ಅನುವಾದ ಸಂಗಾತಿ

ಅನುವಾದ ಸಂಗಾತಿ

ಬದುಕು ಹೇಳಿಕೊಟ್ಟದ್ದು… ಮೂಲ ಮಲಯಾಲಂ:ಉಸ್ಮಾನ್ ಪಾಡರಡುಕ್ಕ ಕನ್ನಡಕ್ಕೆ: ಚೇತನಾ ಕುಂಬ್ಳೆ ತತ್ವಶಾಸ್ತ್ರದಿಂದ ಒಂದು ಗೋಪುರವನ್ನೇ ನಿರ್ಮಿಸಬಹುದಾದರೂ ಅದಕ್ಕೆ ಜೀವ ತುಂಬಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಸತ್ಕಾರ್ಯಗಳಿಂದ ಒಂದು ಹೂದೋಟವನ್ನೇ ಮಾಡಿ ಬೆಳೆಸಬಹುದಾದರೂ ದುಷ್ಕೃತ್ಯಗಳು ತಾನೇ ಇಲ್ಲದಾಗುತ್ತದೆಯೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಎಲ್ಲರಿಗೂ ಪ್ರೀತಿ ಪಾತ್ರನಾಗಿ ಹೃದಯದಲ್ಲಿ ಸ್ಥಾನ ಪಡೆದರೂ ಎಲ್ಲರಿಗಿಂತಲೂ ಹೆಚ್ಚು ಪ್ರೀತಿಪಾತ್ರನೋಗಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ತ್ಯಾಗಿಯಾಗಿ ಕರ್ಮಯೋಗಿಯಾಗಿ ತನ್ನ ಸಂಘಟನೆಗಾಗಿ ರಕ್ತಸಾಕ್ಷಿಯಾಗಬಹುದಾದರೂ ಚೈತನ್ಯವನ್ನು ಜಡವಾಗಿಸಬಹುದೇ ಮಣ್ಣಿನಲ್ಲಿ ಬಾಳುವ […]

ಟಂಕಾ

ಟಂಕಾ ತೇಜಾವತಿ.ಹೆಚ್.ಡಿ.   ಟಂಕಾ ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು. 2,4,5  ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು. ಇದು ಒಟ್ಟು 31 ಅಕ್ಷರ […]

ಅನಿಸಿಕೆ

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ ರಾಮಸ್ವಾಮಿ ಡಿ.ಎಸ್. ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . . . . ‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ […]

ಕಾವ್ಯಯಾನ

ತುಂಟ ಮೋಡವೊಂದು ಫಾಲ್ಗುಣ ಗೌಡ ಅಚವೆ ಎಲ್ಲಿಂದಲೋ ಹಾರಿಬಂದ ತುಂಟ ಮೋಡವೊಂದು  ನನ್ನೆದೆಗೆ ಬಂದುತನ್ನೊಳಗಿನ ಹನಿ ಹನಿಇಬ್ಬನಿಗರೆಯಿತು ಅಂಗಳದ ಸಂಜೆ ಗತ್ತಲುಬೆರಗುಗಣ್ಣಿನ ಚುಕ್ಕೆಗಳುಅಗಾಧ ನೀಲಾಕಾಶಹಿಮಕಣಗಳ ಹೊತ್ತು ತಂದ ಗಾಳಿನನ್ನ ತೆಕ್ಕೆಯಿಂದ ಹೊರಬಿದ್ದವು ಆ ಬೆಳ್ಳಿ ಮೋಡ ಬಂದದ್ದೇ ತಡ:ಎದೆಯ ತುಂಬೆಲ್ಲನಾದದ ನವನೀತವಾಗಿನೀರವ ಮೌನದ ಮಜಲುಗಳುಶಬ್ದವಾಗಿಸಾಲು ಬೆಳ್ಳಕ್ಕಿಗಳಾದವು ತಿಳಿ ನೀರ ಸರೋವರದ ಆವಿಯೋಕಡಲ ಅಲೆ ಮಿಂಚಿನಹಿತ ನೋವ ಸ್ಪರ್ಶವೋಗಾಳಿ ಮರದ ಮೌನಭಾಷೆಯಇನಿದನಿಗೆ ದಂಗಾಗಿದಿಗಂತಕ್ಕಾಗಿ ಕಾದುಕುಳಿತದಂಡೆಯೋಏನೂ ಹೊಳೆಯಲಿಲ್ಲ ನನ್ನ ಏಕಾಂತವನ್ನು ಹಾದಆ ತುಂಟ ಮೋಡನೋಡ ನೋಡುತ್ತಿದ್ದಂತೆನಕ್ಷತ್ರಗಳಲ್ಲಡಗಿದ ಮಿಂಚಂತೆಮೈ ತುಂಬಿಬಂದುಅಕ್ಷರದಲ್ಲಡಗಿತು! *******

ಅನುವಾದ ಸಂಗಾತಿ

ಮಾತು ಕಳೆದುಕೊಂಡಿದ್ದೇನೆ ಕನ್ನಡ:ಆನಂದ್ ಋಗ್ವೇದಿ ಇಂಗ್ಲೀಷ್: ನಾಗರೇಖಾ ಗಾಂವಕರ್ ಮಾತಾಡುವುದಿಲ್ಲ ಎಂದಲ್ಲ ಆಡುವ ಪ್ರತಿ ಮಾತಿನ ಹಿನ್ನೆಲೆ ಚರಿತ್ರೆ ಪರಂಪರೆ ಎಲ್ಲವನ್ನೂ ಶೋಧಿಸಿ ತಮಗೆ ಬೇಕಾದುದು ಸಿಕ್ಕದಿದ್ದರೆ ಸಂ- ಶೋಧಿಸಿ ತಮಗೆ ಹೊಳೆದ ಹೊಸ ಅರ್ಥ ಲಗತ್ತಿಸುವ ಅರ್ಥಧಾರಿಗಳ ಅನರ್ಥದಿಂದಾಗಿ- ನಾನು ಮಾತಾಡಿದರೆ: ಭವಿ ಭಕ್ತ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನನ್ನ ಬಿಡದೇ ಬ್ರಾಹ್ಮಣ ಬೀದಿಗಿಳಿದ ಸಹವರ್ತಿಗಳ ಬೆನ್ನಿಗೆ ನಿಂತರೂ ಶೋಷಕ ಪಕ್ಷ- ಪಾತಿ ಮತ ಧರ್ಮ ನಿರಪೇಕ್ಷೆಯಿಂದ ದರ್ಗಾದಲ್ಲಿ ಸಕ್ಕರೆ ಓದಿಸಿ ಬಂದರೂ ಕೋಮು ವಾದಿ […]

ಕಾವ್ಯಯಾನ

ಗತ್ತಿನ ಭಾಷೆ ಗೊತ್ತಿಲ್ಲ ಮಧುಸೂದನ ಮದ್ದೂರು ಅಳುವ ಮುಗಿಲಿನಿಂದ ಕಣ್ಣೀರ ಕಡವ ಪಡೆದು ಭೋರ್ಗೆರೆವ ಕಡಲ ಮೇಲೆ ಯಾತನೆಯ ಯಾನ ಬಯಸಿದ್ದೇನೆ.. ನಿನ್ನ ನೆನಪು ಮಾಸಿ ಸೋಲುಗಳು ಗೆಲುವುಗಳಾಗಲೆಂಬ ಬಯಕೆಯಿಂದಲೂ ಭ್ರಮೆಯಿಂದಲೂ…. ನಗೆಯ ಕೋಟೆಗೆ ಲಗ್ಗೆಯಿಟ್ಟು ಅಳುವ ಆಳೋ ಸಂತಸದ ತೇರನ್ನೇರಿ ಮೈ ಮರೆತ್ತಿದ್ದೇನೆ.. ನಿನ್ನ ಒನಪು ಕಾಡದಿರಲೆಂಬ ಜಂಭದಿಂದಲೂ ಆತಂಕದಿಂದಲೂ… ಬಯಕೆ ಭ್ರಾಂತಿಯಾಗುವುದೋ ಜಂಭ ಕರಗಿ ನಿನ್ನೆದೆಗೆ ಒರಗುವನೋ ಗೊತ್ತಾಗುತ್ತಿಲ್ಲ.. ಕಾರಣ ಹೃದಯಕೆ ಗತ್ತಿನ ಭಾಷೆ ಗೊತ್ತಿಲ್ಲವಲ್ಲ.. **********

ಕಾವ್ಯಯಾನ

ದೇದೀಪ್ಯಮಾನ ರೇಶ್ಮಾ ಗುಳೇದಗುಡ್ಡಾಕರ್ ಎಲ್ಲ ಕಳೆದುಕೊಂಡೆ ಎಂದುಗೀಳಿಟ್ಟವು ಸುತ್ತಲಿನ ಜನಮನಗಳುಮನದಲ್ಲೆ ನಕ್ಕು ಮಾತಿಗಾಗಿಅನುಕಂಪ ತೂರಿದವರೆಷ್ಟೊ…ನನ್ನದಲ್ಲದ ವಸ್ತುಗಳಿಗೆಬೆಲೆಕಟ್ಟಿ ಮುನಿದವರೆಷ್ಟೋ..!! ಇವುಗಳ ಮಧ್ಯೆ ನನ್ನಲ್ಲಿಎನೀಲ್ಲ ಎಂದರೊ ಮಡುಗಟ್ಟಿಎದೆಯಾಳದಲಿ ಹುದುಗಿಸಣ್ಣ ಸದ್ದು ಮಾಡುತ್ತಿತ್ತು “ನನ್ನತನ “ದೇಹ ಮಾಗಿ ,ಬದುಕು ಬೆಂದರೂಪರಿಪಕ್ವವಾಗಿ ನನ್ನೇ ಬಿಗಿದಪ್ಪಿ ಸಂತೈಸುತ ಒಳಗಣ್ಣ ತೆರಸುತ ಭರವಸೆಯಲೋಕಕ್ಕೆ ಲಗ್ಗೆ ಇಟ್ಟುಭಾವನೆಗಳ ಸಂಘರ್ಷಕೆ ಉದ್ವೇಗ ಗಳಅರ್ತನಾದಕೆ ಮೌನ ಸವಿ ಸಾಗರವಉಡುಗೂರೆ ನೀಡಿ ಜೀವನದ ಪ್ರೀತಿಯಕಲಿಸಿ ಉತ್ಸಹಾದ ಬುಗ್ಗೆಯ ಹರಿಸಿತುಕಳೆದುಕೊಂಡಷ್ಟು ಬದುಕಿನಲ್ಲಿಪಡೆಯುವದು ಅಗಾಧ ಬದ್ದತೆಭರವಸೆಯ ಕಿರಣ ದೇದೀಪ್ಯಮಾನವಾಯಿತು …. *******  

ಕಾವ್ಯಯಾನ

ಸಾಮರಸ್ಯ ನೆನಪಾಗುತ್ತಾರೆ ಈದ್ ದಿನ ಬಾನು,ಅಹ್ಮದರು ಯುಗಾದಿ ದೀಪಾವಳಿಗೆ ಶುಭ ಕೋರುವ ಇವರು ಅಳುವಲ್ಲಿ ನಗುವಲ್ಲಿ ಒಂದಾಗುವ ನಾವು ಕಾಣುವ ಕನಸುಗಳಿಗೆ ಬಿಳಿಹಸಿರುಕೇಸರಿ ಎಂಬ ಭೇದವಿಲ್ಲ ಅಂತರಂಗದ ಮಿಡಿತ ನಮ್ಮದು ವೇಷ-ಭೂಷ, ಆಚಾರ-ವಿಚಾರಗಳಿಲ್ಲದ ನಮ್ಮ ಸ್ನೇಹ ತೊಟ್ಟಿದೆ ಸಾಮರಸ್ಯದ ಅಂಗಿಯನ್ನು ಇಣುಕಲಾರವು ಜಾತಿ ಮತ ಧರ್ಮಗಳು ಹೆಡೆಮುರಿ ಕಟ್ಟಿಕೊಂಡು ಬಿದ್ದಿರುತ್ತವೆ ಅವು. ***** ಗೌರಿ.ಚಂದ್ರಕೇಸರಿ

ಕಾವ್ಯಯಾನ

ಭಾವ ಬಂಧುರ ರೇಮಾಸಂ ಬಂಧುರದ ಭಾವದಲಿ ಬಿದ್ದಿರುವೆ ನಲ್ಲ, ಬಿಡದೆ ಮನದಿ ನಿನ್ನ ಸಾಯುವ ಮಾತೇಕೆ ? ಇರುವೆ ನಾ ನಿನ್ನುಸಿರಲಿ ಹಠ ಮಾಡದಿರು ಸಖ ಮುನಿಸಿನಲಿ/ ನಾನಿರುವೆ ಕರ್ಮದ ಪಥದಲಿ ಗೊತ್ತೇನು ಒಲವೇ//ಪ// ಸಂತೈಸಿದ ಎನ್ನ ಮನಕೆ ಮುಗಿದಿಲ್ಲ ಬಾಳು / ಕಂಡ ಕಣ್ಣ ಕನಸು ಆಗುವದೇ ಗೋಳು/ ಬರಡಾಗಲು ಮನಸು ನಿನದಲ್ಲ ಮರುಳೇ/ ಬಾ ಎನಲು ನಾ ಹೋಗಿರುವೆನೇನು ನಿನ್ನಲ್ಲೇ ಇರುವೆನು ಗೊತ್ತೇನು ಒಲವೇ// ನೀನೇಕೆ ಬಡಪಾಪಿ ಜೀವನಕೆ ಚೇತನವಾಗಿರುವೆ/ ಎನ್ನ ಹೃದಯವಿದೆ ನಿನ್ನಲ್ಲೇ […]

ಪುಸ್ತಕ ಸಂಗಾತಿ

ಆಡಾಡತ ಆಯುಷ್ಯ ಆಡಾಡತ ಆಯುಷ್ಯ ಆತ್ಮ – ಕತೆಗಳು ಗಿರೀಶ ಕಾರ್ನಾಡ ಮನೋಹರ ಗ್ರಂಥಮಾಲಾ ಆಡಾಡತ ಆಯುಷ್ಯ ಗಿರೀಶ್ ಕಾರ್ನಾಡರ ಆತ್ಮಕಥನ. ಈ ಕತೆಯನ್ನು ಅವರು ಹನ್ನೊಂದು ಅಧ್ಯಾಯಗಳಲ್ಲಿ ಹೇಳಿದ್ದಾರೆ. ಪ್ರಾಕ್ಕು – ತಾಯಿ ಕೃಷ್ಣಾಬಾಯಿ ಮಂಕೀಕರ ( ಕುಟ್ಟಾಬಾಯಿ) ಅವರ ಬದುಕಿನ ಕುರಿತು ಇದರಲ್ಲಿ ಅವರು ಹೇಳಿದ್ದಾರೆ. ಬಾಲಚಂದ್ರ ಎಂಬ ಮಗ ಹುಟ್ಟಿ ಒಂದು ವರ್ಷದೊಳಗೇ ಗಂಡ ತೀರಿಕೊಳ್ಳುತ್ತಾನೆ. ನಂತರ ಅವರ ಭಾವ ಅವಳನ್ನು ಡಾ. ಕಾರ್ನಾಡರ ಬಳಿ ನರ್ಸ್ ಕೋರ್ಸಿಗೆ ಸೇರಿಸುತ್ತಾರೆ.ಐದು ವರ್ಷಗಳ ಕಾಲ […]

Back To Top