ನಮ್ಮ ಕವಿ-ವಾಣಿ ಭಂಡಾರಿ

ನಮ್ಮ ಕವಿ-ವಾಣಿ ಭಂಡಾರಿ

ವಾಣಿ ಭಂಡಾರಿ”

ಇವರು ಮೂಲತಃ ಮಲೆನಾಡಿನ ಸಸ್ಯ ಸಮೃದ್ಧ ಮಡಿಲಾದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರ (1982 ಜುಲೈ14) ರಂದು ರತ್ನ ಭಂಡಾರಿ‌ ಹಾಗೂ ವೆಂಕಟ್ಟಪ್ಪ ಭಂಡಾರಿ ಅವರ ಸುಪುತ್ರಿಯಾಗಿ ಜನಿಸಿದ ಇವರು ಬಾಲ್ಯದಿಂದಲೇ ಸಾಹಿತ್ಯ ಸಂಗೀತ ಪ್ರಿಯರು.ಮನೆಯ ಪರಿಸರವು ಅದಕ್ಕೆ ತಕ್ಕುದಂತೆ ಇದ್ದ ಪ್ರಯುಕ್ತ ಚಿಕ್ಕಂದಿನಿಂದಲೇ ಆಟಪಾಠ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿ ಕೊಳ್ಳುತ್ತಿದ್ದರು.ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಇವರು ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದುಕೊಂಡು ಉಪನ್ಯಾಸಕರಾಗಿ ಸೇವೆ‌ ಸಲ್ಲಿಸುತ್ತಲೇ ತಮ್ಮ ವಿದ್ಯಾರ್ಥಿಗಳಿಗೆ ಕಥೆ,ಕವನ ಚುಟುಕು ಭಾವಗೀತೆ ಹೀಗೆ ಹತ್ತಾರು ಪ್ರಕಾರಗಳನ್ನು ವಿದ್ಯಾರ್ಥಿಗಳ ಕೈಯಲ್ಲಿ ಬರೆಸಿ ಅವರ ಸೃಜನಶೀಲತೆಯನ್ನು ಚಿಕಿತ್ಸಕ ಮನೋದೃಷ್ಟಿಗೆ ಒಳಪಡಿಸುತ್ತಿದ್ದರು.ತಮ್ಮ SSCL ವ್ಯಾಸಂಗ ಮುಗಿಯುತ್ತಿದ್ದಂತೆ ಓದಿನ ಜೊತೆಗೆ ಜ್ಯೋತಿಷ್ಯವನ್ನು ಗುರುಮುಖೇನ ಕಲಿತು ಹಾಗೂ ಸಂಗೀತ ಅಭ್ಯಾಸವನ್ನು ಮಾಡುತ್ತ, “ಬಹುಮುಖ ಪ್ರತಿಭೆ” ಪ್ರಶಸ್ತಿಯನ್ನು “ನಮ್ಮೂರ್ ಪೌಂಡೇಷನ್ ಹೈದರಾಬಾದ್” ಇವರಿಂದ ಪಡೆದಿರುವುದು ಇವರ ಸೃಜನಶೀಲತೆಗೆ ಮತ್ತೊಂದು ಗರಿ.

ಪ್ರವೃತ್ತಿಯಿಂದ DXN ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ ಇದರ ಜೊತೆಗೆ ಭಾವಗೀತೆ, ಕವನ,ಕಥೆಗಳು,ನ್ಯಾನೋಕಥೆ,ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ,ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು.ಸವಿನುಡಿ,ಕವಯಿತ್ರಿ,ಅಂಕಣಗಾರ್ತಿ,ವಿಮರ್ಶಕಿ,ಲೇಖಕಿ,ಗಜಲ್ಗಾರ್ತಿ,ಜೊತೆಗೆ ಜ್ಯೋತಿಷ್ಯ ಅಧ್ಯಯನವನ್ನು ಗುರುಗಳಾದ ವೈ ಎಸ್ ಪ್ರೇಮನಾಥ್ ಅವರಲ್ಲಿ ಕಲಿತುಮತ್ತು‌ ಸಂಗೀತದಲ್ಲಿ ಜ್ಯೂನಿಯರ್ ಕಲಿಕೆ:-1-ಮೀನಾಕ್ಷಿ ಹೆಬ್ಬಾರ್(ಗುರುಗಳು)2-ದಮಯಂತಿ( ಗುರುಗಳು) ಪ್ರಸ್ತುತ ಅವರ ಹತ್ತಿರ ಕಲಿಯುತ್ತಿದ್ದು,ಹಲವಾರು ಕ.ಸಾ.ಪ.ಮತ್ತು ಇತರೆ ಸಮ್ಮೇಳದ ಕಾರ್ಯಗಳಲ್ಲಿ‌ ಭಾಗವಹಿಸಿ ವಾಚನ ಉಪನ್ಯಾಸಗಳನ್ನು ನೀಡಿ,ಹಾಗೂ ಆಕಾಶವಾಣಿ ಯುವವಾಣಿ* ಕಾರ್ಯಕ್ರಮದಲ್ಲಿ ರೆಡಿಯೋ ಸಂದರ್ಶನದ ಮೂಲಕ ಇವರ ಮಾತಿನ ಝಲಕ್ ಸಹ‌ ಕೇಳಬಹುದು.ಈಗಾಗಲೇ ನಾಡಿನ ಹಲವಾರು ಪತ್ರಿಕೆಯಲ್ಲಿ ತಮ್ಮ “ವಿಮರ್ಶಾ ಅಂಕಣ”ಗಳು “ಸತ್ಯವಾಣಿ ಕಟೋಕ್ತಿ”,”ವ್ಯಕ್ತಿತ್ವ ವಿಕಸನ” ಅಂತರ್ ದೃಷ್ಟಿ ವಿಮರ್ಶಾ ಅಂಕಣಗಳು ಪ್ರಕಟಗೊಳ್ಳುತ್ತಿದ್ದು ಸಹೃದಯರ ಮನೆಮನತುಂಬಿದೆ. ಹೀಗೆ ತಮ್ಮನ್ನು ಕೇವಲ ಒಂದು ವಿಚಾರಕಷ್ಟೆ ಸಿಮೀತಗೊಳಿಸಿಕೊಳ್ಳದೆ ಮನುಷ್ಯ ಪ್ರೀತಿ‌ ಹಂಚುತ್ತಾ,ಭಾವೈಕ್ಯತೆಯನ್ನು ಬಿತ್ತುವ ಇವರು ಸಾಹಿತ್ಯ ಸಂಗೀತ ತನ್ನ ಉಸಿರು ಜೀವನಾಡಿ ಎಂದು ಸದಾ ಧ್ಯಾನಸ್ಥರಾಗಿ ಅದರೊಳಗೆ‌ ತನ್ಮಯರಾಗಿ ಬಿಡುತ್ತಾರೆ.

ಇನ್ನೂ ಹತ್ತಾರು ಕೃತಿಗಳನ್ನು ಬಿಡುಗಡೆಗೆ ಕೈಯಲ್ಲಿರಿಸಿ ಕಾಯುತ್ತಿರುವ ಇವರು “ಸಂತನೊಳಗಿನ ಧ್ಯಾನ” ಚೊಚ್ಚಲ ಗಜಲ್ ಕೃತಿಯು ಕನ್ನಡ ಪುಸ್ತಕ‌ ಪ್ರಾಧಿಕಾರಕ್ಕೆ ಆಯ್ಕೆಗೊಂಡು ಅದರ ವಿಮರ್ಶಾಕೃತಿಯೇ “ಸಂತಸಮೀಕ್ಷೆ” ಎಂದು ವ್ಯಕ್ತಪಡಿಸಿ ಖುಷಿಯಿಂದ ತಮ್ಮ ಬೊಗಸೆ ತುಂಬಿಸಿದ್ದಾರೆ.

ಅಚ್ಚಿಗಾಗಿ ಕಾದಿರುವ ಪುಸ್ತಕಗಳು

ಅಂತರ್ ದೃಷ್ಟಿ- ವಿಮರ್ಶಾ ಸಂಕಲನ
ತುಂಗೆ ತಪ್ಪಲಿನ ತಂಬೆಲರು ಭಾಗ:೧+೨
(ಸಂಶೋಧಾನ್ಮತಕ‌ ಕೃತಿ)
ವಚನಗಳು-೧
ಗಜಲ್ ಗಳು-೨
ಕವನ ಸಂಕಲನ-೪
ಸಾವನ್ನು ಮುಂದೂಡಿ ( ವ್ಯಕ್ತಿತ್ವ ವಿಕಸನ) ಕೃತಿ ಭಾಗ-೧+,,
ಸತ್ಯವಾಣಿ- ಕಟೋಕ್ತಿ
ಇತ್ಯಾದಿ ಇತ್ಯಾದಿ,,,,,

ಜಂಗಮವಾಣಿ:-9845426931

*********************

ಧ್ಯಾನಸ್ಥ ಸಂತನ ಮನದ ಮಾತು.

“ಇಂದು ಮಾಡಬಹುದಾದುದನ್ನು ನಾಳೆಗೆ ಮುಂದೂಡಬೇಡ”–ಬೆಂಜಮಿನ್ ಫ್ರಾಂಕ್ಲಿನ್ ಇಂತಹ ನುಡಿಗಳನ್ನು ಕೇಳಿದಾಗ ಒಮ್ಮೆಲೆ ನಮ್ಮೊಳಗೆ ಸತ್ತು ಹೋದಂತಿರುವ ಆತ್ಮಶಕ್ತಿಯು ಜಾಗೃತಗೊಂಡು ನವ ಚೈತನ್ಯವನ್ನು ತಂದುಕೊಡುತ್ತದೆ ಯಾಕೆ ಈ ಮಾತನಾಡುತಿದ್ದೇನೆ ಅಂದ್ರೆ ಈಗಾಗಲೇ ಈ ಕೃತಿ ಹೊರ ಬರಬೇಕಾಗಿತ್ತು ನನ್ನ ತೀವ್ರತರದ ಅನಾರೋಗ್ಯ ಹಾಗೂ ಉದಾಸೀನತೆ ಕಾರಣದಿಂದಾಗಿ ಬಹಳಷ್ಟು ವಿಳಂಬವಾಯಿತು. ನಾನು ಚಿಕ್ಕಂದಿನಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡುಬಂದು ಶಾಲಾ ಕಾಲೇಜುಗಳಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡು ಖುಷಿ ಪಡುತ್ತಿದ್ದ ಸಂದರ್ಭ ಬೇರೆ. ಆದರೆ ಪ್ರಸ್ತುತ ಸಾಹಿತ್ಯ ಕೃಷಿಗೂ ಬಹಳ ವ್ಯತ್ಯಾಸವಿದ್ದರೂ ಇಂದು ಧ್ಯಾನಸ್ಥಳಾಗಿ ಮುನ್ನುಗ್ಗುವ ಮನವು ಇತ್ತೀಚಿನ ಎಂಟೊಂಬತ್ತು ವರ್ಷಗಳಲ್ಲಿ ತನ್ಮಯತೆಯು ಹೆಚ್ಚಿದೆ. ಸದಾ ಓದು ಜ್ಯೋತಿಷ್ಯ ಸಂಗೀತ ಎಂದುಕೊಂಡು ತಲ್ಲೀನರಾಗಿರುತ್ತಿದ್ದ ನನಗೆ ಸಾಹಿತ್ಯ ಎಂಬುದು ಸದಾ ನನ್ನ ಜೀವಭಾವದ ಚೈತನ್ಯ ಚಿಲುಮೆ ಎಂದರೆ ತಪ್ಪಾಗಲಾರದು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ನನ್ನನ್ನು ತೊಡಗಿಸಿಕೊಂಡು ಹಲವು ಪತ್ರಿಕೆಯಲ್ಲಿ ವಿಮರ್ಶಾಅಂಕಣ, ವ್ಯಕ್ತಿತ್ವ ವಿಕಸನ ಅಂಕಣ, ಸತ್ಯವಾಣಿ ಕಟೋಕ್ತಿ ಹೀಗೆ ಹಲವು ರೀತಿಯಲ್ಲಿ ನನ್ನ ಅನಾರೋಗ್ಯದ ನಡುವೆಯೂ ತೊಡಗಿಸಿಕೊಂಡಿದ್ದು ಸಾಹಿತ್ಯ ನನ್ನುಸಿರೆ ಆಗಿದೆ.
ನನ್ನ “ಸಂತನೊಳಗಿನ ಧ್ಯಾನ” ಗಜಲ್ ಕೃತಿಯನ್ನು ಪ್ರಕಟಿಸುವಾಗಲೂ ಸಹ ಗಜಲ್ ಗಾರುಡಿಗರಾದ ಅಲ್ಲಾಗಿರಿರಾಜ್ ಆಣ್ಣ ಅವರು ನನಗೆ ಬೆಂಬಲವಾಗಿ ನಿಂತು ಪುಸ್ತಕದ ಸಂಪೂರ್ಣ ಜವಾಬ್ದಾರಿಯನ್ನು
ಹೊತ್ತುಕೊಂಡಿದ್ದರು.ಈಗಲೂ ಸಹ ಸಲಹೆ ಸೂಚನೆ ನೀಡುತ್ತಾ ಹಾರೈಸುವ ಅವರ ಹೃದಯ ವೈಶಾಲ್ಯತೆಗೆ ಶರಣು ಶರಣಾರ್ಥಿ ಅಣ್ಣ ನಿಮಗೆ.. ನನ್ನ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಆಯ್ಕೆ ಬಹಳಷ್ಟು ಜನರ ಮನದಲ್ಲಿ ನೆಲೆ ನಿಂತಿರುವುದು ನನ್ನ ಅದೃಷ್ಟದ ಸರಿ.ಅದಕ್ಕೆ ಸಂವಾದಿಯಾಗಿ ನಾಡಿನ ಸಹೃದಯರ
ಮನದ ತಪ್ಪಲಿನಲ್ಲಿ ಸಂತನ ಕುರಿತು ನೂರಾರು ಭಾವಗಳ ಝೇಂಕಾರಗಳನ್ನು ಅವರ ಲೇಖನಗಳ ಮೂಲಕ ವ್ಯಕ್ತಗೊಂಡಿರುವುದು ನನಗೆ ಬಹಳ ಸಂತಸವನ್ನು ತಂದಿದೆ. ಈ ನಿಟ್ಟಿನಲ್ಲಿ ಇಲ್ಲಿ ಹಲವಾರು ವಿಮರ್ಶಾ ಲೇಖನಗಳನ್ನು ಬರೆದು ನಾಡಿನುದ್ದಕ್ಕೂ ಸಂತನ ಕೀರ್ತಿಯನ್ನು ತಮ್ಮ ಲೇಖನಿಯ ಮೂಲಕ ತಲುಪಿಸುವ ಕಾರ್ಯ ಸಹೃದಯ ಮಿತ್ರರಿಂದ ಸಾಂಗೋಪ ಸಾಂಗವಾಗಿ ಜರಗುತ್ತಿರುವುದು ಸಂತನೊಳಗಿನ ಧ್ಯಾನದ ವಿಶಿಷ್ಟತೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ನನಗೆ ಸಲಹೆ ಸೂಚನೆಗಳು ಹಾಗೂ ಸಮಯೋಚಿತವಾಗಿ ಸೂಕ್ತ ಮಾರ್ಗದರ್ಶನ ನೀಡಿದ ಶಿಕ್ಷಕರು, ಸಾಹಿತಿಗಳೂ ಆದ ಶ್ರೀ ಸಿ.ಜಿ. ವೆಂಕಟೇಶ್ ಅವರು ಮತ್ತು ನಿವೃತ್ತ ಪ್ರಾಚಾರ್ಯರೂ, ಸಾಹಿತಿಗಳೂ ಆದ ಶ್ರೀ ಗಣೇಶ್ ವಿ. ಸಾಗರ ಅವರು ಹಾಗೂ ಶಿಕ್ಷಕರೂ, ಸಾಹಿತಿಗಳೂ ಆದ ಶ್ರೀ ಜೀವರಾಜ್ ಛತ್ರದ ಇವರೆಲ್ಲರೂ ಸರ್ವ ರೀತಿಯಲ್ಲಿ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಿ ಬೆನ್ನು ತಟ್ಟಿದ್ದಾರೆ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಆದರೆ ಪ್ರೀತಿಸದಿದ್ದರೆ ಮನುಷ್ಯತ್ವಕ್ಕೆ ಎಲ್ಲಿ ಬೆಲೆ ಇದೆ? “ಪ್ರೇಮವಿದ್ದರೆ ಕಲ್ಲು ಕರಗಿ ಎಣ್ಣೆಯಾಗುತ್ತದೆ ಪ್ರೇಮವಿಲ್ಲದಿದ್ದರೆ ಮೇಣವು ಕಬ್ಬಿಣವಾಗುತ್ತದೆ” “ಜಲಾಲುದ್ದೀನ್ ರೂಮಿಯ ಅವರು ಬರೆದ ಈ ಶೇರ್ ಅದೆಷ್ಟುಅರ್ಥಪೂರ್ಣವಾಗಿ ಅರ್ಥ ಗರ್ಭಿತವಾಗಿದೆ.ಮನುಷ್ಯ ಪ್ರೀತಿಗೆ ಸೂಕ್ತವಾದ ಶೇರ್ ಮನವನ್ನು ತಟ್ಟುತ್ತದೆ. ಈ ಕಾರಣದಿಂದಲೇನನ್ನ ಸಂತ ಜಗದ ತುಂಬಾ ಪ್ರೀತಿಯನ್ನು ಹಂಚುತ್ತಾ ಎಲ್ಲರ ಬೊಗಸೆಯಲ್ಲಿ ಪ್ರೀತಿ ತುಂಬಿಸಿ ಧ್ಯಾನಸ್ಥನಾಗಿ ಸಹೃದಯರ ಹೃದಯ ಮಂಡಲದಲ್ಲಿ ಸ್ಥಿತನಾಗಿ ಅವರ ಮನದ ಭಾವಗಳೆಲ್ಲವೂ ಲೇಖನಿಯ ಮೂಲಕ ವಿಮರ್ಶಾ ಬರಹವಾಗಿ ಹೊರಹೊಮ್ಮಿದ್ದು ಸಂತಸದ ಸಂಗತಿ. ಇಲ್ಲಿ ಮಹನೀಯರಾದ ಕವಿಗಳು
ಸಹೃದಯರು, ವಿದ್ವಾಂಸರು, ಬಹಳಷ್ಟು ಹೃದಯ ಭಾವ ಹೊಮ್ಮಿಸಿ ಸಂತನನ್ನು ಭಾವಪೀಠದಲ್ಲಿರಿಸಿ ಚಿತ್ರಿಸಿ, ಅಲಂಕರಿಸಿ ಪೂಜಿಸಿ ಅವರವರದ ಜತನಗೈದಿರುತ್ತಾರೆ. ಇನ್ನಷ್ಟು ಕವಿಗಳು ಬರೆಯುವವರು ಇದ್ದಾರೆ. ಅವರಿಗೂ ಮತ್ತು ಇಲ್ಲಿ ತಮ್ಮ ಬರಹವನ್ನು ದಾಖಲಿಸಿದ ಎಲ್ಲ ಕವಿ ಹೃದಯಗಳಿಗೆ ತುಂಬುಮನದ ಕೃತಜ್ಞತೆಗಳನ್ನು ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತಿರುವೆ. ಈ ನಿಟ್ಟಿನಲ್ಲಿ ನನಗೆ ಎಲ್ಲ ತರದ ಸಹಕಾರ ಸಲಹೆ ಸೂಚನೆ ನೀಡಿದ ನೀಡುತ್ತಿರುವ ನಾಡಿನ ನನ್ನ ಕವಿಮಿತ್ರರಿಗೆ ಹೃದಯತುಂಬಿ ನಮನಗಳನ್ನು ಸಲ್ಲಿಸು
ರುವೆ ಹಾಗೂ ಪ್ರಕಾಶಕರಿಗೂ ಮುಖಪುಟ ವಿನ್ಯಾಸ ಮಾಡಿರುವ ಶ್ರೀ ವೀರಣ್ಣ ಶೀಲವಂತ್ ಮತ್ತು ಒಳಪುಟ ವಿನ್ಯಾಸ ಮಾಡಿರುವ ಶ್ರೀ ಕೆ.ಆರ್. ಹರೀಶ್ಅ ವರಿಗೂ ಮತ್ತು ನನ್ನೆಲ್ಲ ನೋವು ನಲಿವುಗಳಿಗೆ ಬೆನ್ನೆಲುಬಾಗಿ ನಿಂತು ನೆರಳಂತೆ ಕಾಯುವ ನನ್ನ ಪತಿಯ ಪ್ರೀತಿ ಹೃದಯಕ್ಕೂ ತುಂಬು ಮನದ ಧನ್ಯವಾದಗಳು. ಈ ಸಂತಳ ವಿಮರ್ಶಾ ಪುಸ್ತಕ ನಿಮ್ಮ ಬೊಗಸೆ ತುಂಬಿರುವೆ ಧ್ಯಾನಸ್ಥಮನದೊಳಗೆ ತಮಗೆಲ್ಲರಿಗೂ ವಂದಿಸುತ್ತಾ ಕೊಂಡು ಓದುವ ಸಂಸ್ಕೃತಿ ಬೆಳೆಯಲಿ ಎಂದು ಆಶಿಸುತ್ತಾ ನನ್ನ ನಮನಗಳನ್ನು ಸಲ್ಲಿಸುತ್ತೇನೆ.


Leave a Reply

Back To Top