ಕಾವ್ಯಯಾನ

ಮತ್ತೆ ನೀನು ಔಷಧಿಯಾಗು

Man With Star and Circle Shadow on Face Wearing Black Crew Neck Shirt

ಮೂಗಪ್ಪ ಗಾಳೇರ

ಮತ್ತೆ ನೀನು ಔಷಧಿಯಾಗು

ನನ್ನ ಬಿಟ್ಟು ಹೋದ ಮೇಲೆ
ಒಳ್ಳೆಯ ದಿನಗಳು ಬರಬಹುದೆಂದಿನಿಸಿರಬಹುದು ನಿನಗೆ
ಸತ್ಯಶೋಧನೆಯ ಹಾದಿಯಲ್ಲಿ
ಪ್ರೀತಿಯ ಅದೆಷ್ಟೋ ಕನಸುಗಳು
ಸತ್ತು ಸ್ವರ್ಗಕ್ಕೂ ಸೇರದೆ
ನರಕಕ್ಕೂ ನಿಲುಕದೆ
ಬೇತಾಳ ಗಳಂತೆ ನಿನ್ನ ನೆನಪಿನ ಹಿಂದೆ
ಸುತ್ತ ಬಹುದೆಂಬ ಒಂದಿಷ್ಟು ಅರಿವಿರಬಾರದೆ…….

ಪ್ರೀತಿಯನ್ನು ಹುಡುಕುತ್ತಾ ಹೋಗುತ್ತೇನೆ
ಎಂಬುವುದು ಹುಡುಗಾಟದ ವಿಚಾರವಲ್ಲ………
ಯಾಕಾದರೂ ನೀನು ನನ್ನ
ಅರ್ಧ ದಾರಿಯಲ್ಲಿ ಕೈ ಬಿಟ್ಟು
ಹೋದೆನೆಂದು ಮರುಗುವ
ದಿನಗಳು ಬರಲು ದೂರವಿಲ್ಲ……
ಹೃದಯದ ಒಳ ಕೋಣೆಯಲ್ಲಿ
ಜಡಿದ ಸರಳುಗಳಿಗೆ
ಬರೀ ನಿನ್ನ ಪ್ರೀತಿಯದ್ದೆ ಚಿಂತೆ……….

ನಾನೆಂದು ತುಟಿಗಳಿಗೆ
ವಿಷ ಮೆತ್ತಿಕೊಂಡು ಮಾತನಾಡಿದವನಲ್ಲ……..
ನಿನ್ನ ಮುಡಿಗೆ
ನಕ್ಷತ್ರಗಳನ್ನು ಮುಡಿಸುವೆನೆಂದೇಳಿದ ಮೂರ್ಖನಲ್ಲ…..!
ಒಂದಂತೂ ನಿಜ
ಚಂದಿರನಿಲ್ಲದ ಅಮಾವಾಸ್ಯೆ ಕತ್ತಲಲ್ಲಿ
ನನ್ನ ಪ್ರೀತಿ ನಿನಗೆ ಹೇಳುವಾಗ
ಸೂರ್ಯ ಚಂದ್ರ ಅಷ್ಟೇ ಏಕೆ
ನಕ್ಷತ್ರಗಳು ನಾಚಿ ರಜೆ ಯಾಕೆ
ಕುಳಿತಿದ್ದ ನೆನಪುಗಳಷ್ಟೆ ನನಗೀಗಾ…….

ಮರಳಿ ಬಾ ಗೆಳತಿ
ಲೆಕ್ಕಕ್ಕೆ ಸಿಗದ ಕನಸುಗಳಿಗೆ
ಹುಚ್ಚು ಹರೆಯದ ದಿನಗಳಿಗೆ
ಮೈಚಾಚಿ ಮಲಗಿಕೊಂಡಿದ್ದ ಮೌನಕ್ಕೆ
ಮತ್ತೆ ನೀನು ಔಷಧಿಯಾಗು……..

*********

Leave a Reply

Back To Top