ಗಾಂಧಿ ವಿಶೇಷ ಗಾಂಧಿ ದಿಗ್ದರ್ಶನ ಕಲಿಸಿಕೊಟ್ಟ ಪಾಠ ಶೂನ್ಯಹಣದಾಹ, ಅಧಿಕಾರ ಮೋಹಕ್ಕೆ ನಾಗಾಲೋಟಬೆಟ್ಟದಷ್ಟು ಪಾಪಕ್ಕೆಕ್ಷಮೆಯೂ ಸಿಗಲಿಕ್ಕಿಲ್ಲ !ವಿದ್ಯೆ ವಂಚಿತ ಬಾಲಕರಶೋಷಿತ ಕಿಶೋರಿಯರಹಸಿದ ಕಣ್ಬೆಳಕಲ್ಲಿ ಜಗದ ಹೆಣವೇ ಕಾಣುತಿದೆ;ಗಾಳಿಯಲ್ಲಾದರೂ ಗಾಂಧಿವಾದ ತೀಡಬಾರದೇನೆರಳು ಬಿಸಿಲಿನ ನಡುವೆದಣಿದ ದೀನರಿಗೆ ಭಾಗ್ಯ ಯೋಜನೆಮರಿಚಿಕೆಯಾಗಿ, ಮಸಲತ್ತು ನಡೆದಿದೆಇನ್ಯಾರದೊ ಜೇಬಿಗೆ ತುತ್ತಾಗಿದೆ.ಭ್ರಷ್ಟ ನೋಡುವುದೇ ಕಷ್ಟಹಗಲಿನಲ್ಲೇ ಒಂಟಿ ಹೆಣ್ಣು ತಿರುಗಾಡುವಂತಿಲ್ಲಇನ್ನೆಲ್ಲಿ ರಾಮರಾಜ್ಯ! ಕನಸೇ ಅದುಭಗ್ನ ರಾಜಕಾರಣ,ಸೊರಗು ದೇಶಪ್ರೇಮಸಾವಿಗೆ ಶರಣಾಗುವ ಅನ್ನದಾತರುವ್ಯಸನಿ ಯುವಕರು, ಢೊಂಗಿ ದಾನಿಗಳುಅಮಾನವೀಯ ಅಂಧಾನುಕರಣೆಗೆಚೂರಾದರೂ ಗಾಂಧಿತತ್ವ ನೆನಪಾಗಲಿ…ಶ್ವೇತಕಾಯ,ನಡುವಲ್ಲಿ ಕೆಂಪುಬತ್ತಿ ತಿರುಗುತ್ತಕೇ ಕೇ ಹಾಕುತ್ತ ರಥಗಳ ಹಿಂಡುದೊರಗು […]
ಗಾಂಧಿ ವಿಶೇಷ ಮತ್ತೆ ಹುಟ್ಟಿ ಬನ್ನಿ ಗಾಂಧಿ ಮತ್ತೆ ಹುಟ್ಟಿ ಬನ್ನಿ ಓ ಪರಮಪೂಜ್ಯ ಗಾಂಧಿಅಹಿಂಸೆ ಏರಲೇಬೇಕಿದೆ ಎಲ್ಲರೆದೆಯ ಗಾದಿಸತ್ಯ ಸ್ವಾವಲಂಬನೆ ನೀವು ನಡೆದ ಹಾದಿಆತ್ಮನಿರ್ಭರ ನಡೆಗೆ ಅದುವೆ ತಾನೇ ಬುನಾದಿ ಬಿತ್ತುತ್ತಲೇ ಸಾಗಿದಿರಿ ಅಹಿಂಸೆಯ ಬೀಜಅವು ಮೇಲೆದ್ದು ಚಿಗುರಿ ಮರವಾದದ್ದು ನಿಜಅಲ್ಲಲ್ಲಿ ತೂಗುತಿವೆ ಪ್ರೀತಿ ಗೂಡುಗಳ ಸಾಲುಗೆದ್ದಲು,ವಿಷ ಸರ್ಪಗಳೂ ಕೇಳುತಿವೆ ಪಾಲು ಸತ್ಯವೆಂದರೆ ನೀವು ಮಹಾತ್ಮರೆಂದರೆ ನೀವುನಿತ್ಯ ನಿಮ್ಮ ಭಜನೆ ಭಾಷಣಗಳು ಹಲವುನಿಮ್ಮ ಜೀವನಸಾರ ನುಡಿಗೆ ಮೀಸಲು ಮಾಡಿನಿಮ್ಮಂತೆ ಬಾಳುವುದನು ಮರೆತೆವು ನೋಡಿ ನೀವು ಹಚ್ಚಿಟ್ಟ […]
ಗಾಂಧಿ ವಿಶೇಷ ಎರಡು ಕವಿತೆಗಳು ಸ್ಮಾರಕ ಅಂದು ಸ್ವತಂತ್ರ ಪೂರ್ವದಂದು ತನು ಮನ ತೊರೆದು ಕುಡಿ ಕುಟುಂಬ ಬಿಟ್ಟು ಬಂಧು ಬಳಗ ಮರೆತು ಸ್ವತಂತ್ರಕ್ಕಾಗಿ ಪಣ್ಣ ತೊಟ್ಟು ನಿಂತೆ. ಇಂದಿನ ರಾಜಕಾರಣಿಗಳು ಅಂತರಾತ್ಮಕ್ಕೆ ಹೆದರಿ ಭದ್ರತಾ ಸಿಬ್ಬಂದಿಯಾಗಿ ನಿನ್ನನು ಸೌಧದ ಹೊರಗೆ ಇಟ್ಟಿದ್ದಾರೆ ಆದರೆ, ಬೆವರು ಹರಿಸುವ ಕಾರ್ಮಿಕರು ಗೌರವಾರ್ಥಕವಾಗಿ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಿ ಸ್ಮರಿಸಿ ಮೆರೆಸಿದ್ದಾರೆ ಜನಸಂದಣಿಯ ನಡುವೆ ಮೌನವಾಗಿ ನೀನು ಸ್ಮಾರಕವಾಗಿ ನಿಂತಿದ್ದೀಯಾ ಗಾಂದಿ (ಆಂಗ್ಲದ ಮೌನಿಮೆಂಟ್ ಅನುವಾದ) ಪರಿಮಳ ಗಾಂಧಿಯ ಕಸ್ತೂರಿ ಭಾರತದ ಕಸ್ತೂರಿ […]
ಗಾಂಧಿ ವಿಶೇಷ ಮಹಾತ್ಮ ಮಹಾತ್ಮನಾಗಿದ್ದು ಗಾಂಧೀಜಿಸಾಮಾನ್ಯರಲ್ಲಿ ಅಸಾಮಾನ್ಯನಾಗಿದ್ದಕ್ಕೆ !ದೇವರ ಅಪರಾವತಾರವೆಂದೇನೂ ಅಲ್ಲಅನುಸರಣೆಯಿರಲಿ ಆರಾಧನೆ ಬೇಕಿಲ್ಲ ನಿನ್ನೊಳಗಿನ ನಿನ್ನ ಕಂಡುಕೊಂಡೆಪತಿತನಾಗಿಯೂ ಪಾವನನಾದೆಮಾರಲಿಲ್ಲ ನಿನ್ನಾತ್ಮಸಾಕ್ಷಿಯಕಕ್ಷಿದಾರರ ವಕಾಲತ್ತಿನ ತಕ್ಕಡಿಯಲ್ಲಿಟ್ಟುನಿಯತ್ತಿನದೇ ಮೇಲುಗೈ ! ಘನತೆಯಿತ್ತೆ ಶ್ರಮಿಕನ ಬೆವರಿಗೆದುಡಿವ ತನುವಿನ ಬೆವರ ಹನಿಸುಖದ ವ್ಯಾಧಿಗಳ ಮದ್ದೆಂಬ ಮತಿಯಿದ್ದವದುಡಿಮೆಯ ಹಿರಿಮೆಯರಿತ ಬಹುರೂಪಿತನ್ನುಡುಗೆಯ ತಾನೆ ಹೊಲಿದ ಸಿಂಪಿಗಗೋಖಲೆಯೇ ಮೆಚ್ಚಿದ ಮಡಿವಾಳಸಮಗಾರನ ವೈದ್ಯನಂತೆ ಕಂಡ ಅಸ್ಪೃಶ್ಯತಾ ವಿರೋಧಿಭಂಗಿಗಳ ಹೀನಾಯಕೆ ಮರುಗಿದ ಮಾನವತಾವಾದಿಜೈಲಿಗಟ್ಟಿದವಗೆ ಮೆಟ್ಟು ಹೊಲಿದ ಮೋಚಿಸಹಕಾರ ಕೃಷಿಯ ಲಾಭವರಿತ ಸಾವಯವ ಕೃಷಿಕಬಡವರಿಗಾಗಿ ಚಂದಾ ಎತ್ತಿದ ತಿರುಕಆಹಾರವೇ ರೋಗಕೆ ಮದ್ದೆಂದ […]
ಗಜಲ್
ಗಾಂಧಿ ವಿಶೇಷ ಗಾಂಧಿ ವಿಶೇಷ ಬೇಳೆ ಬೇಯಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿಹೊಟ್ಟೆ ತುಂಬಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ಹೊಗಳಿಕೆ-ತೆಗಳಿಕೆ ನಡೆಯುತಿವೆ ಅಂಧಭಕ್ತಿಯಲ್ಲಿಚಪಲ ತೀರಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ನಿನ್ನ ಆದರ್ಶಗಳು ಪುಸ್ತಕಗಳಲ್ಲಿ ಮರಿ ಹಾಕುತಿವೆಮೌಲ್ಯಗಳನ್ನು ಕೊಲ್ಲುತಿರುವರು ನಿನ್ನ ಹೆಸರಿನಲ್ಲಿ ಪೂಜಿಸುತಿರುವರು ನಿನ್ನ ಸುಂದರ ಭಾವಚಿತ್ರಗಳನ್ನುವ್ಯಕ್ತಿತ್ವವನ್ನು ಮಾರಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ಗಾಂಧಿಯನ್ನು ಮನುಷ್ಯನೆಂದು ತಿಳಿಯಲಿಲ್ಲ ಮಲ್ಲಿಸಂಪತ್ತನ್ನು ಲೂಟಿ ಮಾಡುತಿರುವರು ನಿನ್ನ ಹೆಸರಿನಲ್ಲಿ ******************************** ರತ್ನರಾಯ ಮಲ್ಲ
ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ
ಗಾಂಧಿ ವಿಶೇಷ ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ ಮೋಹನ್‌ದಾಸ್ ಕರಮಚಂದ ಗಾಂಧಿ ರಾಷ್ಟ್ರೀಯ ಚಳುವಳಿಯ ನಾಯಕರಾಗಿ ಮಾನ್ಯತೆ ಪಡೆದಾಗ, ೧೯೧೬ರ ಸುಮಾರಿಗೆ ಆಂಧ್ರದ ಮುಸಲಿಪಟ್ಟಣಂನ ಪಿಂಗ್ಲೆ ವೆಂಕಯ್ಯ, ಗಾಂಧೀಜಿಯವರಲ್ಲಿ ತಮ್ಮ ಕಾರ್ಯದ ಬಗ್ಗೆ ಉತ್ಸಾಹ ಮೂಡಿಸಲು ಯತ್ನಿಸಿದರು ಹಾಗೂ ಒಂದು ವಿನ್ಯಾಸ ಸೂಚಿಸಿದರು. ಆದರೆ ಅದು ಗಾಂಧೀಜಿಯವರಿಗೆ ಇಷ್ಟವಾಗಲಿಲ್ಲ. ಅವರು ರಾಷ್ಟ್ರ ಧ್ವಜ ಹೊಂದುವ ಅಭಿಪ್ರಾಯಕ್ಕೆ ವಿರುದ್ಧವಾಗಿರಲಿಲ್ಲ. ಆದರೆ ಅವರಿಗೆ ವೆಂಕಯ್ಯನವರ ಧ್ವಜ ವಿನ್ಯಾಸದಲ್ಲಿ ಸಂಪೂರ್ಣ ದೇಶದ ಅಂತರಾತ್ಮ ಕಲಕುವ ವೈಶಿಷ್ಟ್ಯವೇನೂ ಕಾಣಲಿಲ್ಲ. ಒಮ್ಮೆ ಗಾಂಧೀಜಿಯವರ […]
ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು
ಗಾಂಧಿ ವಿಶೇಷ ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು ಬುದ್ಧ , ಬಸವ ಗಾಂಧಿ ಎಮದು ಮಹಾತ್ಮರ ಸಾಲಿಗೆ ಸೇರಿರುವ ನಮ್ಮ ನಾಯಕರು ನಿತ್ಯವೂ ನೆನಪಾಗುತ್ತಾರೆಯೇ? ಖಂಡಿತಾ ಇಲ್ಲ! ಕೆಲವರಿಗೆ ಮಾತ್ರನೆನಪಾಗುತ್ತಾರೆ.ಆದರೆ ಎಲ್ಲರಿಗೂ ನೆನಪಾಗುವುದು ಅವರ ಜನ್ಮದಿನಗಳಂದು ಮಾತ್ರ. ಇದೊಂದು ಅಪಸವ್ಯ ಕಾರಣ ನಮ್ಮಲ್ಲಿ ಮಹಾತ್ಮರ ಜಯಂತಿಗೆ ಸರ್ಕಾರಿ ರಜೆಗಳಿವೆ. ಮಹಾತ್ಮರ ಸಾಲಿಗೆ ಸೇರಿರುವ ಗಾಂಧಿ ಸ್ವಾತಂತ್ರ್ಯ ಬಂದು ಕೆಲವೇ ದಿನಗಳಲ್ಲಿ ಇಲ್ಲವಾದರು. ಛೇ! ಹೀಗಾಗಬಾರದಿತ್ತು ಇನ್ನೂ ಇರಬೇಕಿತ್ತು ಅಲ್ವೇ! ಜಗತ್ತಿನಲ್ಲಿ ಕಾಲಕಾಲಕ್ಕೆ ಜಗದ ಕೊಳೆ ತೆಗೆಯಲು ಮಹಾನ್ […]
ಗಾಂಧಿ ಬೀಜ
ಗಾಂಧಿ ವಿಶೇಷ ಗಾಂಧಿ ಬೀಜ ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳನೆತ್ತಿಗೆ ನೆರಳು ಹೊಟ್ಟಿಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗುಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ ಅರಮನೆ ಗುರುಮನೆ ಸೆರೆಮನೆಗಳಲೂಕಿಡಿನುಡಿ ಕೆನ್ನಾಲಿಗೆ ಚಾಚಿ ಝೇಂಕಾರ ವಾಡುತ್ತಿರುವು ದನು ಕಂಡು ದಿಗ್ಭ್ರಾಂತರಾಗಿದ್ದಾನೆ ಅಗಸಿ ಬಾಗಿಲಲ್ಲಿ ಜಾತಿಯತೆಯ ಹೆಬ್ಬಾವು ಬಾಯಿ ತೆರೆದಿರುವುದನ್ನು […]
ನಮ್ಮ ಭಾಪು
ಗಾಂಧಿ ವಿಶೇಷ ನಮ್ಮ ಭಾಪು ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿಮೌನದಲೇ ಸಂವಹನಮಾಡಿ ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ ಹತ್ತಿರ ಸುಳಿಯದೆಉಳಿದರು , ಉಚ್ಚ ಪಂಥದವಾರದರೂತಳಸಮುದಾಯದವರಿಗಾಗಿ ಬಾಳಿದರು ಹಗಲು ಇರುಳು ಸತ್ಯವನ್ನೇಪ್ರತಿಪಾದಿಸಿದರುತಮ್ಮ ಬದುಕನ್ನೆ ಒರೆಹಚ್ಚಿತಾವೇ ನೋಡಿದರುಮಾಡು ಇಲ್ಲವೇ ಮಡಿ ಎಂದರುಅನ್ಯರ ದೋಷಿಸುವ ಬದಲುನಿನ್ನ ನೀ ಅರಿ ಎಂದರು ಆದರ್ಶ ತತ್ವಗಳು ಪಠಣದಮಂತ್ರವಲ್ಲ ಎಂದುಜೀವಿಸಿ ತೋರಿಸಿದರುಬಹುತ್ವ ಭಾರತಕ್ಕೆ ಭಾತೃತ್ವದಮಡಿಲು ನೀಡಿದರು ಅನೇಕತೆಯಲ್ಲಿ ಏಕತೆಯಭಾರತವ ಕನಸ ಕಂಡರುನಮ್ಮ ರಾಷ್ಟ್ರ ಪಿತ ಎಂಬಹೆಮ್ಮೆ ಇವರುಇಂದಿಗೂ […]
ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ
ಗಾಂಧಿ ವಿಶೇಷ ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ “ಈ ಭೂಮಿ ಪ್ರತಿಯೊಬ್ಬ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ. ಆದರೆ ಆತನ ಆಸೆಗಳನ್ನು ಪೂರೈಸುವಷ್ಟಲ್ಲ” – ಎಂ.ಕೆ. ಗಾಂಧೀ ಗಾಂಧೀಜಿಯವರ ‘ಹಿಂದ್ ಸ್ವರಾಜ್’ಗೆ ನೂರಾ ಹನ್ನೊಂದು ವರ್ಷಗಳಾದರೂ ಅದರ ಪ್ರಸ್ತುತತೆ ಕುರಿತಂತೆ ಜಿಜ್ಞಾಸೆ ಇದೆ. ೧೯೦೮ ರಲ್ಲಿ ಬರೆದ “ಹಿಂದ್ ಸ್ವರಾಜ್” ಮೇಲ್ನೋಟಕ್ಕೆ ಸಣ್ಣ ಪುಸ್ತಕ. ಹಿಂದ್ ಸ್ವರಾಜ್ ಕೃತಿಯನ್ನು ಅಂದಿನ ಸಂದರ್ಭಕ್ಕನುಗುಣವಾಗಿ ವಿಶ್ಲೇಷಿಸಬೇಕೇ ಅಥವಾ ಇಂದಿನ ಸಂದರ್ಭದಲ್ಲೂ ಅದು ಸುಸಂಗತವೇ ಎಂಬ ಕುರಿತು ಜಿಜ್ಞಾಸೆ […]