Category: ಪ್ರಬಂಧ

ಸವಾಲ್

ಸವಾಲ್ ದಾರನು ಹಣವನ್ನು ಪಡೆದು ಜರಿ ಸೀರೆಯನ್ನು ಕುತೂಹಲ ನಿರೀಕ್ಷಿಯಲ್ಲಿರುವ, ಐದನೇ ಸೀಟಿನಲ್ಲಿರುವವನ ಪತ್ನಿಗೇ ನೇರವಾಗಿ ಕೊಟ್ಟನು. ಅವಳು ಆ ಸೀರೆಯನ್ನು ಮತ್ತೊಮ್ಮೆ ಬಿಚ್ಚಿ ಕೈಯಾಡಿಸಿ ನೋಡಿ ಸಂತಸಬಟ್ಟು ಮಡಚಿ ಪಕ್ಕದಲ್ಲಿಟ್ಟು ಕೊಂಡಳು.

ಚಾಕು ಹೆಗಡೆ

ಇಂತಹ ಎಷ್ಟೋ ಘಟನೆಗಳಿಗೆ ಕುಮಾರ ಹೆಗಡೆ ಕಾರಣನಾದರೂ ಅವನು ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಅವನ ಮಟ್ಟಿಗೆ ಎಲ್ಲರಿಂದಲೂ ಪ್ರೀತಿ ಪಡೆಯಬೇಕು ಎನ್ನುವ ಆಸಕ್ತಿ. ಆದ್ದರಿಂದಲೇ ಎಲ್ಲರಿಗೂ ಅವನಲ್ಲಿ ವಿಶ್ವಾಸ. ಎಲ್ಲರಿಗೂ ಅವನ ಮಧ್ಯಸ್ತಿಕೆ ಬೇಕೇ ಬೇಕು. ಊರಿನಲ್ಲಿ ಯಾವ ಪಂಚಾಯ್ತಿಯಾದರೂ ಕುಮಾರ ಹೆಗಡೆಗೆ ಕರೆ ಹೋಗುತ್ತದೆ

ಚಮಚಾಯಣ…

ಆಗೆಲ್ಲ ನಾವು ಬೇಸಿಗೆ ರಜೆಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಮದುವೆ ಸೀಸನ್ ನಲ್ಲಿ ನಮ್ಮಜ್ಜಿಊರಲ್ಲೇ ಇರುತ್ತಿದ್ದದ್ದು ಹೆಚ್ಚು.ಅಮ್ಮನ ತಮ್ಮ ತಂಗಿಯರು,ಕಸಿನ್ ಗಳು ಒಂದು ಗಾಡಿ ಜನ ಇದ್ರು.ಅವರೆಲ್ಲರ ಮದುವೆ ಆಗಿದ್ದು ಅಜ್ಜಿ ಮನೆಯಂಗಳದಲ್ಲೇ. ಹೇಗಿದ್ರೂ ಮನೆ ಅಂಗಳ ದೊಡ್ಡದಾಗಿ ಇರುತ್ತಿತ್ತು,

‘ಅಮ್ಮನ ನಿರಾಳತೆ’

ವಸುಂಧರಾ ಕದಲೂರು ಬರೆಯುತ್ತಾರೆ

ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು.

ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ

ಪ್ರಬಂಧ ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ ಜಯಶ್ರೀ.ಜೆ. ಅಬ್ಬಿಗೇರಿ    ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು […]

ಜೀವ ಮಿಡಿತದ ಸದ್ದು

ನಮ್ಮ ಫ್ಲಾಟಿನ ಮನೆ; ನೆಲದ ಸ್ಪರ್ಶ ಮಣ್ಣ ಘಮ, ಮರಗಳ ಸ್ನೇಹ, ಬೆಕ್ಕು ನಾಯಿಗಳ ಸಾನಿಧ್ಯ ಇಲ್ಲದ ನೆಲೆಯಾದರೂ ಇಲ್ಲಿಯೂ ಜೀವಮಿಡಿತದ ಸದ್ದಿದೆ. ಮರಗಿಡಗಳ, ತಂಗಾಳಿಯ ಸ್ಪರ್ಶವಿದೆ, ವಿಧ ವಿಧ ಹಕ್ಕಿ ಹಾಡಿನ ನಿನಾದವಿದೆ.

ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ

ಲಲಿತ ಪ್ರಬಂಧ ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ… ಟಿ.ಎಸ್.ಶ್ರವಣಕುಮಾರಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು ಹೇಳುವಂತೆ ‘ಸಲಾಂ ಸಾಬಿಗೂ ಸಂಕ್ರಾಂತಿಗೂ ಏನು ಸಂಬಂಧ’ ಎಂದು ಹುಬ್ಬೇರಿಸುತ್ತೀರೇನೋ! ಪ್ರತಿ ಸಂಕ್ರಾಂತಿಗೂ ಸಲಾಮನನ್ನು ನೆನಸಿಕೊಳ್ಳದೆ ನನಗೆ ಸಂಕ್ರಾಂತಿ ಹಬ್ಬ ಆಗುವುದೇ ಇಲ್ಲ. ಈಗೊಂದೈವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ಶಿವಮೊಗ್ಗದಲ್ಲಿ ಸಂಚಾರಕ್ಕೆ ಇದ್ದದ್ದು ಎರಡೇ ರೀತಿ. ಮೊದಲನೆಯದು ನಟರಾಜ ಸರ್ವೀಸ್ ಅಂದರೆ ಕಾಲ್ನಡಿಗೆಯಲ್ಲಿ ಹೋಗುವುದು; ಇನ್ನೊಂದು ಕುದುರೆ ಗಾಡಿ. ಕಾರೆನ್ನುವುದು ಅತಿ ಶ್ರೀಮಂತರ ಸೊತ್ತು ಬಿಡಿ; ನಮದಲ್ಲ. ಊರಲ್ಲಿ […]

ಒಕ್ಕಲುತನ

ಇನ್ನ ಕಬ್ಬ ಸುಲದು ರಸಾ ಹೀರೂದು ನಮ್ ಜನಕ್ಕೆ ಭಾರೀ ಸಲೀಸು. ಒಂದ ಕೈಯಾಗ ಸೈಕಲ್ ಹಿಡದು ಮತ್ತೊಂದ ಕೈಯಾಗ ಕಬ್ಬ ತಿನಕೋತ ಹೋಗವರನ್ನ ನೀವು ಎಲ್ಲೆಲ್ಲೂ ನೋಡಬಹುದು.

Back To Top