ಕಾವ್ಯಯಾನ

ಕೊರಳು ಬಿಗಿದ ಪ್ರೀತಿ

ತುಳಸಿ ಭಟ್ (ಸಿಂಧು ಭಾರ್ಗವ್ ಬೆಂಗಳೂರು)

ಮರಳ ಮೇಲೆ ಗೆರೆಯ ಗೀಚಿ
ನಿನ್ನ ಹೆಸರ ಬರೆದೆನು
ಬಳಿಗೆ ಬಂದು ಏನು ಎಂದು ನೋಡಬಾರದೇ?

ಪ್ರೀತಿಯೀಗ ಮೊಳಕೆಯೊಡೆದು
ರಕುತದಲ್ಲಿ ಬೆರೆತಿದೆ
ಸನಿಹ ನಿಂತು ಮೊಗವ ನೋಡಿ ಕೇಳಬಾರದೇ?

ಎತ್ತ ಹೋದೆ ಬರುವೆ ಎಂದು
ಮತ್ತೆ ಕಾಣದೂರಿಗೆ
ಸಂಜೆ ಸೂರ್ಯ ಅಳುತ ಕರಗಿ
ಕಡಲ ಸೇರಿದೆ

ಅಲೆಗಲೆಲ್ಲ ಕೆಂಪುಗಟ್ಟಿ ನೊಂದು
ಮೂಕವಾಗಿವೆ
ಬಂಡೆ ಮೇಲೆ ಬಡಿದು ಬಡಿದು
ಹಿಂದೆ ತಿರುಗಿವೆ

ನಿನ್ನ ನೆರಳ ಹೋಲುವಂತ
ಪಿಂಡ ರೂಪುಗೊಂಡಿದೆ
ಹೆಸರು ಇಡಲು ನೀನು ಇಂದು
ಬರಲೆ ಬೇಕಿದೆ

ಕಾದು ಕುಳಿತೆ ತಿಳಿಗಾಳಿಯೊಂದು
ಸುರುಳಿ ಸುತ್ತಿಕೊಂಡಿತು
ಕೊರಳು ಬಿಗಿದು ಪ್ರೀತಿ ಹೆಸರ
ಉಸಿರು ಕಟ್ಟಿಸಿತು

*********

3 thoughts on “ಕಾವ್ಯಯಾನ

  1. ಧನ್ಯವಾದಗಳು
    ಇಂದಿನ ಈ ಭಾವೀತೆಯನ್ನು ( ಹಾಡನ್ನು)
    ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ ದ.ರಾ. ಬೇಂದ್ರೆ ಧಾರವಾಡ್ ಅಜ್ಜನಿಗೆ ಅರ್ಪಿಸುವೆನು‌
    ( ಜನ್ಮದಿನದ ಅಂಗವಾಗಿ…) ನುಡುನಮನ..
    ೩೧-೦೧-೨೦೨೦ ತುಳಸಿ ಭಟ್. ಸಿಂಧು ಭಾರ್ಗವ್‌ ಬಾರಕೂರು.

  2. ಧನ್ಯವಾದಗಳು
    ಇಂದಿನ ಈ ಭಾವಗೀತೆಯನ್ನು ( ಹಾಡನ್ನು)
    ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ ದ.ರಾ. ಬೇಂದ್ರೆ ಧಾರವಾಡ್ ಅಜ್ಜನಿಗೆ ಅರ್ಪಿಸುವೆನು‌
    ( ಜನ್ಮದಿನದ ಅಂಗವಾಗಿ…) ನನ್ನ ನುಡಿನಮನ..
    ೩೧-೦೧-೨೦೨೦ ತುಳಸಿ ಭಟ್. ಸಿಂಧು ಭಾರ್ಗವ್‌ ಬಾರಕೂರು. ಉಡುಪಿ ಜಿಲ್ಲೆ

Leave a Reply

Back To Top