ಕಾವ್ಯಯಾನ

ಅದಿಂಬಾದೊಳು

Black Road Close-up Photography

ರೇಖಾ ವಿ.ಕಂಪ್ಲಿ

ಅಪಸ್ವರವು ಹಾಡುತಿದೆ ಧ್ವನಿಯ ಗೂಡಿನೊಳು
ಇಂದುಮಂಡಲದಿಂ ಬೆಳಕಿಲ್ಲದ ಅಂಗಳದೊಳು
ಉಪರೋಚಿತ ಮನದಿಂ ಉಪಾದಿ ಕನಸೊಳು
ಋತುಮಾನದ ತಾಡನವಿಲ್ಲ ಕಾಲಮಾನದೊಳು
ಎಕ್ಕತಾಳಿ ಎಡಬಿಡಂಗಿ ಕೊಡಂಗಿ ಎಡೆಸೆಳೆಯೊಳು
ಒಡಕಲು ಗೆಳೆತನದ ಹಸಿಮುಸಿ ಬಂಧದೊಳು
ಕಗ್ಗಾಡಿನಲಿ ಹೆದ್ದಾರಿಯ ಬಯಸುತ ಮಬ್ಬಿನೊಳು
ಗವಯ ಯಾನ ಯಾವುದೆಂದು ಅರಿಯಲ್ಕೆಯೊಳು
ಚಕ್ರಬಂಧದಲಿ ಅಕ್ಷರಗಳ ಸುಳಿ ಕಾಣಿಸದೊಳು
ಜಡಮತಿಯು ಕವಿದ ಜಗದ ನಿಯಮದೊಳು
ಟಂಕಾರವಿಹುದೆ ಬಿಲ್ಲು ಬಾಣಗಳಿಲ್ಲದೊಳು
ಡಂಬಕ ದೇಹ ಅಲಂಕಾರ ಬಿನ್ನಾ ವೈಯಾರದೊಳು
ತಡಕಾಡಿಹೆ ಎಲ್ಲಾ ನಶಿಸಿದ ಬಳಿಕವೂ ಅದರೊಳು
ದಂಡನೀತಿ ಎಸೆದಿಹೆವು ಲೋಕಪಾಪದೊಳು
ಪಕ್ಕಣದ ಬೀದಿಯಲಿ ಹುಡುಕುತ ನ್ಯಾಯದೊಳು
ಬಂಜೆಪಡಿಸಿಹೆವು ಧಮ೯ ಮತಾಂಧದೊಳು……

********

Leave a Reply

Back To Top