ಶಿಶುಗೀತೆ

ಶಿಶುಗೀತೆ

ತಲ ಷಟ್ಪದಿಯಲ್ಲಿ ಶಿಶುಗೀತೆ ತೇಜಾವತಿ ಹೆಚ್. ಡಿ ಗೊಲ್ಲನೊಬ್ಬತೋಟದೊಳಗೆಕುರಿಯ ಮಂದೆ ಹಾಕಿದ |ಭಾರ ಹೊರಲುಕತ್ತೆ ಹಿಂಡುಎತ್ತು ಕುದುರೆ ಸಾಕಿದ || ಬೇಟೆಗೆಂದುನಾಯಿ ತಂದುಚತುರ ಸುಂಕು ಕಲಿಸಿದ |ಎಲ್ಲ ಸೇರಿಕೂಡಿ ಬಾಳ್ವಪ್ರೇಮವನ್ನು ಬೆಳೆಸಿದ || ನಿತ್ಯ ತಾನುಬೇಗ ಎದ್ದುಕುರಿಯ ಕಾಯತೊಡಗಿದ|ಸಂಜೆಯೊಳಗೆಮರಳಿ ಬಂದುತನ್ನ ಗೂಡ ಸೇರಿದ || ಒಂದು ಇರುಳುಹೊಂಚು ಹಾಕಿತೋಳವೊಂದು ಬಂದಿತು|ರೊಪ್ಪದೊಳಗೆಇದ್ದ ಕುರಿಯಮರಿಯ ನೋಡಿ ನಲಿಯಿತು|| ಇಂದು ಎನಗೆಹೊಟ್ಟೆ ತುಂಬಾರುಚಿಯ ಬೇಟೆ ಎನ್ನುತ|ಓಡಿ ಬಂದುಮರಿಯ ಮೇಲೆಹಲ್ಲು ನೆಟ್ಟು ಎರಗಲು|| ನಿದ್ರಿಸಿದ್ದನಾಯಿ ತಾನುಒಂದೇ ಸಮನೆ ಬೊಗಳಲು|ಕತ್ತೆ ಕೂಡಎದ್ದು ನಿಂತುಕಾಲು ಕೊಡವಿ […]

ಕಾವ್ಯ ಕನ್ನಿಕೆ

ಸರಿತಾ ಮಧು ನನ್ನೊಳು ಕಾವ್ಯವೋ?ಕಾವ್ಯದೊಳಗೆ ನಾನೋ?ಅಭಿಮಾನದ ಆಲಿಂಗನವೋ?ಪದಪುಂಜಗಳ ಆರಾಧನೆಯೋ?ಶೃಂಗಾರದ ವರ್ಣನೆಯೋ?ಮನವ ಕಾಡುವ ಭಾವನೆಯೋ?ಅರಿಯದೇ ನನ್ನೊಳು ಬೆರೆತಕವಿ ಹೃದಯವೋ? ಮನದೊಳಡಗಿದ ಕಾವ್ಯಕನ್ನಿಕೆಯೋನಿನಗಾರಿದ್ದಾರು ಹೋಲಿಕೆ? ರತಿಸೌಂದರ್ಯ ಹೆಚ್ಚಿಸುವ ಲಾಲಿತ್ಯಸಹೃದಯ ಓದುಗನ ಮೆಚ್ಚಿಸುವ ಪಾಂಡಿತ್ಯಕರ್ಣಾನಂದ ನೀಡುವ ಸುಂದರ ಸಾಹಿತ್ಯನಿನಗಾರಿದ್ದಾರು ಹೋಲಿಕೆ? ಯತಿ, ಪ್ರಾಸ, ಅಲಂಕಾರಗಳನುತೊಟ್ಟಿರುವ ಆಭರಣ ಪ್ರಿಯೆನಿನಗಾರಿದ್ದಾರು ಹೋಲಿಕೆ? ಹರಿವ ಝರಿಯಂತೆ ನಿರಂತರಪ್ರವಹಿಸುವೆ ಪ್ರತಿ ಮನ್ವಂತರಕವಿ ಹೃದಯಗಳ ವಿರಾಜಿತೆನಿನಗಾರಿದ್ದಾರು ಹೋಲಿಕೆ? *********

ಪತ್ರ ಬರೆಯಬೇಕಿದೆ ಮಳೆಗೆ

ಪ್ರಜ್ಞಾ ಮತ್ತಿಹಳ್ಳಿ ಯಾರಿಗೂ ಹೇಳದೇ ಊರು ಬಿಟ್ಟಿದೆ ಮಳೆಹುಡುಕಿ ಕಂಗೆಟ್ಟ ಆಷಾಢ ಭುಸುಗುಡುತಿದೆಗಾಳಿಯ ಗಂಟಲಲಿ ವಿರಹದ ಶಹನಾಯಿಹಲಿವುಳಿದ ಮೋಡಕ್ಕೆ ಬಿಕ್ಕಲಾರದ ಬಾಯಿ ಎಲ್ಲಿ ಅಡಗಿದೆಯೊ ಮಳೆರಾಯಾಮುಖಗವಸಿನ ಜಗಕೆ ಹೆದರಿದೆಯಾಕಾಡು-ಕಣಿವೆ ಹೊಲ-ತೋಟಕ್ಕೆಹಸಿರುಗವಸು ತೊಡಿಸಲಾರೆಯಾಮುಟ್ಟುವುದನ್ನೇ ಬಿಟ್ಟು ಒಳಗೋಡಿಮುಚ್ಚಿದ ಕದದ ಹಿಂದೆ ಗುಟ್ಟಾಗಿದ್ದೇವೆ ಬಾಲ್ಯದಂಗಳದ ಸಿಹಿ ಒಗರಿನ ಗೇರು ಬೇಣಗೆಲ್ಲು ಗೆಲ್ಲಿಗೂ ತೂಗುವ ಹಣ್ಣು ಹಳದಿ ಕೆಂಪುಹೋದಷ್ಟೂ ಮುಗಿಯದ ತಂಪು ಕಾಲ್ದಾರಿಮುಗಿದದ್ದು ತಿಳಿವ ಮೊದಲೇ ಕವಲೊಡೆದ ಉರಿ ಶಂಕೆಯ ರಾವಣ ಕಾವಲಿದ್ದಾನೆಅಳುವೇ ನಿಲ್ಲುವುದಿಲ್ಲ ಸೀತೆಗೆ ಕದವಿಕ್ಕಿದ ರಾಮನರಮನೆಗೆ ವೈರಾಣು ಭೀತಿಮನದ ಗೆಲ್ಲು […]

ಪ್ರೇಮವೇ ಒಂದು ಧರ್ಮ.

ಪ್ರೇಮ ಅನ್ನುವುದು ಧರ್ಮವನ್ನು ನೋಡಿ ಹುಟ್ಟುವುದಿಲ್ಲ, ಹಾಗೆಯೇ ಪ್ರೇಮ ಸ್ಬತ: ಒಂದು ಧರ್ಮವಾಗಿದೆ. ಜನ ಇದನ್ನು ಅರ್ಥಮಾಡಿಕೊಳ್ಳಬೇಕು–

ಮರಳಿಗೂಡಿಗೆ

ಲಹರಿ ಅನುಪಮಾ ರಾಘವೇಂದ್ರ                              “ಎಲ್ಲಿ ಹೋದರೂ ಹಿಂತಿರುಗಿ ಮನೆಗೆ ತಲುಪುವವರೆಗೆ ಮನಸ್ಸಿಗೆ ಸಮಾಧಾನವೇ ಇಲ್ಲ”  ಎಂಬ  ಭಾವ ಮೂಡಿದಾಗಲೇ  ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಎಷ್ಟು ಅರ್ಥಪೂರ್ಣ ಅನಿಸಿದ್ದು.       ತಿಂಗಳ ಹಿಂದೆ ಹಕ್ಕಿಯೊಂದು ನಮ್ಮ aಮೊಟ್ಟೆಗಳನ್ನಿಟ್ಟು,ಕಾವು ನೀಡಿ , ಮರಿ ಮಾಡಿತ್ತು. ಅಷ್ಟು ದಿನಗಳಲ್ಲಿಯೇ ಆ ಹಕ್ಕಿ ಸಂಸಾರ ಹಾಗೂ ನನ್ನ ಮಧ್ಯೆ ಅನಿರ್ವಚನೀಯ ಬಂಧವೊಂದು ಬೆಳೆದುಬಿಟ್ಟಿತ್ತು. ಆ ಮರಿಗಳ ರೆಕ್ಕೆ ಬಲಿಯುವವರೆಗೂ ತಾಯಿ ತಂದೆ ತಾವೇ ಆಹಾರ ತಂದು […]

ಎದುರೇ ಪ್ರೀತಿ ಇರುವಾಗ

ನಾಗರಾಜ್ ಹರಪನಹಳ್ಳಿ -೧-ಎದುರೆ ಪ್ರೀತಿ ಇರುವಾಗಎಲ್ಲಿ ಹೊರಡಲಿಅಲೆಯಲು -೨-ಇಳೆಗೆ ಮಳೆಯ ಧ್ಯಾನನನಗೆ ಅವಳ ಹೆರಳಪರಿಮಳದ ಧ್ಯಾನ. -೩-ಅವಳ ತುಟಿಗಳು ಮಾತಾಡಿದವುಕವಿತೆ ಹುಟ್ಟಿತು -೪- ತುಟಿಗೆ ತುಟಿ ಇಟ್ಟೆಜನ್ಮ ಜನ್ಮದಬಂಧನ ನೆನಪಾಯಿತು -೫-ಅವಳು ಅಂಗೈಗೆಮುತ್ತಿಟ್ಟಳುಪ್ರೇಮದ ಉದಯವಾಯಿತು -೬-ಅವಳ ಅಂಗೈಗೆಅದ್ಭುತ ಶಕ್ತಿಅದಕೆಬೆಸುಗೆಗೆ ಬಿಸಿ -೭-ನನ್ನ ಬಲ ಅಂಗೈ ನೋಡಿಕೊಂಡಾಗಲೆಲ್ಲಾಅವಳ ಮುಖದ್ದೇ ನೆನಪುಕಾರಣಮೊದಲು‌ ಅವಳ ತುಟಿ ತಾಗಿದ್ದುಅಂಗೈಗೆ* -೮-ಆಕೆ‌ ಹೇಳುವುದುಒಂದೇಉಸಿರಾಟದ ಏರಿಳಿತಎದೆ‌ ಬಡಿತ ನೀನು‌ -೯-ಎದೆಯ ಮೇಲೆ‌ ಕೈಯಿಟ್ಟರೆಅವಳ ಹೆಸರುಕಿವಿಗೆ ಅಪ್ಪಳಿಸಿತ -೧೦-ಕುಡಿಯುತ್ತಿದ್ದೆ ಅಲೆಯುತ್ತಿದ್ದೆಅವಳ ದರ್ಶನವಾಯಿತುಎದೆಗೆ ಪ್ರೀತಿಯ ಬೀಜಹಾಕಿದಳುಅದೀಗ ಹೆಮ್ಮರವಾಗಿದೆ**********

ಸಂಮಿಶ್ರಣ

ಡಾ.ಪ್ರತಿಭಾ ಅಬ್ಬರಿಸುವ ಕಡಲಿಗೆಯಾವತ್ತೂ ಶಾಂತವಾಗಿಹರಿಯುವ ನದಿಗಳು ಸಾಕ್ಷಿ ಖಾಲಿಯಾಯಿತೆ ಸಿಹಿನೀರಿನ ಒರತೆಹಾಕಿಕೊಂಡು ತನಗೆತಾನೇ ಪ್ರಶ್ನೆಗಳ ಸ್ವಂತಿಕೆಯ ಕಳೆದುಕೊಳ್ಳುವಅಪಾಯ ಇದ್ದರೂಒಂದು ನೆಮ್ಮದಿ ಯ ಭಾವ. ಅಬ್ಬರದ ಅಲೆಗಳುಸದ್ದು ಮಾಡಿ ಸುಮ್ಮನಾಗಲುಮೂಡಿತು ನೆಮ್ಮದಿಯಭಾವ ಶಾಶ್ವತವೇನಲ್ಕ ಈ ಬದುಕುನೋವು, ನಲಿವುಸುಖ,ದುಃಖಗಳ ಸಂಮ್ಮಿಶ್ರಣ ********

ಕಡಲಲೆಗಳ ಲೆಕ್ಕ

ಕಥೆ ಸುಧಾ ಹೆಚ್.ಎನ್ ರುಕ್ಮಿಣಮ್ಮ  ಕಡಲಿನ ಮಗಳು.  ಹುಟ್ಟಿದ್ದು, ಬೆಳೆದದ್ದು, ಪ್ರತಿ ಬೆಳಗು, ಪ್ರತಿರಾತ್ರಿ  ಕಳೆದದ್ದು  ಸಮುದ್ರದ ಜೊತೆಗೇ. ಮೀನುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ, ಜೀವನದ ಜೊತೆಗಾರನಾದ  ಪಾಂಡುರಂಗನ ಮನೆಯಿದ್ದದ್ದು ಕಡಲತೀರದಲ್ಲೇ.  ತಮ್ಮ ಸುಮಾರು ಎಂಬತ್ತು ವರ್ಷದ ಜೀವಮಾನವನ್ನು     ಕಣ್ಣಳತೆಯಲ್ಲಿದ್ದ  ಅಗಾಧ ಸಮುದ್ರ,  ಅವಿರತವಾಗಿ  ಕೇಳಿಬರುತ್ತಿದ್ದ ಅಲೆಗಳ ಮೊರೆತ,  ಮೀನು….ಇತರೆ    ವಾಸನೆಯ ಜೊತೆಗೆ ಜೀವನ  ಸವೆಸಿದ್ದರು  ರುಕ್ಮಿಣಮ್ಮ.   ರುಕ್ಮಿಣಮ್ಮ ಮತ್ತು ಪಾಂಡುರಂಗಪ್ಪ   ಐವರು ಮಕ್ಕಳಿಗೆ ತಮ್ಮ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿದ್ದರು. ಎಲ್ಲಾ […]

ಗಝಲ್

ಎ ಎಸ್. ಮಕಾನದಾರ ನೀನು ಹೋದ ಅರೆಗಳಿಗೆಗೆ ಬಾಗಿಲ ಕಿಟಕಿಗಳು ಬೋರಾಡಿ ಅಳುತಿವೆಇಂದಲ್ಲ ನಾಳೆ ಬರುತ್ತೀಯೆಂದು ಹೊಸ್ತಿಲ ಭರವಸೆಯಿಂದ ಕಾಯುತಿವೆ ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಮ್ಮೇಳಹಾಕಿವೆ ಸಾಕಿದಣಿದ ದೇಹಕೆ ಖಬರಸ್ತಾನಿನ ಹೂಗಳು ಸದಾ ಸಾಂತ್ವನ ಹೇಳುತಿವೆ ಬೀದಿ ದೀಪಗಳು ಕಣ್ಣುಗಳನ್ನು ಪಿಳುಕಿಸಿ ಮಿಂಚುಹುಳು ವಾಗಿಸುತ್ತಿವೆನೆನಪುಗಳು ಮಗ್ಗುಲು ಬದಲಿಸಿ ನೇಸರನಿಗೆ ಕರೆದು ಸಾವು ತರಿಸುತಿವೆ ಹರಿದ ಅಂಗಿಗೆ ಬೆವರ ಉಣಿಸಿ ಬೆಂದ ಹಾಲಿಗೆ ನೆಮ್ಮದಿ ಬೇಡುತ್ತಿವೆತುಕ್ಕು ಹಿಡಿದ ತೊಟ್ಟಿಲಲಿ ಜೋಗುಳ ತೂಗಿ ಹರತಾಳವನು ಹೂಡುತಿವೆ ಸಾಹೇಬನ ಹಸಿವು […]

ಪುಸ್ತಕ ಸಂಗಾತಿ

ಆಲದ ನೆರಳು ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಕತೆಗೆ ಬೇಕಾದ ವಸ್ತು, ಅದರಲ್ಲಿ ತುಂಬಿಕೊಳ್ಳುವ ಪಾತ್ರಗಳು, ಪ್ರಾದೇಶಿಕ ಭಾಷೆಯ ಸೊಗಡು,ಅದರ ನಿರ್ವಹಣೆ, ಅನಿರೀಕ್ಷಿತ ತಿರುವುಗಳು, ಕಾಡುವ ಪಾತ್ರಗಳ ಹೆಣಿಗೆ, ಕೃತಕತೆಯಲ್ಲೂ ಮೈಮರೆಯದ ವಾಸ್ತವೀಕತೆ… ಇವುಗಳಿಂದ ಮಧುರಾ ಅವರು ಕತೆಗಳ ಮೂಲಕ ನಮ್ಮನ್ನು ಬಂಧಿಸಿಡುವಲ್ಲಿ ಯಶಸ್ವಿ ಆಗಿದ್ದಾರೆ. ಆಲದ ನೆರಳು – ಪುರುಷ ಪ್ರಧಾನ ಸಮಾಜದಲ್ಲಿ ಎರಡು ಹೆಣ್ಣು ಜೀವಗಳು ಸಾಂಸ್ಕೃತಿಕವಾಗಿ ನಲುಗಿ,ಕೊರಗಿ ಹೋಗುವ ಕಥಾ ಹಂದರ ಹೊಂದಿದೆ. ‘ ಬರೀ ನೆರಳಿದ್ರೆ ಉಳಕಿ ಗಿಡಗೋಳು […]

Back To Top