ಕವಿತೆ
ಅಬಾಬಿ ಕಾವ್ಯ
ಹುಳಿಯಾರ್ ಷಬ್ಬೀರ್
01
ತಸ್ಬಿ ಮುಟ್ಟಿದ ಕೈ
ಹಳೆಯ ಕೋವಿಯ
ನಳಿಕೆಯಲ್ಲಿನ ಗೂಡು ಬಿಚ್ಚಿತು
ಷಬ್ಬೀರ್…!
ಆತ್ಮ ರಕ್ಷಣೆಗಾಗಿ.
02
ಸಾಮರಸ್ಯದ ಹೆಸರೇಳಿ
ರಾಮ ರಹೀಮರನ್ನು
ದ್ವೇಷಿಗಳಾಗಿಸಿರುವರು
ಷಬ್ಬೀರ್…!
ಖಾದಿ ಖಾವಿಯ ಮುಖವಾಡ.
03
ಜಾನಿಮಾಜ಼್ ನ ಮೇಲೆ
ಜಾನ್ ಇಟ್ಟು ನಮಾಜ಼್
ಆವಾಹಿಸಿಕೊಂಡವರು
ಷಬ್ಬೀರ್…!
ಭಗವಂತನಿಗೆ ಶರಣಾದವರು.
04
ಪುಡಿಗಾಸಿನಲ್ಲೇ
ಇಡೀ ಬದುಕ ಬಿಡಿ ಬಿಡಿಯಾಗಿ
ಅಂದೇ ದರ್ಬಾರ್ ಮಾಡುವರು
ಷಬ್ಬೀರ್…!
ನನ್ನ ಜನ ನನ್ನವರು.
05
ಯಾ..! ಅಲ್ಲಾ…
ಎಲ್ಲಾ ಯೋಜನೆಗಳಂತೆ
ನನ್ನ ಕನಸುಗಳಿಗೂ
ಷಬ್ಬೀರ್…!
ಸಬ್ಸಿಡಿ ಕೊಡಿಸುವೆಯಾ..?
*************************
ಸುಂದರ ಅಬಾಬಿ ಕಾವ್ಯಗಳು. ಆದರೆ ಈ ಬರವಣಿಗೆ ಶೈಲಿ ಬಗ್ಗೆ ತಿಳಿಸಿ ಸರ್