ಶಿಕ್ಷಣ

ಶಿಕ್ಷಣ

ಮೌಲ್ಯಯುತ ಜೀವನಕ್ಕೆ ಶಿಸ್ತು ರಮೇಶ ಇಟಗೋಣಿ ಮೌಲ್ಯಯುತ ಜೀವನಕ್ಕೆ ಶಿಸ್ತು : ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ವಿದ್ಯೆಯನ್ನು ಅರ್ಥೈಸಿಕೊಂಡು ಕಲಿಯುವ, ಗ್ರಹಿಸುವ ಸಾಮರ್ಥ್ಯ ಸಂಪಾದಿಸುವವನೇ ವಿದ್ಯಾರ್ಥಿ. ಕಲಿಕಾರ್ಥಿಗೆ ಏಕಲವ್ಯನಂತಹ ಉತ್ಕಟವಾದ ಕಲಿಕೆಯ ಹಸಿವು ಇದ್ದಲ್ಲಿ ವಿದ್ಯೆಯನ್ನು ಒಲಿಸಿಕೊಳ್ಳುವುದು ಕಷ್ಟ ಆಗಲಾರದು. ಮಕ್ಕಳಾಗಿ ಕಲಿಯುವುದು ಎಷ್ಟು ಚಂದವೋ ಅಷ್ಟೇ ಗುರುವಾಗಿ ಕಲಿಸೋದು ಅಷ್ಟೇ ಅಂದವಾಗಿದೆ. ಸಾವಿರಾರೂ ಕಲ್ಲುಗಳನ್ನು ಸುಂದರವಾದ ಮೂರ್ತಿ ಮಾಡುವ ಬ್ರಹ್ಮ ಶಿಕ್ಷಕ. ಸ್ಟುಡೆಂಟ್ ಲೈಫ್ ಇಸ್ […]

ಅವ್ಯಕ್ತಳ ಅಂಗಳದಿಂದ

ದೌರ್ಬಲ್ಯ-ಸಾಮರ್ಥ್ಯ -2 ಅವ್ಯಕ್ತ ನನ್ನ ಹಿಂದಿನ ಕಥೆಯಲ್ಲಿ ಹೇಳಿದ ರೀತಿ ನಮ್ಮ ದೃಷ್ಟಿಕೋನ ದಲ್ಲಿ ಬದಲಾವಣೆಯಾದಂತೆ ನಮ್ಮ ದೌರ್ಬಲ್ಯಗಳು ನಮ್ಮ ಸಾಮರ್ಥ್ಯಗಳಾಗಿ ಬದಲಾಗುತ್ತವೆ….. ಇದಕ್ಕೆ ಅಂಟಿಕೊಂಡಂತೆ ಇನ್ನೊಂದು ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನಿಸೋಣ… ಸಾಮಾನ್ಯವಾಗಿ ಮಕ್ಕಳು ಅಥವಾ ಕೆಲವು ದೊಡ್ಡವರು ತಮಗೆಲ್ಲ ತಿಳಿದಿದೆ ಎಂದು ಪ್ರತಿಯೊಂದು ಘಟನೆಯನ್ನು ಪ್ರತಿಯೊಬ್ಬರನ್ನು ಸರಿ-ತಪ್ಪುಗಳಲ್ಲಿ, ಒಳ್ಳೆಯದು-ಕೆಟ್ಟದ್ದು ಗಳಲ್ಲಿ ತೂಗಿ ತಮ್ಮ ಹಳೆಯ ಅನುಭವಗಳ ಮೇರೆಗೆ ಅವರದೇ ಆದ ಒಂದು ದೃಷ್ಟಿಕೋನವನ್ನು ಮಾಡಿಕೊಂಡು ಬಿಡುತ್ತಾರೆ.. ಅವರಿಗೆ ಅದೇ ಸರಿ…ಈ ನಿಟ್ಟಿನಲ್ಲಿ […]

ಕಾವ್ಯಯಾನ

ಅದಿಂಬಾದೊಳು ರೇಖಾ ವಿ.ಕಂಪ್ಲಿ ಅಪಸ್ವರವು ಹಾಡುತಿದೆ ಧ್ವನಿಯ ಗೂಡಿನೊಳು ಇಂದುಮಂಡಲದಿಂ ಬೆಳಕಿಲ್ಲದ ಅಂಗಳದೊಳು ಉಪರೋಚಿತ ಮನದಿಂ ಉಪಾದಿ ಕನಸೊಳು ಋತುಮಾನದ ತಾಡನವಿಲ್ಲ ಕಾಲಮಾನದೊಳು ಎಕ್ಕತಾಳಿ ಎಡಬಿಡಂಗಿ ಕೊಡಂಗಿ ಎಡೆಸೆಳೆಯೊಳು ಒಡಕಲು ಗೆಳೆತನದ ಹಸಿಮುಸಿ ಬಂಧದೊಳು ಕಗ್ಗಾಡಿನಲಿ ಹೆದ್ದಾರಿಯ ಬಯಸುತ ಮಬ್ಬಿನೊಳು ಗವಯ ಯಾನ ಯಾವುದೆಂದು ಅರಿಯಲ್ಕೆಯೊಳು ಚಕ್ರಬಂಧದಲಿ ಅಕ್ಷರಗಳ ಸುಳಿ ಕಾಣಿಸದೊಳು ಜಡಮತಿಯು ಕವಿದ ಜಗದ ನಿಯಮದೊಳು ಟಂಕಾರವಿಹುದೆ ಬಿಲ್ಲು ಬಾಣಗಳಿಲ್ಲದೊಳು ಡಂಬಕ ದೇಹ ಅಲಂಕಾರ ಬಿನ್ನಾ ವೈಯಾರದೊಳು ತಡಕಾಡಿಹೆ ಎಲ್ಲಾ ನಶಿಸಿದ ಬಳಿಕವೂ ಅದರೊಳು ದಂಡನೀತಿ […]

ಕಾವ್ಯಯಾನ

ಮತ್ತೆ ನೀನು ಔಷಧಿಯಾಗು ಮೂಗಪ್ಪ ಗಾಳೇರ ಮತ್ತೆ ನೀನು ಔಷಧಿಯಾಗು ನನ್ನ ಬಿಟ್ಟು ಹೋದ ಮೇಲೆ ಒಳ್ಳೆಯ ದಿನಗಳು ಬರಬಹುದೆಂದಿನಿಸಿರಬಹುದು ನಿನಗೆ ಸತ್ಯಶೋಧನೆಯ ಹಾದಿಯಲ್ಲಿ ಪ್ರೀತಿಯ ಅದೆಷ್ಟೋ ಕನಸುಗಳು ಸತ್ತು ಸ್ವರ್ಗಕ್ಕೂ ಸೇರದೆ ನರಕಕ್ಕೂ ನಿಲುಕದೆ ಬೇತಾಳ ಗಳಂತೆ ನಿನ್ನ ನೆನಪಿನ ಹಿಂದೆ ಸುತ್ತ ಬಹುದೆಂಬ ಒಂದಿಷ್ಟು ಅರಿವಿರಬಾರದೆ……. ಪ್ರೀತಿಯನ್ನು ಹುಡುಕುತ್ತಾ ಹೋಗುತ್ತೇನೆ ಎಂಬುವುದು ಹುಡುಗಾಟದ ವಿಚಾರವಲ್ಲ……… ಯಾಕಾದರೂ ನೀನು ನನ್ನ ಅರ್ಧ ದಾರಿಯಲ್ಲಿ ಕೈ ಬಿಟ್ಟು ಹೋದೆನೆಂದು ಮರುಗುವ ದಿನಗಳು ಬರಲು ದೂರವಿಲ್ಲ…… ಹೃದಯದ ಒಳ […]

ಕಾವ್ಯಯಾನ

ಹನಿಮೂನ್ ಗಿರೀಶ ಜಕಾಪುರೆ, ಮೈಂದರ್ಗಿ ಹನಿಮೂನ್ ಈ ಬಿಕನಾಶಿ ಚಂದ್ರನಿಗೆ ಬುದ್ಧಿಯಿಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ತುಪ್ಪ..! ಲಾಲ್‌ಬಾಗ್‌ಗೆ ಹೊರಟಿದ್ದವು  ಎರಡು ಹಕ್ಕಿಗಳು ಹನಿಮೂನ್‌ಗೆಂದು  ಸಮುದ್ರತೀರದ ಕಾಂಕ್ರೀಟ್ ಕಾಡಿನಿಂದ, ಒಂದೇಸಮನೆ ಧಾವಿಸುತ್ತಿತ್ತು ಎದೆಯಲ್ಲಿ ನಿಗಿನಿಗಿ ಕೆಂಡವಿರಿಸಿಕೊಂಡು ಉಸಿರಿನಿಂದ ಬಿಸಿಹೊಗೆ ಚಿಮ್ಮುವ ಉಗಿಬಂಡಿ.., ನಾನೋ ಅಲೆಮಾರಿ, ಹತ್ತಿದೆ ರೈಲು ಅವಳು ನನ್ನ ತೊರೆದುಹೋದ ನಿಲ್ದಾಣದಲಿ ಕಾಲಿಡಲೂ ಅವಕಾಶವಿರದಷ್ಟು ರಶ್ಶು ಆದರೂ ನನಗೆ ರೈಲಿನ ಮೇಲೆ ಏನೋ ಕ್ರಶ್ಶು ಅವರು ಇಬ್ಬರು, ಎರಡು ಬರ್ಥಗಳು ನಾನು ಎಂದಿನಂತೆಯೇ ವೇಟಿಂಗ್ ಲಿಸ್ಟು..! […]

ಕಾವ್ಯಯಾನ

ಮೌನ ಮತ್ತು ಕವಿ ಕೊಟ್ರೇಶ್ ಅರಸಿಕೆರೆ ಅದು ಹಾರಾಡುವ ರೀತಿಗೆ, ರೆಕ್ಕೆಗಳಿವೆ ಎಂಬ ಖುಷಿಗೆ , ಮನ ಸೋತಿದ್ದೆ ಆ ಚಿಟ್ಟೆಗೆ! ಇತ್ತೀಚೆಗೆ….. ಯಾಕೋ ಕಿರಿಕಿರಿ ಎನಿಸಿತು ಭಾರೀ ಶಬ್ದ ಎಂದೆನಿಸಿತು; ಮೌನ ನಾಶಮಾಡುತ್ತಿದೆ ಅನಿಸಿತು ಈಗ ಸರಿಯಾಗಿ ನೋಡಲೆತ್ನಿಸಿದೆ ಚಮಕ್ ಬೆಳಕಿಗೆ ಅದು ಆಕರ್ಷಿತ ಆಗುತ್ತಿತ್ತು! ನೋಡಿದೆ…ಪರಿಶೀಲಿಸಿದೆ…ಅಯ್ಯೋ ಅದು ಏರೋಪ್ಲೇನ್ ಚಿಟ್ಟೆ!! ಮೌನ ಅರಿಯದ ಕವಿಯೊಬ್ಬ ಕವಿಯೇ? ವರ್ತಮಾನಕ್ಕೆ ಸ್ಪಂದಿಸುವ ನೆಪ ಎಷ್ಟೆಲ್ಲಾ ಕೂಳತನ! ಹಡೆದವ್ವನ ಝಾಡಿಸಿ ಒದೆಯುವ ದುಷ್ಟತನ!! ಆಗ…. ಕವಿಯೊಬ್ಬ ಹಾಡಿದನೆಂದರೆ ದೇಶವೇ […]

ಕಾವ್ಯಯಾನ

ಹೆರಳನ್ನೊಮ್ಮೆ ಬಿಚ್ಚಿಬಿಡು ವಿಜಯಶ್ರೀ ಹಾಲಾಡಿ ಆ ಬೆಚ್ಚನೆ ರಾತ್ರಿಗಳಲ್ಲಿಈ ತಣ್ಣನೆ ಹಗಲುಗಳಲ್ಲಿನಿನ್ನ ಪಾದಕ್ಕೆ ತಲೆಯೂರಿಮಲಗಿದ ಬೆಕ್ಕನ್ನೊಮ್ಮೆನೋಡು …. ಕರುಣೆಯ ಕತ್ತಲುಹಣ್ಣುತುಂಬಿದ ಮರಹಗುರ ತುಂಬೆ ಹೂ..ಹೆರಳನ್ನೊಮ್ಮೆ ಬಿಚ್ಚಿಬಿಡು ಸುತ್ತುವ ಭೂಮಿಯನ್ನುನಿಲ್ಲಿಸು ಅಥವಾಮತ್ತಷ್ಟು ವೇಗವಾಗಿಸುತ್ತಿಸುಹೊಸ ಹೆಜ್ಜೆಕಚ್ಚಿಕೊಳ್ಳಬೇಕಿದೆ ನಿಹಾರಿಕೆ ಉಲ್ಕೆಗಳುಸಾಗರ ಸುನಾಮಿಗಳುಅಪ್ಪಳಿಸಲಿಇಲ್ಲವೇಬ್ರಹ್ಮಾಂಡದಾಚೆಕರೆದೊಯ್ಯಲಿ …. ಮಧುಶಾಲೆಗೂ ನನಗೂಸಂಬಂಧವಿಲ್ಲನೋವನ್ನೇ ಬಟ್ಟಲಿಗಿಳಿಸಿಗಟಗಟನ ಕುಡಿಯುತ್ತಿದ್ದೇನೆ ………! *******************

ನಿಮ್ಮೊಂದಿಗೆ

ಕವಿ-ಕವಿತೆ ಕುರಿತು ವಿಜಯಶ್ರೀ ಹಾಲಾಡಿ ಗೆಳೆಯರೆ, ಕವಿತೆಗಳಿಗಿದು ಕಾಲವಲ್ಲವೆಂದು ಹೇಳುತ್ತಲೇ ತಮ್ಮ ಕವಿಪಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿಗಳ ಕಾಲದಲ್ಲಿಯೂ ನಮ್ಮ ಹೊಸ ಕವಿಗಳು ಇನ್ನಿರದ ಉತ್ಸಾಹದಿಂದ ಕವಿತೆಗಳನ್ನುಬರೆಯುತ್ತಲೇ ಇದ್ದಾರೆ. ಬಹುಶ: ಮೂರು ವರ್ಷಗಳ ಹಿಂದೆ ನೆಚ್ಚಿನ ಕವಿಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಈ ಪುಟ್ಟ ಟಿಪ್ಪಣಿ ಇವತ್ತಿಗೂ ಪ್ರಸ್ತುತವಾಗಿದೆ ಹೊಸ ಕವಿಗಳು ಯಾವ ಗೊಂದಲವೂ ಇರದೆ ಬರೆಯಲು ಈ ಮಾತುಗಳು ಸ್ಪೂರ್ತಿಯಾಗಬಹುದೆಂದು ನಾನು ನಂಬಿದ್ದೇನೆ.ಅದಕ್ಕಾಗಿ ಹಾಲಾಡಿಯವರ ಈ ಬರಹ ನಿಮ್ಮ ಓದಿಗಾಗಿ. ಕು.ಸ.ಮದುಸೂದನ ಬರೆಹಗಾರರಲ್ಲಿ ೩ ವರ್ಗ. […]

ಅನುವಾದ ಸಂಗಾತಿ

“ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಮೂಲ: ಆನಾ ಎನ್ರಿಕೇಟಾ ತೇರಾನ್ (ವೆನಿಜುವೆಲಾ) ಕನ್ನಡಕ್ಕೆ: ಕಮಲಾಕರ ಕಡವೆ “ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಕವಯಿತ್ರಿ ತಾತ್ಕಾಲಿಕ ಗಿಡಮೂಲಿಕೆಗಳ ಒಟ್ಟುಮಾಡಿಕೊಳ್ಳುತ್ತಾಳೆಹಳತಾದ ಬ್ರೆಡ್ಡು, ಚೂರಿಗೆ ಸರಿಯಾದ ಬೂದಿ,ಫಲಿತಾಂಶಕ್ಕೆ ಮತ್ತು ಮೊದಲ ಆಚರಣೆಗಳಿಗೆ ಬೇಕಾದ ನಾರುಬೇರು.ಬಹುಶಃ ಅವಳಿಗೆ ಬಲಾಢ್ಯರು ತಮ್ಮದೆನುವ ಪರಂಪರೆ ಇಷ್ಟಅಧ್ಯಯನಶೀಲ ತಂಡ, ಕೈ ಖಾಲಿ, ಮುಚ್ಚಿದ ಎದೆ.ಯಾರು, ಅವನೋ, ಅವಳೋ? ಪ್ರಮಾಣಕ್ಕೆ ಬದ್ಧ, ಭವಿಷ್ಯಮುಖಿ:ಶಬ್ದಕ್ಕೆಂದು ಕಾದಿರುವ ನಾಯಿಯ ಕುಡಿ, ಸಂತನೆಡೆತಲುಪುವುದು ಹೇಗೆಂದು ಯಾಚಿಸುತ್ತ, ಅವಳ […]

ಕಾವ್ಯಯಾನ

ಕೊಂದು ಕೊಳ್ಳುವೆ ವಿಜಯಶ್ರೀ ಹಾಲಾಡಿ ಕಣ್ಣೀರು ಕೆನ್ನೆಗಿಳಿವಾಗಲೇನಗುತ್ತೇನೆ ಮಣ್ಣ ಘಮಕ್ಕೆ ಸೋತಾಗಅರಳುವುದೇ .. ಕಡಲು ಸೋಕಬೇಕೆಂದಿಲ್ಲಜೀವಕೋಶದೊಳಗಿದೆ ಅಪರಿಚಿತನೆಂದು ಬೀಗಬೇಡಮಾತು ಸುಮ್ಮನೇ ಗೋರಿ ಮೇಲೆ ಹೂ ಅರಳಿದ್ದುಲೋಕರೂಢಿ ಸಾಯುವೆನೆಂದು ಗೋಳಿಡಬೇಡಬೇಕಾದರೆ ಕೊಂದುಕೊಳ್ಳುವೆ  **************************

Back To Top