ಗಾಂಧಿ ವಿಶೇಷ
ಎರಡು ಕವಿತೆಗಳು
ಸ್ಮಾರಕ
ಅಂದು ಸ್ವತಂತ್ರ ಪೂರ್ವದಂದು
ತನು ಮನ ತೊರೆದು
ಕುಡಿ ಕುಟುಂಬ ಬಿಟ್ಟು
ಬಂಧು ಬಳಗ ಮರೆತು
ಸ್ವತಂತ್ರಕ್ಕಾಗಿ ಪಣ್ಣ ತೊಟ್ಟು ನಿಂತೆ.
ಇಂದಿನ ರಾಜಕಾರಣಿಗಳು
ಅಂತರಾತ್ಮಕ್ಕೆ ಹೆದರಿ
ಭದ್ರತಾ ಸಿಬ್ಬಂದಿಯಾಗಿ
ನಿನ್ನನು ಸೌಧದ ಹೊರಗೆ ಇಟ್ಟಿದ್ದಾರೆ
ಆದರೆ, ಬೆವರು ಹರಿಸುವ ಕಾರ್ಮಿಕರು
ಗೌರವಾರ್ಥಕವಾಗಿ ಉದ್ಯಾನವನದಲ್ಲಿ
ಪ್ರತಿಷ್ಠಾಪಿಸಿ ಸ್ಮರಿಸಿ ಮೆರೆಸಿದ್ದಾರೆ
ಜನಸಂದಣಿಯ ನಡುವೆ
ಮೌನವಾಗಿ ನೀನು ಸ್ಮಾರಕವಾಗಿ
ನಿಂತಿದ್ದೀಯಾ ಗಾಂದಿ
(ಆಂಗ್ಲದ ಮೌನಿಮೆಂಟ್ ಅನುವಾದ)
ಪರಿಮಳ
ಗಾಂಧಿಯ ಕಸ್ತೂರಿ
ಭಾರತದ ಕಸ್ತೂರಿ
ಗುಜುರಾತಿನ ಕುವರಿ
ದೇಶದ ಉದ್ದಗಲಕ್ಕೂ
ನಿನ್ನ ನಾಮ ಸ್ಮರಣೆ
ವಿವಿಧ ಸಂಘ ಸಂಸ್ಥೆಗಳಲ್ಲಿ
ಹಾದಿ ಬೀದಿಗಳಲ್ಲಿ
ಬಾಪುವಿನ ಹೆಜ್ಜೆಗೆ ಹೆಜ್ಜೆ ಹಾಕಿ
ಬಾಪುವಿನ ನೆರಳಾದಾಕ್ಕೆ
ಬಾಪುವಿನ ಭಾವಕ್ಕೆ ಲಹರಿಯಾದಾದ್ದಕ್ಕೆ
ಭಾರತದ ಸಂಸ್ಕೃತಿ ಸಂಕೇತವಾದಾದ್ದಕ್ಕೆ
ನಿನ್ನ ತ್ಯಾಗಕ್ಕೆ ಎಲ್ಲೆಯುಂಟೆ
ಕುಟುಂಬ ದೇಶಕ್ಕೆ
ಗಾಂಧಿ ನೆನಪಾದರೆ
ಕಸ್ತೂರಿ ಬಾಯಿ ಮರೆಯಾಗದು
ಗಾಂಧಿ ಪರಿಮಳ ಕಸ್ತೂರಿ
ಭಾರತದ ಕಸ್ತೂರಿ ಬಾಯಿ
*********************************************
ರತ್ನಾ ನಾಗರಾಜ್