ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿ-ಕವಿತೆ ಕುರಿತು

ವಿಜಯಶ್ರೀ ಹಾಲಾಡಿ

ಗೆಳೆಯರೆ,

ಕವಿತೆಗಳಿಗಿದು ಕಾಲವಲ್ಲವೆಂದು ಹೇಳುತ್ತಲೇ ತಮ್ಮ ಕವಿಪಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿಗಳ ಕಾಲದಲ್ಲಿಯೂ ನಮ್ಮ ಹೊಸ ಕವಿಗಳು ಇನ್ನಿರದ ಉತ್ಸಾಹದಿಂದ ಕವಿತೆಗಳನ್ನುಬರೆಯುತ್ತಲೇ ಇದ್ದಾರೆ. ಬಹುಶ: ಮೂರು ವರ್ಷಗಳ ಹಿಂದೆ ನೆಚ್ಚಿನ ಕವಿಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಈ ಪುಟ್ಟ ಟಿಪ್ಪಣಿ ಇವತ್ತಿಗೂ ಪ್ರಸ್ತುತವಾಗಿದೆ ಹೊಸ ಕವಿಗಳು ಯಾವ ಗೊಂದಲವೂ ಇರದೆ ಬರೆಯಲು ಈ ಮಾತುಗಳು ಸ್ಪೂರ್ತಿಯಾಗಬಹುದೆಂದು ನಾನು ನಂಬಿದ್ದೇನೆ.ಅದಕ್ಕಾಗಿ ಹಾಲಾಡಿಯವರ ಈ ಬರಹ ನಿಮ್ಮ ಓದಿಗಾಗಿ.

ಕು.ಸ.ಮದುಸೂದನ

ಬರೆಹಗಾರರಲ್ಲಿ ೩ ವರ್ಗ. ೧.ಪ್ರತಿಭಾವಂತರು-ಹಲವು ವರ್ಷಗಳಿಂದ ತಪಸ್ಸಿನಂತೆ ಸಾಮಾಜಿಕ ಕಾಳಜಿಯಿಂದ ಬರೆಯುತ್ತ ತಮ್ಮದೇ ಛಾಪು ಒತ್ತಿ ಗುರುತಿಸಿಕೊಂಡವರು (ಇವರ ಕುರಿತು ಒಂದು ಸಣ್ಣ ಶಬ್ದ ಮಾತಾಡಲೂ ನಾನು ಅನರ್ಹಳು. ನಿಮಗೆ ನನ್ನ ಗೌರವ) ೨.ಪ್ರಭಾವಿಗಳು ೩.ಸಾಮಾನ್ಯರು.

ಪ್ರಭಾವಿಗಳನ್ನು ‘ಕವಿ ‘ಗಳೆಂದು ಎಲ್ಲರೂ ಕರೆಯುತ್ತಾರೆ, ಸಾಮಾನ್ಯ ರು ಪಾಪ ಏನು ಬರೆದರೂ, ಎಷ್ಟು ಬರೆದರೂ ಅಷ್ಟೇ. ಅವರ ಅಸ್ತಿತ್ವವೇ ಸಾಹಿತ್ಯಲೋಕಕ್ಕೆ ಹೊರೆ, ಇರಲಿ. ‘ಕವಿತೆ ‘ಗಳ ವಿಷಯಕ್ಕೆ ಬರುವ. “ಪದ್ಯ ಬೇಡ ಗದ್ಯ ಇದ್ರೆ ಕೊಡಿ ಚೆನ್ನಾಗಿದ್ರೆ ಪ್ರಕಟಿಸುವ “ಎಂಬ ಮಾತು ಹಲವರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಬಾಲ್ಯದಿಂದ ಈವರೆಗೆ ಪದ್ಯಗಳನ್ನೇ ಬರೆದವರು ಹಲವರು. ಅವನ್ನೇ ಮಗುವಿನಂತೆ ಕಾಪಾಡಿಕೊಂಡು ಬಂದವರು. ಈಗ ಏಕಾಏಕಿ ಅವುಗಳಿಗೆ ಬೆಲೆಯೇ ಇಲ್ಲವಾಗಿದೆ! !

ಜಾಳು ಜಾಳು ಪದ್ಯ ಬರೆದೂ ತಮಗಿರುವ ಪ್ರಭಾವದ ಪ್ರಭಾವಳಿಯಿಂದ ಮೆರೆಯುತ್ತಿರುವ ಕೆಲವರ ಪೆನ್ನು ಸದ್ಯ ಮೊಂಡಾಗಿದ್ದರೂ ಇವತ್ತಿಗೂ ಅವರು “ಕವಿಗಳು! “. ಆದರೆ ಬರೆದೂ ಬರೆದೂ ಇನ್ನೂ ಬರೆಯುತ್ತಲೇ ಇರುವ ಹಲವರು ತಲೆಕೂದಲು ಹಣ್ಣಾದರೂ ಅವರನ್ನು ತಿರುಗಿ ನೋಡುವವರೂ ಇಲ್ಲ!

ಸೌಜನ್ಯ, ಸಂಕೋಚ, ನಾಚಿಕೆ …ಮುಂತಾದುವನ್ನೆಲ್ಲ ಬದಿಗಿಟ್ಟು ಇನ್ನಾದರೂ ಇದನ್ನೆಲ್ಲ ಒಂಚೂರು ಪ್ರಶ್ನಿಸುವ ಸ್ನೇಹಿತರೆ …ನಮನಮಗೆ ನಾವು ನಾವೇ ;ಇಲ್ಲಿ ಯಾರಿಗೆ ಯಾರೂ ಇಲ್ಲ. ಚಂದದ ಸಮಾನತೆಯ ಮಾತುಗಳೆಲ್ಲ ವೇದಿಕೆಗೆ ಮಾತ್ರ ಸೀಮಿತ. ಕವಿತೆಗೆ “ಬೆಲೆಯಿಲ್ಲದ ” ಈ ಕಾಲದಲ್ಲಿ ನಿಮ್ಮ ಅನುಭವ, ಅಭಿಪ್ರಾಯ,ನೋವುಗಳನ್ನು ಇಲ್ಲಿ ದಯಮಾಡಿ ದಾಖಲಿಸಿ.

‘ಹಾಡೆ ಹಾದಿಯ ತೋರಿತು ..’ ಎಂಬ ಸಾರ್ವಕಾಲಿಕ ಸತ್ಯದ ಕವಿನುಡಿಯಂತೆ ದಾರಿ ತಾನಾಗೇ ತೋಚುತ್ತದೆ.
ಇಲ್ಲವಾದರೆ ಮನಸ್ಸಿನ ಬೇಗುದಿಯಾದರೂ ಕಳೆಯುತ್ತದೆ .
**********
ವಿಜಯಶ್ರೀ ಹಾಲಾಡಿ

About The Author

2 thoughts on “ನಿಮ್ಮೊಂದಿಗೆ”

  1. Kotresh T A M Kotri

    ನಿಮ್ಮ ಮಾತು ನಿಜ.ಪ್ರಸ್ತುತ ಕವಿ ಎದುರಿಸುತ್ತಿರುವ ಒತ್ತಡ .
    ಸಂಗಾತಿಯಂತಹ web ಪತ್ರಿಕೆಗಳು ಆತ್ಮವಿಶ್ವಾಸ ಮೂಡಿಸುತ್ತವೆ.

    1. ಸಂಧ್ಯಾ ಹೊನಗುಂಟಿಕರ್.

      ನಿಮ್ಮ ಅನಿಸಿಕೆ ಸತ್ಯವಾದದು. ಪ್ರಭಾವದಿಂದ ಕವಿಗಳಾದವರ ಅರ್ಭಟದಿಂದ ನಾವು ಬರೆದುದ್ದು ಕವಿತೆಯೇ ಅಲ್ಲವೇನೋ ಎಂಬ ಭಾವ ಮೂಡುವುದು.ಸಾಹಿತ್ಯ ಸಮ್ಮೇಳನಗಳಲ್ಲಂತೂ ಹೆಚ್ಚಾಗಿ ಇಂತಹವರ ಭಾಗಿತ್ವವೇ ಎದ್ದು ಕಾಣುವುದು. ಅಧೆನೆ ಇದ್ದರೂ ಆಯಾ ಕವಿಗಳಿಗೆ ಅವರವರ ಮಟ್ಟದ ಓದುಗ ಕಿವಿಗಳಿರುತ್ತವೆ ಎಂಬುದು ಸಮಾಧಾನ.

Leave a Reply

You cannot copy content of this page

Scroll to Top