ಗಜಲ್

ಗಾಂಧಿ ವಿಶೇಷ

ಗಾಂಧಿ ವಿಶೇಷ

ಬೇಳೆ ಬೇಯಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ
ಹೊಟ್ಟೆ ತುಂಬಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ

ಹೊಗಳಿಕೆ-ತೆಗಳಿಕೆ ನಡೆಯುತಿವೆ ಅಂಧಭಕ್ತಿಯಲ್ಲಿ
ಚಪಲ ತೀರಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ

ನಿನ್ನ ಆದರ್ಶಗಳು ಪುಸ್ತಕಗಳಲ್ಲಿ ಮರಿ ಹಾಕುತಿವೆ
ಮೌಲ್ಯಗಳನ್ನು ಕೊಲ್ಲುತಿರುವರು ನಿನ್ನ ಹೆಸರಿನಲ್ಲಿ

ಪೂಜಿಸುತಿರುವರು ನಿನ್ನ ಸುಂದರ ಭಾವಚಿತ್ರಗಳನ್ನು
ವ್ಯಕ್ತಿತ್ವವನ್ನು ಮಾರಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ

ಗಾಂಧಿಯನ್ನು ಮನುಷ್ಯನೆಂದು ತಿಳಿಯಲಿಲ್ಲ ಮಲ್ಲಿ
ಸಂಪತ್ತನ್ನು ಲೂಟಿ ಮಾಡುತಿರುವರು ನಿನ್ನ ಹೆಸರಿನಲ್ಲಿ

********************************

ರತ್ನರಾಯ ಮಲ್ಲ

2 thoughts on “ಗಜಲ್

  1. ಗಾಂಧೀಜಿ ಹೆಸರಿನಲ್ಲೇ ಎಲ್ಲ ಅನಾಚಾರಗಳು!! ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಗಾಂಧಿ ಹೆಸರು. ಚಂದದ ಅಭಿವ್ಯಕ್ತಿ

Leave a Reply

Back To Top