Category: ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ದಂಗೆಯ ದಿನಗಳುಇಂಗ್ಲಿಷ್ ಮೂಲ : ಮನೋಹರ ಮಳಗಾಂವ್‌ಕರ್ ಕನ್ನಡಕ್ಕೆ : ರವಿ ಬೆಳಗೆರೆಪ್ರ : ಭಾವನಾ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೮೫ಪುಟಗಳು : ೩೦೪ ಪ್ರಸಿದ್ಧ ಭಾರತೀಯ ಆಂಗ್ಲ ಲೇಖಕ ಮನೋಹರ ಮಳಗಾಂವ್‌ಕರ್ ಅವರ ಐತಿಹಾಸಿಕ ಕಾದಂಬರಿಯ ಅನುವಾದವಿದು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ನಂತರ ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರದ ಹೆಸರಿನಲ್ಲಿ ಭಾರತದ ಒಂದೊಂದೇ ರಾಜ್ಯಗಳನ್ನು ಕಬಳಿಸಿಯಾದ ಮೇಲೆ ಭಾರತೀಯರನ್ನು ಹಿಂಸಿಸ ತೊಡಗಿದಾಗ ಅವರ ವಿರುದ್ಧ ಸೇಡು ತೀರಿಸಿ ಅವರನ್ನು ಭಾರತದಿಂದ […]

ಅಂಕಣ ಬರಹ ಋಗ್ವೇದ ಸ್ಫುರಣ ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ ಋಗ್ವೇದ ಸ್ಫುರಣಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿಪ್ರ : ಅಭಿನವ ಪ್ರಕಟಣೆಯವರ್ಷ : ೨೦೧೭ಬೆಲೆ : ರೂ.೨೦೦ಪುಟಗಳು : ೧೬೦ ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಭಾಷಿಕ ದಾಖಲೆಯಾದ ಋಗ್ವೇದ ಸೂಕ್ತಗಳಲ್ಲಿರುವ ಋಕ್ಕುಗಳೊಳಗಿನ ಬಿಡಿ ಪದ್ಯಗಳ  ಸರಳ ಅನುವಾದ ಈ ಕೃತಿಯಲ್ಲಿದೆ.  ಮೂಲ ಸಂಸ್ಕೃತದಲ್ಲಿರುವ ಈ ಪದ್ಯಗಳನ್ನು  ಆರಂಭದಲ್ಲಿ ಸೂಕ್ತ ವ್ಯಾಖ್ಯಾನಗಳ ಮೂಲಕವೂ ನಂತರ ತಿಳಿಗನ್ನಡದಲ್ಲಿ ವ್ಯಾಖ್ಯಾನಗಳಾಗಿಯೂ ನೀಡಲಾಗಿದೆ.  ಋಗ್ವೇದದ ಋಕ್ಕುಗಳು ಪ್ರಕೃತಿಯ ಮಹಾಶಕ್ತಿಗಳು.  ವಾಸ್ತವದ ನೆಲೆಯಲ್ಲಿ ಗ್ರಹಿಸುವಂಥವು.  ವಿಶ್ವಭ್ರಾತೃತ್ವವನ್ನು […]

ಅಂಕಣ ಬರಹ ದಿ ಲಾಸ್ಟ್ ಲೆಕ್ಚರ್ ದಿ ಲಾಸ್ಟ್ ಲೆಕ್ಚರ್ ( ಆತ್ಮ ಕಥನ ರೂಪದ ಉಪನ್ಯಾಸಗಳು)ಮೂಲ : ರ‍್ಯಾಂಡಿ ಪಾಶ್ ಕನ್ನಡಕ್ಕೆ : ಎಸ್.ಉಮೇಶ್ಪ್ರ : ಧಾತ್ರಿ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೧೯೩ ಮೂಲಕೃತಿಯ ಅದ್ಭುತ ಜನಪ್ರಿಯತೆಯಿಂದಾಗಿ ಕನ್ನಡಕ್ಕೂ ಬಂದು ಕನ್ನಡದಲ್ಲೂ ಮಾರಾಟ ಮತ್ತು ಜನಪ್ರಿಯತೆಗಳ ದೃಷ್ಟಿಯಿಂದ ಅಪಾರ ಯಶಸ್ಸು ಪಡೆದ ಕೃತಿಯಿದು. ಮೂಲ ಲೇಖಕ ರ‍್ಯಾಂಡಿ ಪಾಶ್ ಜಠರದ ಕ್ಯಾನ್ಸರಿನಿಂದ ಪೀಡಿತನಾಗಿ ಇನ್ನು ಕೆಲವೇ ತಿಂಗಳುಗಳಷ್ಟೇ ಬದುಕುವನೆಂದು ವೈದ್ಯಕೀಯ […]

ಅಂಕಣ ಬರಹ ಹುಣಿಸೆ ಮರದ ಕತೆ ಹುಣಿಸೆ ಮರದ ಕತೆತಮಿಳು ಮೂಲ : ಸುಂದರ ರಾಮಸ್ವಾಮಿಅನುವಾದ : ಕೆ.ನಲ್ಲತಂಬಿಪ್ರ : ಲಂಕೇಶ್ ಪ್ರಕಾಶನಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೫೦ಪುಟಗಳು : ೧೯೨   ಪರಿಸರ ಕಾಳಜಿಯನ್ನು ಹೊಂದಿದ ಒಂದು ವಿಶಿಷ್ಟ ಕಾದಂಬರಿಯಿದು. ಅದೊಂದು ಪುಟ್ಟ ಹಳ್ಳಿಯಲ್ಲಿ, ಮೂರು ರಸ್ತೆ ಕೂಡುವ ಸ್ಥಳದಲ್ಲಿ  ಆ ಹುಣಿಸೆ ಮರವಿತ್ತು.  ಆ ಜಾಗ ಜನರ ಓಡಾಟ-ಗಿಜಿ ಗಿಜಿಗಳಿಂದ ತುಂಬಿ ಲವಲವಿಕೆಯಿಂದ ಕೂಡಿತ್ತು. ತನ್ನಷ್ಟಕ್ಕೆ ಹುಟ್ಟಿಕೊಂಡ ಆ ಹುಣಿಸೆ  ಮರವು ಮಾನವನ […]

ಅಂಕಣ ಬರಹ ಅಲೆಯ ಮೊರೆತ ಅಲೆಯ ಮೊರೆತ( ಕಾದಂಬರಿ)ತಮಿಳು ಮೂಲ : ಕಲ್ಕಿಅನುವಾದ : ಶಶಿಕಲಾ ರಾಜಪ್ರ : ಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೪೨೦ಪುಟಗಳು : ೬೯೨ ವಾಸ್ತವವಾದಿ ಶೈಲಿಯಲ್ಲಿರುವ ಈ ಕಾದಂಬರಿಯು ಒಂದು ಕಾಲ್ಪನಿಕ ಕಥೆಯನ್ನು ವಸ್ತುವಾಗಿ ಹೊಂದಿದ್ದರೂ  ಭಾರತಕ್ಕೆ ಸ್ವಾತಂತ್ರ್ಯ   ಸಿಗುವ ಮೊದಲು ನಡೆದ ಎಲ್ಲ ಸಂಗತಿಗಳನ್ನೂ ಐತಿಹಾಸಿಕ ಸತ್ಯಗಳೊಂದಿಗೆ ಯಥಾವತ್ತಾಗಿ ನಿರೂಪಿಸುತ್ತದೆ.         ಪಟ್ಟಾಮಣಿಯಮ್ ಕಿಟ್ಟಾವಯ್ಯರ್, ಸರಸ್ವತಿ ಅಮ್ಮಾಳ್, ಪದ್ಮಾಚಲ ಶಾಸ್ತಿç ಅಯ್ಯರ್, ಕಾಮಾಕ್ಷಿ ಅಮ್ಮಾಳ್, ದೊರೆಸ್ವಾಮಿ […]

ಅಂಕಣ ಬರಹ ಪಡುವಣ ನಾಡಿನ ಪ್ರೇಮವೀರ ಪಡುವಣ ನಾಡಿನ ಪ್ರೇಮವೀರಇಂಗ್ಲಿಷ್ ಮೂಲ : ಜೆ.ಎಂ. ಸಿಂಜ್ ಕನ್ನಡಕ್ಕೆ : ಡಾ.ಬಸವರಾಜ ನಾಯ್ಕರ್ಗೀತಾಂಜಲಿ ಪಬ್ಲಿಕೇಷನ್ಸ್ಪ್ರಕಟಣಾ ವರ್ಷ : ೨೦೦೮ಬೆಲೆ : ರೂ.೧೨೫ಪುಟಗಳು : ೨೪೦ ಐರ್‌ಲ್ಯಾಂಡಿನ ಪ್ರಸಿದ್ಧ ನಾಟಕಕಾರ ಜೆ.ಎಂ.ಸಿಂಜ್‌ನ ಐದು ನಾಟಕಗಳು ಇಲ್ಲಿವೆ. ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದ ಸಿಂಜ್ ತನ್ನ ಬಾಲ್ಯವನ್ನು ದಕ್ಷಿಣ ಡಬ್ಲಿನ್‌ನ ಗುಡ್ಡಗಾಡು ಪ್ರದೇಶದಲ್ಲಿ ಕಳೆದಿದ್ದ. ಆದ್ದರಿಂದಲೇ ನಿಸರ್ಗ ಸೌಂದರ್ಯದ ಬಗ್ಗೆ ಅಪಾರ ಒಲವನ್ನು ಅವನು ಬೆಳೆಸಿಕೊಂಡ. ಅವನ ನಾಟಕಗಳಲ್ಲಿ ಹಳ್ಳಿಯ ಬದುಕಿನ […]

ಅಂಕಣ ಬರಹ ನರವಾನರ ನರವಾನರಮರಾಠಿ ಮೂಲ : ಶರಣಕುಮಾರ ಲಿಂಬಾಳೆಕನ್ನಡಕ್ಕೆ : ಪ್ರಮೀಳಾ ಮಾಧವಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ. ೧೬೫ಪುಟಗಳು : ೧೯೨ ಭಾರತದಾದ್ಯಂತ ಅಂಬೇಡ್ಕರ್ ದಲಿತರ ಪರವಾಗಿ ಮಾಡಿದ ಚಳುವಳಿಯ ಕುರಿತಾದ ಕಾದಂಬರಿ ಇದು. ಮನುಸ್ಮೃತಿಯಲ್ಲಿ ಶೂದ್ರರು ಮತ್ತು ದಲಿತರ ಕುರಿತಾಗಿರುವ ಉಲ್ಲೇಖಗಳಿಂದ ದಲಿತರ ಬದುಕು ನರಕವಾಗಿ ಬಿಟ್ಟು ಅವರಿಗಾದ ಅನ್ಯಾಯಗಳ ವಿರುದ್ಧ ಕೆರಳಿ ಕೆಂಡವಾದ ಅಂಬೇಡ್ಕರ್ ವರ್ಣವ್ಯವಸ್ಥೆಯಿಂದಾಗಿ ಹಿಂದೂ ಸಮಾಜದಲ್ಲಿ ಮೇಲು ಜಾತಿಯವರು ನಿಮ್ನ ಜಾತಿಯವರನ್ನು ಶೋಷಿಸಿದ್ದರ […]

ಅಂಕಣ ಬರಹ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನಮೂಲ ಗುಜರಾತಿ: ಪನ್ನಾಲಾಲ್ ಪಟೇಲ್ ಕನ್ನಡಕ್ಕೆ : ಎಲ್.ವಿ.ಶಾಂತಕುಮಾರಿಪ್ರ : ಸಾಹಿತ್ಯ ಅಕಾಡೆಮಿಪ್ರ.ವರ್ಷ :೨೦೧೫ಬೆಲೆ : ರೂ.೧೯೦ಪುಟಗಳು : ೪೨೪   ಎಲ್.ವಿ.ಶಾಂತಕುಮಾರಿ ನಮ್ಮ ನಡುವಿನ ಬಹಳ ದೊಡ್ಡ ವಿದ್ವಾಂಸರು ಮತ್ತು ಅನುವಾದಕರು. ಅನೇಕ ಕ್ಲಾಸಿಕ್ ಗಳನ್ನು ಅವರು ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ’ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿ […]

ಅಂಕಣ ಬರಹ ಲೇರಿಯೊಂಕ ಲೇರಿಯೊಂಕ ( ಕಾದಂಬರಿ)ಮೂಲ : ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ : ಪ್ರಶಾಂತ ಬೀಚಿಪ್ರ : ಛಂದ ಪುಸ್ತಕಪ್ರಕಟಣೆಯ.ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೨೫೦  ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ ಆರ್.ಓಲೆ ಕುಲೆಟ್ ಅವರ ಈ ಕಾದಂಬರಿಯು ಲೇರಿಯೊಂಕ ಎಂಬ ಒಬ್ಬ ದನಗಾಹಿ ಹುಡುಗ ಶಾಲೆಗೆ ಹೋಗಲು ಪಡಬಾರದ ಪಾಡು ಪಟ್ಟು ಕೊನೆಗೆ ಸ್ವಂತ ಪರಿಶ್ರಮದಿಂದ ವಿದ್ಯಾವಂತನಾಗಿ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರ ಕುರಿತಾದ ಕಥೆಯನ್ನು ಹೇಳುತ್ತದೆ.  ಮಾಸಯಿ ಜನಾಂಗಕ್ಕೆ […]

ಅಂಕಣ ಬರಹ ಸೀಗಲ್ ಸೀಗಲ್ಮೂಲ : ಆಂಟನ್ ಚೆಕಾಫ್ ಕನ್ನಡಕ್ಕೆ : ಹೇಮಾ ಪಟ್ಟಣಶೆಟ್ಟಿಪ್ರ : ಅನನ್ಯ ಪ್ರಕಾಶನಪ್ರ.ವರ್ಷ :೨೦೦೭ಬೆಲೆ :ರೂ.೭೦ಪುಟಗಳು : ೧೦೮ ಎರಡು ತಲೆಮಾರುಗಳ ನಡುವಣ ಸಂಘರ್ಷವೇ ಈ ನಾಟಕದ ಮುಖ್ಯ ಕಥಾ ವಸ್ತು. ಇಬ್ಬರು ನಟಿಯರು ಮತ್ತು ಇಬ್ಬರು ಲೇಖಕರುಗಳ ನಡುವಣ ಸಂಬಂಧದ ಸ್ವರೂಪದ ಶೋಧನೆಯೇ ಇಲ್ಲಿನ ಮುಖ್ಯ ಕಾಳಜಿಯಾಗಿದೆ. ಹಿರಿಯ ನಟಿ ಅರ್ಕಾದಿನಾ ಮತ್ತು ಹಿರಿಯ ಲೇಖಕ ತ್ರಿಗೊರಿನ್ ಆಗಲೇ ಸಮಾಜದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡವರು. ಯುವಕ ತ್ರೆಪ್ಲೆಫ್ ಮತ್ತು ಎಳೆಯ […]

Back To Top