ಗಝಲ್
ಡಾ.ಗೋವಿಂದ ಹೆಗಡೆ
ಹುರುಪೇ ಇಲ್ಲದೆ ಬಣ್ಣಗಳ ಬಳಿದೇನು ಲಾಭ
ಎದೆಯೇ ಇಲ್ಲದ ಹಾಡುಗಳ ಬರೆದೇನು ಲಾಭ
ಹೊತ್ತಿದರೆ ಹೊತ್ತು ಬೆಳಗು ಮಿಂಚಂತೆ ಸಿಡಿಲಂತೆ
ಬರೀ ಹೊಟ್ಟಿನ ಹೊಗೆಯಾದರೆ ಆಗಿದ್ದೇನು ಲಾಭ
ವಿರೋಧಿಗಳ ಎದುರಿಸು ವಾದ, ಕರ್ಮಭೂಮಿಕೆಯಲ್ಲಿ
ಅಣಕು ಬೊಂಬೆಗಳ ಸುಡುತ್ತ ಬಂತೇನು ಲಾಭ
ಕುಡಿದರೆ ಕುಡಿಯಬೇಕು ಇಡೀ ಮಧು ಶಾಲೆಯನ್ನು
ಸೆರೆಮುಕ್ಕ ಸೆರೆಯ ತುಟಿಗೆರೆದೇನು ಲಾಭ
ಹೊತ್ತು ಹೊತ್ತಿಸು ಉರಿ ಬೆಳಗಿಸು ಹೋರು
ಎಣ್ಣೆ ಬತ್ತಿ ಹಣತೆಯ ದೂರಿದರೇನು ಲಾಭ
ಆಳಕ್ಕಿಳಿ ಬಗೆ ಬರೆ ಹಾಡು ಎದೆಯಲುಗುವಂತೆ
ಬರೀ ನೀರ್ಗುಳ್ಳೆ ಊದುತ್ತ ಸವೆದೇನು ಲಾಭ
*********