ಅಬಾಬಿ ಕಾವ್ಯ
ಕವಿತೆ ಅಬಾಬಿ ಕಾವ್ಯ ಹುಳಿಯಾರ್ ಷಬ್ಬೀರ್ 01 ತಸ್ಬಿ ಮುಟ್ಟಿದ ಕೈಹಳೆಯ ಕೋವಿಯನಳಿಕೆಯಲ್ಲಿನ ಗೂಡು ಬಿಚ್ಚಿತುಷಬ್ಬೀರ್…!ಆತ್ಮ ರಕ್ಷಣೆಗಾಗಿ. 02 ಸಾಮರಸ್ಯದ ಹೆಸರೇಳಿರಾಮ ರಹೀಮರನ್ನುದ್ವೇಷಿಗಳಾಗಿಸಿರುವರುಷಬ್ಬೀರ್…!ಖಾದಿ ಖಾವಿಯ ಮುಖವಾಡ. 03 ಜಾನಿಮಾಜ಼್ ನ ಮೇಲೆಜಾನ್ ಇಟ್ಟು ನಮಾಜ಼್ಆವಾಹಿಸಿಕೊಂಡವರುಷಬ್ಬೀರ್…!ಭಗವಂತನಿಗೆ ಶರಣಾದವರು. 04 ಪುಡಿಗಾಸಿನಲ್ಲೇಇಡೀ ಬದುಕ ಬಿಡಿ ಬಿಡಿಯಾಗಿಅಂದೇ ದರ್ಬಾರ್ ಮಾಡುವರುಷಬ್ಬೀರ್…!ನನ್ನ ಜನ ನನ್ನವರು. 05 ಯಾ..! ಅಲ್ಲಾ…ಎಲ್ಲಾ ಯೋಜನೆಗಳಂತೆನನ್ನ ಕನಸುಗಳಿಗೂಷಬ್ಬೀರ್…!ಸಬ್ಸಿಡಿ ಕೊಡಿಸುವೆಯಾ..? *************************
ಕವಿತೆ ಕಮಲೆ ಮಾಂತೇಶ ಬಂಜೇನಹಳ್ಳಿ ಕೆರೆಯ ಏರಿ ಮೇಲೆನಿನ್ನ ಕನಸುಗಳ ಬೆನ್ನೇರಿಕುಳಿತ ನಾ… ಅಲ್ಲೇ ಸನಿಹತಣ್ಣಗೆ ಸುಳಿದೋಗುವಾಗಕಾಣಲಿಲ್ಲವೇ? ಕೆರೆ ದಿಣ್ಣೇಲಿ ಆಜಾನುಬಾಹುಆಲದ ಬಿಳಲು, ನಾ ಜೀಕುವಜೋಕಾಲಿ, ನೀನೇ ಹರಿದದ್ದು..ತಿಳಿದೂ ಬೇಸರಿಸದೆಮರೆತುಬಿಟ್ಟಿರುವೆ… ರವಿ ಪಡುವಣಕ್ಕಿಳಿದ,ಕಣ್ಣುಗಳೋ ಮಬ್ಬಾಗುತಿವೆ..ನನ್ನವೇ ಕನಸುಗಳಪುಕ್ಕಟೆ ಬಿಕರಿಗಿಟ್ಟಿದ್ದೇನೆ..ಚೌಕಾಸಿಯಿನ್ನೇಕೆ?!..ನೀಡಿಬಿಡುವೆ ನಿನಗೆ,ಕಾಣಬಾರದೇ?.. ಇಳಿ ಹೊನ್ನ ಸಂಜೇಲಿ,ನಿರ್ಜನ ನೀರವ ಮೌನದಿ,ನಿರೀಕ್ಷೆಯ ಕಂಗಳಲಿ,ಸುತ್ತಲೂ ಹುಡುಕುತಲೇ..ನೆನಪುಗಳ ಅಡಕುತಿರುವೆ,ಬರಬಾರದೇ?.. ಕೆರೆಯೊಳಗೆದ್ದು ತಾಕಿಯೂ..ಅಂಟದ ತೇವ ಬಿಂದುಗಳ್ಹೊತ್ತಪಂಕಜೆಯ ಪತ್ರಗಳಂತೆ,ನನ್ನ ಕನಸುಗಳಕೊಳ್ಳಲೊಪ್ಪದ, ಅಪ್ಪದಓ ಕಮಲೇ..ಒಮ್ಮೆ ಒಪ್ಪು ಬಾರೆ… **********************
ಆಡು ಭಾಷೆಯ ವೈಶಿಷ್ಟ್ಯತೆ
ಪ್ರಬಂಧ ಆಡು ಭಾಷೆಯ ವೈಶಿಷ್ಟ್ಯತೆ ಬಾಲಾಜಿ ಕುಂಬಾರ ನಮ್ಮ ಉತ್ತರ ಕರ್ನಾಟಕದ ಭಾಷೆಗೂ ದಕ್ಷಿಣ ಕನ್ನಡದ ಮಾತುಗಾರಿಕೆಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ಉತ್ತರ ಕರ್ನಾಟಕದ ಮಂದಿ ಹೇಳಿ ಕೇಳಿ ತುಂಬಾ ಸೀದಾ ಸಾದಾ, ಭಾಳ ಮುಗ್ದ ಸ್ವಭಾವದ ಗಟ್ಟಿ ಜನ, ಬಿಳಿ ಜೋಳ ರೊಟ್ಟಿ , ಫುಂಡೆ ಪಲ್ಯ ಜೊತೆಗೆ ಉಳಾಗಡ್ಡೆ ಖಾರಾ, ಹಸಿ ಖಾರಾ ತಿಂದರೂ ‘ಇನ್ನೂ ಸ್ವಲ್ಪ ಸಪ್ಪಗೆ ಆಗ್ಯಾದ್ ಪಲ್ಯ’ ಎನ್ನುವ ಜವಾರಿ ಜನ, ಎಲ್ಲಿ ಹೋದರೂ ಏನಾದರೂ ಹೊಸತನ ಕಾಣುವುದು, ಹೊಸ […]
ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..!
ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..! ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಬೇಕಿದೆ. ಪ್ರಸ್ತವಾಗಿ ಮ.ನು.ಬಳೆಗಾರರ ಅವಧಿ ಮುಗಿದಿದೆ. ಅದಕ್ಕಾಗಿ ಈಗಾಗಲೇ ತಯ್ಯಾರಿಯೂ ನಡೆದಿದೆ. ಹಾಗಾದರೆ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಅವಲೇಕಿಸೋಣ..! ಬ್ರಿಟಿಷ್ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದ್ರಾಸ್, ಮುಂಬೈ ಪ್ರಾಂತ್ಯಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿಯ, ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರೂ ಅವರು ಆಡುತ್ತಿದ್ದ […]
ಮನೆಖರೀದಿ ಪತ್ರ 2009ನೇ ಇಸವಿ. ಹೆಸರಾಂತ ರಿವಾಯತ್ ಗಾಯಕರಾದ ಕದರಮಂಡಲಗಿ ಅಲ್ಲಾಬಕ್ಷರ ಭೇಟಿ ಮುಗಿಸಿಕೊಂಡು, ಬ್ಯಾಡಗಿಯಿಂದ ಹಂಪಿಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಾಗ ಹಾವೇರಿ ಜಿಲ್ಲೆಯ ಕೊನೆಯ ಊರು ಗುತ್ತಲ ಸಿಕ್ಕಿತು. ಅಲ್ಲೊಬ್ಬ ಗಾಯಕ ಇದ್ದಾನೆಂದು ತಿಳಿದು ಹುಡುಕಿಕೊಂಡು ಹೊರಟೆ. ಹೆಸರು ಗೌಸ್‍ಸಾಬ್ ಹಾಲಗಿ. ಗೌಸ್‍ಸಾಬರು ಮನೆಯೊಂದರ ಜಗುಲಿಕಟ್ಟೆಯ ಮೇಲೆ ಕುಳಿತು ಮನೆಖರೀದಿ ಪತ್ರ ಬರೆಯುತ್ತಿದ್ದರು. ಈ ಕೆಲಸಕ್ಕೆ ರೆವಿನ್ಯೊ ಇಲಾಖೆಯಲ್ಲಿ `ಬಿಕ್ಕಲಂ’ ಎನ್ನುವರು. ಪ್ರಾಮಿಸರಿ ನೋಟಿನ ಬರೆಹ ಮುಗಿದ ಬಳಿಕ ಅವರಿಂದ ರಿವಾಯತ್ ಹಾಡನ್ನೂ […]
ಶ್ವಾನೋಪಾಖ್ಯಾನ
ಹಾಸ್ಯ ಲೇಖನ ಶ್ವಾನೋಪಾಖ್ಯಾನ ಚಂದಕಚರ್ಲ ರಮೇಶ ಬಾಬು ನಮಗೆಲ್ಲಾ ಗೊತ್ತಿರುವ ಹಾಗೆ ನಾಯಿಗಳು ಅಥವಾ ಮರ್ಯಾದೆಪೂರ್ವಕವಾಗಿ ಕರೆಯುವುದಾದರೇ ಶುನಕಗಳು ಅಥವಾ ಶ್ವಾನಗಳು, ನಮ್ಮ ಸಮಾಜದ ಗಣ್ಯ ಜೀವಿಗಳಾಗಿವೆ. ನಾನು ಮುಂಚಿನಿಂದಾ ಮನೆಯಲ್ಲಿ ನಾಯಿ ಸಾಕಾಣಿಕೆಯ ವ್ಯತಿರೇಕಿ. ಬಹುಶ ನನ್ನ ಬಾಲ್ಯದಲ್ಲಿ ನನ್ನನ್ನಟ್ಟಿಸಿಕೊಂಡು ಬಂದ ನಾಯಿ ಅದಕ್ಕೆ ಕಾರಣವಿರಬಹುದು. ಅದು ಹಿಂದೆ ಬೀಳಲು ಕಾರಣ ನಾನು ಅದರ ಬಾಲ ತುಳಿದದ್ದು ಅಂತ ಹೇಳಿದ್ರೇ ಈ ನನ್ನ ನಿಲುವು ಸ್ವಲ್ಪ ಸಡಿಲವಾಗುತ್ತದೆ ಅಂತ ಮುಂಚೆನೇ ಹೇಳಲಿಲ್ಲ ಅಂತಿಟ್ಕೊಳ್ಳಿ. ಅದು ಬೇರೇ […]
ಹೊರಗಿನವ
ಕವಿತೆ ಹೊರಗಿನವ ಡಾ. ಅರಕಲಗೂಡು ನೀಲಕಂಠ ಮೂರ್ತಿ. ನಾನೀಗ ಹೊರಗಿನವಇದ್ದ ಹಾಗೆ.ಒಳಗೂ ಇಲ್ಲದವನುಹೊರಗೂ ಹೋಗದವನು–ಪೂರ್ತಿಆದರೂ…ನಾನೀಗ ಹೊರಗಿನವಇದ್ದಂತೆ. ಎಷ್ಟರಮಟ್ಟಿಗೆ ಹೊರಗಿನವನುಅಥವ ಎಷ್ಟು ಇನ್ನೂ ಒಳಗಿನವನುಈ ಅಂದಾಜು ನನಗೇ ಸಿಗದವನು! ಹೆಜ್ಜೆಯೊಂದ ಹೊಸ್ತಿಲಾಚೆಇಟ್ಟವನಿರಬಹುದುಆದರೆ ವಾಸ್ತವವೆಲ್ಲಒಳಗೇ ಇನ್ನೂ… ಊರಿಗೆ ಹೊರಟಂತೆರೆಡಿಯಾಗಿ ಕೂತವನಂತೆ–ಅಂತೂ…ಯಾವ ಗಳಿಗೆಯಲ್ಲೂ ಗಾಡಿಬಂದು ನಿಲ್ಲಬಹುದು… ಹೌದು–ಸಂಜೆಯ ಮಬ್ಬು ಗಾಢವಾಗುವ ಹಾಗೆಕಣ್ಣ ಹರಿತ ಮೊಂಡಾದಹೊತ್ತು…ನಾನೀಗ ಹೊರಗಿನವಇದ್ದಹಾಗೆ…ಇನ್ನೆಷ್ಟು ಹೊತ್ತು–ಹೊರಗಿನವನೇ ಪೂರ್ತಿಆಗಲು ಅನಾಮತ್ತು…! ***************************************
ಕಾವ್ಯಯಾನ
ಕವಿತೆ ನನ್ನ ನೋವು ಸಾತುಗೌಡ ಬಡಗೇರಿ ಕಣ್ಣೀರ ಹನಿಯೊಂದುಹೇಳುತ್ತಿದೆ ಹೊರಬಂದುನೊಂದ ಹೃದಯದ ತನ್ನ ವ್ಯಥೆಯ.ಸೂತ್ರವು ಹರಿದಂತಹಪಟದಂತೆ ಬಾಳಾಗಿಕಥೆಯಾಗಿ ಹೇಳುತ್ತಿದೆ ಬೆಂದು ಹೃದಯ. ಜೊತೆಯಾಗಿ ಉಸಿರಾಗಿನಿನಗಾಗಿ ನಾನಿರುವೆ..ಮಾತು ಕೊಟ್ಟನು ನಲ್ಲನಂದು.ಮರೆತು ಹೊರಟಿಹನುತಬ್ಬಲಿಯ ನನಮಾಡಿಕಂಬನಿ ಮಿಡಿಯುತ್ತಿದೆ ಕೇಳಿಯಿಂದು. ನಿನಬಾಳು ಬೆಳಕಾಗಿನಗುತಲಿರು ಓ ಗೆಳೆಯಾ…ನಿನ್ನಮೊಗ ತೋರದಿರು ಮುಂದೆ ಎಂದು.ಕಹಿ ನೆನಪ ನಾಹೊತ್ತುಬಾಳುವೆ ನಾನಿಲ್ಲಿಕಣ್ಣೀರಧಾರೆ ಸುರಿಸುತ್ತಾ ಮುಂದು ****************************
ಗಝಲ್
ಗಝಲ್ ಎ.ಹೇಮಗಂಗಾ ಮಧುಶಾಲೆಗಿನ್ನು ಮರಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲುನೆನಪ ಗೋರಿಯನಿನ್ನು ಅಗೆಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಏಕಾಂಗಿ ಜೀವದ ತಾಪ ತಣಿಸಲೆಂದೇ ಏಕಾಂತದಿ ಮೈ ಮರೆತವನುನೋವ ಕುಲುಮೆಯಲ್ಲಿನ್ನು ಬೀಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಸಾವಿರ ಟೀಕೆಗಳ ಕತ್ತಿ ಇರಿತಕೆ ಬಲಿಯಾಗಿಸಿದರು ಕುಹಕಿ ಗೆಳೆಯರುನಾಲಿಗೆಗಿನ್ನು ಆಹಾರವಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಮಂದ ಬೆಳಕಿನ ನಿಶೆಯ ನಶೆ ಲೋಕ ಬಲೆಯಾಗಿ ಉಸಿರುಗಟ್ಟಿಸಿದೆಬೇಡುತ ಮದಿರೆಗಿನ್ನು ದಾಸನಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಬದುಕಿನ ಗಮ್ಯ ಸಾರ್ಥಕತೆಯತ್ತ ಸೆಳೆಯಲು ಕೈ ಬೀಸಿ ಕರೆಯುತ್ತಿದೆಅವನತಿ ಹಾದಿಯನಿನ್ನು […]
ಕಾಂಕ್ರೀಟ್ ಬೋಧಿ
ಕವಿತೆ ಕಾಂಕ್ರೀಟ್ ಬೋಧಿ ಪೂಜಾ ನಾರಾಯಣ ನಾಯಕ ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿಅದರ ಪರಿಣಾಮವೇ ಬೆಳೆದೆನಾಯಿಲ್ಲಿಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ ನೀನಾಗಿಹೆ ಇಂದು ಕ್ರೋಧದಾ ಬಂಧನಕೇಳಿಸುತ್ತಿಲ್ಲವೇನೋ ನಿನಗೆ, ನನ್ನ […]