ಕಾವ್ಯಯಾನ

ಕಾವ್ಯಯಾನ

ಮಿನುಗುವ ನಕ್ಷತ್ರ ಚೈತ್ರ ಶಿವಯೋಗಿಮಠ ಅಗೋ…. ಅಲ್ಲಿ ಮಿನುಗುವ ನಕ್ಷತ್ರ ನೀನೇ ಇರಬಹುದು ಅಪ್ಪ! ಪ್ರತಿ ಇರುಳು ಕಾಯುವೆ  ನಿನ್ನ ಬಾಂದಳದಲಿ ಕಾಣಲು! ಮಿಣುಗುವ ಚುಕ್ಕಿ ಸ್ಮೃತಿ  ಪಟಲವ ಕೆಣಕುವುದು! ನೀ ನನ್ನ ಆಡಿಸಿದ್ದು, ಟುವ್ವಿ ಟುವ್ವಿ ಎಂದು ಹಾಡಿದ್ದು ಕಣ್ಮರೆಯಾಗಿ ಕಾಡಿದ್ದು  ಮುಂಜಾನೆಯ ವಿಹಾರಕ್ಕೆ ಹೋಗಿದ್ದು ಸದ್ದು ಮಾಡುತ್ತಾ ಕಾಫಿ ಹೀರಿದ್ದು ಎಲ್ಲವೂ ಕಾಡುವುದು ಅಪ್ಪ! ಈ ನಕ್ಷತ್ರದಂತೆಯೇ ನೀನು ಕತ್ತಲು ಕವಿದಾಗ ದಾರಿ ತೋರುವೆ ಈ ಚುಕ್ಕಿಯಂತೆಯೇ ಆದೆ ನೀನು ಹಗಲೆಂಬ ಸಂತಸದಲಿ ಮಾಯವಾದೆ […]

ಕಥಾಗುಚ್ಛ

ಹಬ್ಬ ಪ್ರೀತಿಯನ್ನು ಹಬ್ಬಿದರೆ ಸುಮಂಗಳ ಮೂರ್ತಿ ಬಾನುಮತಿ ಈ ಸಾರಿ ವಿಜಯದಶಮಿಯನ್ನು ವಿಶೇಷವಾಗಿ ಆಚರಿಸಬೇಕು, ಅದು ನಮ್ಮ ಕುಟುಂಬದವರಿಗೆ ಮತ್ತು ಬಂದ ಬಂಧು ಬಳಗದವರಿಗೆ ಖುಷಿ ಕೊಡುವ ಹಾಗೆ ಇರಬೇಕು,ಎಂದು ಯೋಚಿಸುತ್ತಿದ್ದ ಅವಳು,ಖರ್ಚಿನ ಬಗ್ಗೆಯೂ ನಿಗಾವಹಿಸಬೇಕಿತ್ತು. ಅವಳು ಒಂದು ಮಧ್ಯಮವರ್ಗದ ಕುಟುಂಬಸ್ಥೆ ಎನ್ನುವುದು ಮರಿಯೋ ಆಗಿಲ್ಲ .          ಬಾನುಮತಿಗೆ ಮದುವೆಯಾದ ನಂತರದ ಮೊದಲನೇ ವಿಜಯದಶಮಿ, ಹಾಗಾಗಿ ಗಂಡನ ಮನೆಯ ಪದ್ಧತಿಗಳು ಅವಳಿಗೆ ಅಷ್ಟಾಗಿ ಏನು ತಿಳಿದಿರಲಿಲ್ಲ. ಆ ಕಾರಣದಿಂದ ಅವಳ ಅತ್ತೆಯ ಸಲಹೆ ಕೇಳಿ ಅವರ […]

ಕಾವ್ಯಯಾನ

ಗಾಯಗಳ ಎಣಿಸುತ್ತಲೇ! ದೀಪಾಜಿ ಮಾತಿಗೊಮ್ಮೆ ತುಟಿಕಚ್ಚಿ  ಹೀಗೆಂದರೆ ಎಲ್ಲಿ ಬಿಟ್ಟು ಹೋದಾನೊ ಹಾಗೆಂದರೆ ಎಲ್ಲಿ ಬಿಟ್ಟು ಹೋದಾನೊ ಎಂಬ ದುಗುಡದಲ್ಲೆ ಕಳೆದೆ ಅಷ್ಟು ದಿನಗಳನ್ನ.. ಹೆಜ್ಜೆ ಹೆಜ್ಜೆಗೊಮ್ಮೆ ಹೆಜ್ಜೇನು ಸುರಿದು ಬಾಯಿಗೆ ಸೆರಗ ಒತ್ತಿ ದುಃಖ ಉಮ್ಮಳಿಸಿದಾ -ಗೆಲ್ಲ ಹುಸಿ ನಗುವನ್ನೆ ಹೊರಚೆಲ್ಲಿ ನೋವೆಲ್ಲ ಪಕ್ಕಡಿಗೆ ಸರಿಸುತ್ತಲೆ ಕಳೆದೆ ಅಷ್ಟು ದಿನಗಳನ್ನ.. ಉಸಿರು ಬಿಟ್ಟುರು ಸಾಕು ಹೆಡೆಎತ್ತಿ ಬುಸುಗುಡುತ್ತೀ ಪ್ರೇಮ ಸರಸ ಸಮರಸ ಕಲ್ಪಸಿದವಳಿಗೆ ಸಿಕ್ಕಿದ್ದು ಬರಿಯ ಹಾಲಾಹಲ ನಿನ್ನ ಸಿಟ್ಟುರಿಯ ಹರಿವು ಅಸಮಾಧಾ -ನದ ಕೋಲಾಹಲ […]

ತಂತಿಯೊಳಗಣ  ಶಬ್ದ !

ಕಾವ್ಯ ಸಂಗಾತಿ ತಂತಿಯೊಳಗಣ  ಶಬ್ದ ! ಬಿದಲೋಟಿ ರಂಗನಾಥ್ ನಾನು ಶರಾಬಿನ ದಾಸ ಘಟಶೋಧನೆಯಲ್ಲಿನ ಬಂಧವನ್ನು ಹುಡುಕುತ್ತಲೇ ಹೋದೆ ಅವನ ನೆರಳಿತ್ತು ಅವಳ ಒಲವಿತ್ತು ನಾನೇ ಇರಲಿಲ್ಲ. ಶೋಧಿಸಿಸಲು ಎದೆಗೂಡಲ್ಲಿದ್ದ ಹಂಸದ ನಡಿಗೆಯ ಹೆಜ್ಜೆಯ ಸುತ್ತಿ ಹೊಲೆದ ಪಾಪದ ಮೂಟೆಯ. ತಿರುಗಿದೆ ಕಾಡು –ಮೇಡು ಬೆಟ್ಟ ಕಣಿವೆ ಕಂದರ ನಾ ಬಯಸಿದ್ದು ಸಿಗಲಿಲ್ಲ ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ ಸಕಲವೂ ನನ್ನೊಳಗೇ ಇತ್ತು ತಂತಿ ಮೀಟಿದ ಶಬ್ದ ನಿಜದ ನೆಲೆಯ ಬದುಕಿಗೆ ದಾರಿ ತೋರಿ ಬಯಲ ಪದಗಳು […]

ಲೇಖನ

ಆ ದೃಶ್ಯಗಳನ್ನು ಅಲಂಕರಿಸಿ ಹಂಚುತ್ತಿದ್ದಾರೆ! ಪಿಎಂ ಇಕ್ಬಾಲ್ ಕೈರಂಗಳ ಕೆಲವು ದೌರ್ಜನ್ಯದ ವಾರ್ತೆಗಳು, ವೀಡಿಯೋಗಳು FB ಮತ್ತು ವಾಟ್ಸಪಲ್ಲಿ ಷೇರು ಆಗಿ ನಮ್ಮ ಕಣ್ಣಿಗೆ ಬೀಳುತ್ತಿರುವುತ್ತವೆ. ನೋಡಕ್ಕಾಗದೇ ನೋಡುತ್ತೇವೆ. ಆಗೆಲ್ಲಾ ಮನಸ್ಸು ವಿಪರೀತ ಹರ್ಟುಗೊಳ್ಳುತ್ತದೆ. ಹೃದಯವನ್ನು ಯಾರೋ ಹಿಂಡಿದಂತಾಗುತ್ತದೆ. ಕೆಲವು ನಮ್ಮನ್ನು ಅಳಿಸಿಯೇ ಬಿಡುತ್ತವೆ. ವಿಕೃತ ಮನಸ್ಸಿನ ಪೈಶಾಚಿಕ ಮನುಷ್ಯರ ವಿರುದ್ಧ ರಕ್ತ ಕುದಿಯುತ್ತದೆ. ಅವರನ್ನು ಜೀವಂತ ಸುಡಬೇಕೆಂದು ಅನಿಸುತ್ತದೆ. ಕ್ರೌರ್ಯ, ದೌರ್ಜನ್ಯಗಳ ತಾಕತ್ತೇ ಹಾಗೆ. ಒಂದೆರಡು ನಿಮಿಷದ ವಾರ್ತೆಯಾಗಿ ಅಥವಾ ವೀಡಿಯೋ ಆಗಿ ಸಿಕ್ಕರೆ ನಮಗೆ […]

ಕಾವ್ಯಯಾನ

ಹೊಸ ಹಾಡು ದೇವಯಾನಿ ನೆನಪಿಗೆಂದು ಕೊಳಲ ನಾನೆಂದೂ ಕೇಳಲೇ ಇಲ್ಲ ಚಕ್ರ ಹಿಡಿಯಲೆಂದೇ ಹೊರಟವನು ನೀನು , ಕೊಳಲು ಬೇಕಿರಲಿಲ್ಲ ಏನು ಮಾಡಲಿ ಈ ಕೊಳಲ ಗಾಳಿ ನುಸುಳಿದರೂ ರಾಧೆ ರಾಧೇ ಎಂದೇ ಉಲಿಯುತ್ತಿದ್ದ ಕೊಳಲೀಗ ಬರಿ ಬಿದಿರ ಕೊಳವೆಯಾಗಿ ಬಿದ್ದಿದೆ ನೀನು ಕೊಳಲೂದಲೆಂದೇ ಗೋಕುಲಕೆ ಈ ಜಗಕೆ ಬರಲಿಲ್ಲ ಬಿಡು ಆದರೂ ಚಕ್ರ ಹೊತ್ತ ಕೈ ಸೋತಾಗ ಕೊಳಲ ನೆನಪಾಗದ್ದೇ ನನಗೆ ವಿಸ್ಮಯ ಕೊಳಲೆಂದರೆ ರಾಧೆ ಎಂದುಕೊಂಡಿದ್ದೆ ಎಂದು ಹೆಮ್ಮೆ ಪಡುತ್ತಿದ್ದೆ ನಾನು ಕೊಳಲ ತೊರೆದಷ್ಟೇ […]

ಪುಸ್ತಕ ಸಂಭ್ರಮ

ಪುಸ್ತಕ ಬಿಡುಗಡೆ ಕಾವ್ಯಕಂದೀಲು ಬಳಗ,ಬಾಗಲಕೋಟೆ ಹಾಗೂ ಕನ್ನಡಸಾಹಿತ್ಯಪರಿಷತ್ತು,ಬಾಗಲಕೋಟೆ ಹಾಗೂ ಫೀನಿಕ್ಸ್ ಪ್ರಕಾಶನ’_ ತೀರ್ಥಹಳ್ಳಿ,  ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ;20/10/2019ರಬಾನುವಾರ ಬಾಗಲಕೋಟೆಯ  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಲೋಕದ ಎರಡು  ಹೊಸ ಪುಸ್ತಕಗಳೂ ಲೋಕಾರ್ಪಣೆಗೊಂಡವು ‘ನವಿಲೂರ _ದಾರಿಯಲ್ಲಿ’ (ಕಥಾಸಂಕಲನ)- ಶ್ರೀಹರಿದೂಪದ  ‘ತೊರೆದು ಜೀವಿದಬಹುದೆ?’(ಭಾವಲಹರಿಗಳ ಗುಚ್ಛ)-ಪುನರ್ವಸು ಪ್ರಶಾಂತ್         

ಮೀನು ಶಿಕಾರಿಯ ಸಂಭ್ರಮ

ಮಳೆಗಾಲದ ಆರಂಭ ಮತ್ತು ಮೀನು ಶಿಕಾರಿ… ರಮೇಶ್ ನೆಲ್ಲಿಸರ ‘ಮಳ್ಗಾಲ ಅನ್ನೋದ್ ಯಾವಾಗ್ ಬಂದ್ ಈ ಸುಡ್ಗಾಡ್ ಶೆಕೀನ ಹೊತ್ಕಂಡ್ ಹೋಯ್ತದೋ ಆ ದ್ಯಾವ್ರೆ ಬಲ್ಲ’, ಅಂತ ಬೇಸ್ಗೀಲಿ ಹಾಗೇಯ “ಈ ಹಾಳಾದ್ ಮಳಿ ದಸೇಂದ್ ಮನೆ ಹೊರ್ಗ್ ಕಾಲಿಡಕ್ ಆಗ್ದು” ಅಂತ ಮಳ್ಗಾಲದಾಗೆ , ಈ ಬಗೀ ಮಾತು ನಮ್ ಮಲ್ನಾಡ್ ಕಡೆ ಎಲ್ರೂ ನಾಲ್ಗಿ ಮೇಲೂ ನಲೀತರ‌್ದದೆ. ಏನ್ ಶೆಕಿ ಅಂತೀರಾ, ಹೋದ್ ಮಳ್ಗಾಲ‌್ದಲ್ ಆ ನಮೂನಿ ಮಳೆ ಹೊಯ್ದ್ರು ನೀರ್ ಅನ್ನದ್ ಪಾತಾಳ್‌ಮಟ […]

Back To Top