ಅಂಕಣ

ಅವ್ಯಕ್ತಳ ಅಂಗಳದಿಂದ

Image result for drawings of students

ಅವ್ಯಕ್ತ

ಸಹಾನುಭೂತಿ, ತಳಮಳಗಳನ್ನು ತಿಳಿಗೊಳಿಸುತ್ತದೆ…
ನಂಬಿಕೆ ಸತ್ಯವನ್ನು ಹೊರತರುತ್ತದೆ…
ಸ್ವಾತ್ಮಾರೂಪ ಧರ‍್ಯದ ಬೀಜವನ್ನು ಬಿತ್ತುತ್ತದೆ…
ನರ‍್ಭಯತೆ ಸ್ವಾತಂತ್ರ‍್ಯವನ್ನು ಪೋಷಿಸುತ್ತದೆ….
ಪ್ರೀತಿ-ವಿಶ್ವಾಸ, ಹಾದಿಯಲ್ಲಿ ದಾರಿದೀಪ ವಾಗುತ್ತದೆ…

Image result for drawings of students


ಇದನ್ನರಿತ ನಾನು, ಹಂತಹಂತವಾಗಿ ಇವೆಲ್ಲವನ್ನೂ ಪೂರೈಸ ತೊಡಗಿದೆ..ಮೊದಲನೆಯದಾಗಿ ಅವಳ ಭಯ ಕಡಿಮೆಯಾಗಿ ನನ್ನ ಮೇಲೆ ನಂಬಿಕೆ ಹೆಚ್ಚಿಸಿದರೆ ಮಾತ್ರ, ಓದುವುದನ್ನು ಬರೆಯುವುದನ್ನು ಸರಿಪಡಿಸಬಹುದು. ಏಕೆಂದರೆ 10ನೇ ಕ್ಲಾಸಲ್ಲಿ ಅವಳು ಪಾಸಾಗುವುದು ಅವಳ ಪೋಷಕರಿಗೆ ಅಗತ್ಯವಾಗಿತ್ತು.
ಅದಕ್ಕೆ ಪೀಠಿಕೆಯಂತೆ ಅವಳ ಚಿತ್ರಗಳನ್ನು, ಬರಹಗಳನ್ನು ಹೊಗಳಲು ಹಾಗೂ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡಲು ಶುರುಮಾಡಿದೆ…. ಮೆಲ್ಲನೆ ನನ್ನ ಮಾತುಗಳನ್ನು ನಂಬಲು ಪ್ರಾರಂಭಿಸಿದಳು…ನಂತರ ಪಕ್ಕದಲ್ಲಿ ಕುಳ್ಳಿರಿಸಿ ಅಕ್ಷರಗಳ ಜೋಡಣೆ, ಪದಗಳ ಉಚ್ಚಾರಣೆ ಹೀಗೆ ಕಲಿಸತೊಡಗಿದೆ. ನನ್ನ ಜೊತೆಗೆ ಅವಳ ಕ್ಲಾಸಿನಲ್ಲಿದ್ದ ಇನ್ನೆರಡು ಹುಡುಗಿಯರು ತಾಳ್ಮೆಯಿಂದ ನಾನು ಹೇಳಿಕೊಟ್ಟಂತೆ ಅವಳಿಗೆ ಸಹಾಯ ಮಾಡತೊಡಗಿದರು….
ಸಹಜವಾಗಿ ಅವಳ ಮಾತುಗಳನ್ನು ಆಲಿಸುವುದು, ಅದನ್ನು ಗೌರವಿಸುವುದು, ಅದನ್ನು ಸರಿ ತಪ್ಪುಗಳಲ್ಲಿ ತುಲನೆ ಮಾಡದಿರುವುದು, ಅವಳ ಮನಸ್ಸಿನಲ್ಲಿ ಧೈರ್ಯ ತುಂಬಿತು.
ಹಂತಹಂತವಾಗಿ ಓದಲು-ಬರೆಯಲು ಪ್ರಯತ್ನಿಸ ತೊಡಗಿದಳು. ನಗುನಗುತ್ತಲೇ ದಿನದಿಂದ ದಿನ ಓದಿನಲ್ಲಿ ತನ್ನ ಹಿಡಿತವನ್ನು ಜಾಸ್ತಿ ಮಾಡಿಕೊಂಡಳು ತಾನೇ ಸ್ವಂತ ಪ್ರಯತ್ನಿಸಲು ಶುರುಮಾಡಿದಳು.ಮುಖದ ಮೇಲೆ ಅಲ್ಲದೆ ಮನದ ಒಳಗು ಸಂತೋಷದಿಂದ ಇದ್ದಾಳೆ ಎಂದು ಭಾಸವಾಗುತ್ತಿತ್ತು… 
ಒಂಟಿಯಾಗಿರುವುದು ಅವಳ ಅಭ್ಯಾಸ, ಅಲ್ಲದೆ ಅವಳ ಅನಿವಾರ್ಯತೆ ಆಗಿದ್ದರಿಂದ ಹೆಚ್ಚುಕಡಿಮೆ ಅದಕ್ಕೆ ಒಗ್ಗಿ ಹೋಗಿದ್ದಳು. ಅಲ್ಲಿಂದ ಹೊರತಂದು ಮಕ್ಕಳೊಂದಿಗೆ ಬರೆಯುವುದನ್ನು, ಆತ್ಮವಿಶ್ವಾಸದಿಂದ ಮಾತನಾಡುವುದನ್ನು ಪ್ರೋತ್ಸಾಹಿಸಿದೆ. ವರ್ಷದ ವಾರ್ಷಿಕೋತ್ಸವದಲ್ಲಿ ಅವಳ ಪಕ್ಕದಲ್ಲಿ ನಿಂತು ಪೋಷಕರನ್ನುದ್ದೇಶಿಸಿ ಒಂದು ನಿಮಿಷ ಮಾತನಾಡಲು ಹುರಿದುಂಬಿಸಿದೆ…  ಸಾಮಾನ್ಯವಾಗಿ ಮಕ್ಕಳನ್ನು ನಾನು ಗಟ್ಟಿ ಸ್ವರದಲ್ಲಿ ಮಾತನಾಡಿಸುವುದೇ ಅಭ್ಯಾಸ. ಆದರೆ ಈ ಹುಡುಗಿಯನ್ನು ಬಹಳ ಮೃದು ಸ್ವರದಲ್ಲಿ ಮಾತನಾಡಿಸಬೇಕಿತ್ತು. ನನಗೆ ಅದೊಂದು ಕಷ್ಟದ ಕೆಲಸವಾಗಿತ್ತು… ನಾನೇನಾದರೂ ಚೂರು ಸ್ವರ ಏರಿಸಿದರೆ ಸಾಕು ಇಡೀ ಮೈ ನಡುಗಿಸಿಬಿಡುವಳು ಅಷ್ಟು ಭಯ ಅವಳಲ್ಲಿ ತುಂಬಿಹೋಗಿತ್ತು. ಕತ್ತಲು, ಜಿರಳೆ, ಸಣ್ಣ ದೊಡ್ಡ  ಪ್ರಾಣಿಗಳು,ನಾಯಿ ಕಂಡರೆ ಭಯ, ಹಸು ಕಂಡರೆ ಭಯ, ದಷ್ಟಪುಷ್ಟವಾದವರನ್ನು ಕಂಡರೆ ಭಯ ಜೋರಾಗಿ ಕಿರುಚಿ ಭಯಪಡುತ್ತಿದ್ದಳು.
ಅವಳಲ್ಲಿ ಆತ್ಮವಿಶ್ವಾಸವನ್ನು ನಿಧಾನವಾಗಿ ತುಂಬಿಸಿ ಒಬ್ಬಳೇ ಓಡಾಡುವ ಹಾಗೆ ಮಾಡಲಿಕ್ಕೆ ಒಂದು ವರ್ಷವೇ ಬೇಕಾಯಿತು. ಸ್ವಲ್ಪ ಮುಗ್ದೆ ಇದ್ದಿದರಿಂದ ಸುಲಭವಾಗಿ ಹೇಳಿದ ಮಾತು ಕೇಳುತ್ತಿದ್ದಳು…ಮೊದಲು ಅವಳ ಜೊತೆ ಸ್ನೇಹಿತರನ್ನು ಕಳಿಸುತ್ತಿದ್ದೆ ನಂತರ ಅವಳೊಬ್ಬಳೆ ಬಂದಾಗ ಬೇಕೆಂದೇ ಹೊಗಳುತ್ತಿದ್ದೆ.  ಕ್ಲಾಸಿನಲ್ಲಿ ಇರುವವರಿಗೆ ಪ್ರಶಂಸಿ ಎಂದು ಹೇಳಿಕೊಟ್ಟಿದ್ದೆ. ಅವಳಿಗೆ ಹೊಸ ಹೊಸ ಚಾಲೆಂಜ್ ಗಳನ್ನು ಕೊಟ್ಟೆ ಅಲ್ಲಿ ಹಸುಗಳು ನಿಂತಿವೆಯಲ್ಲ ಅಲ್ಲಿಂದ ನಡೆದುಕೊಂಡು ಬಾ, ನಿಮ್ ಮನೆಯಿಂದ ನೀನೊಬ್ಬಳೆ ನಡೆದುಕೊಂಡು ಬಾ, ಸಂತೆಗೆ ಹೋಗಿ ಸಾಮಾನು ತೆಗೆದುಕೊಂಡು ಬಾ ಅಂತ ಹೊಸ ಹೊಸ ಚಾಲೆಂಜ್… ಅವಳಲ್ಲಿ ದೈರ್ಯ ಹೆಚ್ಚಾಗುತ್ತಾ ಹೋಯಿತು.
ಅಂತೂ ಒಂದು ದಿನ ಕತ್ತಲಲ್ಲಿ ಅವಳೊಬ್ಬಳೇ ನನ್ನ ಮನೆಯವರೆಗೂ ಬಂದಳು. ಅವಳಲ್ಲಿ, ‘ನಾನು ಏನೋ ಸಾಧಿಸಿದೆ!’ ಎಂಬ ಸಂತೋಷ ನೋಡಿ ನನಗೂ ಸಂತೋಷವಾಗಿತ್ತು.

ಆತ್ಮ ಸ್ಥೈರ್ಯದ ಜೊತೆ ನಂಬಿಕೆ ಸೇರಿದಾಗ ಅಸಾಧ್ಯವಾದದ್ದು ಏನೂ ಇಲ್ಲ ”

************


Leave a Reply

Back To Top