಾರಿದೀಪ ವಾಗುತ್ತದೆ… ಇದನ್ನರಿತ ನಾನು, ಹಂತಹಂತವಾಗಿ ಇವೆಲ್ಲವನ್ನೂ ಪೂರೈಸ ತೊಡಗಿದೆ..ಮೊದಲನೆಯದಾಗಿ ಅವಳ ಭಯ ಕಡಿಮೆಯಾಗಿ ನನ್ನ ಮೇಲೆ ನಂಬಿಕೆ ಹೆಚ್ಚಿಸಿದರೆ ಮಾತ್ರ, ಓದುವುದನ್ನು ಬರೆಯುವುದನ್ನು ಸರಿಪಡಿಸಬಹುದು. ಏಕೆಂದರೆ 10ನೇ ಕ್ಲಾಸಲ್ಲಿ ಅವಳು ಪಾಸಾಗುವುದು ಅವಳ ಪೋಷಕರಿಗೆ ಅಗತ್ಯವಾಗಿತ್ತು.ಅದಕ್ಕೆ ಪೀಠಿಕೆಯಂತೆ ಅವಳ ಚಿತ್ರಗಳನ್ನು, ಬರಹಗಳನ್ನು ಹೊಗಳಲು ಹಾಗೂ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡಲು […]
ಅಂಕಣ
ಹೊತ್ತಾರೆ ಅಮ್ಮನೂರಿನ ನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಮ್ಮ… ಅಜ್ಜಿಯನ್ನು ನಾನು ಅಮ್ಮ ಅಂತ ಕರೆಯುತ್ತಿದ್ದುದು. ನನ್ನ ಬಾಲ್ಯದ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಅಮ್ಮನ ಜೊತೆಯಲ್ಲೇ ಕಳೆದಿದ್ದರಿಂದ ನೆನಪುಗಳ ರಾಶಿಯೇ ಇದೆ. ಹಾಗಾಗಿ ನಾನು ನಿಧಾನವಾಗಿ ಸಂದರ್ಭಗಳನ್ನೆಲ್ಲ ಪೋಣಿಸುತ್ತಾ ಒಂದೊಂದೇ ಬರಹ ಬರೆಯುತ್ತಿರುತ್ತೇನೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸುವುದೂ ಆಗುತ್ತದೆ. ಒಂದಂತೂ ನಿಜ ಇದುವರೆಗಿನ ನನ್ನ ಬದುಕಿನ ಎಂತಹದ್ದೇ ಮುಖ್ಯ ಸಂದರ್ಭವಾದರೂ ಅಲ್ಲಿ ಅಮೂರ್ತವಾಗಿ ಅಮ್ಮ ಇದ್ದೇ ಇರುತ್ತಾರೆ. ನನಗಿನ್ನೂ ನೆನಪಿದೆ. ನನಗೆ ಬುದ್ಧಿ ತಿಳಿಯುವಾದಾಗಿಂದಲೂ, ಅಮ್ಮ […]
ಕಾವ್ಯಯಾನ
ಕೊರಳು ಬಿಗಿದ ಪ್ರೀತಿ ತುಳಸಿ ಭಟ್ (ಸಿಂಧು ಭಾರ್ಗವ್ ಬೆಂಗಳೂರು) ಮರಳ ಮೇಲೆ ಗೆರೆಯ ಗೀಚಿ ನಿನ್ನ ಹೆಸರ ಬರೆದೆನು ಬಳಿಗೆ ಬಂದು ಏನು ಎಂದು ನೋಡಬಾರದೇ? ಪ್ರೀತಿಯೀಗ ಮೊಳಕೆಯೊಡೆದು ರಕುತದಲ್ಲಿ ಬೆರೆತಿದೆ ಸನಿಹ ನಿಂತು ಮೊಗವ ನೋಡಿ ಕೇಳಬಾರದೇ? ಎತ್ತ ಹೋದೆ ಬರುವೆ ಎಂದು ಮತ್ತೆ ಕಾಣದೂರಿಗೆ ಸಂಜೆ ಸೂರ್ಯ ಅಳುತ ಕರಗಿ ಕಡಲ ಸೇರಿದೆ ಅಲೆಗಲೆಲ್ಲ ಕೆಂಪುಗಟ್ಟಿ ನೊಂದು ಮೂಕವಾಗಿವೆ ಬಂಡೆ ಮೇಲೆ ಬಡಿದು ಬಡಿದು ಹಿಂದೆ ತಿರುಗಿವೆ ನಿನ್ನ ನೆರಳ ಹೋಲುವಂತ ಪಿಂಡ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಹುರುಪೇ ಇಲ್ಲದೆ ಬಣ್ಣಗಳ ಬಳಿದೇನು ಲಾಭ ಎದೆಯೇ ಇಲ್ಲದ ಹಾಡುಗಳ ಬರೆದೇನು ಲಾಭ ಹೊತ್ತಿದರೆ ಹೊತ್ತು ಬೆಳಗು ಮಿಂಚಂತೆ ಸಿಡಿಲಂತೆ ಬರೀ ಹೊಟ್ಟಿನ ಹೊಗೆಯಾದರೆ ಆಗಿದ್ದೇನು ಲಾಭ ವಿರೋಧಿಗಳ ಎದುರಿಸು ವಾದ, ಕರ್ಮಭೂಮಿಕೆಯಲ್ಲಿ ಅಣಕು ಬೊಂಬೆಗಳ ಸುಡುತ್ತ ಬಂತೇನು ಲಾಭ ಕುಡಿದರೆ ಕುಡಿಯಬೇಕು ಇಡೀ ಮಧು ಶಾಲೆಯನ್ನು ಸೆರೆಮುಕ್ಕ ಸೆರೆಯ ತುಟಿಗೆರೆದೇನು ಲಾಭ ಹೊತ್ತು ಹೊತ್ತಿಸು ಉರಿ ಬೆಳಗಿಸು ಹೋರು ಎಣ್ಣೆ ಬತ್ತಿ ಹಣತೆಯ ದೂರಿದರೇನು ಲಾಭ ಆಳಕ್ಕಿಳಿ ಬಗೆ ಬರೆ ಹಾಡು […]
ಕಾವ್ಯಯಾನ
ಗಝಲ್ ಎ.ಹೇಮಗಂಗಾ ಎಲ್ಲ ಜಂಜಡಗಳ ಮರೆಸುವ ಮಾಯೆಯಿದೆ ನಿನ್ನ ನಗುವಿನಲ್ಲಿ ಎಲ್ಲ ಒತ್ತಡಗಳ ಶೂನ್ಯವಾಗಿಸುವ ಕಲೆಯಿದೆ ನಿನ್ನ ನಗುವಿನಲ್ಲಿ ನನಗೆಂದೇ ದೈವ ಬುವಿಗೆ ಕಳಿಸಿದ ಕೊಡುಗೆ ನೀನು ಮಗುವೇ… ಎಲ್ಲ ಚಿಂತೆಗಳ ಇಲ್ಲವಾಗಿಸುವ ಮೋಡಿಯಿದೆ ನಿನ್ನ ನಗುವಿನಲ್ಲಿ ಕಾಲದ ಪರಿವೆಯಿಲ್ಲದೇ ಕಾದೆ ಬರಿದಾದ ಮಡಿಲು ತುಂಬಲೆಂದು ಎಲ್ಲೆಡೆಯೂ ಮುದ ಹರಡುವ ಮುಗ್ಧತೆಯಿದೆ ನಿನ್ನ ನಗುವಿನಲ್ಲಿ ಹೆಣ್ತನಕೆ ಹಿರಿಮೆ ತಂದ ತಾಯ್ತನದ ಭಾಗ್ಯ ನನ್ನದಾಗಿದೆ ಇಂದು ಅಶಾಂತಿಯ ತೊಡೆವ ಶಾಂತಿಯ ನೆಲೆಯಿದೆ ನಿನ್ನ ನಗುವಿನಲ್ಲಿ ಕಿವಿಗಳ ತಣಿಸುತಿವೆ ನಿನ್ನ […]
ಕಾವ್ಯಯಾನ
ಹೇ ರಾಮ್ ಡಿ.ಎಸ್.ರಾಮಸ್ವಾಮಿ ಅವತ್ತು ಆ ದುರುಳನ ಗುಂಡಿಗೆಹೇ ರಾಂ ಎನ್ನುತ್ತಲೇ ಗುಂಡಿಗೆಯಿತ್ತವನನ್ನೂಅನುಮಾನಿಸಿ ಅವಮಾನಿಸಿದವರುಮತ್ತೀಗ ವಿಝೃಂಭಣೆಯ ತುರೀಯದಲ್ಲಿಗತದ ನೋವುಗಳನ್ನರಿಯದೇ ಬರಿದೇಸ್ವಚ್ಛತೆಯ ಮಾತ ಭಜನೆ ಮಾಡುತ್ತಿದ್ದಾರೆ, ಪೊರಕೆ ಹಿಡಿದಂತೆ ಆ ಅವರ ಭಂಗಿಕುಡಿಸಿ ಅಮಲೇರಿಸುವ ಮಾತುನಾಳೆಗಿರಲಿ ಇವತ್ತಿಗೇ ನಕಲಿ ಸಾಬೀತಾಗಿನಿಜಕ್ಕೂ ಕೊಳೆ ತೆಗೆಯ ಹೊರಟವರೆಲ್ಲರಿಗೂಆಘಾತ, ಸಂವಿಧಾನದ ವಿಧಿಗೂ ವಿಧ ವಿಧದಮರು ಜೋಡಣೆಯ ವ್ಯಾಖ್ಯಾನ ಗಾಂಧಿ ಎಂದರೆ ಅವನೊಬ್ಬನೇ ತಾತಈ ದೇಶಕ್ಕಷ್ಟೇ ಅಲ್ಲ, ಅವನು ವಿಶ್ವ ವಿಖ್ಯಾತ.ಬೋಂಗು ಬಿಡುವವರಿಗೆ ಸತ್ಯ ಬೇಕಿರುವುದಿಲ್ಲಅವರದೇನಿದ್ದರೂ ಮನ ರಂಜನೆಯದೇ ಗುರಿಚಪ್ಪಾಳೆಗೆ ಖುಷಿಪಡುವವರಿಗೆ ಬೌದ್ಧಿಕತೆಯಅಗತ್ಯಕ್ಕಿಂತಲೂ ದಿರಿಸಿನದೇ […]