ಅಲೀಕತ್ತು

ಅಲೀಕತ್ತು

ಅಲೀಕತ್ತು ಕಥೆ ಕೆ. ಎ. ಎಂ. ಅನ್ಸಾರಿ “ನಮ್ಮ ಮಗಳು ಆಮಿನಾ ಳಿಗೆ ವಯಸ್ಸು ಹನ್ನೆರಡು ಆಯಿತಲ್ಲವೇ…? ಇನ್ನು ಒಂದೆರಡು ವರ್ಷ ಆದ್ರೆ ಮದುವೆ ಗಂಡು ಹುಡುಕಬೇಕು… ಅದಕ್ಕಿಂತ ಮೊದಲು ಅವಳಿಗೆ ಅಲೀಕತ್ತು ತೊಡಿಸಬೇಕಲ್ಲಾ…” ಪೋಕರ್ ಹಾಜಿ ಮಡದಿ ಪಾತುವಿನಲ್ಲಿ ಹೇಳುವುದು  ಆಮಿನಾಳಿಗೆ ಕೇಳಿಸುತ್ತಿತ್ತು ಅಲೀಕತ್ತು ಎಂಬ ಪದ ಕೇಳುತ್ತಿದ್ದಂತೆಯೇ ಅಪ್ಪನ ಮಂಚದ ಕೆಳಗೆ ಮಲಗಿದ್ದ ಅಮಿನಾ ನಾಚಿ ನೀರಾದಳು… ಅವಳಿಗೆ ಬಂಗಾರವೆಂದರೆ ಪ್ರಾಣ. ಆಮಿನಾ ಕೇಳಿಸಿಕೊಂಡವಳಂತೆ ನಟಿಸಲಿಲ್ಲ.. ಅವಳಷ್ಟಕ್ಕೆ ಚಾಪೆಯಲ್ಲಿ ಹೊರಳಾಡುತ್ತಿದ್ದಳು… … ರಾತ್ರಿ ಸುಮಾರು […]

ನಾಯಿ ಮತ್ತು ಬಿಸ್ಕತ್ತು

ಕಿರು ಕಥೆ ನಾಗರಾಜ ಹರಪನಹಳ್ಳಿ ಆತ ದಂಡೆಗೆ ಬಂದು ಕುಳಿತ. ಎಲ್ಲಾ ಕಡೆ ಬಂಧನಗಳಿಂದ ಬಿಗಿದ‌ ಜಗತ್ತು ಸಾಕೆನಿಸಿತ್ತು.‌ ರಸ್ತೆಗಳೆಲ್ಲೆ ಮಕಾಡೆ ಮಲಗಿದ್ದವು. ಜನರ ಸುಳಿವಿಲ್ಲ.‌ಮುಚ್ಚಿದ  ಹೋಟೆಲ್ಲು, ಲಾಡ್ಜು, ಅಂಗಡಿ ಬಾಗಿಲು. ಗೂಡಂಗಡಿಗಳು ಬಲವಾದ ಹಗ್ಗಗಳಿಂದ ಬಂಧಿಸಲ್ಪಟ್ಟಿದ್ದವು.‌‌ ಇಡೀ ನಗರ ಸತ್ತು ಹೋಗಿತ್ತು. ಬಿಕೊ ಅನ್ನುತ್ತಿದ್ದ ಬಸ್ ಸ್ಟ್ಯಾಂಡ್. ‌ಬಿಕ್ಷುಕುರ ಸುಳಿವು ಸಹ ಇಲ್ಲ.ಮನುಷ್ಯರ ಸುಳಿವಿಲ್ಲ. ಪ್ರತಿ ಸರ್ಕಲ್ ‌ನಲ್ಲಿ ಸುರಿವ ಉರಿ ಬಿಸಿಲಲ್ಲಿ ಖಾಲಿ ರಸ್ತೆಗಳನ್ನು ಪೊಲೀಸರು ಕಾಯುತ್ತಿದ್ದರು. ಭೀತಿ ಮತ್ತು ಭಯ ಸ್ಪರ್ಧೆಗೆ ಬಿದ್ದಂತೆ […]

ಕಾಫೀನೊ -ಚಹಾನೊ

ಚರ್ಚೆ ರಾಮಸ್ವಾಮಿ ಡಿ.ಎಸ್. ಕಾಫಿ ಮೇಲೋ ಚಹಾ ಮೇಲೋ ಎಂದು ಕುಸ್ತಿ ಆಡುತ್ತಿರುವವರ ಫೇಸ್ಬುಕ್ ಪೇಜುಗಳನ್ನು ಬ್ರೌಸ್ ಮಾಡುತ್ತ ಇರುವಾಗ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂಬ ಹೈಸ್ಕೂಲ್ ದಿನಗಳ ಡಿಬೆಟ್ ವಿಷಯಗಳೇ ನೆನಪಾದುವು. ಕಾಫಿ, ಚಹಾ, ಹೆಣ್ಣು, ಗಂಡು, ಸಾಹುಕಾರಿಕೆ, ಬಡತನ, ಜಾತಿ, ಧರ್ಮ ಅಂತೆಲ್ಲ ನಾವು ಗುದ್ದಾಟ ಮಾಡಿದರೂ ಯಾರಿಗೆ ಯಾವುದು ಮುಖ್ಯ ಅನ್ನಿಸುತ್ತದೋ ಅದನ್ನು ಅವರವರು ಅನುಸರಿಸುತ್ತಾರೆ. ಯಾರೋ ಹೇಳಿದರೆಂದು ಕಾಫಿ ಟೀ ಬಿಟ್ಟು ಈಗ ಎಲ್ಲರ ಮನೆಯಲ್ಲೂ ಅಮೃತ ಬಳ್ಳಿ ಕಷಾಯ […]

ಪೇಟಿಮಾಂತ್ರಿಕ ಬೆಳಗಾವಿಯಲ್ಲಿರುವ ಪಂಡಿತ್ ರಾಮಭಾವು ಬಿಜಾಪುರೆ ಅವರನ್ನು ಕಾಣಬೇಕೆಂದು ನನಗೆ ಅನಿಸಿತು. ಮಿತ್ರರಾದ ಕುಸಗಲ್ಲರಿಗೆ ವಿಷಯ ತಿಳಿಸಲು `ನಾವು ಇದೇ ಊರಾಗಿದ್ರೂ ಅವರ ಮನೀಗ್ ಹೋಗಿಲ್ಲ, ಬರ್ರಿ ಸರ’ ಎಂದು ಕರೆದೊಯ್ಯಲು ಒಪ್ಪಿದರು. ಮುಸ್ಸಂಜೆ ಹೊತ್ತಿಗೆ ಶ್ರೀ ಕುಸುಗಲ್ಲ, ಅವರ ಮಗಳು ಕವಿತಾ, ಸ್ನೇಹಿತ ಡಾ. ಕೋಲ್ಕಾರ ಅವರೊಡನೆ ಬಿಜಾಪುರೆ ಅವರಲ್ಲಿಗೆ ಹೊರಟೆ. ಹಳೇ ಬೆಳಗಾವಿಯ ಬೀದಿಗಳು. ಪಶ್ಚಿಮಘಟ್ಟದ ಜಿರ್ರೋ ಮಳೆಧಾರೆ. ಕಚಿಪಿಚಿ ಕೆಸರು. ಹಸುರು ಕಕ್ಕುವ ಗಿಡಮರಪೊದೆ. ಮನೆಯ ಛಾವಣಿ ಕಾಂಪೌಂಡು ಗೋಡೆಗಳು ಹಸಿರು ಸ್ವೆಟರುಟ್ಟಂತೆ […]

ಕೂರಿಗಿ ತಾಳು

ಪುಸ್ತಕ ಪರಿಚಯ ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು.ಕಾವ್ಯವೆನ್ನುವುದು ಹುಡುಕಾಟವಲ್ಲ, ಅದೊಂದು ಮಿಡುಕಾಟ. ಕಾವ್ಯದಲ್ಲಿ ಮನರಂಜನೆ, ಶ್ರೀಮಂತಿಕೆ ಮತ್ತು ಉದಾತ್ತತೆ ಇರಬೇಕು. ಅದನ್ನು ಓದಿದವರು ಮೊದಲಿಗಿಂತ ಬೇರೆಯದ್ದೇ ವ್ಯಕ್ತಿತ್ವ ಹೊಂದಿದವರಾಗಿರಬೇಕು. ಅಂತಹ   ಕಾವ್ಯ ಶ್ರೇಷ್ಠ ಕಾವ್ಯ ಎನಿಸಿಕೊಳ್ಳುತ್ತದೆ .  ಕಾವ್ಯದಲ್ಲಿ ಭಾವದ ಅತೀ ಸಾಮಾನ್ಯತೆ ಇದ್ದರೆ ಅದು ಕಾವ್ಯದ ದೋಷ. ಇದರ ಸೀಮೋಲ್ಲಂಘನ ಮಾಡಬೇಕು. ಅಂತೆಯೇ ಕಾವ್ಯದಲ್ಲಿ ಅಲಂಕಾರ […]

ಅಪ್ಪನ ಆತ್ಮ

ಕವಿತೆ ಫಾಲ್ಗುಣ ಗೌಡ ಅಚವೆ. ಇಲ್ಲೇ ಎಲ್ಲೋಸುಳಿದಾಡಿದಂತೆ ಭಾಸವಾಗುವಅಪ್ಪನ ಅತ್ಮನನ್ನ ತೇವಗೊಂಡ ಕಣ್ಣುಗಳನ್ನುನೇವರಿಸುತ್ತದೆ. ಅಪ್ಪನ ಹೆಜ್ಜೆ ಗುರುತುಗಳಿರುವಗದ್ದೆ ಹಾಳಿಯ ಮೇಲೆನಡೆದಾಡಿದರೆಇನ್ನೂ ಆಪ್ತವಾಗಿಸುಪ್ತ ಭಾವನೆಗಳನ್ನುಆಹ್ಲಾದಕರಗೊಳಿಸುತ್ತದೆ. ನಾನು ನಡೆದಲ್ಲೆಲ್ಲನೆರಳಿನಂತೆ ಬರುವ ಅದುನನಗೆ ಸದಾ ಗೋಚರಿದಂತೆ ಭಾಸ! ನನ್ನನ್ನೇ ಕುರಿತು ನೇರಬೊಟ್ಟು ಮಾಡಿ ತೋರಿಸಿದಂತೆಏನನ್ನೋ ಹೇಳುತ್ತದೆ!ದ್ವೇಷದ ಬೆಂಕಿಯಲ್ಲಿಮಗನ ಮುಖವ್ಯಗ್ರವಾಗಿರುವುದ ಕಂಡುಬೇಸರಿಸಿಕೊಂಡಿದೆಆತ್ಮದ ಮ್ಲಾನ ವದನ!! ಅನ್ಯರಿಗೆ ಅಗೋಚರವೆನಿಪಅಪ್ಪನ ಅತ್ಮಕ್ಕೂ ನನಗೂಅದೆಂಥದೋಅಲೌಕಿಕ ನಂಟು! ಅವನ ನೆನಪಿನೊಂದಿಗಿನಮುಕ್ತ ತಾದಾತ್ಮ್ಯವೇನನ್ನ ಅದ್ಯಾತ್ಮ!!! ********

ನನ್ನಜ್ಜ

ಕವಿತೆ ಚೈತ್ರಾ ಶಿವಯೋಗಿಮಠ ಬಸ್ಟ್ಯಾಂಡ್ ನ್ಯಾಗ ನಿಂತುಬಾರಕೋಲು ಬೇಕಾ ಅಂದಾಗಮಂದಿ ಬೇಡಿ ಕೊಡಿಸ್ದಾವ ನನ್ನಜ್ಜಇದ ಕಥಿ ನೂರ ಸರತಿ ಹೇಳಿ“ಹಠಮಾರಿ ಚೈತ್ರಾ” ಅಂದಾವ ನನ್ನಜ್ಜ ಹೆಗಲ ಮ್ಯಾಲೆ ಹೊತ್ತು ಓಣಿತುಂಬಾ ತಿರಗ್ಯಾಡಿದಾವ ನನ್ನಜ್ಜಬಾಯಿ ಒಡದರ, ತುಂಬಾ ಬಿಳಿ ಬೀಜಕೆಂಪಗ ಕಾಣೂ ಪ್ಯಾರಲ ಹಣ್ಣ ತರಾವ ನನ್ನಜ್ಜನಿಂಬುಹುಳಿ, ಪೇಪರಮಟ್ಟಿ, ಚಾಕಲೇಟ್ಗಾಂಧಿ ಮುತ್ಯಾನ ಫೋಟೋ ಮುಂದ ನಿಂದರೀಸಿಕಣ್ಮುಚ್ಚಿಸಿ, ಮುತ್ಯಾ ಕೊಟ್ಟ ನೋಡನ್ನವ ನನ್ನಜ್ಜ ಮುದುಕಿ, ನರಿ-ಒಂಟಿ ಅಂತ ನೂರ ಕಥಿಅವನ ಅಂಗಿ ಕಿಶೆದಾಗ. ಸ್ವತಂತ್ರ ಸಿಕ್ಕಾಗನಡುರಾತ್ರಿ ಮಾಸ್ತಾರ ಎಬ್ಬಿಸಿದ್ದನ್ನ ಕಥಿಮಾಡಿ […]

ದೇವನೂರು ಮಹಾದೇವ

ದೇವನೂರ ಮಹಾದೇವ ಸಂದರ್ಶನ ರಹಮತ್ ತರಿಕೆರೆ ಅವರಿಂದ (1999 ರಲ್ಲಿನಡೆದ ಸಂದರ್ಶನವನ್ನುಸಂಗಾತಿಯ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.) (ಕನ್ನಡದ ದೊಡ್ಡ ಲೇಖಕರ ವಿಶಿಷ್ಟತೆ ಎಂದರೆ, ಅವರು ಎಷ್ಟು ದೊಡ್ಡ ಕಲಾವಿದರೋ ಅಷ್ಟೇ ದೊಡ್ಡ ರಾಜಕೀಯ ಸಾಮಾಜಿಕ ಚಿಂತಕರು ಕೂಡ. ಇದಕ್ಕೆ ಕಾರಣ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳೂ ಬಸವಣ್ಣ ಕುವೆಂಪು ಕಾರಂತ ಮುಂತಾದ ಚಿಂತಕ ಲೇಖಕರ ಪರಂಪರೆಯೋ ನಮ್ಮ ಲೇಖಕರ ಸಾಮಾಜಿಕ ಹಿನ್ನೆಲೆಯೊ ಗೊತ್ತಿಲ್ಲ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಚಿಂತಕರು’ ಎಂದು […]

ಶರಣಾಗಿ ಬಿಡಲೆ

ಅನುವಾದಿತ ಕವಿತೆ ಮೂಲ ಕನ್ನಡ: ವಸುಂಧರಾ ಕದಲೂರು ಇಂಗ್ಲೀಷಿಗೆ: ಸಮತಾ ಆರ್. ಶರಣಾಗಿ ಬಿಡಲೆ ನಿನ್ನ ಕಂಗಳ ಪ್ರಾಮಾಣಿಕತೆ  ನನ್ನನು ಹಿಂಬಾಲಿಸುತ್ತಿದೆ. ಭದ್ರ ಕೋಟೆ ಗಟ್ಟಿ ಬೇಲಿ ಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡು ನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆ ಇನ್ನೆಷ್ಟು ಕಾಲ ಕಿವುಡಾಗಿರಲಿ ಹಾದಿ ಮರೆವ ಮುನ್ನ ನಾಕು ಹೆಜ್ಜೆ ನಡೆದು ಬರಲೆ ಹನಿ ಮುತ್ತು ಜಲಗರ್ಭದ ಚಿಪ್ಪೊಳಗೆ ಕಾಣೆಯಾಗಲು ಬಿಡಬೇಡ ಮುಳುಗಿ ತೆಗೆ ಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿ ಹೃದಯದಲಿ ನಯವಾಗಿ […]

ಮೌನಯುದ್ಧ

ಪುಸ್ತಕ ಪರಿಚಯ ಮೌನ ಯುದ್ದ(ಕವನಸಂಕಲನ) ಕವಿ: ಸುರೇಶ್ ಎಲ್. ರಾಜಮಾನೆ ಪ್ರಕಾಶನ: ವಿಶ್ವ ಖುಷಿ ಪ್ರಕಾಶನ, ನವನಗರ ಬಾಗಲಕೋಟ. ಪುಟಗಳು: 92  ಬೆಲೆ: 120/- ಪ್ರಕಟಿತ ವರ್ಷ: 2018 ಕವಿಯ ಸಂಪರ್ಕ ಸಂಖ್ಯೆ: 8105631055          ಗಂಭೀರ ಕಾವ್ಯಾಧ್ಯಯನ ಮೂಲಕ ನಿರಂತರ ಅನುಸಂಧಾನದಲ್ಲಿ ತೊಡಗಿ ಕಾವ್ಯ ರಚನೆ ಕೃಷಿಗೆ ಮುಂದಾಗಿರುವ ರನ್ನಬೆಳಗಲಿಯ ಯುವಕವಿ ಸುರೇಶ್ ರಾಜಮಾನೆಯವರು “ಸುಡುವ ಬೆಂಕಿಯ ನಗು” ಎನ್ನುವ ಕೃತಿಯನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಈಗ “ಮೌನಯುದ್ಧ”ದ ಮೂಲಕ ನಮ್ಮೊಂದಿಗೆ ಮಾತಿಗಿಳಿದಿದ್ದಾರೆ. […]

Back To Top