
ಗಾಂಧಿ ವಿಶೇಷ
ಮತ್ತೆ ಹುಟ್ಟಿ ಬನ್ನಿ ಗಾಂಧಿ
ಮತ್ತೆ ಹುಟ್ಟಿ ಬನ್ನಿ ಓ ಪರಮಪೂಜ್ಯ ಗಾಂಧಿ
ಅಹಿಂಸೆ ಏರಲೇಬೇಕಿದೆ ಎಲ್ಲರೆದೆಯ ಗಾದಿ
ಸತ್ಯ ಸ್ವಾವಲಂಬನೆ ನೀವು ನಡೆದ ಹಾದಿ
ಆತ್ಮನಿರ್ಭರ ನಡೆಗೆ ಅದುವೆ ತಾನೇ ಬುನಾದಿ
ಬಿತ್ತುತ್ತಲೇ ಸಾಗಿದಿರಿ ಅಹಿಂಸೆಯ ಬೀಜ
ಅವು ಮೇಲೆದ್ದು ಚಿಗುರಿ ಮರವಾದದ್ದು ನಿಜ
ಅಲ್ಲಲ್ಲಿ ತೂಗುತಿವೆ ಪ್ರೀತಿ ಗೂಡುಗಳ ಸಾಲು
ಗೆದ್ದಲು,ವಿಷ ಸರ್ಪಗಳೂ ಕೇಳುತಿವೆ ಪಾಲು
ಸತ್ಯವೆಂದರೆ ನೀವು ಮಹಾತ್ಮರೆಂದರೆ ನೀವು
ನಿತ್ಯ ನಿಮ್ಮ ಭಜನೆ ಭಾಷಣಗಳು ಹಲವು
ನಿಮ್ಮ ಜೀವನಸಾರ ನುಡಿಗೆ ಮೀಸಲು ಮಾಡಿ
ನಿಮ್ಮಂತೆ ಬಾಳುವುದನು ಮರೆತೆವು ನೋಡಿ
ನೀವು ಹಚ್ಚಿಟ್ಟ ದೀಪ ಕಾಣದು ಹೊರಗಣ್ಣಿಗೆ
ಒಳಗಣ್ಣ ರೆಪ್ಪೆ ಬಿಡಿಸೊ ಕಲೆ ಸಿದ್ದಿಸಿಲ್ಲ ನಮಗೆ
ಬೇಡುವೆವು ಮತ್ತೆ ಬನ್ನಿ ಪರಮ ಪೂಜ್ಯ ಗಾಂಧಿ
ಎಲ್ಲ ಹೃದಯದೊಳಗೆ ಮತ್ತೆ ಜನಿಸಿ ಬನ್ನಿ ಗಾಂಧಿ
******************************************
ರೇಖಾ ಭಟ್

One thought on “”