Category: ನಿಮ್ಮೊಂದಿಗೆ

ನಿಮ್ಮೊಂದಿಗೆ

ಅಂಕಣ ಸಂಗಾತಿ

ಸಕಾಲ
ನಿರ್ಲಿಪ್ತ-ನಿರ್ಭಾವುಕತೆಯ ಅವಿನಾಭಾವ ಸಂಬಂಧ.

ಮೌನದಲ್ಲಿನ ಮಾತು

ಕಾವ್ಯ ಸಂಗಾತಿ ಮೌನದಲ್ಲಿನ ಮಾತು ಶ್ರೀವಲ್ಲಿ ಮಂಜುನಾಥ ಕವಿತೆ ಏನ ಹೇಳಲಿ ಸಖನೆ,ನೀ ನುಡಿಯದಿರಲೇನುನಿನ್ನ ಈ ಮೌನದಲೇನನ್ನ ಹಿಡಿದಿಟ್ಟಿರುವೆ ! ನಿಶೆಯಳಿದು,ಉಷೆಯುದಿಸೆಹೊನ್ನಯೆಳೆಯಂದದಿನಿನ್ನ ದನಿಯದು ತಾಆಗಸದಿ ಮೂಡುವುದು! ಹಕ್ಕಿಯೆದೆಗೂಡಿಂದಹೊರಟ ದನಿಯಲಿನಿನ್ನ ಇನಿದನಿಯುಕಲರವವಗೈದಿಹುದು ! ಆ ಇನಿದನಿಯನ್ನುಆಲಿಸಿದ ಈ ಬುವಿಯಮರಗಳು, ಮೌನದಲೆಹೂವುಗಳ ಅರಳಿಸುತ್ತಿಹುದು! ಮೌನದಾ ಸೆರಗಲ್ಲೆಮಾತುಗಳಡಗಿದೆಯಲ್ಲಮನದ ಮಾತುಗಳನೆಲ್ಲಕಂಗಳರುಹಿದೆಯಲ್ಲ! ಮೌನದರಮನೆಯರಸ,ಮಾತನಾಡದೆಯೆನಗೆಗಿಳಿಮಾತ ಕಲಿಸಿದಾನಿನಗೆ ನಾ ಶರಣು !! ಶ್ರೀವಲ್ಲಿ ಮಂಜುನಾಥ

ಸಂಕ್ರಾಂತಿ ಬಂತೋ ರತ್ತೋ ರತ್ತೋ ವಿಶಾಲಾ ಆರಾಧ್ಯ ಭಾರತವು ಅನೇಕ ಧರ್ಮಗಳನ್ನೊಳಗೊಂಡ ದೇಶ.  ಹಬ್ಬಗಳು ಎಲ್ಲಾ ಧರ್ಮಗಳಲ್ಲಿ ಹಾಸು ಹೊಕ್ಕಾಗಿವೆ.  ಈ ಹಬ್ಬಗಳಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಮತ್ತು ಪ್ರತೀಕಗಳು ಇವೆ.  ಭಾರತೀಯರೆಲ್ಲಾ ಕೂಡಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ. ಆಯಾ ಧರ್ಮದವರು ಆಚರಿಸುವ ಹಬ್ಬಗಳು ಮತ್ತೊಂದು. ಉತ್ತರಭಾರತದಲ್ಲಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ.. ಅದೇ ಹಬ್ಬಗಳನ್ನು ಬೇರೆ ಹೆಸರಿನಿಂದ ದಕ್ಷಿಣ ಭಾರತೀಯರು ಆಚರಿಸುತ್ತಾರೆ.  ಇಂತಹ ಹಬ್ಬಗಳಲ್ಲಿ ಸಂಕ್ರಾಂತಿಯು ನಮ್ಮ ದಕ್ಷಿಣ ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ಇದು ಮಹತ್ವದ […]

“ತಾನು ಚೆನ್ನಾಗಿ ಬದುಕಿದ್ದೇನೆ ಎಂದು ಧೈರ್ಯಪಡಬಲ್ಲವನು ಸಾವಿಗೆ ಅಂಜುವುದಿಲ್ಲ”
– ಶಿವರಾಮ ಕಾರಂತ

Back To Top